ಬೆಂಗಳೂರು ಸಾಹಿತ್ಯ ಹಬ್ಬದ ಬಗ್ಗೆ ಎದ್ದಿರುವ ವಿವಾದದ ಹಿನ್ನೆಲೆಯಲ್ಲಿ ಪ್ರಜಾವಾಣಿ ಇಂದು ವಿವರ ಸಂದರ್ಶನಗಳನ್ನು ಪ್ರಕಟಿಸಿದೆ.
ಅದರಲ್ಲಿ ಟಿ ಕೆ ದಯಾನಂದ್ ಸಂಪತ್ ಅವರಿಗೆ ನೇರ ಪ್ರಶ್ನೆಗಳನ್ನು ಕೇಳಿದ್ದಾರೆ.

‘ನಮ್ಮ ಮೌನ ಅವರ ಪಾಲಿಗೆ ಅಸಹಿಷ್ಣುತೆ ಎನ್ನಿಸಿತು’. ಇದು ‘ಬಿಎಲ್‌ಎಫ್’ನ ಸಂಘಟನೆಯಿಂದ ಹಿಂದೆ ಸರಿದಿರುವ ವಿಕ್ರಂ ಸಂಪತ್ ಅವರ ‘ಸಹಿಷ್ಣುತೆ ಮಾಫಿಯಾ’ ಎನ್ನುವ ಟೀಕೆಗೆ ಲೇಖಕ ಟಿ.ಕೆ. ದಯಾನಂದ ಅವರ ಪ್ರತಿಕ್ರಿಯೆ.
‘ಬೆಂಗಳೂರು ಸಾಹಿತ್ಯ ಉತ್ಸವ’ದಲ್ಲಿ ಭಾಗವಹಿಸುವ ಲೇಖಕರಿಗೆ ಹಾಗೂ ಸಂಘಟಕರಿಗೆ ಉತ್ಸವದಿಂದ ಹೊರಗೆ ಉಳಿದಿರುವ ನಾವು ಬೆದರಿಕೆ ಒಡ್ಡುತ್ತಿದ್ದೇವೆ ಎಂದು ಕೆಲವರು ಹೇಳುತ್ತಿದ್ದಾರೆ. ಹೀಗೆ ನಮ್ಮಿಂದ ಬೆದರಿಕೆಗೆ ಗುರಿಯಾದವರ ಹೆಸರುಗಳನ್ನು ಅವರು ಬಹಿರಂಗಪಡಿಸಬೇಕು. ಅಂಥವರ ವಿರುದ್ಧ ನಾನು ಕಾನೂನು ಕ್ರಮ ಕೈಗೊಳ್ಳುವೆ. ಇಷ್ಟಕ್ಕೂ ಬೆದರಿಕೆ ಒಡ್ಡಲು ಇದು ಅಂಡರ್‌ವರ್ಲ್ಡ್ ಅಲ್ಲ; ಅಕ್ಷರಲೋಕ’ ಎಂದು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ದಯಾನಂದ್ ಹೇಳಿದರು.
ಪ್ರಶಸ್ತಿಗಳು ವಾಪಸ್ ಮಾಡುವ ಲೇಖಕರ ಕುರಿತ ಸಂಘಟಕರ ಅನಾರೋಗ್ಯಕರ ಟೀಕೆಗಳ ಕಾರಣದಿಂದಾಗಿ ‘ಬಿಎಲ್‌ಎಫ್’ನಲ್ಲಿ ಭಾಗವಹಿಸದಿರಲು ನಿರ್ಧರಿಸಿದೆ ಎಂದು ಸ್ಪಷ್ಟಪಡಿಸಿದ ಅವರು, ಆ ಕಾರಣವನ್ನು ವಿವರಿಸಿದ್ದು ಹೀಗೆ:





0 Comments