ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟೈಮ್ ಪಾಸ್ ಕಡ್ಲೆಕಾಯ್ : ‘ತಳ್ಳೋ ಮಾಡೆಲ್ ಗಾಡಿ ಇದು…!’

– ಕೆ ಅಕ್ಷತಾ

ಈ ವೆಸ್ಪಾ ಸ್ಕೂಟರ್ನ್ನು ಕೊಡಿಸಿದವನು ಪಾಣಿಯೇ. ಸೆಕೆಂಡ್ಹ್ಯಾಂಡ್ ಗಾಡಿಯಾಗಿದ್ದರೂ ಹೆಚ್ಚು ಓಡಿಸಿರಲಿಲ್ಲ. ಆದರೆ ಅದನ್ನು ಕೊಳ್ಳುವಾಗ ನಾನು, ಪಾಣಿ ಇಬ್ಬರೂ ಯಾಮಾರಿದ್ದೆವು. ಮಾರುವವನು ಹೊಸ ಗಾಡಿ ಬಳಸೇ ಇಲ್ಲ ಅಂತಂದು ಹೆಚ್ಚು ಕಡಿಮೆ ಹೊಸ ಗಾಡಿ ರೇಟಿಗೆ ಅದನ್ನು ಮಾರಿದ್ದ. ನಮಗೂ ಗಾಡಿಯಲ್ಲಿ ಆ ಕ್ಷಣಕ್ಕೆ ಏನೂ ನ್ಯೂನ್ಯತೆ ಕಾಣಲಿಲ್ಲವಾದ್ದರಿಂದ ನಾವು ಬಹಳ ಸಂತೋಷದಿಂದ ವ್ಯವಹಾರ ಮಾಡಿದೆವು. ಆದರೆ ನಮ್ಮ ಕೈಗೆ ಅದು ಬಂದ ಮೇಲೆ ನಮಗೆ ತಿಳಿದಿದ್ದು ಗಾಡಿಯ ಮ್ಯಾಗ್ನೆಟ್ ಸಂಪೂರ್ಣ ವೀಕಿದೆ ಎಂದು. ವೆಸ್ಪಾದ ಮ್ಯಾಗ್ನೆಟ್ ಹಾಗೆಲ್ಲ ವೀಕಾಗಲ್ಲ ಆದರೆ ಅದೇನು ಕಾರಣವೋ ಇದರ ಮ್ಯಾಗ್ನೆಟ್ ಸಂಪೂರ್ಣ ವೀಕಾಗಿದ್ದು ಹಲವು ಬಾರಿ ಕಿಕ್ ಹೊಡೆದ ಮೇಲೆ ಗಾಡಿ ಸ್ಟಾಟರ್್ ಆಗೋದು. ಅದಕ್ಕೆ ಆವರೇಜ್ ಫಿಫ್ಟಿ ಅಂತ ಕರೀತಿದ್ವಿ.

ಅಂದ್ರೆ ಆವರೇಜ್ ಫಿಫ್ಟಿ ಕಿಕ್ ಹೊಡೆದ್ರೇನೆ ಗಾಡಿ ಸ್ಟಾಟರ್್ ಆಗ್ತಿತ್ತು. ಯಾರಾದರೂ ಗಟ್ಟಿಮುಟ್ಟಾದ ಆಳು ಕಂಡ್ರೆ ಅವರತ್ರನೂ ಕಿಕ್ ಹೊಡೆಸ್ಕಂಡಿದೆ.

ಹೆಚ್ಚಿನ ಬಾರಿ ಕಿಕ್ ಹೊಡೆದು ಸಹಾಯ ಮಾಡಿದವರು ಆಲನಹಳ್ಳಿಕೃಷ್ಣ. ಅವರಿನ್ನೂ ಆಗ ಯುವಬರಹಗಾರ. ಅವರ ಕವಿತೆಗಳನ್ನ ಲಹರಿಯಲ್ಲಿ ಪ್ರಕಟಿಸಿದ್ವಿ. ಪ್ರಿಂಟಿಂಗ್ಪ್ರೆಸ್ನಲ್ಲಿ ಬಂದು ಕೂರುತಿದ್ದ ಅವನು ಇಂಥ- ಹಲವು ಉಪಕಾರಗಳನ್ನು ಮಾಡ್ತಿದ್ದ.

 

 

‍ಲೇಖಕರು G

14 June, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading