– ಎಸ್.ಜಿ.ಶಿವಶಂಕರ್
ಕ್ಯಾಂಟೀನಿನಲ್ಲಿ ಊಟ ಮಾಡುತ್ತಾ ವಿಶ್ವನಿಗಾಗಿ ಕಾಯುತ್ತಿದ್ದೆ. ವಿಶ್ವ ಬಾಗಿಲಲ್ಲಿ ಕಾಣಿಸಿಕೊಂಡಾಗ ನಾನು ಕೈಬೀಸಿದೆ. ನೋಡಿಯೂ ನೋಡದವನಂತೆ ಮುಖ ತಿರುಗಿಸಿದ ವಿಶ್ವ.
ಬಫೆ ಕೌಂಟರಿನಲ್ಲಿ ತಟ್ಟೆ ತುಂಬಿಸಿಕೊಂಡು ನಿಧಾನಕ್ಕೆ ನನ್ನ ಟೇಬಲ್ ಕಡೆ ಬಂದ. ಅವನ ನಡಿಗೆಯಲ್ಲಿ ಎಂದಿನ ವೇಗವಿರಲಿಲ್ಲ. ಎದುರಿನ ಕುಚರ್ಿಯಲ್ಲಿ ಕೂತು ತಟ್ಟೆ ಟೀಬಲ್ ಮೇಲೆ ಕುಕ್ಕಿದ! ಮುಖ ಉರಿಯುತ್ತಿತ್ತು! ತುಟಿ ಬಿಗಿದಿತ್ತು!
ಏನು ವಿಷಯ? ಕುತೂಹಲದಿಂದ ಕೇಳಿದೆ.
ಮಾಡಿದೆಯಲ್ಲ ಮುಖಕ್ಕೆ ಮಂಗಳಾರತಿ! ಗರಂ ಆಗಿದ್ದ!
ಮಂಗಳಾರತಿ? ಯಾರು ಯಾರಿಗೆ? ಯಾವಾಗ?
ಕೋಪಕ್ಕೆ ಕಾರಣ ಏನಿರಬಹುದೆಂದು ಊಹಿಸತ್ತಲೇ ಮಾತಾಡಿದೆ.
ಇದುವರೆಗೂ ನನ್ನ ಮಂಗನ್ನ ಮಾಡಿದ್ದು ಸಾಕು! ಇನ್ನು ನಿನ್ನ ಸಹವಾಸ ಸಾಕು!
ನಾಟಕೀಯವಾಗಿ ಕೈಜೋಡಿಸಿದ; ಊಟ ಮಾಡುತ್ತಿದ್ದೆ ಎನ್ನುವುದನ್ನು ಮರೆತು! ಅನ್ನ ಕಲೆಸುತ್ತಿದ್ದ ಕೈ ಖಾಲಿ ಕೈಜೊತೆ ಸೇರಿತು!
ನನಗೆ ನಗು ತಡೆಯಲಾಗಲಿಲ್ಲ! ನನ್ನ ನಗು ಅವನನ್ನು ಇನ್ನಷ್ಟು ಕೆರಳಿಸಿತ್ತು!
ದುದರ್ಾನ ತೆಗೆದುಕೊಂಡವನಂತೆ ವಿಶ್ವ ಕೈತೊಳೆಯಲು ಎದ್ದು ಹೋದ. ಕೈತೊಳೆದು ವಾಪಸ್ಸು ಬರುತ್ತಾನೆ ಎಂದುಕೊಂಡರೆ, ಆಸಾಮಿ ಇನ್ನೊಂದು ತಟ್ಟೆ ತೆಗೆದುಕೊಂಡು ದೂರದ ಟೇಬಲ್ಲಿಗೆ ಹೋಗಿದ್ದ. ‘ನಿನ್ನ ಮಾನ ಕಳೆಯುತ್ತಿದ್ದೇನೆ’ ಎಂದು ಹೇಳುವಂತಿತ್ತು ಅವನ ಕೃತ್ಯ!
ಮನಸ್ಸಿಗೆ ಪಿಚ್ಚೆನಿಸಿತು. ನಾನು ನಗಬಾರದಿತ್ತು ನಿಜ! ಆದರೆ ಅದಕ್ಕೇ ಟೇಬಲ್ಲನ್ನೇ ಬದಲಾಯಿಸುವುದೆ? ವಿಶ್ವ ಇನ್ನೊಂದು ಟೇಬಲ್ಲಿನಲ್ಲಿ ಸಹೋದ್ಯೋಗಿಗಳ ಜೊತೆ ಜೋರಾಗಿ ನಗುತ್ತಾ ಊಟ ಮಾಡುತ್ತಾ ನನ್ನ ಮೇಲೆ ಸೇಡು ತೀರಿಸಿಕ್ಕೊಳ್ಳುವವನಂತೆ ವತರ್ಿಸುತ್ತಿದ್ದ. ಅವನ ಈ ವರ್ತನೆಗೇನು ಕಾರಣ ಎಂಬುದು ಮಾತ್ರ ತಿಳಿಯದೆ ಹೋಯಿತು. ಏನೂ ಅಗಿಲ್ಲವೆಂಬಂತೆ ಊಟ ಮುಗಿಸಿ ಡಿಪಾಟ್ಮರ್ೆಂಟು ಸೇರಿದೆ.
ನನ್ನ ಮತ್ತು ವಿಶ್ವನ ಬಗೆಗೆ ಒಂದಿಷ್ಟು ಪೀಠಿಕೆ ಅಗತ್ಯ. ನಾವಿಬ್ಬರೂ ಚಡ್ಡಿ ದೋಸ್ತಿಗಳು. ಒಟ್ಟಿಗೆ ಇಂಜಿನಿಯರಿಂಗ್ ಓದಿ ಒಂದೇ ಫ್ಯಾಕ್ಟರಿಯಲ್ಲಿ ಬೇರೆ ಬೇರೆ ಡಿಪಾಟರ್ುಮೆಂಟುಗಳಲ್ಲಿ ಕೆಲಸ. ನನ್ನದು ಉತ್ಪಾದಿಸುವ ಕೆಲಸ, ಅವನದು ಗುಣಮಟ್ಟ ಕಾಯುವ ಕೆಲಸ. ವಿಶ್ವ ಹುಟ್ಟ ಸ್ಥಿತಿವಂತ; ಆದರೆ ಮುಂಗೋಪಿ! ಹೃದಯ ಮೃದು, ಮಾತು ಕಠಿಣ! ನನ್ನ ಆಥರ್ಿಕ ಸಂಧಿಗ್ದ ಪರಿಸ್ಥಿತಿಗಳಲ್ಲಿ ವಿಶ್ವನೇ ರಿಸವರ್್ ಬ್ಯಾಂಕ್! ಅವನ ಕೋಪ ನನಗೆ ಮುಳುವಾಗುವುದು! ಆದುದರಿಂದ ಆದಷ್ಟು ಬೇಗನೆ ಅವನ ಕೋಪದ ಮೂಲ ಹುಡುಕಿ ಪರಿಸ್ಥಿಯನ್ನು ಸಹಜ ಸ್ಥಿತಿಗೆ ತರಬೇಕಾದ ಅನಿವಾರ್ಯವಿತ್ತು!
ಸಂಜೆಯವರೆಗೆ ಸಮಯ ಸರಿಯುವುದೇ ತಿಳಿಯುವುದಿಲ್ಲ! ಕಾಖರ್ಾನೆಯ ಕೆಲಸವೇ ಅಂತಾದ್ದು! ಸಂಜೆ ನಾಲ್ಕರ ಸಮಯ. ಮೊದಲನೆಯ ಷಿಫ್ಟ್ ಮುಗಿದು ಎರಡನೆಯ ಷಿಫ್ಟ್ ಶುರುವಾಗುವುದರಲ್ಲಿತ್ತು. ಸೂಪರ್ವೈಸರುಗಳು ಒಬ್ಬೊಬ್ಬರಾಗಿ ಬಂದು ತಮ್ಮ ನಿಯಂತ್ರಣದಲ್ಲಿನ ಮೆಷೀನು ಮತ್ತು ಕೆಲಸಗಾರರ ಉತ್ಪಾದನೆಯ ವಿವರ ಸಲ್ಲಿಸಿ ಹೋಗುತ್ತಿದ್ದರು. ಸುಬ್ರಮಣಿ ಮಾತ್ರ ‘ಕ್ವಾಲಿಟಿಯವರು ಒಂದು ಪಾರ್ಟನ್ನು ಕ್ಲಿಯರ್ ಮಾಡದೆ ಹಿಡಿದಿಟ್ಟಿದ್ದಾರೆ, ಕಾರಣ ಕೇಳಿದರೆ ವಿಶ್ವನಾಥ್ ಅವರ ಆರ್ಡರ್ ಅಂತ ಹೇಳ್ತಿದ್ದಾರೆ’ ಎಂದು ಹೇಳಿ ಪಾಟರ್್ ನಂಬರನ್ನು ಬರೆದು ಕೊಟ್ಟ.
ಮಧ್ಯಾನ್ಹ ಲಂಚ್ ಟೈಮಿನಲ್ಲಿ ನಾನು ನಕ್ಕದ್ದಕ್ಕೂ ಇದಕ್ಕೂ ಖಂಡಿತಾ ಸಂಬಂಧ ಇದೆ ಅನ್ನಿಸಿತು!
ವಿಶ್ವನಿಗೆ ಫೋನಾಯಿಸಿದೆ.
ಸಾರು ಬಾಸು ಬಿಜಿಯಾಗಿದ್ದಾರೆ..ಇನ್ನೊಂದು ಅರ್ಧ ಗಂಟೆ ನಂತರ ಫೋನು ಮಾಡ್ಬೇಕಂತೆ
ಎಂದೊಂದು ಹೆಣ್ಣು ಸ್ವರ ಉಲಿಯಿತು! ಹಿಂದೆಂದೂ ಅವನ ಆಫೀಸಿಂದ ಹೆಣ್ಣು ಸ್ವರ ಕೇಳಿಸಿರಲಿಲ್ಲ! ನೇರ ವಿಶ್ವನೇ ಫೋನೆತ್ತಿಕ್ಕೊಳ್ಳುತ್ತಿದ್ದ.
ನೀನು ಯಾರಮ್ಮ? ಅಚ್ಚರಿಯಿಂದ ಕೇಳಿದೆ.
ಲೌಲೀನ್ ಅಂತ ಸಾರ್ ಅವರ ಪಿಎ
ಸರಿಯಮ್ಮ ಎಂದು ಫೋನಿಟ್ಟೆ!
ಸಾರ್ ವಿಶ್ವನಾಥ್ ಅವರಿಗೆ ಒಬ್ಬರು ಲೇಡಿ ಪಿ.ಎ ಬಂದಿದಾರೆ ಸಾರ್! ನಮ್ಮ ಕಂಪೆನಿಯವರು ಎಲ್ಲೆಲ್ಲಿಂದ ಜನ ಹಿಡ್ಕೊಂಡು ಬತರ್ಾರೋ ದೇವರಿಗೇ ಗೊತ್ತು! ನನ್ನ ಮಾತು ಕೇಳಿಸಿಕೊಂಡ ತಕ್ಷಣ ಸುಬ್ರಮಣಿ ಹೇಳಿದ.
ವಿಶ್ವನ ಕೋಪದ ರಹಸ್ಯ ಬಿಡಿಸಿಕ್ಕೊಳ್ಳುತ್ತಿದೆ ಎನ್ನಿಸಿತು.
ಅದ್ಯಾಕ್ರೀ ಹಾಗೆ ಹೇಳ್ತೀರಾ?
ಮತ್ತೇನು ಸಾರ್? ಪಿ.ಎ ಅಂದರೆ ಒಂದಿಷ್ಟು ಅಂದಚಂದ ಬೇಡವಾ ಸಾರ್? ಈಯಮ್ಮ ನೋಡಿದರೆ ನಡುವಯಸ್ಸು ನೋಡೋದಕ್ಕೋ..?
ಸಾಕ್ರೀ ಸುಬ್ರಮಣಿ, ಮುಂದಕ್ಕೆ ವಿವರಣೆ ಬೇಡ. ಕಂಪೆನಿಯವರು ಕೆಲಸ ಮಾಡೋಕೆ ಜನ ತಗೊಳ್ಳೋದು! ಅವರ ಅಂದಚಂದ ನೋಡಿ ಅಲ್ಲ ಎಂದು ಬಾಯಿ ಮುಚ್ಚಿಸಿದೆ.
ಸೂಪರ್ವೈಸರ್ಗಳೆಲ್ಲಾ ತೆರಳಿ ಎರಡನೆ ಪಾಳಿ ಸುರುವಾಗುತ್ತಿರುವಾಗ ನಾನು ವಿಶ್ವನ ಆಫೀಸಿನ ಕಡೆಗೆ ನಡೆದೆ. ನಡು ದಾರಿಯಲ್ಲಿ ವಿಶ್ವನ ಚಯರ್ೆ, ಅವನ ಹೊಸ ಪಿ.ಎ, ಪಿ.ಎಯ ರೂಪ, ಸುಬ್ರಮಣಿಯ ಮಾತು-ಎಲ್ಲವನ್ನೂ ಒಟ್ಟಿಗೆ ಇಟ್ಟು ತರ್ಕಬದ್ಧವಾಗಿ ಯೋಚಿಸಿದೆ. ಏನೋ ಒಂದು ಯೋಚನೆ ಹೊಳೆಯಿತು. ಅದರ ಹಿಂದೆಯೇ ವಾರದ ಹಿಂದೆ ಕ್ಲಬ್ಬಿನಲ್ಲಿ ನಡೆದ ಘಟನೆ ನೆನಪಿಗೆ ಬಂತು.
ಇಡೀ ವಿಶ್ವದಲ್ಲಿ ತಾನೊಬ್ಬನೇ ಇರುವೆ ಎಂಬ ರೀತಿಯಲ್ಲಿ ಬೀರ್ ಬಾಟಲನ್ನು ಮುಂದಿಟ್ಟುಕೊಂಡು, ಬಿಯರಿನ ಕಹಿಯನ್ನು ಸವಿಯಲು ಆಗಾಗ್ಗೆ ಖಾರದ ಕಡಲೇಬೀಜವನ್ನು ಬಾಯಿಗೆ ಎಸೆದುಕ್ಕೊಳ್ಳುತ್ತಾ ಆನಂದದಲ್ಲಿ ತೇಲುತ್ತಿದ್ದ ವಿಶ್ವ. ಅವನ ಮುಂದೆ ನಾನು ಪ್ರತ್ಯಕ್ಷನಾಗಿದ್ದೆ. ವಿಶ್ವ ನನ್ನತ್ತ ನೋಡಿ ಏನು ತಗೋತೀಯಾ?ಅಂದಿದ್ದ. ನಾನು ಕ್ಲಬ್ಬಿಗೆ ಹೋಗುವುದು ಅಪರೂಪಕ್ಕೆ. ವಿಶ್ವ ಅಲ್ಲಿಯ ಸೇವೆಯನ್ನು ಪೂರಾ ಅನುಭವಿಸುವ ಸದಸ್ಯ.
ಅದೆಲ್ಲಾ ಏನೂ ಬೇಡ..ನಾನು ಬಂದಿದ್ದು ಎಂದು ನಾನು ಬಾಯಿ ತೆರೆದಾಗ ವಿಶ್ವ ನನ್ನ ಮಾತು ತುಂಡಿರಿಸಿದ್ದ.
ನೀನು ಬಂದಿದ್ದು ಯಾತಕ್ಕೇಂತ ನನಗೊತ್ತು! ಮನೆ ತುಂಬ ದಂಡಿಯಾಗಿ ನೆಂಟರು..ಜೇಬು ಖಾಲಿ..ಅಲ್ಲವೆ? ವಿಶಾಲೂ ಎಲ್ಲಾ ಹೇಳಿದಳು..ವಾಪಸ್ಸು ಹೋಗೋವಾಗ ಎಟಿಎಂನಲ್ಲಿ ಡ್ರಾ ಮಾಡಿ ಕೊಡ್ತೇನೆ..ಈಗ ನನಗೆ ಕಂಪೆನಿ ಕೊಡು. ನಿನ್ನ ಫೇವರಿಟ್ ಫ್ರೆಶ್ ಲೈಮ್ ಜ್ಯೂಸ್ ಕುಡಿ ಎಂದು ಕ್ಲಬ್ ಹುಡುಗನಿಗೆ ಆರ್ಡರ್ ಮಾಡಿದಾಗ ನಾನು ಮರುಮಾತಾಡದೆ ಕೂತಿದ್ದೆ.
ಬಡ್ಡಿ ಎಷ್ಟು ಕೊಡ್ತೀಯಾ?
ವಿಶ್ವನ ಪ್ರಶ್ನೆಗೆ ಕರೆಂಟು ಹೊಡೆದಂತಾಯಿತು. ಗಾಬರಿಯಿಂದ ಕುಡಿಯುತ್ತಿದ್ದ ಲೈಮ್ ಜ್ಯೂಸ್ ನೆತ್ತಿಗೇರಿ ಕೆಮ್ಮತೊಡಗಿದ್ದೆ.
ಹೆದ್ರಿಕೋಬೇಡ! ನಾನೇನು ನಿನ್ನ ಬಡ್ಡಿ ಕೇಳೊಲ್ಲ. ಬದಲಿಗೆ ಒಂದು ಫೇವರ್..?
ಏನಪ್ಪಾ ಅದು?
ಏನಿಲ್ಲ. ಬಾಸುಗಳನ್ನು ಬುಟ್ಟಿಗೆ ಹಾಕ್ಕೊಳ್ಳೋದ್ರಲ್ಲಿ ನೀನು ಎಕ್ಸ್ಪಟರ್ು! ಪಾಪ ನಿನಗೆ ವಕರ್್ಲೋಡು ಜಾಸ್ತಿ ಅಂತ ಜಿ.ಎಮ್ಮು ನಿನಗೆ ಒಬ್ಬಳು ಪಿ.ಎ ಕೊಡೋದಕ್ಕೆ ಆಕ್ಷನ್ ತಗೊಂಡಿದ್ದಾರೆ
ವಿಶ್ವ ಅದು ಬಾಸು ಡಿಸಿಶನ್, ನಂದಲ್ಲ..!
ನನ್ನ ಡಿಸಿಶನ್ನು ಹೇಳ್ತೀನಿ ಕೇಳು: ನಿನಗೆ ಪಿ.ಎ ಅವಶ್ಯಕತೆ ಇಲ್ಲ! ನಿನಗೆ ಕೆಲಸ ಕಮ್ಮಿ, ನನಗೆ ಜಾಸ್ತಿ! ಪಿಎ.ಬೇಕಾಗಿರೋದು ನನಗೆ. ಬಾಸನ್ನ ಹೇಗೆ ಕನ್ವಿನ್ಸ್ ಮಾಡ್ತೀಯೋ ಗೊತ್ತಿಲ್ಲ…ಆಕೇನ ನನ್ನ ಆಫೀಸಿಗೆ ಟ್ರಾನ್ಸ್ಫರ್ ಮಾಡಿಸಬೇಕು..ಸಾಧ್ಯಾನಾ..?
ಖಡಾಖಂಡಿತವಾಗಿ ಹೇಳಿದ್ದ ವಿಶ್ವ! ಅವನ ಆಕ್ಷನ್ ನೋಡಿದ್ರೆ ಯಾವ ಅಂಡರ್ ವಲ್ಡರ್್ ಡಾನ್ಗೂ ಕಮ್ಮಿ ಇಲ್ಲ ಅನ್ನಿಸಿತ್ತು! ಎಲಾ ಇವನ ಅಂದ್ಕೊಂಡಿದ್ದೆ ಮನಸ್ಸಿನಲ್ಲೇ.
ಅಲ್ವೋ ವಿಶ್ವ ಆಫೀಸಿನಲ್ಲಿ ಒಬ್ಬಳು ಪರ್ಸನಲ್ ಅಸಿಸ್ಟೆಂಟ್ ಇದ್ದರೆ ನಿನಗೇನು ಕೋಡು ಬರುತ್ತೇನೋ?
ಇಲ್ಲಾ ಆದ್ರೆ ಮಯರ್ಾದೆ ಹೆಚ್ಚುತ್ತೆ. ಒಂದು ಲಕ್ಷಣವಾದ ಹುಡುಗಿ ಪಿ.ಎ ಆದ್ರೆ ಆಫೀಸಿನ ಖದರ್ರೇ ಬೇರೆ!
ವಿಶ್ವನ ಕಣ್ಣಲ್ಲಿ ಒಬ್ಬಳು ಸುರಸುಂದರಿ ಮಿಂಚುತ್ತಿದ್ದಂತೆ ಅನಿಸಿತ್ತು.
ಲೋ ವಿಶ್ವಾ ಈ ವಯಸ್ಸಲ್ಲಿ ಇಂದೆಂತ ಹುಚ್ಚು ಆಸೇನೋ?
ಅದೆಲ್ಲಾ ನಿನಗೆ ಯಾಕೆ? ನಿನಗಾಗಿ ಬರೋ ಪಿ.ಎ ನನ್ನ ಆಫೀಸಲ್ಲಿ ರಿಪೋಟರ್ು ಮಾಡ್ಕೋಬೇಕು
ವಿಶ್ವ ಹಿಡಿದರೆ ಉಡದಂತೆ. ಒಪ್ಪದೆ ವಿಧಿ ಇರಲಿಲ್ಲ! ಅದಾದ ಕೆಲವು ದಿನಗಳಲ್ಲಿ ಈ ವಿಷಯ ಮರೆತೇ ಹೋಗಿತ್ತು!
ಈ ಘಟನೆ ನೆನಪಾಗುತ್ತಲೇ ವಿಶ್ವನ ಕೋಪಕ್ಕೆ ಕಾರಣ ತಿಳಿದೇ ಹೋಗಿತ್ತು! ಅವನ ಕೋಪ ಇನ್ನೂ ಹೆಚ್ಚಾಗುವುದಕ್ಕೆ ಮುಂಚೆ ಸರಿ ಮಾಡಬೇಕು, ಇಲ್ಲದಿದ್ದರೆ ನನ್ನ ತಿಥಿ ಮಾಡಿಬಿಡ್ತಾನೆ ಎನಿಸಿತು. ವಿಶ್ವನ ಆಫೀಸಿಗೆ ಹೊರಟವನು ಸೀದಾ ಜಿ.ಎಮ್ ಆಫೀಸಿಗೆ ಹೋಗಿ ಒಂದಿಷ್ಟು ವರದಿ ಒಪ್ಪಿಸಿ ನಂತರ ವಿಶ್ವನ ಆಫೀಸಿಗೆ ಕಾಲಿಟ್ಟೆ.
ನನ್ನನ್ನು ನೋಡಿದ ತಕ್ಷಣ ಪಕ್ಕಕ್ಕೆ ತಿರುಗಿ ಕಂಪ್ಯೂಟರಿನಲ್ಲಿ ಕೆಲಸ ಮಾಡಲನುವಾದ ವಿಶ್ವ.
ಐಯಾಮ್ ಸಾರಿ ವಿಶ್ವ ಮಾತು ಶುರು ಮಾಡಿದೆ.
ನಿನ್ನ ಸಾರಿ ಆವಶ್ಯಕತೆಯಿಲ್ಲ! ನಾನು ಬಿಜಿ, ಸಮಯವಿಲ್ಲ ಮಾತಾಡೋದಕ್ಕೆ
ಇದು ಪರ್ಸನಲ್ ಅಲ್ಲ ವಿಶ್ವ, ಅಫಿಶಿಯಲ್ಲು! ನೀನು ಹೋಲ್ಡ್ ಮಾಡಿರೋ ರೋಲರ್ ಪಾಟರ್ು ಅಸಂಬ್ಲೀಗೆ ಅಜರ್ೆಂಟು ಬೇಕಾಗಿದೆ
ಇರಬಹುದು ಅದರ ಸಫರ್ೇಸು ಸ್ಮೂತಾಗಿಲ್ಲ
ಅದಲ್ಲ ಕಾರಣ..ನಿಜವಾದ ಕಾರಣ ಹೇಳ್ಲಾ? ಛಾಲೆಂಜು ಮಾಡಿದೆ.
ಹೇಳು ಅದೇನು ಹೇಳ್ತೀಯೋ..ನೋಡೋಣ?
ವಿಶ್ವಾ ನಾನೇನು ನಿನ್ನ ಹೊಸದಾಗಿ ನೋಡ್ತಿದ್ದೀನೇನೋ..? ನಿನ್ನ ಕೋಪಕ್ಕೆ ಕಾರಣ ನಿನ್ನ ಹೊಸ ಪಿ.ಎ ಅಲ್ಲವೇನೋ..?
ನನ್ನ ಮಾತಿಂದ ವಿಶ್ವ ಕೊಂಚ ವಿಚಲಿತನಾದ!
ಅಲ್ಲ ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ನುಡಿದ.
ವಿಶ್ವ ನೀನು ಅಲ್ಲ ಅಂದರೆ ಹೌದು ಅಂತ ಅರ್ಥ! ನಿನ್ನ ಆಸೆಯಂತೆ, ಹಿಡಿದ ಹಟದಂತೆ ಹೊಸ ಪಿ.ಎ ಬಂದಳು..ಆದರೆ ಅಕೆ ನೋಡೋಕೆ ಚೆನ್ನಾಗಿಲ್ಲ! ಅಲ್ಲವೇನೋ..?
ಅದಕ್ಕೇ ನನಗೆ ಗಂಟು ಹಾಕಿದೆ ಅಲ್ವಾ..? ವಿಶ್ವ ಪೌರಾಣಿಕ ನಾಟಕದ ಖಳನಾಯಕನಂತೆ ಕಟಕಟನೆ ಹಲ್ಲು ಕಡಿದ.
ಖಂಡಿತಾ ಇಲ್ಲ! ನನಗೆ ಆಕೆ ಹೇಗಿದ್ದಾಳೇಂತ ಗೊತ್ತಿರಲಿಲ್ಲ! ಈಗಲೂ ಗೊತ್ತಿಲ್ಲ! ಯಾರೋ ಹೇಳಿದ್ದು ಕೇಳಿದೀನಿ ಅಷ್ಟೆ!
ಹಸೀ ಸುಳ್ಳು! ಗೊತ್ತಿದ್ದೇ ನೀನು ಬಾಸಿಗೆ ‘ನನಗೆ ಪಿ.ಎ ಅವಶ್ಯಕತೆಯಿಲ್ಲ ವಿಶ್ವನಾಥ್ ಅವರಿಗೆ ಅವಶ್ಯಕತೆಯಿದೆ’ಅಂತ ನನ್ನ ಆಫೀಸಿಗೆ ಎತ್ತಿ ಹಾಕಿಸಿದೆ! ನನಗೆ ಅವಮಾನ ಮಾಡೋಕೆ
ವಿಶ್ವ ಎದುರಿಗಿದ್ದ ಟೇಬಲನ್ನು ಐದಾರು ಸಲ ಗುದ್ದಿದ!
ವಿಶ್ವ ಇಷ್ಟೇ ಏನೋ ನೀನು ನನ್ನ ಅರ್ಥ ಮಾಡ್ಕೊಂಡಿರೋದು? ಆಯ್ತು ಇದನ್ನ ನಾನೇ ಸರಿ ಮಾಡ್ತೀನಿ..ನಾಳೆ ಲೌಲೀನ್ ನಿನ್ನ ಆಫೀಸಿಗೆ ಬರೊಲ್ಲ ಆಯ್ತಾ..? ಮೊದಲು ರೋಲರ್ ರಿಲೀಸ್ ಮಾಡಿಸು ಇಲ್ಲಾಂದ್ರೆ ಬಾಸಿಂದ ಬೈಸಿಕೋತೀಯ
ನನ್ನ ಮಾತು ಮುಗಿಯುವಷ್ಟರಲ್ಲಿ ಫೋನು ರಿಂಗಾಯಿತು. ವಿಶ್ವ ಕೈಗೆತ್ತಿಕೊಂಡ.
ರೋಲರ್ ಯಾಕ್ರೀ ಕ್ಲಿಯರ್ ಮಾಡಿಲ್ಲ? ಬಾಸು ಬುಸುಗುಟ್ಟಿತು!
ಸರ್..ಅದರ ಸಫರ್ೇಸ್ ಫಿನಿಷ್… ವಿಶ್ವ ತಡವರಿಸಿದ.
ಬದನೇಕಾಯಿ! ಎಲ್ಲಾ ಸರಿಯಾಗೇ ಇದೆ! ನಾನೇ ಇನ್ಸ್ಪೆಕ್ಷನ್ ರಿಪೋಟರ್್ ತರಿಸಿಕೊಂಡು ನೋಡಿದ್ದೀನಿ! ಅಜರ್ೆಂಟು ಅಸೆಂಬ್ಲೀಗೆ ಬೇಕೂಂತ ಗೊತ್ತಿದ್ದರೂ ಹೇಗ್ರೀ ಹೋಲ್ಡ್ ಮಾಡ್ತೀರಿ..? ಕಲೀಗ್ಸ್ ಜೊತೆ ನಿಮ್ಮ ಪರ್ಸನಲ್ ಡಿಫರೆನ್ಸಸ್ಇದ್ದರೆ ಅದನ್ನ ಇಲ್ಲಿ ಸೆಟ್ಲ್ ಮಾಡೋಕೆ ಟ್ರೈ ಮಾಡಬೇಡಿ. ಐ ವಾಂಟ್ ದೋಸ್ ಪಾಟ್ಸರ್್ ಇನ್ ಅಸಂಬ್ಲೀ ಇನ್ ಫéಿಫé್ಟೀನ್ ಮಿನಿಟ್ಸ್..ಅರ್ಥವಾಯ್ತಾ..?
ಬಾಸು ಗುಡುಗಿದರು. ವಿಶ್ವ ನಡುಗಿದ!
ಸರಿ ಸಾರ್..
ವಿಶ್ವನ ಮಾತು ಮುಗಿಯುವುದರಲ್ಲಿ ನಾನು ಅವನ ಆಫೀಸಿನಿಂದ ಹೊರಗಿದ್ದೆ. ಇಷ್ಟೆಲ್ಲಾ ಆದಮೇಲೆ ಅವನು ಸುಮ್ಮನಿರುವುದಿಲ್ಲ, ಕೈಯಲ್ಲಿದ್ದುದನ್ನು ಎತ್ತಿ ನನ್ನ ಮೇಲೆ ಒಗೆಯಲೂ ಹೇಸುವುದಿಲ್ಲ ಎಂದು ಗೊತ್ತಿದ್ದರಿಂದ!
ಲೇಖಕ: ಎಸ್.ಜಿ.ಶಿವಶಂಕರ್, 5177,’ಶಿವಲತ’, ಹೆಚ್.ಟಿ.ಜೋಡಿ ರಸ್ತೆ, ವಿಜಯನಗರ 2ನೆ ಹಂತ
ಮೈಸೂರು-57ಂಂ17, ದೂರವಾಣಿ: ಮೊಬೈಲು: 8ಂ888ಂ3842






0 Comments