ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೀನಿ and ಸೀನಿ

ಪನ್ ಟಾಸ್ stick- fun ಟಾಸ್ಸ್ಟಿಕ್

ಸೂತ್ರಧಾರ ರಾಮಯ್ಯ

ಜೀವನದ ನಿರ್ದೇಶಕ V/s ಸೀರಿಯಲ್ ನಿರ್ದೇಶಕ

 

ಯಕ್ಷ ಪ್ರಶ್ನೆ: ಜೀವನದ ನಿರ್ದೇಶಕನಿಗೂ( ಜೀನಿ), ಸೀರಿಯಲ್ ನಿರ್ದೇಶಕನಿಗೂ (ಸೀನಿ), ಇರುವ ಹೋಲಿಕೆ ವ್ಯತ್ಯಾಸಗಳೇನು?

 

ಧರ್ಮೋತ್ತರ: ಅ) ಜೀವನದ ನಿರ್ದೇಶಕ (ವಿಧಿ?) ಹುಲುಮಾನವರ ಕಥೆಗಳನ್ನು ದಿಡೀರನೆ, ಅನಿರೀಕ್ಷಿತವೆಂಬಂತೆ ತುಂಡರಿಸಿ, ಜೀವನ ಕ್ಷಣಿಕ, ಲೈಫ್ ಈಸ್ ಶಾರ್ಟ್ ಅನ್ನಿಸಿ-ಬಿಡುತ್ತಾನೆ. ಸೀರಿಯಲ್ ನಿರ್ದೇಶಕ (ಸೀನಿ) ಕೂಲ್ ಆಗಿ, ಚ್ಯೂಯಿಂಗ್ ಗಮ್ ಅಗಿಯುತ್ತ, ಹಾಗೆ ತುಂಡರಿಸಲಾದ ಎಳೆಗಳು ಒಂದೊಂದನ್ನೇ ಸೇರಿಸಿ ಹಿಡಿದುಕೊಂಡು, ಎಳೆಯುತ್ತಾ…, ಜೀನಿ ಎಪಿಟಮೈಸ್ ಮಾಡಿದ್ದನ್ನೇ ಎಕ್ಷ್ಪ್ಯಾನ್ಡ್ ಮಾಡಿ, ಮೆಗಾ ಸೀರಯಾಲ್ಲಾಗಿಸಿ ಹಿಗ್ಗುತ್ತಾನೆ .

ಆ) ಸೀರಿಯಲ್ಗಳ ‘ತಾಯಿ’ ಲೈಫು. ಆದರೂ ಲೈಫ್ ಅನ್ನೋ ಜೀವನದ್ದು, ಮೂರು ದಿನದ ಬಾಳಾದರೆ, ಸೀರಿಯಲ್ ‘ಸ್ಥಾಯಿ’, ತಲೆ ಮಾರುಗಳಾದರೂ ಮುಗಿಯದು ಕತೆ. ಸಾಸ್ ಭೀ ಕಭೀ ಟೊಮ್ಯಾಟೋ ಥೀ, ಅತ್ತೆಯೂ ಒಮ್ಮೆ ಒತ್ತೆಯಾಳಾಗಿದ್ದವಳೇ(ಸೊಸೆ) ಸೀರಿಯಲ್ಗಳ ಥರಾ?

ಇ) ಜೀವನ ಕಾಟನ್ ಸೀರೆ ತರ. ಬೇಗ ಹರಿದುಹೋಗುತ್ತದೆ. ಸೀರಿಯಲ್ ಪಾಲಿಯೆಸ್ಟರ್ ಸೀರಿ ಹಾಗೆ: ಯೆಸ್ತರ್ , ಪ್ರೆಸೆಂಟ್ , ಮತ್ತು ಪೋಸ್ಟೇರಿಟಿಗೂ ಬಾಳಿಕೆ ಬರುತ್ತದೆ, ಬರೀ ಬಾಳಿಕೆ ಏನು; ದಬ್ಬಾಳಿಕೆ ಅಂದರೂ ಸರಿಯೇ. ಹರಿ ಹರಿ ಅಂದರೂ ಹರಿಯಲ್ಲ. ಸೀರಿಯಲ್ನ ಮುಂದುವರಿಕೆಗಾಗಿಯೇ ಅದರ ಸಮಸ್ಯೆಗಳೂ ಬಗೆ ಹರಿಯಲ್ಲ.

ಈ) ಜೀವನದ ನಿರ್ದೇಶಕ ಬಲು ಜೀನಿಯೇ. ಎಂತಹ (ಗುಣ) ಸಂಪನ್ನರಿಗೂ, ಬದುಕಲು asset ಅನ್ನೇ ಕರುಣಿಸದೆ ಬಳಲಿಸಿದರೂ, ಸೀರಿಯಲ್ ನಿರ್ದೇಶಕ, ಅದೇ ನಮ್ಮ ಸೀನಿ ಬಡವರಿಗೂ ಭವ್ಯವಾದ ಮನೆಯ set , ವಡವೆ ವಸ್ತ್ರಗಳನ್ನು ದಯಪಾಲಿಸುತ್ತಾನೆ.

ಉ) ಜೀವನದಲ್ಲಿ ವಿಧಿ ವಿಪರೀತವಾದರೆ, ಸೀರಿಯಲ್ನಲ್ಲಿ ನಿಧಿ ವಿಪರೀತ! ಅಂತಾರೆ.

ಊ) ಜೀವನ ಚಾಮುಂಡಿ ಎಕ್ಷ್ಪ್ರೆಸ್ : ರುಸ್ತುಂ ಬರ್ತೀನ್ ದಾರಿ ಬಿಡು! ರುಸ್ತುಂ ಬರ್ತೀನ್ ದಾರಿ ಬಿಡು!! ಅಂಥನ್ದ್ರೆ, ಧಾರಾವಾಹಿ ಹಳೆ ಚಿಕ್ಕಬಳ್ಳಾಪುರ ಷಟಲ್: ದಮ್ಮಯ್ಯಾನ್ತಿನ್….ದಾರಿಬಿಡು….., ದಮ್ಮಯ್ಯನ್ತೀನ್…… ದಾರಿಬಿಡು. ಅಂದಹಾಗೆ.

ಋ) ಜೀನಿ ಪಾತ್ರಧಾರಿಗಳ ಬಗ್ಗೆ ಅನುಕಂಪ ಇಟ್ಟಿರ್ತಾನೆ. ಪಾತ್ರಗಳ ನಡುವೆ ಏನೇ ಸಂಘರ್ಷ ಉಂಟಾದರೂ, ಒಂದು ಇಂಟರಿಮ್ ರಿಲೀಫ್ ಇದ್ದೇ ಇರ್ತದೆ. ಅತ್ತೆ ಸೊಸೆ ಮಧ್ಯೆ (ಪ್ರಸಕ್ತ) ಭಿನ್ನ ಮತ ತಲೆದೋರಿದರೆ ಬೇರೆ ಸಂಸಾರ ಹೂಡಿಸ್ತಾನೆ. ಗಂಡ ಹೆಂಡ್ತಿ ನಡುವೆ ಕಂದಕಾ ದೊಡ್ಡದಾದರೆ, ಡೈ-ವರಿಸು ಕೊಡಿಸ್ತಾನೆ. ಸ್ನೇಹಿತರು ಜಗಳವಾಡಿದರೆ ಕೆಲವು ದಿನ ದೂರ ಇರಿಸ್ತಾನೆ. ಒಟ್ಟಾರೆ, ಡಿಸ್ ಮಿಸ್ಸಲ್ಗೆ ಮುಂಚೆ ಶೋಕಾ ಸ್! ನೋ, ಸಸ್ಪೆನ್ಶನ್ನೋ , ಟ್ರಾನ್ಸ್ಪರೋ ಇದ್ದೇ ಇರುತ್ತೆ. ಆದರೆ ಸೀನಿ ಹಾಗಲ್ಲ: ಪಾತ್ರಧಾರಿ ತನಗೆ ಇಷ್ಟವಾಗದಿದ್ದರೆ (ವೈಯುಕ್ತಿಕವಾಗಿಯೂ) ತತ್ಕ್ಷಣವೇ ಅವನ ಪಾತ್ರವನ್ನೇ ನಿರ್ದಾಕ್ಷಿಣ್ಯವಾಗಿ ಸಾಯಿಸುತ, ಎಂಡ್ ಮಾಡಿ, ಹಾಗಂತ ಸತ್ತವನ ಮಗನ ಕೈಲಿ ಹೇಳಿಸಿ ಬಿಡುತ್ತಾನೆ. ಅಂತೆಯೇ ಪಾತ್ರಧಾರಿ ಹೆಚ್ಚು ಡಿಮ್ಯಾಂಡ್ ಮಾಡಿದರೆ, ಅವಿಧೇಯನಾಗಿ ನಡೆದುಕೊಂಡರೂ ಅಷ್ಟೇ: ಏಕದಂ ಡಿಸ್ ಮಿಸ್! ನೋ ನೋ ಟೀಸ್, ವಿಚಾರಣೆ, ಕಟಕಟೆ ಏನೂ ಇಲ್ಲಾ; ಜಸ್ಟ್ ಕಟ್ ಕಟ್ ಅಷ್ಟೇ!

ಇಷ್ಟೆಲ್ಲಾ ಧರ್ಮೋತ್ತರ ಕೊಟ್ಟರೂ, ಉತ್ತರಿಸಬೇಕಾದ ಪ್ರಶ್ನೆ ‘ ಜೀನಿಯಸ್ ಯಾರು, ಜೀನಿಯೋ, ಸೀನಿಯೋ? ಅದನ್ನು ಓದುಗರಿಗೆ ಬಿಡಲಾಗಿದೆ.

ಇಂಗ್ಲಿಷ್ ಅನ್ನೋ ಮ್ಯಾಜಿಕ್ ವ್ಯಾಂಡ್!

ಕೇವಲ ಇಪ್ಪತ್ತಾರು ಅಕ್ಷರಗಳ ವರ್ಣಮಾಲೆಯಾದರೂ, ವಿನೂತನವಾದ ಅಕ್ಷರ ಪಲ್ಲಟದಿಂದ ( ಅನಾಗ್ರ್ಯಾಂ) ಭಾರಿ ಗತ್ತಲ್ಲೇ ಜಗತ್ತನ್ನು ಸುತ್ತುವ ಇಂಗ್ಲಿಷ್ ಭಾಷೆಯನ್ನು ಯಾರೂ stop ಮಾಡಲಾರರು. ಉದಾಹರಣೆಗೆ stop ಪದವನ್ನೇ ನೋಡಿ, spot ನಲ್ಲೆ

pots ತುಂಬಿ ಆರು ರೂಪಗಳಲ್ಲಿ ಹೊಮ್ಮುತ್ತಾ, ಆಡುವವರನ್ನು sop ಅಪ್ ಮಾಡಿ ಬಿಡುತ್ತದೆ. ಈ ಮ್ಯಾಜಿಕ್ ಗುಣದಿಂದಾಗಿಯೇ ವಿಶ್ವದ ‘ ಭಾಷ್ಯಾಕಾಶ’ ದಲ್ಲಿ ಇಂಗ್ಲಿಷ್

tops ಆಲ್ posts.

ಮನುಜರಿಗೆ ದೊರಕುತ್ತವೆ, ಒಂದು: ವಿರಸವನ್ನು ಎಸೆದು ಹಗುರಾಗುವ ‘ಮರೆವು’ಎಂಬ ಕಸದ ಬುಟ್ಟಿ. ಅದು ಸ್ವಲ್ಪ ತುಟ್ಟಿ.

ಇನ್ನೊಂದು: ಅಮೂಲ್ಯ ಅನುಭವವ ತುಂಬಿಡುವ ‘ಸವಿನೆನಪು’ ಎಂಬ ರಸದ ಬುಟ್ಟಿ ; ಇದು ಬಿಟ್ಟಿ!

 

end ಗುಟುಗು

ಸಿ.ಎಂ. ಸದಾನಂದ ಗೌಡರು ಪ್ರಮಾಣವಚನ ತಗೊಳೋ ಸಂದರ್ಭದಲ್ಲಿ, ಅನಂತ ಕುಮಾರ್ ಎದುರಾದಾಗ, ಎಂದಿನ ತಮ್ಮ ಅನಂತ ನಗೆ ಬೀರಿ ಕೈ ಕುಲುಕಿದರು. ಅನಂತರ ಹೋಗಿ, ಯೆಡ್ಯೂರಪ್ಪನವರ ಕಾಲ್ ಮುಟ್ಟಿ ನಮಸ್ಕರಿಸಿದರಲ್ಲಾ?

ಉತ್ತರಾ ಸಿಕ್ಕಿತಲ್ಲ, ಹೂ ವಿಲ್ ಕಾಲ್ ದಿ ಶಾಟ್ ಅಂತಾ, ಹ್ಹಿ ಹ್ಹಿ he?

 

 

‍ಲೇಖಕರು G

14 August, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading