ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟೈಮ್ ಪಾಸ್ ಕಡ್ಲೆಕಾಯ್ : ಶಾಮಣ್ಣನವರು ಕನ್ನಡಕ್ಕಾಗಿ ಕೈ ಎತ್ತಿದ್ದು!!

– ಕೆ ಅಕ್ಷತಾ

ಇದೇ ಸಂದರ್ಭದಲ್ಲಿ ಅಂತ ಅನಿಸತ್ತೆ ಪುಟ್ಟಪ್ಪನವರು`ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ. ಕನ್ನಡಕ್ಕಾಗಿ ಕೊರಳೆತ್ತು ಅಲ್ಲಿ ಪಾಂಚಜನ್ಯ ಮೊಳಗುತ್ತದೆ. ಕನ್ನಡಕ್ಕಾಗಿ ಕಿರು ಬೆರಳೆತ್ತಿದರೂ ಸಾಕು ಅದೇ ಗೋವರ್ಧನ ಗಿರಿಯಾಗುತ್ತದೆ’ ಎಂದು ಕೊಟ್ಟ ಕರೆಯನ್ನು ಕೋಣಂದೂರು ಲಿಂಗಪ್ಪ ತಮ್ಮ ಎಲ್ಲ ಭಾಷಣದಲ್ಲೂ ಪ್ರಸ್ತಾಪಿಸುತ್ತಿದ್ದರು. ಆವತ್ತಿಂದ ನಾನು ನನ್ನ ಬಲಗೈ ಕಿರು ಬೆರಳನ್ನು ಎತ್ತಿ ಹಿಡಿದುಕೊಂಡು ಓಡಾಡಲು ಪ್ರಾರಂಭಿಸಿದೆ. ಅದನ್ನು ನೋಡಿದವರೆಲ್ಲ `ಯಾಕೆ ಕಿರು ಬೆರಳು ಎತ್ಕಂಡು ಓಡಾಡ್ತೀಯ? ಎಂದು ಕೇಳೋರು ಆಗ ನಾನು ಲಿಂಗಪ್ಪ `ಕನ್ನಡಕ್ಕಾಗಿ ಕಿರುಬೆರಳೆತ್ತು ಗೋವರ್ಧನಗಿರಿಯಾಗುತ್ತದೆ ಅಂದಿದ್ದಾರೆ ಅವರ ಮಾತನ್ನು ಪಾಲಿಸ್ತಿದೇನೆ’ ಅಂತಿದ್ದೆ. `ಓಹೋ ಹಾಗಾ.. ನಾವೆಲ್ಲೋ ನಿಂಗೆ ನಂಬರ್ ಒನ್ಗೆ ಅವಸರ ಆಗಿದೆಯೇನೋ ಅದಕ್ಕೆ ಹಿಂಗೆ ಮಾಡ್ತಿದೀಯಾ’ ಅನ್ಕೊಂಡಿದ್ವಿ ಅನ್ನೋರು. ನಂತರದ ದಿನದಲ್ಲಿ ನನ್ನಿಂದ ಪ್ರೇರೇಪಿತರಾಗಿ ಕಿರುಬೆರಳು ಎತ್ತಿ ಹಿಡ್ಕೊಂಡು ಓಡಾಡುವ ಕನ್ನಡ ಪ್ರೇಮಿಗಳ ಸಂಖ್ಯೆ ಜಾಸ್ತಿಯಾಗುತ್ತಾ ಹೋಯಿತು. ಹಿಂಗೆ ಜಾಸ್ತಿಯಾದರೆ ಕನ್ನಡಕ್ಕೆ ಅಪಾಯ ತಪ್ಪಿದ್ದಲ್ಲ ಅಂತ ಎಚ್ಚೆತ್ಕಂಡು ಈ ನನ್ನ ಕನ್ನಡ ಸೇವೆಯನ್ನು ನಿಲ್ಲಿಸಿದೆ.  ]]>

‍ಲೇಖಕರು G

4 April, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading