– ಕೆ ಅಕ್ಷತಾ
ದಂತಕ್ಕೆ ಎರವಾದ ದಂತವಾದ್ಯ
ಸಂಗೀತದ ಹುಚ್ಚು ಯಾವ ಪರಿ ನನ್ನನ್ನು ಈ ಸಂದರ್ಭದಲ್ಲಿ ಆವರಿಸಿತ್ತು ಎಂದರೆ ಕೈಗೆ ಸಿಕ್ಕಿದ ಎಲ್ಲ ವಸ್ತುಗಳೂ ಸಂಗೀತದ ಪರಿಕರಗಳಾಗುತ್ತಿದ್ದವು. ಬಹಳ ಚಿಕ್ಕವನಿದ್ದಾಗಲೇ ಕೈ ಬೆರಳುಗಳ ಉಗುರಿನಿಂದ ಹಲ್ಲುಗಳ ಮೇಲೆ ಹೊಡೆಯುವುದರಿಂದ ಗಟಂ ಬಾರಿಸಿದಾಗ ಹೊಮ್ಮುವಂತಹ ಶಬ್ದ ಹೊಮ್ಮಿಸಲು ಸಾಧ್ಯ ಎಂಬುದನ್ನು ಕಂಡುಕೊಂಡಿದ್ದೆ.
ಆದರೆ ಈ ರೀತಿ ಹಲವಾರು ಕಾರ್ಯಕ್ರಮ ನೀಡಿದ್ದರೂ ದಂತವಾದ್ಯ ಅಂತ ಅದಕ್ಕೆ ನಾಮಕರಣ ಆಗಿರ್ಲಿಲ್ಲ. ಶಾಮಣ್ಣನವರಿಂದ ವಿಶೇಷ ಸಂಗೀತ ಅಂತ ಹೇಳಿದ ಕೂಡ್ಲೇ ಹೋಗಿ ಈ ಕಾರ್ಯಕ್ರಮ ಪ್ರಸ್ತುತ ಪಡಿಸೋದು ನಡೆದುಕೊಂಡು ಬರ್ತಾ ಇತ್ತು. ಹಾಗೊಮ್ಮೆ ಯುವರಾಜ ಕಾಲೇಜ್ ಹುಡುಗರು ಅವರ ಕ್ಲಾಸ್ ಸೋಷಿಯಲ್ಸ್ಗೆ ನನ್ನ ಕರೆದಿದ್ದರು. ಮೈಕ್ನಲ್ಲಿ ಹಲ್ಲು ಕುಟ್ಟುವ ಶಬ್ದ ಸ್ವರದ ಏರಿಳಿತದೊಂದಿಗೆ ಬಹಳ ಚೆನ್ನಾಗಿ ಹಾಗೂ ದೂರದವರೆಗೂ ಕೇಳಿಸ್ತಿತ್ತು. ಮನೆಗೆ ಹೊರಟ ವಿದ್ಯಾಥರ್ಿಗಳೆಲ್ಲ ಇದರಿಂದ ಆಕಷರ್ಿತರಾಗಿ ಮರಳಿ ಬರತೊಡಗಿದರು. ಖಾಲಿಯಾಗ್ತಿದ್ದ ಸಭಾಂಗಣ ಮತ್ತೆ ಗಿಜಿಗಿಜಿಗುಟ್ಟತೊಡಗಿತು. ನನ್ನ ಸಂಗೀತಕ್ಕೆ ಭರಪೂರ ಚಪ್ಪಾಳೆಯು ಬಿದ್ದು ಇದರಿಂದ ಉತ್ತೇಜಿತನಾದ ನಾನು ಮೂರ್ನಾಲ್ಕು ಹಾಡನ್ನ ನುಡಿಸಿದೆ. ಹುಡುಗರಂತೂ ಹಲ್ಲು ಕುಟ್ಟಿ ಸಂಗೀತ ಹೊಮ್ಮಿಸುವ ನನ್ನ ಪ್ರತಿಭೆಗೆ ಪೂತರ್ಿ ಬೆರಗಾಗಿ ಬಿಟ್ಟರು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳು ಕಾಲೇಜಿನ ಪ್ರಾಂಶುಪಾಲರಾದ ಸೀಬಯ್ಯನವರು. ಅವರು ನನ್ನ ಸಂಗೀತ ಚಾತುರ್ಯಕ್ಕೆ ತಲೆದೂಗಿ ವೇದಿಕೆಯ ಮೇಲೆ ನನ್ನನ್ನು ತಮ್ಮ ಪಕ್ಕ ಕೂರಿಸಿಕೊಂಡು `ಅದು ಹ್ಯಾಗೆ ಹಲ್ಲಿನಿಂದ ನಾನು ಸಂಗೀತ ನುಡಿಸ್ತೀಯ?’ ಅಂತ ಕೇಳಿ ತಿಳಿದುಕೊಂಡರು. ನಂತರ ಅವರು ಮಾತಾಡುವ ಸಂದರ್ಭದಲ್ಲಿ `ಶಾಮಣ್ಣನ ಸಂಗೀತಕ್ಕೆ ದಂತವಾದ್ಯ ಅಂತ ನಾಮಕರಣ ಮಾಡುತಿದ್ದೇನೆ’ ಎಂದು ಮೈಕ್ನಲ್ಲಿ ಘೋಷಿಸಿದರು. ಸಮಾರಂಭ ಮುಗಿಸಿ ಹೊರಬೀಳುವಾಗ ಅಲ್ಲಿದ್ದ ವಿದ್ಯಾಥರ್ಿಗಳು `ಅದ್ಹೇಗೆ ಹಲ್ಲು ಕುಟ್ಟಿ ಹಾಡು ಹೇಳಕ್ಹಾಗತ್ತೆ ನೋಡೋಣ ತೋರಿಸಿ’ ಅಂತ ದುಂಬಾಲು ಬಿದ್ದರು. ನನಗಂತೂ ಬಾಯಿ ಕಳೆದು ಕಳೆದು ಹಲ್ಲನ್ನ ಹೊಡ್ಕಂಡು ನೋವು ಬರೋಕೆ ಶುರು ಆದ್ರು ಬಾಯಿ ಕಳೆಸುವವರ ಉತ್ಸಾಹ ಕುಗ್ಗಲಿಲ್ಲ. ಅಂತೂ ಅಲ್ಲಿಂದ ತಪ್ಪಿಸ್ಕಂಡು ಬರಬೇಕಾದ್ರೆ ಸಾಕು ಬೇಕಾಯ್ತು.
ದಂತವಾದ್ಯ ಪ್ರದರ್ಶನ ಬಹಳ ಬೇಗ ಫೇಮಸ್ ಆಯಿತು. ಮೈಸೂರಿನ ಬಹುತೇಕ ಕಾಲೇಜುಗಳ ಸಮಾರಂಭದಲ್ಲಿ ನನ್ನ ದಂತವಾದ್ಯ ಪ್ರದರ್ಶನಕ್ಕೆ ಖಾಯಂ ಆಹ್ವಾನವಿರುತಿತ್ತು. ಆದರೆ ಹೋದಲೆಲ್ಲ ವೇದಿಕೆಯಲ್ಲಿ ದಂತವಾದ್ಯ ಬಾರಿಸೋದಷ್ಟೆ ಅಲ್ಲ; ನನ್ನ ಬಾಯಿ ಕಳೆಸಿ ಹಲ್ಲನ್ನ ಕುಟ್ಟಿಸಿ ನೋಡಿ ಪರೀಕ್ಷೆ ಮಾಡುವವರ ಸಂಖ್ಯೆಯು ಬೆಳೆಯುತ್ತಾ ಹೋಗಿ ಪಜೀತಿಗಿಟ್ಟುಕೊಂಡಿತು. ಕೇಳಿದವರಿಗೆ ಏನು ಪರೀಕ್ಷೆ ಬೇಕಾದ್ರೂ ಮಾಡು ಅಂತ ಅವರ ಕೈಗೆ ಕೊಡೋ ಹಾಗೆ ನನ್ನ ಬಾಯಿಯನ್ನ ತೆಗೆದು ಪರೀಕ್ಷೆ ಮಾಡ್ಕಂಡು ವಾಪಾಸ್ ಕೊಡು ಅಂತ ಹೇಳೊ ಹಾಗಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಂತ ಅನ್ನಿಸೋಕೆ ಪ್ರಾರಂಭ ಆಯ್ತು.
]]>





0 Comments