ಜೋಗಪ್ಪ ಒಂದು ಕಡೆ ನೆಲೆ ನಿಲ್ಲದೆ ತಿರುಗ್ತಾನೆ ಅಂತಾರೆ ದೊಡ್ಡೋರು. ನಮಗಂತೂ ಗೊತ್ತಿರಲಿಲ್ಲ. ಜೋಗಿ ಅಲ್ಲಿ ಇಲ್ಲಿ ತಿರುಗಿ ಬೆಟ್ಟ ಹತ್ತಿ, ಕಣಿವೆ ಇಳಿದು, ಮಲೆನಾಡಲ್ಲಿ ತಿರುಗಿ, ಕರಾವಳಿಯಲ್ಲಿ ಈಜಿ ಈಗ ಮತ್ತೆ ಹಳೇಗಂಡನ ಪಾದವೇ ಗತಿ ಅಂತ ‘ಜೋಗಿಮನೆ’ ಸೇರಿಕೊಂಡಿದ್ದಾರೆ.
‘ದುರ್ದೈವವಶಾತ್’ ವಾಪಸ್ ಬಂದಿದ್ದೇನೆ ಎಂದು ಅವರೇ ಘೋಷಿಸಿಕೊಂಡಿದ್ದಾರೆ.
-Jogi
ಅಪರೂಪ ತಂಗಾಳಿ.
ವಸಂತಸೇನೆಯ ನೆನಪಿಗೆ
ಮನಸ್ಸು ಶಕಾರ
ಘಾಟಿ ರಸ್ತೆಯ ಆರಂಭಕ್ಕೆ ಸೂಚನೆ:
ಏರುಹಾದಿಗಳಲ್ಲಿ
ವಾಹನಗಳನ್ನು ಮುನ್ನಡೆಸಬೇಡಿರಿ’
ಇಳಿಯುವ ವಾಹನಗಳ ಬಗ್ಗೆ
ಅವಳಿಗೆ ನಿರಾಸಕ್ತಿ
ಹೆಬ್ಬೆರಳು ಎಡವಿ ನೆತ್ತರು ಒಸರಿದರೂ
ಕಣ್ಣಲ್ಲಿ ನೀರು.
ಆಹಾ ಎಂಥ ಸಂಬಂಧ.
ಆ ಬೆಟ್ಟದಲ್ಲಿ ಮೋಡಗುದ್ದಾಟ.
ಈ ಬಯಲಲ್ಲಿ
ಶ್ರಾವಣದ ಇಳಿನೀರು.
ಮುಟ್ಟಬೇಕು, ಮುಟ್ಟಿಯೂ
ಮುಟ್ಟದಂತಿರಬೇಕು.
ಮುಟ್ಟಬಾರದು, ಮುಟ್ಟದಿದ್ದರೂ
ಮುಟ್ಟಿದಂತಿರಬೇಕು
ಇವೆರಡರ ನಡುವೆ
ಮಾತೆ
ಜ್ಯೋತಿರ್ಲಿಂಗ
ಎಲ್ಲವೂ
ಕಣಿವೆಗೆ ಬಿದ್ದ ಉತ್ತರದ
ತುಡುಗು ಗಾಳಿಗೂಳಿ.







0 Comments