ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೈಲು ಹಕ್ಕಿಗಳ ಕಲಾ ಜಗತ್ತು…

– ಡಾ. ಎನ್. ಜಗದೀಶ್ ಕೊಪ್ಪ

ಪ್ರಸಿದ್ಧ ರಂಗ ಕಮರ್ಿ ಹುಲಿಗೆಪ್ಪ ಕಟ್ಟಿಮನಿ ಕಳೆದ ಎಂಟು ವರ್ಷಗಳಿಂದ ಸೆರೆಮನೆಯ ಖೈದಿಗಳಿಗೆ ನಾಟಕ ಕಲಿಸುತ್ತಾ, ಅವರೊಳಗಿನ ಕಲಾ ಪ್ರತಿಭೆಯನ್ನ ಅದ್ಭುತವಾಗಿ ಹೊರತೆಗೆಯುತ್ತಿದ್ದಾರೆ. ಮೈಸೂರಿನ ಖೈದಿಗಳಿಂದ ಇವರು ಪ್ರಯೋಗಿಸಿದ ತಲೆದಂಡ ನಾಟಕದ ಯಶಸ್ವಿನಿಂದ, ಧಾರವಾಡ, ಬೆಳಗಾವಿ, ಬೆಂಗಳೂರಿನ ಪರಪ್ಪನ ಅಗ್ರಹಾರದ ಖೈದಿಗಳಿಗೂ ನಾಲ್ಕು ನಾಟಕಗಳನ್ನು ಕಲಿಸಿ ಇದೀಗ ಅವುಗಳ ಪ್ರದರ್ಶನಕ್ಕಾಗಿ ಕನರ್ಾಟಕದ ಪ್ರಮುಖ ನಗರಗಳಿಗೆ ಪ್ರವಾಸ ಹೊರಡಲು ಸಜ್ಜಾಗಿದ್ದಾರೆ.

ಯಾವುದೋ ಒಂದು ಕ್ಷಣದಲ್ಲಿ ಅರಿಯದೇ ಅಥವಾ ದುಡುಕಿ ಮಾಡಿದ ತಪ್ಪಿಗಾಗಿ ನಾಲ್ಕು ಗೋಡೆಯ ನಡುವೆ ಕೊಳೆಯುತಿದ್ದ ಮಾನವ ಜೀವಗಳಿಗೆ ಸ್ಪೂತರ್ಿ ತುಂಬಿ, ಅವರೊಳಗಿನ ಪ್ರತಿಭೆಯನ್ನ ಅನಾವರಣಗೊಳಿಸಿದ ಹುಲಿಗೆಪ್ಪ ನಿಜಕ್ಕೂ ಅಭಿನಂದನಾರ್ಹರು.

ನಾಟಕದ ಪ್ರದರ್ಶನಕ್ಕೂ ಮುನ್ನ ಗ್ರೀನ್ ರೋಂನಲ್ಲಿ ಖೈದಿಗಳ ಕಾತುರ, ತಲ್ಲಣ, ಇವುಗಳ ಕುರಿತು ಎಷ್ಟು ಹೇಳಿದರೂ ಸಾಲದು. ತಾನು ಮಾಡಿದ ತಪ್ಪಿಗೆ ಸಮಾಜದೆದುರು ತನ್ನ ಪ್ರತಿಭೆ ತೋರಿಸಿ ಅವರಿಂದ ಮೆಚ್ಚುಗೆ ಗಳಿಸಿ ತಮ್ಮ ನೋವುಗಳನ್ನ ನೀಗಿಕೊಳ್ಳುವ ಆಸೆ ಅವರ ಮುಖದಲ್ಲಿ ಅಡಗಿತ್ತು.

ಧಾರವಾಡದಲ್ಲಿ ನಾಲ್ಕು ದಿನಗಳ ಕಾಲ ನಡೆದ ನಾಟಕೋತ್ಸವ ಯಶಸ್ವಿಯಾಯಿತು. ಈ ಬಾರಿ ನಾಟಕಗಳ ಜೊತೆ ಖೈದಿಗಳೇ ರಚಿಸಿದ ವರ್ಣಚಿತ್ರಗಳು ಎಲ್ಲರ ಗಮನ ಸೆಳೆದವು. ನಾಟಕ ತರಬೇತಿಯ ಸಂದರ್ಭದಲ್ಲಿ ಕಲಿತ ಹಾಡು, ನೃತ್ಯ, ಮುಖವಾಡ, ಭಿತ್ತಿಚಿತ್ರ ತಯಾರಿಕೆ ಇವೆಲ್ಲವೂ ಈಗ ಜೈಲು ಹಕ್ಕಿಗಳ ಪಾಲಿಗೆ ವರವಾಗಿವೆ.

ಚಿತ್ರಕಲೆಯ ಯಾವೊಂದು ತರಬೇತಿ ಇಲ್ಲದೆ, ಕೈಗೆ ಸಿಕ್ಕ ಕುಂಚ ಮತ್ತು ಬಣ್ಣಗಳನ್ನು ಹಿಡಿದು ತಮ್ಮ ಮನಸಿನಾಳದ ನೋವು, ನಲಿವು, ಕನಸುಗಳನ್ನ ಚಿತ್ರಗಳ ಮೂಲಕ ಇವರು ಕಟ್ಟಿಕೊಟ್ಟಿರುವುದು ನಿಜಕ್ಕೂ ವಿಸ್ಮಯ. ಇವರ ಚಿತ್ರಗಳನ್ನು ನೋಡಿದ ಖ್ಯಾತ ಚಿತ್ರ ಕಲಾವಿದ, ಧಾರವಾಡದ ಮಿತ್ರ ಮಧುದೇಸಾಯಿ ಎಲ್ಲರಿಗೂ, ಅತ್ಯುತ್ತಮ ದಜರ್ೆಯ ಬ್ರಷ್ ಮತ್ತು ಬಣ್ಣದ ಟ್ಯೂಬ್ ಗಳನ್ನು ಕಾಣಿಕೆಯಾಗಿ ನೀಡಿದರು.

ಸಮಾಜದಲ್ಲಿ ತಪ್ಪು ಮಾಡಿದ ವೈಕ್ತಿಗೆ ಶಿಕ್ಷೆ ಅನಿವಾರ್ಯ ನಿಜ ಆದರೆ, ಅವನನ್ನು ತಿದ್ದಿ ತೀಡಿ ಸಮಾಜದ ಮುಖ್ಯವಾಹಿನಿಗೆ ಮತ್ತೇ ಕರೆತರುವುದು ನಮ್ಮ ಕರ್ತವ್ಯ ಕೂಡ ಹೌದು. ಈ ನಿಟ್ಟಿನಲ್ಲಿ ತೊಡಗಿಸಿಕೊಂಡಿರುವ ಕಲಾವಿದ ಹುಲಿಗೆಪ್ಪ ಕಟ್ಟಿಮನಿ ಹಾಗೂ ಅವರಿಗೆ ಬೆಂಬಲವಾಗಿ ನಿಂತಿರುವ ಜೈಲು ಅಧಿಕಾರಿಗಳಿಗೆ ಕೃತಜ್ಙತೆ ಹೇಳಿದರೆ, ಅದು ಔಪಚಾರಿಕವಾಗಬಹುದೆನೋ ಎಂಬ ಅಂಜಿಕೆ ಕಾಡುತ್ತಿದೆ.

‍ಲೇಖಕರು avadhi

25 November, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading