To, Sir with love..
ನನ್ನ ಇಬ್ಬರು ಆತ್ಮೀಯ ಗುರುಗಳು ತಮ್ಮ ವೃತ್ತಿಯಿಂದ ನಿವೃತ್ತರಾಗಿದ್ದಾರೆ. ಇಬ್ಬರೂ ನನಗೆ ಸಂಸ್ಕೃತ ಕಲಿಸಿದವರೇ. ಒಬ್ಬರು – ಜೆ ಶ್ರೀನಿವಾಸ ಮೂರ್ತಿ ಹೈಸ್ಕೂಲ್ ನಲ್ಲಿ ಹಾಗೂ ಎಚ್ ವಿ ವೇಣುಗೋಪಾಲ್ ಕಾಲೇಜಿನಲ್ಲಿ ಕಲಿಸಿದವರು. ಶ್ರೀನಿವಾಸಮೂರ್ತಿ ಅಲಿಯಾಸ್ ಜೆ ಎಸ್ ಎಂ ಮಲ್ಲೇಶ್ವರದ ಎಂ ಇ ಎಸ್ ಕಾಲೇಜಿನ ಪ್ರಾಂಶುಪಾಲರಾಗಿ, ವೇಣುಗೋಪಾಲ್ ಅಲಿಯಾಸ್ ಎಚ್ ವಿ ವಿ ಬಸವನಗುಡಿ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದರು.
ಈ ಇಬ್ಬರೂ ನನಗೆ ಗುರುಗಳಾದರೂ ಸಹಾ ಗೆಳೆಯನಂತೆ ನನ್ನನ್ನು ಕಂಡವರು. ಎದುರಿಗಿದ್ದವರಿಗೆ ನಾವೆಲ್ಲರೂ ಎಂದೋ ಕಾಲದ ದೋಸ್ತರೇನೋ ಎನ್ನುವಂತೆ ಕಾಣುತ್ತಿತ್ತು. ಅಂತಹ ಈ ಇಬ್ಬರೂ ರಂಗಭೂಮಿಯಲ್ಲಿ, ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರಗಳನ್ನು ಅರ್ಥೈಸುವುದರ ಮೂಲಕ ಕನ್ನಡ ಜ್ಞಾನಕ್ಕೆ ಹೊಸ ಬೆಳಕು ನೀಡಿದವರು.
-ಜಿ ಎನ್ ಮೋಹನ್

ಆ ಇಬ್ಬರೂ ತಮ್ಮ ನಿವೃತ್ತಿಯ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡದ್ದು ಇಲ್ಲಿದೆ-
31-5-2016 ಇಂದುನಾನು ಸಂಸ್ಕೃತ ಅಧ್ಯಾಪಕನಾಗಿ ಸವೆಸಿದ ನನ್ನ ವೃತ್ತಿ ಜೀವನದ ಕೊನೆಯ ದಿನ.
ಈ 37 ವರ್ಷಗಳು ನನ್ನನ್ನು ತಿದ್ದಿ ತೀಡಿವೆ. ಈ ದಿನಗಳಲ್ಲಿ ನನ್ನ ಸಹೋದ್ಯೋಗಿಗಳು ನನ್ನ ವ್ಯಕ್ತಿತ್ವವನ್ನು ಶುದ್ಧಿಗೊಳಿಸಿದ್ದಾರೆ. ವಿದ್ಯಾರ್ಥಿಗಳು ನನ್ನನ್ನು ಪ್ರೇರೇಪಿಸಿದ್ದಾರೆ. ಗೆಳೆಯರು ನನ್ನಲ್ಲಿ ಧೈರ್ಯ ತುಂಬಿದ್ದಾರೆ. ಎಲ್ಲಕ್ಕಿಂತ ನನಗೆ ಮುಖ್ಯ ಎನಿಸುವುದು, ನನ್ನನ್ನು ಸಹಿಸದವರು ನನ್ನೊಳಗಿನ ನಿಷ್ಠೂರತೆಯನ್ನು ಸದಾ ಜಾಗೃತವಾಗಿರಿಸಿದ್ದಾರೆ. ಎಲ್ಲರಿಗೂ ನಾನು ಇಂದು ಧನ್ಯವಾದಗಳನ್ನು ಹೇಳುವ ದಿನ ಬಂದಿದೆ.
ನನ್ನ ಕುಟುಂಬ ನನ್ನನ್ನು ಸಹಿಸಿಕೊಂಡಿದೆ. ನನ್ನ ಕುಟುಂಬ ಹಾಗು ಸಂಬಂಧಿಕರ ವರ್ಗವು ನಾನು ನಂಬಿ ನಡೆಯುತ್ತಿದ್ದ ದೈವತ್ವದ ನಿರಾಕರಣೆ, ಜಾತಿ ವ್ಯವಸ್ಥೆಯನ್ನು ವಿರೋಧಿಸಿ ನಡೆದುಕೊಳ್ಳುತ್ತಿದ್ದ ಒರಟು ಸಮಯದಲ್ಲಿ ನನ್ನನ್ನು ನಿಂದಿಸಿಯೂ ಸಹ ನನ್ನ ಸಾಮರ್ಥ್ಯವನ್ನು ಪೋಷಿಸಿದ್ದಾರೆ. ನನ್ನನ್ನು ವಿಶ್ವಾಸದಿಂದ ಬೆಳೆಯಿಸಿದವರೆಲ್ಲರಿಗೂ ’ಧನ್ಯೋಸ್ಮಿ’ ಎಂದು ಹೇಳಬೇಕಾದ ಕರ್ತವ್ಯ ನನಗಿಂದು ಇದೆ. ನಾನು ಋಣಿ.
ನನ್ನ ವೃತ್ತಿ ಜೀವನದ ಪ್ರಾರಂಭದಲ್ಲಿ ನನ್ನ ಕೈಹಿಡಿದು ನಡೆಸಿದ ಪ್ರೊ. ಗಂಗಾಧರಮೂರ್ತಿ, ನಗರಗೆರೆ ರಮೇಶ್ ಅವರುಗಳಿಗೆ ನಾನು ಹೆಚ್ಚು ಋಣಿ. ನನ್ನ ವೃತ್ತಿ ಜೀವನದ ಅಂಚಿನಲ್ಲಿ ನನ್ನನ್ನು ವಿರೋಧಿಸುತ್ತಲೇ ಮಮತೆಯನ್ನು ತೋರಿದ ಮೌಳೇಶ್ ಅವರಿಗೆ ನನ್ನ ವಿಶೇಷ ಕೃತಜ್ಞತೆಗಳು ಸಲ್ಲುತ್ತವೆ.
ನನ್ನ ನಾಟಕದ ಕೊಂಡಿಯ ಸಮಸ್ತ ರಂಗಭೂಮಿಯ ಗೆಳೆಯರು ನನ್ನ ಸಾಮರ್ಥ್ಯವನ್ನು ಸದಾ ಹೆಚ್ಚುತ್ತಿರುವಂತೆ ನೋಡಿಕೊಂಡಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ನನ್ನ ವಿದ್ಯಾರ್ಥಿಗಳು ನನ್ನನ್ನು ಒಬ್ಬ ಮನುಷ್ಯನನ್ನಾಗಿ ಮಾಡಿದ್ದಾರೆ. ನನ್ನ ವಯಸ್ಸು ಹೆಚ್ಚುತ್ತಿದ್ದರೂ ನನ್ನಲ್ಲಿನ ಚಟುವಟಿಕೆ ಕುಗ್ಗದಂತೆ ಕಾಪಾಡಿದ್ದಾರೆ.
ನನಗೆ ಕೆಲಸ ಕೊಟ್ಟು ನನ್ನ ಇಷ್ಟೆಲ್ಲಕ್ಕೂ ಕಾರಣವಾದ ನ್ಯಾಷನಲ್ ಕಾಲೇಜು ನಿಜದ ಅರ್ಥದಲ್ಲಿ ನನ್ನ ತಂದೆ. ಡಾ|| ಎಚ್.ಎನ್ ನನ್ನ ಇನ್ನೊಬ್ಬ ತಾಯಿ. ಹೆಚ್ಚೇನು ಹೇಳಲಿ ಧನ್ಯೋಸ್ಮಿ
ವೇಣುಗೋಪಾಲ್ ಸರ್ ಒಂದು ಕಂದೀಲಿನಂತೆ. ತಮ್ಮನ್ನು ಉರಿಸಿಕೊಂಡಾದರೂ ಬೆಳಕು ನೀಡುವವರು. ವೇಣುಗೋಪಾಲ್ ಸರ್ ನಿವೃತ್ತರಾಗುತ್ತಿದ್ದಾರೆ ಎನ್ನುವುದು ಮೋಡ ಅಡ್ಡಿ ಬಂತು ಎಂದ ಮಾತ್ರಕ್ಕೆ ಸೂರ್ಯನಿಲ್ಲ ಎಂದಂತೆ. ನಿನಗೆ ನಾನು ಸಂಸ್ಕೃತ ಹೇಳಿಕೊಟ್ಟ ಗುರು ಎಂಬ ಭಾವ ನನ್ನೊಳಗೆ ಎಂದೂ ಬರಿಸಲಿಲ್ಲ. ನಾನು ನಿನ್ನ ಸಂಗಾತಿ ಎನ್ನುವಂತೆ ಜೊತೆ ಜೊತೆಗೆ ಹೆಜ್ಜೆ ಹಾಕಿದವರು. ನಮಗಿಂತ ೧೦ ವರ್ಷ ಚಿಕ್ಕವರೇ ಎನ್ನುವಷ್ಟು ಉತ್ಸಾಹ ಹೊಂದಿದವರು. ಜೊತೆಯಲ್ಲಿ ಇದ್ದು ಹರಟೆ ಹೊಡೆದು ಗೆಳೆಯನಂತಾದವರು. ಯಾರೊಬ್ಬರ ನಡುವೆಯೂ ಗೋಡೆ ಕಟ್ಟಿಕೊಳ್ಳದವರು. ನೇರ ಪ್ರಶ್ನೆ ಮಾಡುವ ಪರಿಶುದ್ಧತೆ ಇನ್ನೂ ಉಳಿಸಿಕೊಂಡವರು.
-ಎಚ್ ವಿ ವೇಣುಗೋಪಾಲ್
Four decades of teaching as per time table came to an end today.
Thanks to all my dear students for they taught me through and through.
Thanks to dear colleagues for they put me on a process of de-learning!
Thanks to the parents, they showed the withering of unfulfilled aspirations. I
was a student, a teacher and a parent.
How can I escape education?
But I do wish to go out and digest in the silence of woods and the chants of birds with a nocturnal wild chasing my fear and a reptile in a hole assuring me a space. Doing nothing in the blaze of Sun look forward to farewell.
-ಜೆ ಶ್ರೀನಿವಾಸ ಮೂರ್ತಿ





0 Comments