ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆದ 'ಮಾಗಿ'


ಇವತ್ತು ಶುಕ್ರವಾರವೋ
ಶನಿವಾರವೋ
ಹಗಲಿಗೆ ಹೆಸರಿಲ್ಲ.


ನಿರಂತರ ಉರಿಯುವ ಸೂರ್ಯನಿಗೆ
ಸವಾಲು
ಡಿಸೆಂಬರ್ ಚಳಿ.
ಬೆಟ್ಟದ ತಪ್ಪಲಲ್ಲಿ
ಅವಳು ನಡೆಯುತ್ತಿದ್ದ
ಕಿರುದಾರಿಯ ಉದ್ದಕ್ಕೂ
ಮಂಜು ಮುಂಜಾನೆ.


ಹಿಮದಂತೆ ಹೊದ್ದು
ಪ್ರೀತಿಸುತ್ತಿದ್ದ
ಅವಳು.
ಅವಳೂ?
ಅವಳೇ?
ಅವಳಾ?
ಅವಳ ನೆನಪಿಗೆ
ಶಿಶಿರದಲ್ಲಿ ಚಾತುರ್ಮಾಸ. ತಲೆ ಬೋಳಿಸಿಕೊಂಡು
ಒಳಸೇರಿದರೆ ನಾಲ್ಕು ತಿಂಗಳು
ದಿವಂಗತ.
ಹೊರಬರುವ ಹೊತ್ತಿಗೆ ಸಂಸ್ಕಾರ
ಉತ್ತರಾಯಣ, ಓಂ ಣಮೋ
ಮಲೆಗಳಲ್ಲಿ ಮದುಮಗಳು.


ನಾನು ಸುಮ್ಮನೆ ನೋಡುತ್ತಾ
ಕೂತಿದ್ದೇನೆ.
ಹಳದಿ ಬಣ್ಣದ ಎಲೆಯೊಂದು
ಹಗುರ ನೆಲಕ್ಕಿಳಿಯಿತು.
ನೀಲಿ ಬಣ್ಣದ ಹಕ್ಕಿಯೊಂದು
ಅದನ್ನು ಸುಮ್ಮನೆ ಕುಕ್ಕಿತು.
ತನ್ನ ಅವಿವೇಕಕ್ಕೆ ತಾನೇ ನಕ್ಕು
ಎಲ್ಲಿಗೋ ಹಾರಿಹೋಯಿತು.


ಹಾರಲಾರದ, ಮೀರಲಾರದ, ದಾಟಲಾರದ
ನನ್ನ ಮುಂದೆ
ದಾಂಪತ್ಯದ ಹೊಸಿಲು.
ದೂರದಲ್ಲಿ ಕಾಣಿಸಿ
ಬೆಚ್ಚಗೆನಿಸುತ್ತಿದೆ.
ಅವಳು
ಎಳೆಬಿಸಿಲು

‍ಲೇಖಕರು avadhi

12 December, 2009

5 Comments

  1. hneshakumar@gmail.com

    ಸೊಗಸಾಗಿದೆ ಮಾಗಿಯ ಹಾಗೆ ಕೊರೆವ ಕವನ

  2. Siri

    Your poems are always filled wid allusions,
    either to mythology or history or other
    literary works.
    They make us go back, loiter there for a while,
    think from there and get lost. iShTa aaythu.
    kelavu saalugaLannu matte matte OdikonDe.

  3. ugamasrinivas

    kavite chenda ide. kavitheya hage iruvu chitra kooda chenda untu. decemberna cheliyalli padya, padyada thara iruva chitra nodi hai anisithu

  4. jayadev

    tumbaa sundara pratimegalu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading