
ಗಣಪತಿ ಅಗ್ನಿಹೋತ್ರಿ
ಅನೇಕ ಸಂದರ್ಭಗಳಲ್ಲಿ ಭಲೇ ಅನಿಸುದ್ದುಂಟು. ಪುರಾತನ ಕಾಲದ ಯಾವುದೇ ವಸ್ತುಗಳನ್ನು ಸಂಗ್ರಹಿಸುವುದು ಅಷ್ಟು ಸುಲಭವಲ್ಲ. ಅದೊಂದು ದುಬಾರಿ ಹವ್ಯಾಸ. ಅದರಲ್ಲೂ ಸಾಂಪ್ರದಾಯಿಕ ಚಿತ್ರ ಕಲಾಕೃತಿ ಸಂಗ್ರಹಿಸುವುದು ಬಹುದೊಡ್ಡ ಸವಾಲಿನ ಕೆಲಸ. ಆದರೆ ಹವ್ಯಾಸ ಇರಿಸಿಕೊಂಡವರು ಅದರಿಂದಾಚೆ ಬರಲು ಒಪ್ಪಲಾರರು. ಅವರ ಮನಸ್ಸು ಒಪ್ಪುವುದೂ ಇಲ್ಲ. ಅದರೊಟ್ಟಿಗೆ ಬದಕು ಸಾಗಿಸುವುದರಲ್ಲಿದೆ ಸಮಾಧಾನ ಎನ್ನುತ್ತಾರೆ. ಲಾಭ ನಷ್ಟದ ಬಗ್ಗೆ ಯೋಚಿಸುವುದಿಲ್ಲ.
ಇಂಥವರು ಅನೇಕರು ನಮ್ಮೆದುರು ಸಿಗುತ್ತಾರೆ. ಅಂಥವರಲ್ಲಿ ಒಬ್ಬರು ಮೈಸೂರಿನ ಜೆ. ಇ. ವಿಠ್ಠಲರಾವ್. ಮೈಸೂರಿನ ಜಗನ್ಮೋಹನ ಅರಮನೆ ಆವರಣದಲ್ಲಿರುವ ವಿಷ್ಣು ಕಲಾ ಆರ್ಟ್ಸ್ ಸಂಸ್ಥಾಪಕರಾದ ಇವರ ಸಂಗ್ರಹದ ಮೈಸೂರು ಶೈಲಿಯ ಸಾಂಪ್ರದಾಯಿಕ ಕಲಾಕೃತಿಗಳ ಪ್ರದರ್ಶನ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿಯಲ್ಲಿ ನಡೆಯುತ್ತಿದೆ.

ಬಹಳದಿನಗಳ ಬಳಿಕ ನಿನ್ನೆ ರಾವ್ ಅವರನ್ನು ಭೇಟಿ ಮಾಡಿ ಒಂದಿಷ್ಟು ಕಲಾಕೃತಿಗಳನ್ನು ವೀಕ್ಷಿಸಿ ಕಣ್ತುಂಬಿಕೊಂಡು ಬಂದೆ. ಬಹಳ ಕಷ್ಟದ ದಿನಗಳನ್ನು ನೋಡಿ ಬಂದವರು ರಾವ್. ಒಂದು ಕಪ್ ಟೀ ಕುಡಿಯಲೂ ಹಣವಿಲ್ಲದ ದಿನಗಳ ಸಂಕಟ ಅನುಭವಿಸಿ ಮೇಲೆ ಬಂದವರು. ಸಹೃದಯಿ ಕಲಾಸಂಗ್ರಾಹಕರು.
ಬಾಲ್ಯದ ದಿನಗಳಿಂದ ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಂಡಿದ್ದ ರಾವ್ ಅವರು ಇಂದು ನೂರಾರು ವರ್ಷಗಳ ಹಳೆಯ ಚಿತ್ರ ಕಲಾಕೃತಿ, ಶಿಲ್ಪ ಕಲಾಕೃತಿಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ. ಅದನ್ನೇ ವೃತ್ತಿಯಾಗಿಸಿಕೊಂಡು ಮಾರಾಟಮಾಡಿ ಜೀವನ ಸಾಗಿಸುತ್ತಾರೆ. ಮೈಸೂರಿನಲ್ಲಿ ತಮ್ಮದೇ ಒಂದು ಸೂರು ಮಾಡಿಕೊಂಡು, ಸಂಗ್ರಹಕ್ಕೊಂದು ಜಾಗ ಇರಿಸಿಕೊಂಡಿದ್ದಾರೆ.
ಸ್ನೇಹಿತರೆ, ಬಿಡುವು ಮಾಡಿಕೊಂಡು ಹೋಗಿಬನ್ನಿ. ನೀವು ಬಯಸಿದರೆ ಕಲಾಕೃತಿ ನಿಮ್ಮ ಮನೆಯನ್ನೂ ಸೇರಬಹುದು.










0 Comments