‘ಅವಧಿ’ಯ ಅಂಕಣಕಾರ ರವಿಕುಮಾರ್ ಟೆಲೆಕ್ಸ್ ಅವರಿಗೆ ನಾಡಕವಿ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಈ ರಾಜ್ಯಮಟ್ಟದ ಕಾವ್ಯ ಪ್ರಶಸ್ತಿಗೆ ಬಂದ 26 ಹಸ್ತಪ್ರತಿಗಳಲ್ಲಿ ಶಿವಮೊಗ್ಗದ ಎನ್. ರವಿಕುಮಾರ ಟೆಲೆಕ್ಸ್ ಅವರ ‘ನೆರ್ಕೆ ಗೋಡೆಯ ರತ್ನಪಕ್ಷಿ’ ಪ್ರಶಸ್ತಿಗೆ ಆಯ್ಕೆಯಾಗಿದೆ.
ಪ್ರಶಸ್ತಿಯು 5,000 ರೂ. ನಗದು ಮತ್ತು ಬೆಳ್ಳಿ ಪದಕವನ್ನು ಒಳಗೊಂಡಿದೆ.
ವಿಮರ್ಶಕರಾದ ಡಾ. ಜಾಜಿ ದೇವೇಂದ್ರಪ್ಪ ಅವರು ತೀರ್ಪುಗಾರರಾಗಿದ್ದರು.
ಎನ್. ರವಿಕುಮಾರ ಟೆಲೆಕ್ಸ್ ಅವರಿಗೆ ಇದೇ ದಿನಾಂಕ 20ರಂದು, ರವಿವಾರ ಕೊಪ್ಪಳದ ಸರಕಾರಿ ನೌಕರರ ಸಾಂಸ್ಕೃತಿಕ ಭವನದಲ್ಲಿ ನಡೆಯುವ ‘ಗವಿಸಿದ್ಧ ಎನ್. ಬಳ್ಳಾರಿ – ಸಾಹಿತ್ಯೋತ್ಸವ’ ಸಮಾರಂಭದಲ್ಲಿ ಖ್ಯಾತ ಸಾಹಿತಿ ಡಾ. ಸರಜೂ ಕಾಟ್ಕರ್ ಇವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಾಹಿತ್ಯೋತ್ಸವದ ಸಂಚಾಲಕ ಮಹೇಶ ಬಳ್ಳಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






0 Comments