ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿಗೆ ‘Bangalore Lit Fest’ ಪ್ರಶಸ್ತಿ ಪ್ರದಾನ…

ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಹಿರಿಯ ಸಾಹಿತಿ ಕನ್ನಡಪ್ರಭ ಪುರವಣಿಗಳ ಪ್ರದಾನ ಸಂಪಾದಕ ಜೋಗಿ ಅವರಿಗೆ ‘Bangalore Lit Fest’ ಪ್ರಶಸ್ತಿ ಪ್ರದಾನ ಮಾಡಲಾಯಿತು.

‘ಬಹುರೂಪಿ’ಯ ಜಿ ಎನ್‌ ಮೋಹನ್‌ ಹಾಗೂ ‘ಆಟ ಗಲಾಟ’ ಸಂಸ್ಥೆಯ ಮುಖ್ಯಸ್ಥ ಸುಬೋಧ್ ಜಂಟಿಯಾಗಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಆಟ ಗಲಾಟ ಪುಸ್ತಕ ಕೇಂದ್ರಿತ, ಸಾಂಸ್ಕೃತಿಕ ತಾಣ. ಪುಸ್ತಕ ಮಳಿಗೆಗಳನ್ನು ಕೇಂದ್ರವಾಗಿಟ್ಟುಕೊಂಡು ಪುಸ್ತಕ ಕುರಿತು ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತದೆ. ಇದರಲ್ಲಿ ಕಿರೀಟಪ್ರಾಯವಾದದ್ದು ‘Bangalore Lit Fest’. 10 ನೇ ವರ್ಷದ ಈ ‘Lit Fest’ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಜೋಗಿ ಅವರಿಗೆ ಪ್ರದಾನ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಕಥೆ ಎಂಬುದು ಆತ್ಮಕಥೆಯೂ ಹೌದು ಕುರಿತಂತೆ ‘Lit Fest’ ನಲ್ಲಿ ಜೋಗಿ ಮತ್ತು ಮೋಹನ್‌ ಅವರ ಸಂವಾದ ಏರ್ಪಡಿಸಲಾಗಿತ್ತು.

ಕಥನ ಎಂಬುದು ಹೇಗೆ ಆತ್ಮಕಥನವಾಗಿ ಬಿಡುತ್ತದೆ ಎನ್ನುವುದನ್ನು ಜೋಗಿ ಮತ್ತು ಮೋಹನ್‌ ಅವರು ತಮ್ಮ ಬರಹಗಳ ಮೂಲಕ ಹಾಗೂ ಸಾಹಿತ್ಯ ಲೋಕದ ಪ್ರಮುಖ ಬರಹಗಳನ್ನು ಉದಾಹರಣೆಗಾಗಿ ತೆಗೆದುಕೊಳ್ಳುವ ಮೂಲಕ ಚರ್ಚಿಸಿದರು.

ಪ್ರಶಸ್ತಿ ಪ್ರದಾನ ಹಾಗೂ ಸಂವಾದದ ಫೋಟೋ ಆಲ್ಬಂ ಇಲ್ಲಿದೆ.

‍ಲೇಖಕರು Admin

19 December, 2021

1 Comment

  1. ಸುಮತಿ

    ಅಭಿನಂದನೆಗಳು ಜೋಗಿ sir. ಶುಭವಾಗಲಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading