ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟಿ ಎಸ್ ಶ್ರವಣಕುಮಾರಿ ಅವರಿಗೆ ‘ಮೈತ್ರಿ ಪುಸ್ತಕ’ ಪುರಸ್ಕಾರ

ಮೈತ್ರಿ ಪ್ರಕಾಶನ ಹಮ್ಮಿಕೊಂಡಿದ್ದ ಕಥಾ ಸಂಕಲನ ಹಸ್ತಪ್ರತಿ ಸ್ಪರ್ಧೆಯ ಫಲಿತಾಂಶವನ್ನು ಘೋಷಿಸಲಾಗಿದೆ.

‘ಅವಧಿ’ಯ ಲೇಖಕಿ ಟಿ ಎಸ್ ಶ್ರವಣಕುಮಾರಿ ಅವರ ಹಸ್ತಪ್ರತಿ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ಖ್ಯಾತ ಕಥೆಗಾರ ಶ್ರೀಧರ ಬಳಗಾರ ಅವರು ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ಈವರೆಗೆ ಒಂದೂ ಕಥಾ ಸಂಕಲನವನ್ನು ಹೊರತರದ ಕಥೆಗಾರರಿಗಾಗಿ ಈ ಸ್ಪರ್ಧೆ ಏರ್ಪಡಿಸಲಾಗಿತ್ತು. ‘ಮೈತ್ರಿ ಪುಸ್ತಕ-೨೦೨೦’ ಮೊದಲ ವರ್ಷದ ಬಹುಮಾನ ವಿಜೇತರಾದ ಟಿ ಎಸ್ ಶ್ರವಣಕುಮಾರಿ ಅವರಸಂಕಲನವನ್ನು ಪ್ರಕಟಿಸಿ ಅವರಿಗೆ ೫ ಸಾವಿರ ಗೌರವ ಧನವನ್ನೂ ನೀಡಲಾಗುವುದು ಎಂದು ಪ್ರಕಾಶನದ ಉಮೇಶ ದೇಸಾಯಿ ಅವರು ತಿಳಿಸಿದ್ದಾರೆ.

ಮೂಲತಃ ಶಿವಮೊಗ್ಗದವರಾದ ಶ್ರವಣಕುಮಾರಿ ಅವರು ಬ್ಯಾಂಕ್ ನೌಕರರಾಗಿದ್ದರು. ತಮ್ಮ ನಿವೃತ್ತಿಯ ನಂತರ ಬರೆಯಲು ಆರಂಭಿಸಿದ ಅವರ ಸಾಕಷ್ಟು ಲಹರಿ, ಪ್ರವಾಸ ಮಾಲಿಕೆ ‘ಅವಧಿ’ಯಲ್ಲಿ ಪ್ರಕಟವಾಗಿದೆ. ಕನ್ನಡದ ಹೆಮ್ಮೆಯ ಸಾಹಿತಿ ತರಾಸು ಇವರ ಸೋದರಮಾವ… ಸದ್ಯ ಬೆಂಗಳೂರಿನಲ್ಲಿ ವಾಸ.

‍ಲೇಖಕರು avadhi

25 March, 2020

5 Comments

  1. Smitha Amrithraj.

    ಅಭಿನಂದನೆಗಳು ಮೇಡಂ

  2. Sarojini Padasalgi

    ಅಭಿನಂದನೆಗಳು ಮೇಡಂ.

  3. Sudha Hegde

    ಅಭಿನಂದನೆಗಳು

  4. Sumathi

    Congratulations

  5. T S SHRAVANA KUMARI

    ಅಭಿನಂದನೆಗಳನ್ನು ಹೇಳಿದ ಸ್ಮಿತಾ, ಸರೋಜಿನಿ, ಸುಧಾ ಮತ್ತು ಸುಮತಿ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading