ಟೈಮ್ ಪಾಸ್ ಕಡ್ಲೆ ಕಾಯ್ : ಆಲ್ ಈಸ್ ನಾಟ್ ವೆಲ್!

ಸೂತ್ರಧಾರ ರಾಮಯ್ಯ


 
ಮೈನಸ್ ಇಂಟು ಮೈನಸ್ ಪ್ಲಸ್ ಆಗುವುದು ಗಣಿತದಲ್ಲಿ ಮಾತ್ರ, ಅಗಣಿತ ಮಹಿಮರೆ ( ಅನ್ ಅಕೌಂಟೆಡ್) ತುಂಬಿರುವ ಪಾಲಿಟಿಕ್ಸ್ನಲ್ಲಿ ಅಲ್ಲ. ಅದರಲ್ಲೂ ಪರಸ್ಪರ ನಂಬಿಕೆ ವಿಶ್ವಾಸಗಳನ್ನು ಕಳೆದುಕೊಳ್ಳುತ್ತಿರುವ ಸದ್ಯದ
alliance ( ಸ್ಲಂಮಿಶ್ರ) ರಾಜಕಾರಣದಲ್ಲಂತೂ ಅಲ್ಲವೇ ಅಲ್ಲ . ಒಂದು ಕಾಲದಲ್ಲಿ allies ಗಳದ್ದೇ ವಂಡರ್ ಲ್ಯಾಂಡ್ ! ಈಗಿನದ್ದು ಜಸ್ಟ್ all lies.
ಸೋ ಆಲಿಸೋ ತಮ್ಮ, ಮೈನಸ್ ಇಂಟು ಮೈನಸ್, ಡಬಲ್ ಮೈನಸ್ ಅನ್ನೋದು ಜನಕ್ಕೆ ಮನದಟ್ಟಾಗಿ ಹೋಗಿರುವ ಸಂಕೇತವೇ ಸಿಂಗಲ್ ಪಾರ್ಟಿ ರೂಲ್. ಆದರೆ ಅದು ಯಾಕೋ ಕಂಡವರ ಮಕ್ಕಳನ್ನ ಬಾವಿಗೆ ತಳ್ಳಿ ಆಳಲು ನೋಡುವ, ಅದೇ ‘ ಆಪರೇಶನ್ ಸಕ್ಸಸ್ ಜನರ ಪೇಷನ್ಸ್ ಡೆಡ್’ ಅನ್ನುವ ರೋಗಾಲಾಪನೆ, ಮತ್ತೆ ಕೇಳಿ ಬರುತ್ತಿದೆಯಂತೆ. ಬೇರೆ ಪಾರ್ಟಿಯ ಆಪರೇಟೆಡ್ ಭಾಗಗಳನ್ನ ಕಸಿ ಮಾಡಿಕೊಂಡು ವೃಕ್ಷವೇ ಕೊಳೆತುಹೋದ ಕಸಿವಿಸಿ ಪರಸಂಗ ಇನ್ನೂ ಜನರ ಮನದಲ್ಲಿರುವಾಗಲೇ ಮತ್ತೆ ರಾಜ್ಯ ರಾಜಕೀಯ ‘ಕದಡಿದ’ ನೀರಾಗದು ಎಂದೇ ‘ತಿಳಿವ’.
ಎಚ್ಚ್ರರಿಕೆ: ಆಲ್ ಈಸ್ well; ಕಂಡವರ ಮಕ್ಕಳೇ ಜೋಕೆ, ಹುಷಾರ್!
as ಆರಾಮ್ ass ಎವರ್
ಕಷ್ಟಪಟ್ಟು ಜೀವನ ನಡೆಸಬೇಕಾದ ‘ಈ ಶ್ರಮ’ ಯಾಕೆಬೇಕು?ಅಂತಾ ಜನಕ್ಕೆ ಮಂಕು ಬೂದಿ ಎರೆಚುವ ಆಶ್ರಮ( Ash rama ? ) ತೆರೆದು ಮೆರೆವವರ ‘ಸಂತ-ತಿ’ಗೆ ಸಾವಿರದ ಹಾಗೆ ಕಾಣ್ತಿದೆ. ಚಿಲ್ಲರೆ ಗಿಮ್ಮಿಕ್ಸ್ ಗಳಿಂದ ಧನಬಲ ಜನಬಲಗಳ ಮತ್ತನ್ನು ತಲೆಗೇರಿಸಿಕೊಂಡ ಸೆಲ್ಫ್ ಸ್ತೈಲ್ಡ್ ‘god ‘ ಗಳು, ಸ್ಪೆಲ್ಲಿಂಗ್ ರಿವರ್ಸ್ ಮಾಡಿಕೊಂಡು, ವಿರೋಧಿಸಿದವರ ಮೇಲೆ ಬೊಗಳುತ್ತಾ ,ಗಂಧಾ ಜಲದಲ್ಲಿ ಹೊರಳುವ
ರಂಗು ರಂಗಿನ ಹೋಲಿ(ಹೋಳಿ)ಮೆನ್ ಗಳ ಕಾಟ, ಕಾಮನ್ ಆಟ ಬಿಡ್ರಿ
ಮಾತು: ಪ್ರಾಯಕ್ಕೊಂದು ಅಭಿಪ್ರಾಯ?
ಮಾತೊಂದು,ಅರ್ಥ ಪನ್ನೊಂದು. ಹಾಗಾಗಿ ಮಾತು ‘ಮಾತೆ’ ಅರ್ಥ ಪಿತ.
ದೇಶ ಕಾಲಕ್ಕನುಗುಣವಾಗಿ ಒಪಿನಿಯನ್. ಐ ಮೀನ್ ಅಲ್ಲೀಜ್ಡ್ ಅರ್ಥ ಮಾತಿಗೆ ಅರ್ಪಿತ. ಅರ್ಥ ಮಾತಿನ ಬೆದರು. ಅಂತಾ ದ. ರಾ. ಬೇಂದ್ರೆಯವರೇ ದರಾ ನಿಗದಿ ಮಾದಿದ್ದಾರಲ್ಲ.
ಕೆಲವು ತಗಾದೆಗಳು.
ಗೆದ್ದ ಸೀಟಿಗೆ ರಾಜೀನಾಮೆ ಕೊಟ್ಟುಬಿಡಬೇಡ
ಸೋತ ಸಿಟ್ಟಲಿ ಸ್ವಕ್ಷೇತ್ರ ಬಿಟ್ಟು ಕೆಡಬೇಡ!
 
ಆಡಿಕೊಳ್ಳಲು ಬೇಡಿ ಕ್ಯಾಂಡಿಡೇಟಿನ ಬಯೋಡೇಟಾ
ಮತದಾರ ಬಯಸೋದು ‘ಹುರಿಯಾಳು ಅಪ್ ಟು ಡೇಟ?
 
ತಂದೆ ತಾಯಾರೆಂದು ಕೆದಕಿದರೆ ಬೇರಾ
ಮತದಾರ ಮಂಗಳಾರತಿ ಎತ್ತೆ, ಪಲಿತಾಂಶ ಘೋರ!
 
end ಗುಟುಗು
ಲಾಯರು: ನಿಮ್ಮ ಮಗ ರೀಸರ್ಚ್ ಮಾಡ್ತಿರಬೇಕಲ್ಲಾ ರಾಯರೇ?
ರಾಯರು: ರೀಸರ್ಚ್ ಮಾಡ್ಬೇಕು ಅಂತಾ ಇದ್ದಾನೆ. ಆದರೆ ಅದಕ್ಕೂ ಮುಂಚೆ ಯಾರನ್ನು ಹಿಡಿದರೆ ಸುಲಭವಾಗಿ ಮತ್ತು ಬೇಗ ಡಾಕ್ಟರೇಟ್ ಸಿಗುತ್ತೋ ಅಂತ ವ್ಯಕ್ತಿನ ಮೊದಲು ಸರ್ಚ್ ಮಾಡಿ, ಆಮೇಲೆ ರೀಸರ್ಚ್ ಮಾಡು ಅಂತ ಹೇಳಿದ್ದೇನೆ ಬಾವಿ ಸಂಶೋಧಕನಿಗೆ.
 

‍ಲೇಖಕರು avadhi

September 16, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: