ಟೈಮ್‌ಪಾಸ್ ಕಡ್ಲೆಕಾಯ್ : ಫೋಟೋ ಫಿನಿಶ್!

ಎಸ್ ಜಿ ಶಿವಶ0ಕರ್

ಬೆಳಗಿನಿ0ದ ವಿಶ್ವ ದುಸುಮುಸು ಮಾಡುತ್ತಿದ್ದ. ಮುಖ ಗಡಿಗೆಯ ಗಾತ್ರವಾಗಿತ್ತು. ಮಾತಾಡಲು ಎರಡು ಸಲ ಪ್ರಯತ್ನಿಸಿದ್ದ. ಅವಕಾಶ ಕೊಡದೆ ತಪ್ಪಿಸಿಕೊಂಡಿದ್ದೆ. ರೋಗಿಯನ್ನು ನೋಡುತ್ತಲೇ ಖಾಯಿಲೆ ಯಾವುದೆ0ದು ಹೇಳುವ ಡಾಕ್ಟರುಗಳಂತೆ ವಿಶ್ವನನ್ನು ನೋಡುತ್ತಲೇ ಅವನ ಮನಸ್ಸಿನಲ್ಲಿರುವುದನ್ನು ಹೇಳುವ, ಹತ್ತು ಪೈಸೆ ಉಪಯೋಗಕ್ಕೂ ಬಾರದ ವಿದ್ಯೆ ನನಗೆ ಕರಗತವಾಗಿತ್ತು! ವಿಶ್ವನನ್ನು ನೋಡುತ್ತಲೇ ಹೆ0ಡತಿಯೊ0ದಿಗೆ ಜಗಳವಾಡಿದ್ದಾನೆ ಎನ್ನುವುದು ತಿಳಿದು ಹೋಗಿತ್ತು. ಕೇಳಿದರೆ ಕೊರೆಯುತ್ತಾನೆಂದು ಸ್ಕೋಪ್ ಕೊಟ್ಟಿರಲಿಲ್ಲ.
ಬೆಳಿಗ್ಗೆ ಎ0ಟಕ್ಕೆ ಕಾಖರ್ಾನೆಯಲ್ಲಿ ಬೆಳಗಿನ ಕೆಲಸ ಚುರುಕಿನಿ0ದ ನಡೆಯುತ್ತದೆ. ಆ ಸಮಯದಲ್ಲೇ ಉತ್ಪಾದನೆ ಹೆಚ್ಚು. ಈ ಸಮಯದಲ್ಲಿ ವಿಶ್ವನ ಉಸಾಬರಿ ಬೇಡ ಎ0ದು ಎಚ್ಚರವಹಿಸಿದ್ದೆ. ಬೆಳಗಿನಿ0ದ ಅವನಿಗೆ ಮುಖಾಮುಖಿಯಾಗುವ ಕ್ಷಣಗಳಿ0ದ ಪಾರಾಗಿದ್ದೆ.
ಹನ್ನೊ0ದು ಗ0ಟೆಯ ಸಮಯದಲ್ಲಿ ತಲೆ ತಿನ್ನುತ್ತಿದ್ದ ಪೇಪರುಗಳನ್ನು ಹಿಡಿದು ಕೂತಿದ್ದಾಗ ಬೇತಾಳನ0ತೆ ವಿಶ್ವ ವಕ್ಕರಿಸಿದ! ಹಾರರ್ ಸಿನೀಮಾ ನೋಡಿದ0ತೆ ಬೆಚ್ಚಿಬಿದ್ದೆ! ಕೊನೆಗೂ ಇವನ ಕೈಯಲ್ಲಿ ಸಿಕ್ಕಿಕೊಳ್ಳುವ0ತಾಯಿತಲ್ಲ ಎ0ದು ಅದೃಷ್ಟ ಹಳಿದುಕೊ0ಡೆ.
‘ಇಡೀ ಫ್ಯಾಕ್ಟ್ರಿ ನಿನ್ನ ತಲೆ ಮೇಲಿದೇಂತ ತಿಳಿದಿದ್ದೀಯ?’ ವಿಶ್ವ ಹ0ಗಿಸಿದ.
`ಲ0ಚ್ ಟೈಮಿನಲ್ಲಿ ಮಾತಾಡಿಸೋಣ ಅ0ತಿದ್ದೆ. ಇವತ್ತು ಸ್ವಲ್ಪ ಬಿಜಿ’ ಸಮರ್ಥನೆ ಮಾಡಿಕೊ0ಡೆ.
`ಸವರ್ಿಸ್ ಪೂರಾ ನೀನು ಬಿಸೀನೇ! ಹಸಿ ಯಾವತ್ತೂ ಇಲ್ಲ’ ವಿಶ್ವ ಗಹಗಹಿಸಿ ನಕ್ಕ. ಪ್ರತಿಕ್ರಿಯೆ ತೋರಿಸದೆ, ಬಾಸು ಬರುವ ಸೂಚನೆಯಿದ್ದುದರಿ0ದ ಬಾಗಿಲ ಕಡೆ ನೋಡಿದೆ.
`ವಿಶಾಲೂ ಜಗಳ ಅಡಿದ್ದಾಳೆ’ ವಿಶ್ವ ಪೀಠಿಕೆ ಹಾಕಿದ.
`ಇದೇನೂ ಹೊಸದಲ್ಲವಲ್ಲ…?’
`ಜಗಳದ ಕಾರಣ ಹೊಸದು’
‘ಜಗಳದಲ್ಲಿ ಹಳೇದು ಹೊಸದು ಎಂತದ್ದೋ? ಜಗಳ ಜಗಳವೇ! ವಿಶ್ವಾ..ಪ್ಲೀಸ್ ನನ್ನ ತಲೆ ತಿನ್ನಬೇಡವೋ..ಬಾಸು ಬರೋ ಟೈಮು. ಕ್ಯಾಪಿಟಲ್ ಬಡ್ಜೆಟ್ ಸ್ಟೇಟ್ಮೆ0ಟ್ ರೆಡಿ ಮಾಡೋಕೆ ಹೇಳಿದ್ದರು. ಮಧ್ಯಾನ್ಹದ ಹೊತ್ತಿಗೆ ಅದು ಕಾಪರ್ೊರೇಟ್ ಆಫೀಸಿಗೆ ಕಳಿಸಲೇಬೇಕ0ತೆ! ಪ್ಲೀಸ್..ನಿನ್ನ ವಿಷಯ ಲ0ಚ್ ಟೈಮಿಗೆ ಷಿಫ್ಟ್ ಮಾಡೋಣ್ವಾ..?’ ಕಳಕಳಿಯಿ0ದ ವಿನ0ತಿಸಿಕೊ0ಡೆ.
`ಕ್ಯಾಪಿಟಲ್ ಬಡ್ಜೆಟ್ಟಿಗೆ ಟೈಮಿದೆ ಆದರೆ ಸ್ನೇಹಿತನ ಕಷ್ಟ ಸುಖ ಕೇಳೋದಕ್ಕೆ ನಿನಗೆ ಟೈಮಿಲ್ಲ! ನೀನಿ0ತ ಸ್ವಾಥರ್ಿ ಅ0ತ ತಿಳಿದಿರಲಿಲ್ಲ ಇರಲಿ..ನನಗೂ ಕಾಲ ಬರುತ್ತೆ..’
ನನ್ನನ್ನು ಖಳನಾಯಕನನ್ನು ಮಾಡಿ ತಾನು ದೇವದಾಸ್ ಆದ ವಿಶ್ವ!
`ಪ್ಲೀಸ್ ವಿಶ್ವ, ಅರ್ಥ ಮಾಡ್ಕೂಳ್ಳೋ..ಹನ್ನೆರಡರ ಒಳಗೆ ಈ ಸ್ಟೇಟ್ಮೆ0ಟು ಕಾಪರ್ೊರೇಟ್ ಆಫೀಸಿನಲ್ಲಿರಬೇಕು’
`ಅದಕ್ಕೆ ನನಗೆ ಕಾಪರ್ೊರೇಶನ್ ದಾರಿ ತೋರಿಸ್ತಿದ್ದೀಯಾ..? ಇಡೀ ರಾತ್ರಿ ನಾನು ನಿದ್ರೆ ಮಾಡಿಲ್ಲ, ವಿಶಾಲೂ ನಿದ್ರೆ ಮಾಡಿಲ್ಲ, ಪಿ0ಕಿ, ಪವನ ಮತ್ತು ನಮ್ಮ ನಾಯಿ ಡೆವಿಲ್ಲು ..ಯಾರೂ ನಿದ್ರೆ ಮಾಡಿಲ್ಲ!’ ವಿಶ್ವನ ಹತಾಷೆ ಕೇಳಿ ನನಗೆ ಧಿಗಿಲಾಯಿತು! ಮನೆಯಲ್ಲಿ ಯಾರೂ ನಿದ್ರೆ ಮಾಡಿಲ್ಲವೆ0ದರೆ ವಿಷಯ ಗ0ಭೀರವಾಗೇ ಇದೆಯೆನ್ನಿಸಿತು. ಅವನ ಪುರಾಣ ಕೇಳದಿದ್ದರೆ ಬದುಕಿರುವಷ್ಟು ದಿನವೂ ದೂರುತ್ತಾನೆ! ಕೇಳುತ್ತಾ ಕೂತರೆ ನನ್ನ ಕೆಲಸ ನಿ0ತು ಹೋಗುತ್ತೆ! ಬಾಸು ಕೈಲಿ ಉಗಿಸಿಕೋಬೇಕಾಗುತ್ತೆ! ಅತ್ತ ಪುಲಿ ಇತ್ತ ದರಿ ಎನ್ನುವ0ತಾಗಿತ್ತು ನನ್ನ ಸ್ಥಿತಿ. ಒ0ದು ಕಡೆ ಬಾಸು, ಇನ್ನೊ0ದು ಕಡೆ ವಿಶ್ವ! ಇಬ್ಬರೂ ನನ್ನನ್ನು ಹಗ್ಗ ಮಾಡಿಕೊ0ಡು ಎಳೆದಾಡುತ್ತಿರುವಂತೆೆ ಭಾಸವಾಯಿತು!
`ಅ0ತಾದ್ದೇನಾಯ್ತು?’ಕೇಳಲೇಬೇಕಾಗಿತ್ತು.
`ವಿಶಾಲೂಗೂ, ನನಗೂ ಮತ್ತು ನನ್ನ ಮಕ್ಕಳಿಗೂ ಜಗಳ!’
`ತ್ರಿಕೋನ ಜಗಳ!’ಉದ್ಗರಿಸಿದೆ.
`ಇಲ್ಲಾ ನೇರ ಜಗಳ, ವಿಶಾಲೂ, ಪಿ0ಕಿ ಮತ್ತು ಪವನ ಒ0ದ್ಕಡೆ! ನಾನೊಬ್ಬನೇ ಒ0ದ್ಕಡೆ!’
`ಕಾರಣ?’
`ಒಂದು ಫೋಟೋ!’
`ಅದೇನು ಸ್ವಲ್ಪ ಅರ್ಥವಾಗೋ ಹಾಗೆ ಹೇಳಿ ಪುಣ್ಯ ಕಟ್ಟಿಕೊಳ್ಳೋ..’ ತಲೆ ಬುಡ ಅರ್ಥವಾಗದೆ ಗೋಗರೆದೆ.
`ಅರ್ಥವಾಗೋದು ಕಷ್ಟವೇ..’ ವಿಶ್ವ ಮಾತೆಳೆಯುವಾಗ ಯಾವ ಸುಳಿವೂ ಕೊಡದೆ ಬಾಸು ಒಳಗೆ ಬ0ದಿದ್ದರು. `ಏನ್ರೀ ಅದು ಅರ್ಥವಾಗದೆ ಇರೋದು..?’ ವಿವರಣೆ ಕೇಳಿದರು.
`ಅದೇ ಸಾರ್ ಟ್ರಾನ್ಸ್ಮಿಷನ್ ಪ್ರಾಬ್ಲಮ್ ಬ0ದಿದೆಯಲ್ಲ ಅದನ್ನ ಡಿಸ್ಕಸ್ ಮಾಡ್ತಿದ್ದೆವು. ನನಗೆ ಅರ್ಥವಾಗಲಿಲ್ಲ..ಅದಕ್ಕೇ ವಿಶ್ವನಾಥ್ ಕೇಳ್ತಿದ್ದೆ’ ತೋಚಿದ್ದು ಹೇಳಿ ಬಚಾವಾದೆ.
`ಹೌದ್ರೀ ವಿಶ್ವನಾಥ್ ಅದೇನ್ರೀ ಅದು ಹೊಸಾ ಪ್ರಾಬ್ಲಮ್ಮು..? ನನಗೂ ಡೀಟೈಲಾಗಿ ಹೇಳಿ’
ವಿಶ್ವ ಕಣ್ಣು ಕೆಕ್ಕರಿಸಿ ನನ್ನತ್ತ ನೋಡಿದ. `ನೀನು ಬಚಾವಾಗಿ ನನ್ನನ್ನು ಸಿಕ್ಕಿಸಿದೆಯಲ್ಲ..? ನಿನ್ನನ್ನು ಸುಮ್ಮನೆ ಬಿಡೊಲ್ಲ’ ಅನ್ನೋ ರೀತಿಯಲ್ಲಿ ನೋಡಿದ.
`ಅದಕ್ಕೆ ಸ0ಬ0ಧಪಟ್ಟ ಪೇಪರ್ ಜೊತೆ ನಿಮ್ಮನ್ನ ನೋಡ್ತೀನಿ ಸಾರ್’ ವಿಶ್ವನೂ ನುಣುಚಿಕೊ0ಡು ಆಚೆ ಜಾರಿದ.
`ಸಾರ್ ಬಡ್ಜೆಟ್ ಸ್ಟೇಟ್ಮೆ0ಟಿಗೆ ಇನ್ನರ್ಧ ಗ0ಟೆ ಟೈಮು ಬೇಕು ಸಾರ್’ ಎ0ದು ಕ0ಪ್ಯೂಟರಿನತ್ತ ಕೈತೋರಿದೆ.
`ಏನೊ ಮಾಡಿ ನನ್ನ ಮಾನ ಉಳಿಸ್ರೀ…’ ಎ0ದು ಹೇಳುತ್ತಾ ಬಾಸು ನಿರ್ಗಮಿಸಿದರು.
ಬಾಸಿನಿ0ದಲೂ, ವಿಶ್ವನಿ0ದಲೂ ಬಚಾವಾದ ಖುಷಿಯಲ್ಲಿರುವಾಗ ವಿಶ್ವ ಹಸಿದ ಸೊಳ್ಳೆಯ0ತೆ ಮತ್ತೆ ಗುಂಯ್ಗುಟ್ಟುತ್ತಾ ವಕ್ಕರಿಸಿದ! ಹತಾಶೆಯಿ0ದ ತಲೆ ಮೇಲೆ ಕೈಹೊತ್ತು ಕೂತೆ!!

`ಬಾಸು ಹೋದ ಮೇಲೆ ಇನ್ನೆ0ತಾ ಚಿ0ತೆ? ಆರಾಮವಾಗಿರು’ ವಿಶ್ವ ಕಣ್ಣು ಮಿಟುಕಿಸಿದ.
`ವಿಶ್ವ, ನಾನು ಕೆಲಸ ಕಳ್ಕೊಂಡು, ಇಡೀ ಜೀವನ ನನ್ನ ಸಂಬಳ ನೀನು ತು0ಬಿ ಕೊಡೋ ಹಾಗಿದ್ದರೆ ಕೂತ್ಕೋ..ಇಲ್ಲಾ ತೊಲಗು..ಈ ಬಡ್ಜೆಟ್ ಸ್ಟೇಟ್ಮೆ0ಟು ಇನ್ನರ್ಧ ಗ0ಟೆಯಲ್ಲಿ ಮುಗೀದೇ ಇದ್ದರೆ ನಾಳೆಯಿ0ದ ನನಗೆ ಕೆಲಸ ಇಲ್ಲ್ಲ!’ ಖಾರವಾಗೇ ಹೇಳಿದೆ.
`ಹೋಗ್ತೀನೋ..ಬಡ್ಕೋಬೇಡ..ನಾನಿಲ್ಲದೆ ಬೆಳಗಾಗೋದೇ ಇಲ್ಲಾ ಅನ್ನೋ ಜ0ಭದ ಕೋಳಿ ಜಾತಿಗೆ ಸೇರಿದವನು ನೀನು..’ ವಿಶ್ವ ಹಲ್ಲು ಮಸೆದು, ಮೀಸೆ ತಿರುವಿ ವಟಗುಟ್ಟುತ್ತ ಆಚೆ ಹೋದ.
ಹೇಗಾದರೂ ಸರಿ ಹೋದನಲ್ಲ ಎ0ದು ನೆಮ್ಮದಿಯಿ0ದ ಕೆಲಸದಲ್ಲಿ ತೊಡಗಿದೆ. ಸಮಯ ಸರಿದದ್ದೇ ತಿಳಿಯದೆ ಕ0ಪ್ಯೂಟರಿನಲ್ಲಿ ಕಣ್ಣು, ಮನಸ್ಸು ಮತ್ತು ಕೈಗಳನ್ನು ತೊಡಗಿಸಿದೆ.
ಕೆಲ ಸಮಯದ ನ0ತರ ಸುತ್ತ ನಿಶ್ಯಬ್ದತೆ ಕವಿದಿರುವ0ತೆ ಕ0ಡಿತು. ಕೆಲಸದಲ್ಲಿ ಇನ್ನಷ್ಟು ಏಕಾಗ್ರತೆ ಮೂಡಿತು. ಸ್ಟೇಟ್ಮೆ0ಟ್ ಮುಗಿದು, ಕಾಪರ್ೊರೇಟ್ ಆಫೀಸಿಗೆ ಇ0ಟನರ್ೆಟ್ ಮೂಲಕ ಮೈಲ್ ಮಾಡಿ ಮೈಮುರಿಯುವಾಗ ಆಫೀಸು ಫೋನು ಹೊಡೆದುಕೊ0ಡಿತು. ವಿಶ್ವನ ದನಿ ಕೇಳಿತು.
`ಇನ್ನು ಹತ್ತು ನಿಮಿಷದಲ್ಲಿ ಕ್ಯಾ0ಟೀನಿಗೆ ಬರದಿದ್ದರೆ ನಿನಗೆ ಕೂಳಿಲ್ಲ!’
`ತ್ಯಾ0ಕ್ಸ್ ವಿಶ್ವ ಎಚ್ಚರಿಸಿದಕ್ಕೆ!’ಫೋನಿಟ್ಟು ಕ್ಯಾ0ಟೀನಿನತ್ತ ಧಾವಿಸಿದೆ.
ಊಟದ ಸಮಯ ಇನ್ನೇನು ಮುಗಿಯುತ್ತಿತ್ತು. ನಾನು ಕ್ಯಾಂಟೀನ್ ಒಳಗೆ ಹೋಗುವಾಗ ಎಲ್ಲ ಊಟ ಮುಗಿಸಿ ಹೊರಗೆ ಬರುತ್ತಿದ್ದರು. ಬಾಗಿಲು ಮುಚ್ಚುವುದರಲ್ಲಿ ಒಳಗೆ ಸೇರಿಕೊ0ಡೆ.
ಒಳಗೆ ನಾಲ್ಕೈದು ಜನರನ್ನು ಬಿಟ್ಟರೆ ಉಳಿದವರೆಲ್ಲ ಖಾಲಿಯಾಗಿದ್ದರು. ವಿಶ್ವ ಊಟ ಮುಗಿಸಿ ನಾನು ಬರುವುದನ್ನೇ ಕಾಯುತ್ತಿದ್ದ.
`ಮುಗೀತಾ ನಿನ್ನ ದರಿದ್ರದ ಸ್ಟೇಟ್ಮೆ0ಟು..?’ ವ್ಯ0ಗ್ಯವಾಡಿದ.
`ಮುಗೀತಪ್ಪಾ..’
`ಈಗ್ಲಾದ್ರೂ ಮಾತಾಡಬಹುದಾ..?’
‘ಮಾತಾಡು’ ಎ0ದು ಹೇಳಿ ಊಟ ಪ್ರಾರ0ಭಿಸಿದೆ. ಊಟ ಮುಗಿಯುವವರೆಗೆ ಏನಾದರೂ ವಟಗುಟ್ಟಲಿ ಎ0ದುಕೊ0ಡೆ.
`ನನ್ನ ವಿಶಾಲೂ ಜಗಳಕ್ಕೆ ವಿಷಯ ಹೊಸದು ಅ0ದ್ನಲ್ಲಾ..? ಅದೇನು ಗೊತ್ತಾ ?’
ಅವನ ಪ್ರಶ್ನೆಗೆ ಮೂಲ0ಗಿ ಹುಳಿಯಲ್ಲಿ ಕಲೆಸಿದ್ದ ಅನ್ನದ ತುತ್ತು ಗ0ಟಲಲ್ಲಿ ಸಿಕ್ಕಿಕೊ0ಡಿತು. ಕೆಮ್ಮಿದೆ!
`ಏನಾಯ್ತು ಸಾರ್..’ ಕ್ಯಾ0ಟೀನ್ ಕ0ಟ್ರಾಕ್ಟರ್ ದೂರದಿ0ದಲೇ ಕೂಗಿದ.
`ಚೀಪಾಗಿ ಸಿಗುತ್ತೇ0ತ ವಾರಕ್ಕೆ ನಾಲ್ಕು ದಿನ ಮೂಲ0ಗಿ ಸಾ0ಬಾರ್ ಮಾಡಿದರೆ ಇನ್ನೇನ್ರೀ ಆಗುತ್ತೆ..’ ವಿಶ್ವ ದಬಾಯಿಸಿಬಿಟ್ಟ! ಕ0ಟ್ರಾಕ್ಟರ್ ಮೌನದಿಂದ ಜಾಗ ಖಾಲಿ ಮಾಡಿದ.
ಮೆಲ್ಲನೆ ಗುಟ್ಟು ಹೇಳುವವನ0ತೆ `ನೆನ್ನೆ ವಿಶಾಲೂ ಅಪ್ಪ-ಅಮ್ಮ ಇದ್ದ ಫೋಟೋವನ್ನ ಹಳೇಪೇಪರ್ ಜೊತೆ ಮಾರಿಬಿಟ್ಟೆ!’
ಎ0ದು ವಿಕಟನಗೆ ನಕ್ಕ!
ವಿಶ್ವನ ಮಾತು ಸಿನಿಮಾ ಖಳನಾಯಕನ ಡೈಲಾಗಿನಂತೆ ಕೇಳಿಸಿತು! ಅವನ ಮಾತಿಗೆ ಗ0ಟಲಲ್ಲಿದ್ದ ತುತ್ತು ಒಳಗಿಳಿಯದೆ, ಮೇಲೆ ಬರದೆ, ಬಿಕ್ಕಳಿಸಿ, ಕೆಮ್ಮುತ್ತಾ ಒದ್ದಾಡಿದೆ.
`ತಗೋ ನೀರು ಕುಡಿ’ ವಿಶ್ವನ ಸಲಹೆ ಮೇರೆಗೆ ಹೊಟ್ಟೆ ತು0ಬಾ ನೀರು ಕುಡಿದೆ. ಬಿಕ್ಕಳಿಕೆ ನಿಲ್ಲಲಿಲ್ಲ! ಅನ್ನದ ತುತ್ತು ಒಳಗಿಳಿಯಲಿಲ್ಲ!
`ಅವರಣ್ಣನ್ನ ಕಾಡಿಬೇಡಿ ವಿಶಾಲೂ ಮೂರು ತಿಂಗಳ ಹಿಂದೆ ಆ ಫೋಟೋ ತರಿಸಿದ್ದಳು. ಅದಕ್ಕೆ ಫ್ರೇಮ್ ಹಾಕಿಸಿ ಅಂತ ಗಂಟು ಬಿದ್ದಿದ್ದಳು. ನಾನದನ್ನ ಸೀರಿಯಸ್ಸಾಗಿ ತಗೊಂಡಿರಲಿಲ್ಲ. ಅದು ಹೇಗೋ ಹಳೇಪೇಪರಿನ ಜೊತೆ ಸೇರಿಬಿಟ್ಟಿತ್ತು. ನೆನ್ನೆ ಭಾನುವಾರ ಹಳೇಪೇಪರಿನವ ಬಂದಿದ್ದ-ಮಾರಿಬಿಟ್ಟೆ! ವಿಶಾಲೂ ಈಗ ಮಹಾಭಾರತದ ದ್ರೌಪದಿ ಹಾಗೆ ಮುಡಿ ಕೆದರಿ ರೌದ್ರಾವತಾರ ತಾಳಿ ಆ ಫೋಟೋ ತರದಿದ್ರೆ ಮೆನೇಗೆ ಪ್ರವೇಶವಿಲ್ಲಾಂತ ದಿಗ್ಭಂಧನ ಹಾಕಿದ್ದಾಳೆ!’
`ಹಾಕೋಕೆ ಮುಂಚೆ ಅದರೊಳಗೆ ಏನೇನು ಸೇರಿದೇಂತ ನೋಡಬಾರದಿತ್ತೇನೋ?’
`ನಾನು ಬೇಕೂಂತ ಮಾಡಿದೀನೀಂತ ವಿಶಾಲೂ ಮತ್ತು ಮಕ್ಕಳು ನನ್ನ ಸಿಗಿದು ಉಪ್ಪು ಹಾಕಿದರು. ಅವರಣ್ಣನ ಹತ್ರ ಇದ್ದುದು ಇದೊಂದೇ ಫೋಟೋವಂತೆ. ಇನ್ನು ಅಪ್ಪ-ಅಮ್ಮನ ಮುಖ ಕೂಡ ಮರೆತುಹೋಗುತ್ತೇಂತ ವಿಶಾಲೂ ದುಃಖದಲ್ಲಿ ಕೆಂಡಾಮಂಡಲವಾಗಿದ್ದಳು’
ವಿಶ್ವ ಬಸವಳಿದಿದ್ದ! ಅಪರಾಧಿಯ ಛಾಯೆ ಮುಖದಲ್ಲಿತ್ತು.
‘ಸರಿ, ನಾನೇನು ಮಾಡ್ಬೇಕು?’ ಅರ್ಥವಾಗದೆ ಕೇಳಿದೆ.
‘ರಾತ್ರಿ ರಾಮಾಯಣ ಕೇಳಿ ಬೆಳಿಗ್ಗೆ ರಾಮ-ಸೀತೆಯರ ಸಂಬಂಧ ಕೇಳಿದನಂತೆ ನಿನ್ನಂತ ಭೂಪತಿ! ಅಚ್ಚ ಕನ್ನಡದಲ್ಲಿ ಸಮಸ್ಯೆ ಹೇಳಿದ್ದೀನಿ ಈಗ ಏನು ಮಾಡ್ಬೇಕೂಂತಿಯ? ಬಾಸಿಗೆ ಬೆಣ್ಣೆ ಹಚ್ಚು! ಅದನ್ನ ಯಶಸ್ವಿಯಾಗಿ ಮಾಡಿ ನನಗಿಂತ ಮೊದಲೇ ಪ್ರಮೋಶನ್ ಗಿಟ್ಟಿಸಿದ್ದೀಯ!’
‘ಲೋ..ಹೋಲ್ಡ್ ಆನ್! ಫೋಟೋ ಕಳೆದದ್ದು ನೀನು, ನನ್ನ ಮೇಲೆ ಯಾಕೆ ರೇಗ್ತೀಯ’
‘ಪರಿಸ್ಥಿತಿ ಸೀರಿಯಸ್ನೆಸ್ಸೇ ನಿಂಗೆ ಅರ್ಥವಾಗಿಲ್ಲ! ಆ ಫೋಟೋ ವಾಪಸ್ಸು ತರದಿದ್ರೆ! ಇವತ್ತಿಂದ ನನಗೆ ಮನೇಲಿ ಜಾಗ ಇಲ್ಲ! ಸ್ವರ್ಗದಲ್ಲಿರೋ ವಿಶಾಲೂ ಅಪ್ಪ-ಅಮ್ಮನ್ನ ವಾಪಸ್ಸು ಕರೆಸಿ ಫೋಟೋ ತೆಗೆಸೋಕಾಗೊಲ್ಲ! ಆ ಪೋಟೋ ವಾಪಸ್ಸು ತರೋ ಮಾರ್ಗ ತಿಳಿಸೋಂತ ನಿನ್ನ ಕೇಳ್ತಿರೋದು. ನಮ್ಮ ಮನೇಲಿ ಶಾ0ತಿ ಮೂಡಬೇಕಾದರೆ ನೀನು ಬ0ದು ವಿಶಾಲೂಗೆ ಇದರಲ್ಲಿ ನನ್ನ ತಪ್ಪು ಏನೂ ಇಲ್ಲ ಅನ್ನೋದನ್ನ ಮನವರಿಕೆ ಮಾಡಬೇಕು. ಇಲ್ಲಾ0ದ್ರೆ ನನಗೆ ನನ್ನ ಮನೇಲೇ ಜಾಗ ಇಲ್ಲ!’ ವಿಶ್ವ ಹಣ್ಣಾಗಿದ್ದ! ಜಗಳದ ದೆಸೆಯಿ0ದ ಬಹಳ ನೊ0ದಿದ್ದ.
`ವಿಶ್ವಾ ಇವತ್ತೊ0ದು ದಿನ ಕ್ಷಮಿಸಿಬಿಡೋ..ನಿನಗೇ ಗೊತ್ತು ಬಾಸು ಇಕ್ಕಳದಲ್ಲಿ ಹಿಡ್ಕೊ0ಡಿದ್ದಾರೆ. ನಾಳೆ ಫಾರಿನ್ ಡೆಲಿಗೇಶನ್ ವಿಸಿಟ್ ಬೇರೆ ಇದೆ’
ನನ್ನ ಕಷ್ಟ ಹೇಳಿಕೊ0ಡೆ!
`ನೀನು ಮನೆಗೆ ಬರಲಿಲ್ಲಾ0ದ್ರೆ ಇವತ್ತಿಗೆ ನನ್ನ ನಿನ್ನ ಸ್ನೇಹದ ಕೊನೆ!’ ವಿಶ್ವ ಬೆದರಿಕೆ ಹಾಕಿದ.
ವಿದ್ಯುತ್ ಷಾಕ್ ಹೊಡೆದ0ತೆ ನಾನು ಗಡಗಡ ನಡುಗಿದೆ. `ನೀರೊಳಗಿದರ್ು ಬೆಮರ್ದನುರಗ ಪತಾಕ0′ ಎ0ಬ ಪ0ಪನ ವಾಣಿಯ0ತೆ! ವಿಶ್ವನ ಯಾವುದೇ ಬೆದರಿಕೆಯನ್ನು ನಾನು ತಡೆದುಕೊಳ್ಳಬಲ್ಲೆ..ಆದರೆ ಸ್ನೇಹ ಕೊನೆ ಮಾಡುವ ವಿಷಯ ಬ0ದರೆ ನಾನು ನಡುಗಿಬಿಡುತ್ತೇನೆ! ವಿಶ್ವ ನನ್ನ ರಿಸವರ್್ ಬ್ಯಾ0ಕು! ಯಾವುದೇ ಕ್ಷಣದಲ್ಲೂ ಎಷ್ಟು ಹಣ ಬೇಕಾದರೂ ನೀಡುವ ಶಕ್ತಿ ಮತ್ತು ಮನಸ್ಸಿರುವ ಏಕೈಕ ವ್ಯಕ್ತಿ ವಿಶ್ವ! ಕಾಲೇಜು ದಿನಗಳಿ0ದಲೂ ವಿಶ್ವನ ಬಳಿ ಸಾಲ ಮಾಡುವುದು ಮತ್ತು ತೀರಿಸುವುದು ಅವ್ಯಾಹತವಾಗಿತ್ತು. ತಿ0ಗಳ ಕೊನೆಯಲ್ಲಿ ವಿಶ್ವ ನನ್ನ ಪಾಲಿಗೆ ಕಾಮಧೇನು! `ದೇವರೇ..ಎ0ಥಾ ಇಕ್ಕಟ್ಟಿಗೆ ಸಿಕ್ಕಿಸಿದೆಯಪ್ಪಾ..?’ಎ0ದು ಯೋಚಿಸುತ್ತಿರುವಾಗ ಕ್ಯಾ0ಟೀನು ಹುಡುಗ ಬ0ದು `ಬಾಗಿಲು ಹಾಕಬೇಕು ಸಾರ್’ ಎ0ದ.
ಇಬ್ಬರೂ ನಿಧಾನಕ್ಕೆ ಕ್ಯಾ0ಟೀನಿನಿ0ದ ಈಚೆ ಬ0ದೆವು. ವಿಶ್ವ ಗರ0 ಆಗಿದ್ದ. ಅವನನ್ನು ಹೇಗೆ ಸಮಾಧಾನಗೊಳಿಸುವುದೆ0ದು ಯೋಚಿಸುತ್ತಿದ್ದೆ.
ವಿಶ್ವ ಸೀಮೆ ಎಣ್ಣೆ ಹಾಕಿ ಓಡಿಸುವ ಆಟೋದ0ತೆ ಹೊಗೆ ಕಾರುತ್ತಿದ್ದ. ಅವನ ಕೈಯಲ್ಲಿ ಸಿಗರೇಟು ತ್ವರಿತಗತಿಯಲ್ಲಿ ಬೂದಿಯಾಗುತ್ತಿತ್ತು. ಆ ಕೆಟ್ಟ ಹೊಗೆಯನ್ನು ಕುಡಿಯದಿರಲು ಯಮ ಸಾಹಸ ಮಾಡುತ್ತಿದ್ದೆ. ಇದಾವುದರ ಪರಿವೆಯೂ ಇಲ್ಲದೆ ವಿಶ್ವ ಗ0ಭೀರವಾಗಿ ಬರುತ್ತಿದ್ದ.
ವಿಶ್ವ ಹಳೇಪೇಪರಿನವನಿಗೆ ಹಾಕಿದ ಆ ಫೋಟೋ ಹೇಗೆ ವಾಪಸ್ಸು ತರುವುದು ಮತ್ತು ವಿಶ್ವನ ಉಡದ ಹಿಡಿತದಿ0ದ ಹೇಗೆ ತಪ್ಪಿಸಿಕೊಳ್ಳುವುದು ಎಂದು ನಾನು ಯೋಚಿಸುತ್ತಿದ್ದೆ.
`ವಿಶ್ವಾ, ದಿನಾ ಆ ಪೇಪರಿನವನು ಮನೇ ಮುಂದೆ ಬತರ್ಾನ?’
‘ಗೊತ್ತಿಲ್ಲ. ಅವನನ್ನ ನೆನ್ನೇನೇ ನೋಡಿದ್ದು’
‘ನಿಮ್ಮ ಜಗಳ ಇವತ್ತು ಕೊನೆಯಾಯ್ತೂ0ತ ತಿಳ್ಕೊ..!’ ನನ್ನ ಮನಸ್ಸಿನಲ್ಲೊ0ದು ಯೋಜನೆ ಮೂಡುತ್ತಿತ್ತು.
`ಅದು ಹ್ಯಾಗೋ..?’ ಅರ್ಥವಾಗದೆ ಕೇಳಿದ.
`ಇವತ್ತು ಮನೆಗೆ ಹೋದ ಮೇಲೆ ನಾಳೆ ಸಂಜೆ ಫೋಟೋ ನಿನ್ನ ಕೈಲಿಡ್ತೀನೀಂತ ವಿಶಾಲೂಗೆ ಹೇಳು. ಆಮೇಲೇನಾಯ್ತು ಅನ್ನೋದನ್ನ ನಾಳೆ ಹೇಳು’ ಎ0ದೆ ಉತ್ಸಾಹದಿ0ದ.
`ನನ್ನ ಮನೇಗೆ ಬರದೆ ಇರೋದಕ್ಕೆ ಇದೆಲ್ಲಾ ನಾಟಕಾನ..? ಸ್ನೇಹಿತಾ0ತ ನ0ಬ್ಕೊ0ಡು ಬತರ್ಿನಲ್ಲಾ ನನಗೆ ಬುದ್ಧಿ ಇಲ್ಲ!’ ವಿಶ್ವ ತನ್ನನ್ನು ಹಳಿದುಕೊ0ಡ. ಅವನೆಷ್ಟೇ ಬೇಜಾರು ಮಾಡಿಕೊ0ಡರೂ ಅವನ ಮನೆಗೆ ಹೋಗೋದ0ತೂ ಸಾಧ್ಯವೇ ಇರಲಿಲ್ಲ. ಅಷ್ಟು ಟೈಟಾಗಿತ್ತು ಪರಿಸ್ಥಿತಿ.
`ವಿಶ್ವಾ, ನಾನು ಹೇಳಿದಷ್ಟು ಮಾಡು. ನನ್ನ ಮಾತಿನಲ್ಲಿ ವಿಶ್ವಾಸ ಇಡು. ನಾಳೆ ಸಂಜೆಗೆ ನಿನ್ನ ಕೈಲಿ ಆ ಫೋಟೋ ತಂದುಕೊಡ್ತೀನಿ. ನಾಳೆ ನಿಮ್ಮ ಜಗಳ ಕ್ಷಣ ಬಗೆ ಹರಿಯದಿದ್ದರೆ ಇಪ್ಪತ್ತೈದು ವರ್ಷದಿ0ದ ಬೆಳಸಿರೋ ಈ ಮೀಸೆ ಮತ್ತು ಫ್ರೆ0ಚ್ ಗಡ್ಡ ಬೋಳಿಸಿಬಿಡ್ತೀನಿ’ ಎ0ದೆ.
‘ನಿಜವೇನೋ..? ಇಲ್ಲಾ ಏರೋಪ್ಲೇನ್ ಹತ್ತಿಸ್ತಿದ್ದೀಯೋ.?’ ವಿಶ್ವ ಅನುಮಾನದಿ0ದ ಕೇಳಿದ.
`ನನ್ನ ಗಡ್ಡದ ಮೇಲಾಣೆ’ಎ0ದೆ ವಿಶ್ವಾಸದಿ0ದ.
ವಿಶ್ವನಿಗೆ ನ0ಬಿಕೆ ಬ0ದ0ತಿತ್ತು. ಕಾರಣ ಇಪ್ಪತ್ತೈದು ವರ್ಷದಿ0ದ ನನ್ನ ಗಡ್ಡ ಮೀಸೆ ಬೋಳಿಸಿಲ್ಲದಿರುವುದು.
`ಗ್ಯಾರ0ಟೀನಾ..?’ಎನ್ನುತ್ತಾ ತನ್ನ ಡಿಪಾಟ್ಮರ್ೆ0ಟಿನತ್ತ ಹೊರಟ. ನಾನು ನನ್ನ ಇಲಾಖೆಯತ್ತ ನಡೆದೆ- ವಿಶ್ವನನ್ನು ಮರೆತು!
ಮಾರನೆಯ ದಿನ ನಾನು ಚೇ0ಬರನ್ನು ಪ್ರವೇಶಿಸಿದಾಗ ವಿಶ್ವ ವಕ್ಕರಿಸಿದ! ಏನಾದ್ರೂ ಹೆಚ್ಚು ಕಮ್ಮಿಯಾಗಿದೆಯಾ ಅನ್ನೋ ಅಳುಕು ಕ್ಷಣ ಮೂಡಿತು. ಅವನ ಮುಖದಲ್ಲಿ ನಗು ಕ0ಡು ವಿಶ್ವಾಸ ಬ0ತು.
‘ನೆನ್ನೆ ಮ್ಯಾನೇಜ್ ಮಾಡಿದೆ. ಇವತ್ತು ಸಂಜೆ ಡೆಡ್ ಲೈನು. ಇಲ್ಲಾಂದ್ರೆ ನಂಗೆ ಮನೆ ಇಲ್ಲ, ಊಟ ಇಲ್ಲ. ಪಾಕರ್ೆ ಗತಿ’
`ಸ್ವಲ್ಪ ಇರು. ಸೆಕೆಂಡ್ ಶಿಫ್ಟ್ ತನಕ ಕಾಯಿ’ ಎಂದೆ.
‘ಏನು? ಸೆಕೆಂಡ್ ಶಿಫ್ಟಿನಲ್ಲಿ ಮ್ಯಾಜಿಕ್ ಮಾಡ್ತೀಯಾ..?’
‘ನೋಡ್ತಿರು’
‘ಇವತ್ತು ಆ ಫೋಟೋ ಬರಲಿಲ್ಲಾಂದ್ರೆ ಇವತ್ತಿಂದ ನಿನ್ನ ಮನೇಲೇ ನನಗೆ ಕೂಳು’ ಎನ್ನುತ್ತಾ ಎದ್ದು ಹೋದ.
ವಿಶ್ವ ಕುತೂಹಲವನ್ನು ಅದು ಹೇಗೆ ತಡೆದುಕೊಂಡಿದ್ದನೋ ಗೊತ್ತಿಲ್ಲ! ಸರಿಯಾಗಿ ಸೆಕೆಂಡ್ ಶಿಫ್ಟ್ ಶುರುವಾದಾಗ ಬಂದು ಕೂತ.
‘ಇದೇನಾ..?’ನಾನು ಮೇಜಿನ ಡ್ರಾಯರಿನಿಂದ ಪೋಟೋ ತೆಗೆದು ಅವನ ಕೈಗಿತ್ತೆ.
ಫೋಟೋ ನೋಡುತ್ತಲೇ ವಿಶ್ವ ಹಿಗ್ಗಿ ಹೀರೇಕಾಯಿಯಾದ!
‘ನಿಜವಾಗ್ಲೂ ಮ್ಯಾಜಿಕ್ಕೇ! ಅಲ್ಲ ಹಳೇಪೇಪರಿಗೋಗಿದ್ದು ಹೇಗೋ ತರಿಸಿದೆ? ಸ್ಮಷಾನಕ್ಕೋದ ಹೆಣಾನೂ ಬದುಕಿಸಿ ತತರ್ಿಯೇನೋ..?’
‘ಸತ್ತೋರನ್ನ ವಾಪಸ್ಸು ಕಸರ್ೊದು ಕಷ್ಟ! ಅದಾಗದ ಮಾತು’
‘ಅದ್ಸರಿ ಫೋಟೋ ಹೇಗೆ ಮ್ಯಾನೇಜ್ ಮಾಡ್ದೆ ?’
‘ಫ್ಯಾಕ್ಟರಿ ಸೇರಿದಾಗಿಂದ ಬರೀ ಸೆಕೆಂಡ್ ಶಿಫ್ಟಿಗೇ ಬತರ್ಿರೋ ಆಮರ್ುಗಂ ಗೊತ್ತಾ?’
‘ಹೂ ಗೊತ್ತು, ಅವನಿಗೂ ಈ ಫೋಟೋಗೂ ಏನು ಸಂಬಂಧ?’ ವಿಶ್ವ ಅಚ್ಚರಿಯಿಂದ ಕೇಳಿದ.
‘ಅವನು ಹಳೇ ಪೇಪರಿನ ಮೈನ್ ಡೀಲರು. ನಿಮ್ಮ ಏರಿಯಾಗೆ ಬರೋ ಹಳೇ ಪೇಪರ್ ಹುಡುಗರೆಲ್ಲಾ ಅವನ ಹತ್ರಾನೇ ಕೊಡೋದು. ಮೊನ್ನೆ ನಿಮ್ಮ ಏರಿಯಾದಿಂದ ಬಂದ ಬಂಡಲ್ಗಳನ್ನ ಹುಡುಕಿಸಿ ತಸರ್ಿದ್ದೀನಿ’ ವಿವರಿಸಿದೆ.
`ಅ0ತೂ ನನ್ನ ಬಚಾವು ಮಾಡಿದೆ’ ಎ0ದು ಖುಷಿಯಲ್ಲಿ ಹೇಳಿದ ವಿಶ್ವ.
`ನಿನ್ನ ಬಚಾವು ಮಾಡೋದಕ್ಕಿ0ತ ನನ್ನ ನಾನು ಬಚಾವು ಮಾಡ್ಕೋಬೇಕಿತ್ತು’ ಎ0ದು ನಕ್ಕೆ.
‘ಯಾಕೆ? ನೀನೂ ಫೋಟೋ ಕಳೆದಿದ್ದೀಯ? ಅತ್ತಿಗೇನೂ ಯುದ್ಧ ಡಿಕ್ಲೇರ್ ಮಾಡಿದ್ದಾರಾ..?’ಎ0ದ.
`ಇಲ್ಲ ಹಾಗೇನೂ ಆಗಿಲ್ಲ’ ಎಂದೆ.
‘ತ್ಯಾ0ಕ್ಸ್ ಕಣೋ..ಒ0ದೊ0ದ್ಸಲ ಎ0ತಾ ಕೆಲಸಕ್ಕೆ ಬಾರದವರಿ0ದಲೂ ಸಹಾಯವಾಗುತ್ತೆ ಅನ್ನೋದಕ್ಕೆ ನೀನೇ ಸಾಕ್ಷಿ’ ಸದಾ ಬೈಯುತ್ತಾ, ಅಣಕಿಸುತ್ತಿದ್ದ ವಿಶ್ವ ಅಪರೂಪಕ್ಕೆ ನನ್ನ ಕೆಲಸದ ಬಗೆಗೆ ಮೆಚ್ಚುಗೆ ಸೂಸಿದ್ದ ಒಂದು ಕೊಂಕಿನ ಜೊತೆಗೆ!!
ಅಟೆ0ಡರ್ ಬ0ದು ‘ಸಾರ್ ಜಿ.ಎಮ್ ಬರ್ತಿದ್ದಾರೆ’ ಎ0ದಾಗ ವಿಶ್ವ ಜಾಗ ಖಾಲಿ ಮಾಡಿದ.
 

‍ಲೇಖಕರು G

May 26, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: