'ಜುಗಾರಿ ಕ್ರಾಸ್' ನಲ್ಲಿ ಈ ಬಾರಿ ಸೋಮಶೇಖರ್ ಆಯೋಗ

‘ಜುಗಾರಿ ಕ್ರಾಸ್’ ಚರ್ಚೆಗಾಗಿ ಇರುವ ತಾಣ. ಈಗಾಗಲೇ ಹಲಾವಾರು ಮೌಲಿಕ ಚರ್ಚೆಗಳನ್ನು ಹುಟ್ಟುಹಾಕಿರುವ ನಾ ದಿವಾಕರ ಅವರು ಈ ಬಾರಿ ಸೋಮಶೇಖರ ಆಯೋಗದ ವರದಿಯನ್ನು ಚರ್ಚೆಗೆ ಎತ್ತಿಕೊಂಡಿದ್ದಾರೆ. ಇದೇನು ಆಯೋಗವೋ ಇಲ್ಲಾ ಪ್ರಯೋಗವೋ ಎನ್ನುವ ಪ್ರಶ್ನೆ ಕೇಳುತ್ತಿದ್ದಾರೆ. ಬನ್ನಿ ಚರ್ಚೆಯಲ್ಲಿ ಭಾಗವಹಿಸಿ. ಆಯೋಗವೋ ಪ್ರಯೋಗವೋ ? -ನಾ ದಿವಾಕರ ಸ್ವತಂತ್ರ ಭಾರತದ ಪ್ರಜಾಸತ್ತಾತ್ಮಕ ಆಳ್ವಿಕೆಯ ಇತಿಹಾಸದಲ್ಲಿ ಜನಮಾನಸವು ಕಂಡಿರುವ ಒಂದು ಕಟು ಸತ್ಯ ಏನೆಂದರೆ, ಏನೇ ಅಪರಾಧ ಎಸಗಲಿ ಪ್ರಬಲ ವರ್ಗಗಳಿಗೆ, ಆಳುವ ವರ್ಗಗಳಿಗೆ, ಶ್ರೀಮಂತ ವರ್ಗಗಳಿಗೆ ಭಾರತೀಯ ನ್ಯಾಯ ಸಂಹಿತೆಯಲ್ಲಿ ಶಿಕ್ಷೆ ಆಗುವುದಿಲ್ಲ ! ರಾಜಕಾರಣಿಗಳು ಮತ್ತು ರಾಜಕೀಯ ಪ್ರೇರಿತ ಶಕ್ತಿಗಳು ಎಂದಿಗೂ ಶಿಕ್ಷಾರ್ಹರಾಗಲಾರರು. ಆಳುವ ರಾಜಕೀಯ ಪಕ್ಷಕ್ಕೆ ನಿಕಟವಾದ ಸಂಘಟನೆಗಳು ಎಂದಿಗೂ ಅಪರಾಧಿ ಸ್ಥಾನದಲ್ಲಿ ನಿಲ್ಲುವುದಿಲ್ಲ. ಈ ವರ್ಗಗಳೆಲ್ಲವೂ ಒಂದು ರೀತಿ ವಿಚಾರಣಾಧೀನ ಖೈದಿಗಳಂತೆ. ಸಾರ್ವಭೌಮ ಪ್ರಜೆಗಳ ದೃಷ್ಟಿಯಲ್ಲಿ ಆರೋಪಿಗಳಾಗಿರುತ್ತಾರೆ, ನ್ಯಾಯಾಂಗ ಮೂಲಕ ವಿಚಾರಣೆ ನಡೆಯುತ್ತಿರುತ್ತದೆ ಆದರೆ ಅಂತಿಮ ತೀಪರ್ು ಮಾತ್ರ ಅಪರಾಧಿಗೆ ಮನ್ನಣೆ ನೀಡುವುದೇ ಆಗಿರುತ್ತದೆ. ಈ ವಿಚಾರಣಾ ಖೈದಿಗಳನ್ನು ನ್ಯಾಯಾಂಗದ ಪರಿಧಿಯಿಂದ ಹೊರಗಿಟ್ಟು ನ್ಯಾಯಾನ್ಯಾಯಗಳ ಪರಾಮಶರ್ೆ ನಡೆಸುವ ನಿಟ್ಟಿನಲ್ಲಿ ಭಾರತದ ಆಳ್ವಿಕರು ಕಂಡುಹಿಡಿದಿರುವ ಒಂದು ಸಾಂವಿಧಾನಿಕ ಅಸ್ತ್ರ ಎಂದರೆ ವಿಚಾರಣಾ ಆಯೋಗ ! ಸ್ವಾತಂತ್ರ್ಯೋತ್ತರ ಭಾರತದಲ್ಲಿ ಈವರೆಗೂ ನಡೆದಿರುವ ಭ್ರಷ್ಟಾಚಾರ ಪ್ರಕರಣಗಳು, ಕೋಮು ಗಲಭೆಗಳು, ಜಾತಿ ಸಂಘರ್ಷಗಳು, ಜಾತಿ ಪ್ರೇರಿತ ಹತ್ಯಾಕಾಂಡಗಳು ನೂರಾರು. ಈ ಎಲ್ಲಾ ಘಟನೆಗಳಲ್ಲಿ ಅಪರಾಧಿಗಳಾರು ಎಂದು ವಿವರಿಸಿ ಹೇಳುವ ಅಗತ್ಯವಿಲ್ಲ. ಆಳ್ವಿಕರ ಒಡೆದು ಆಳುವ ನೀತಿಗೆ ಬಲಿಯಾಗುವ ಸುಶಿಕ್ಷಿತ ಸಮಾಜದ ಪೂವರ್ಾಗ್ರಹಪೀಡಿತರು ಮತ್ತು ಅನಕ್ಷರಸ್ತ ಸಮಾಜದ ಅಮಾಯಕರು ಈ ಎಲ್ಲಾ ಘಟನೆಗಳಲ್ಲಿ ಮುಂಚೂಣಿ ಸೈನಿಕರಾಗಿರುತ್ತಾರೆ. ಆದರೆ ಈ ಸೂತ್ರದ ಗೊಂಬೆಗಳನ್ನು ಆಡಿಸುವ ಸೂತ್ರಧಾರರು ಅಧಿಕಾರದ ಗದ್ದುಗೆಯನ್ನು ಅಲಂಕರಿಸಿ ತಮ್ಮ ರಾಜ್ಯಾಡಳಿತ (!) ನಡೆಸುತ್ತಿರುತ್ತಾರೆ. ರಾಜಕಾರಣಿ-ಅಧಿಕಾರಶಾಹಿ ಮತ್ತು ದೇಶದ ಕಾನೂನು ವ್ಯವಸ್ಥೆಯ ಪರಿಪಾಲಕರ ನೇಪಥ್ಯದ ಒಕ್ಕೂಟ ಎಲ್ಲೋ ಒಂದೆಡೆ ಸಮಾಜಘಾತುಕ ಶಕ್ತಿಗಳಿಗೆ ಅಗೋಚರ ವೇದಿಕೆಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಎದುರಾಗುವ ಕಟು ವಾಸ್ತವವೆಂದರೆ, ಸಾವಿರಾರು ಮುಗ್ಧ ಜನತೆಯನ್ನು ಬಲಿ ತೆಗೆದುಕೊಂಡ ಭೀಕರ ಹತ್ಯಾಕಾಂಡಗಳಾಗಲೀ, ರಾಜಕಾರಣ ಮತ್ತು ಧಮರ್ಾಂಧತೆಯ ಸಮ್ಮಿಲನದಿಂದ ಸಂಭವಿಸುವ ಕೋಮು ಸಂಘರ್ಷಗಳಾಗಲೀ, ಮಾನವ ಸಮಾಜವನ್ನು ನೈತಿಕ ಅಧಃಪತನದತ್ತ ಕೊಂಡೊಯ್ಯುವ ಜಾತಿ ಸಂಘರ್ಷಗಲಾಗಲೀ, ಜನಸಾಮಾನ್ಯರ ಶ್ರಮ ಮತ್ತು ಬೆವರಿನಿಂದ ಉತ್ಪಾದಿಸಲಾಗುವ ಸಂಪತ್ತನ್ನು ಕ್ಷಣಮಾತ್ರದಲ್ಲಿ ಲಪಟಾಯಿಸುವ ಭ್ರಷ್ಟಾಚಾರದ ಹಗರಣಗಳಾಗಲೀ ಇವೆಲ್ಲವೂ ಆಧುನಿಕ ನಾಗರಿಕ ಸಮಾಜದ ಸುಪ್ತ ಮಾನವೀಯ ಪ್ರಜ್ಞೆಯನ್ನು ಭೂಗತ ಮಾಡಿ, ಮನುಜ ಪ್ರಜ್ಞೆಯನ್ನು ಭ್ರಷ್ಟಗೊಳಿಸುವ ಆಳ್ವಿಕರ ಹುನ್ನಾರಗಳೆಂದೇ ಹೇಳಬಹುದು. ಈ ಹುನ್ನಾರಕ್ಕೆ ಬಲಿಯಾಗುವ ವ್ಯಕ್ತಿ, ಸಮಾಜ ಮತ್ತು ಸಮುದಾಯಗಳು ಕಾಲಕಾಲಕ್ಕೆ ವಿಭಿನ್ನ ಸ್ವರೂಪ ಪಡೆಯುತ್ತಲೇ ಹೋಗುತ್ತವೆ. ಹಾಗೆಯೇ ಈ ವಿದ್ಯಮಾನಗಳನ್ನು ನಿರ್ವಹಿಸುವ ಪ್ರಬಲ ವರ್ಗಗಳು ಪರಕಾಯ ಪ್ರವೇಶ ಮಾಡುತ್ತಲೇ ಇರುತ್ತವೆ. ದೇವನೊಬ್ಬ ನಾಮ ಹಲವು ಎಂಬಂತೆ, ಸೂತ್ರಧಾರ ಒಬ್ಬನೇ ಆದರೂ ಹಲವು ನಾಮಾಂಕಿತಗಳು. ಹೀಗೆ ಸೃಷ್ಟಿಸಲಾಗುವ ಸಮಾಜಘಾತುಕ ಶಕ್ತಿಗಳು ತಮ್ಮ ಚಾಣಕ್ಯ ತಂತ್ರದಿಂದ ಆಳ್ವಿಕರಿಗೆ ಆಗಾಗ್ಗೆ ಆಮ್ಲಜನಕವನ್ನು ಪೂರೈಸದೆ ಹೋದಲ್ಲಿ ಜನಸಾಮಾನ್ಯರ ಬೆವರಿನ ಫಲವನ್ನು ಶ್ರೀಮಂತ ವರ್ಗಗಳು ಲಪಟಾಯಿಸುವುದಾದರೂ ಹೇಗೆ ? ಪಾಸ್ಕೋ, ವೇದಾಂತ, ಮಿತ್ತಲ್, ಅಂಬಾನಿಗಳ ರಕ್ಷಣೆ ಮತ್ತು ಅವರ ಉದ್ಯಮಗಳಿಂದ ನಡೆಯುವ ಸಂಪತ್ತಿನ ಲೂಟಿಗೆ ಸಲ್ವಾಜುಡುಂಗಳು ಸೆಟೆದು ನಿಲ್ಲುತ್ತವೆ. ಜನಮಾನಸದಲ್ಲಿ ದ್ವೇಷ ಭಾವನೆಗಳನ್ನು ಬಿತ್ತುವುದರ ಮೂಲಕ ಸಮಾಜವನ್ನು ಶಾಶ್ವತವಾಗಿ ಒಡೆದು ಆಳುವ ಧಮರ್ಾಂಧರ ಭದ್ರಕೋಟೆಯಂತೆ ಮೂಲಭೂತವಾದಿ ಫ್ಯಾಸಿಸ್ಟ್ ಸಂಘಟನೆಗಳು ಸಿದ್ಧವಾಗುತ್ತವೆ. ಜನಸಮುದಾಯಗಳ ಅವಿರತ ಶ್ರಮ ಮತ್ತು ಬೆವರಿನ ಫಲವಾಗಿ ಉತ್ಪತ್ತಿಯಾಗುವ ದೇಶದ ಸಂಪತ್ತು ಮತ್ತು ನೈಸಗರ್ಿಕ ಸಂಪನ್ಮೂಲಗಲನ್ನು ತಮ್ಮ ಲಾಭಕೋರತನಕ್ಕಾಗಿ, ಶ್ರೀಮಂತಿಕೆಯ ಐಷಾರಾಮಿ ಜೀವನಕ್ಕಾಗಿ ಶೋಷಿಸಿ ಲಪಟಾಯಿಸುವ ಭ್ರಷ್ಟರ ರಕ್ಷಣೆಗೆ ರಾಜಕೀಯ ಪಕ್ಷಗಳು ಸಿದ್ಧವಾಗುತ್ತವೆ. ಈ ಎಲ್ಲಾ ಅಪರಾಧಿಗಳ ರಕ್ಷಣೆಗೆ ಸಕರ್ಾರಗಳೇ ನೇಮಿಸುವ ಸಾಂವಿಧಾನಿಕ ಸಂಸ್ಥೆ, ವಿಚಾರಣಾ ಆಯೋಗಗಳು ಪೂರ್ಣ ಬದ್ಧತೆಯಿಂದ, ನಿಷ್ಠೆಯಿಂದ ಶ್ರಮಿಸುತ್ತವೆ. ನಮ್ಮ ಸಕರ್ಾರಗಳು ನೇಮಿಸುವ ಯಾವುದೇ ಆಯೋಗವೂ ಸತ್ಯ ನಿಷ್ಠ ವರದಿ ನೀಡುವುದಿಲ್ಲ. ಒಂದು ವೇಳೆ ನ್ಯಾಯಮೂತರ್ಿಗಳ ಸಾಂವಿಧಾನಿಕ ನಿಷ್ಠೆಯ ಫಲವಾಗಿ ಸತ್ಯಾಂಶ ಹೊರಬಿದ್ದರೂ ಆಳ್ವಿಕರನ್ನು ಆಳುವ ಪ್ರಬಲ ವರ್ಗಗಳು ಅಂತಹ ವರದಿಗಳನ್ನು ಅಗ್ನಿಕುಂಡಕ್ಕೆ ಎಸೆಯುತ್ತವೆ. ಅತ್ಯುತ್ತಮ ನಿದರ್ಶನಗಳೆಂದರೆ ಲಿಬರ್ಹಾನ್ ಸಮಿತಿ, ಶ್ರೀಕೃಷ್ಣ ಸಮಿತಿ ಇತ್ಯಾದಿ. ವರದಿಗಳನ್ನು ಸಂಸತ್ತು ಅಥವಾ ವಿಧಾನಸಭೆಯಲ್ಲಿ ಮಂಡಿಸಿ, ಸಾರ್ವಜನಿಕರ ವೆಚ್ಚದಲ್ಲಿ ದಿನಗಟ್ಟಲೆ ವಾಗ್ವಾದಗಳನ್ನು ನಡೆಸಿ ನಂತರ ವರದಿಯನ್ನು ಶೈಯ್ಯಾಗಾರಕ್ಕೆ ತಳ್ಳುವ ಸಂಸ್ಕೃತಿ ನಮ್ಮ ಆಳ್ವಿಕರಿಗೆ ಕರಗತವಾಗಿಬಿಟ್ಟಿದೆ. ಆರೋಪಿಗಳು ಯಾರೆಂದು ಪ್ರಕಟವಾದರೂ ಅಪರಾಧಿಗಳು ಯಾರೆಂದು ತಿಳಿಯುವುದೇ ಇಲ್ಲ. ಒಂದು ವೇಳೆ ತಿಳಿದರೂ ಒಂದು ಪೀಳಿಗೆಯೇ ಕಣ್ಮರೆಯಾಗಿರುತ್ತದೆ. ಕನರ್ಾಟಕದಲ್ಲಿ ಎರಡು ವರ್ಷಗಳ ಹಿಂದೆ ನಡೆದ ಚಚರ್ುಗಳ ಮೇಲಿನ ದಾಳಿ ಮತ್ತು ಅಲ್ಪಸಂಖ್ಯಾತರ ಮೇಲಿನ ಆಕ್ರಮಣಗಳನ್ನು ಕುರಿತು ನ್ಯಾಯಮೂತರ್ಿ ಸೋಮಶೇಖರ್ ಆಯೋಗದ ಅಂತಿಮ ವರದಿ ನೋಡಿದ ಮೇಲೆ ಇನ್ನೂ ಭ್ರಮನಿರಸನವಾಗುವ ಸಂಭವವೇ ಹೆಚ್ಚು. ಮಾದ್ಯಮಗಳ, ಜನಸಾಮಾನ್ಯರ, ಪೊಲೀಸ್ ಅಧಿಕಾರಿಗಳ ಕಣ್ಣೆದುರಿನಲ್ಲೇ ರಾಜ್ಯಾದ್ಯಂತ ಚಚರ್ುಗಳ ಮೇಲೆ ದಾಳಿ ನಡೆಸಿ, ಕ್ರೈಸ್ತ ಸಮುದಾಯವನ್ನು ನಿರಂತರ ಭೀತಿಯಲ್ಲಿರಿಸಿದ ಈ ಘಟನೆಗಳಿಗೆ ಯಾವುದೇ ಸಂಘಟನೆಯೂ ಹೊಣೆಯಲ್ಲ ಎಂದು ನ್ಯಾ. ಸೋಮಶೇಖರ್ ವರದಿ ಹೇಳುತ್ತದೆ. ಈ ಹಸಿ ಸುಳ್ಳಿಗಾಗಿ ಒಂದು ವರ್ಷದ ಕಾಲಾವಧಿ ಅಗತ್ಯವಿತ್ತೇ ಎಂದು ಕೇಳುವುದು ಅನಿವಾರ್ಯ. ಸಂಘಟನಾತ್ಮಕ ಬಲವಿಲ್ಲದೆ ಒಂದು ಸಮುದಾಯವನ್ನು ಕೇಂದ್ರೀಕರಿಸಿದ ಕೋಮುಗಲಭೆ ಮತ್ತು ಆಕ್ರಮಣಗಳು ಸಂಭವಿಸಿರುವುದು ವಿಶ್ವದ ಇತಿಹಾಸದಲ್ಲೇ ಇಲ್ಲ. ಆದರೆ ಕನರ್ಾಟಕದಲ್ಲಿ ಇದು ಸಂಭವಿಸಿರುವುದನ್ನು ಆಯೋಗವು ಆಳವಾದ ತನಿಖೆಯ ನಂತರ ಕಂಡುಹಿಡಿದಿದೆ. ವಿಚಾರಣಾ ಆಯೋಗಗಳು ಸಕರ್ಾರದ ಉಸ್ತುವಾರಿಯಲ್ಲೇ ನಡೆಯಬೇಕಾಗಿರುವುದರಿಂದ ಆಳುವ ಪಕ್ಷಕ್ಕೆ ಪೂರಕವಾದ ವರದಿ ನೀಡುವುದು ಸಾಮಾನ್ಯ. ಆದರೆ ಈ ವರದಿಯನ್ನು ನೋಡಿದರೆ ಸಕರ್ಾರವೇ ವರದಿಯನ್ನು ಸಿದ್ಧಪಡಿಸಿದಂತಿದೆ. ಇದೇ ಪ್ರಯೋಗ ದೇಶಾದ್ಯಂತ ಮುಂದುವರೆದರೆ ಪ್ರಜಾತಂತ್ರದ ಗತಿ ಏನು ? ಇದು ಪ್ರಜ್ಞಾವಂತ ಸಮಾಜದ ಮುಂದಿರುವ ಮೂರ್ತ ಪ್ರಶ್ನೆ. !]]>

‍ಲೇಖಕರು avadhi

February 6, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. karanam ramesh

    ZÀZïðUÀ¼À ªÉÄÃ¯É zÁ½ £ÀqÉzÁUÀ¯Éà CzÀÄ AiÀiÁgÀ zÀĵÀÌøvÀå CAvÀ dUÀeÁÓVÃgÁV ºÉÆÃVvÀÄÛ. ZÉrØUÀ¼À ClÖºÁ¸À §mÁ§AiÀįÁVvÀÄÛ. DzÀgÀÆ F PÀ¼ÀAPÀ¢AzÀ ZÉrØUÀ¼À ¸ÀAWÀl£ÉUÀ¼À£ÀÄß ªÀÄÄPÀÛUÉƽ¸À®Ä AiÀÄrØ ºÁUÀÆ ©eɦ Dj¹PÉÆAqÀ ªÁªÀÄ ªÀiÁUÀð ¸ÉÆêÀıÉÃRgÀ DAiÉÆÃUÀ. ¸ÁÜ£À zÉÆgÉvÀzÀÝjAzÀ¯Éà PÀÈvÀdÕvÀgÁVzÀÝ ªÀiÁ£ÀågÀÄ CªÀgÀ°èzÀÝ PÀvÀðªÀå ¤µÉ×UÉ vÀPÀÌAvÉ ªÀÄzsÀåAvÀgÀ ªÀgÀ¢ ¤ÃrzÀÝgÀÄ. £ÀAvÀgÀªÀµÉÖà DªÀgÀ PÀvÀðªÀå ¤ªÀðºÀuÉAiÀÄ ¤dªÁzÀ G(zÀÄgÀÄ)zÉÝñÀ CxÀðªÀiÁrPÉÆAqÀÄ ªÀgÀ¢ VÃa PÀÈvÁxÀðgÁVzÁÝgÉ. CAUÉÊ ºÀÄtÂÚUÉ PÀ£Àßr ¨ÉÃPÀÄ, E®è¢zÀÝgÉ ªÀAqÀgï(PÉøÀj ¯ÉævÀ)PÀtÂÚUÉ ¸ÀvÀå UÉÆÃZÀgÀªÁUÀzÀÄ JA§ÄzÀ£ÀÄß ¸Á©ÃvÀÄ¥Àr¹zÁÝgÉ. bÉÃ.. £ÁaPÉAiÀiÁUÉâÃPÀÄ ¸ÀPÁðgÀPÉÌ, CzÀÄ £ÉëĹzÀÝ DAiÉÆÃUÀPÉÌ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: