ಇದೇ ತಿಂಗಳ 15, 16 ಮತ್ತು 17, ಗುರುವಾರ, ಶುಕ್ರವಾರ ಮತ್ತು ಶನಿವಾರ ಸಂಜೆ 7 ಗಂಟೆಗೆ ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ರಂಗವಲ್ಲಿ ಪ್ರಸ್ತುತ ಪಡಿಸಲಿರುವ ಡಾ ಚಂದ್ರಶೇಖರ ಕಂಬಾರರ ಕಾದಂಬರಿ ಆಧಾರಿತ ಜೀಕೆ ಮಾಸ್ತರರ ಪ್ರಣಯ ಪ್ರಸಂಗ ನಾಟಕದ ಪ್ರದರ್ಶನ ಏರ್ಪಡಿಸಲಾಗಿದೆ.
ಖ್ಯಾತ ರಂಗ ನಿರ್ದೇಶಕ ಜೀವನ್ಕುಮಾರ್ ಬಿ. ಹೆಗ್ಗೋಡು ಈ ನಾಟಕಕ್ಕೆ ವಿನ್ಯಾಸ ಮತ್ತು ನಿರ್ದೇಶನವನ್ನು ಮಾಡಿರುತ್ತಾರೆ.

ಜೀಕೆ ಮಾಸ್ತರರ ಪ್ರಣಯ ಪ್ರಸಂಗ ಕಾದಂಬರಿ ಕುರಿತು
ಕಟ್ಟುನಿಟ್ಟು-ಶಿಸ್ತು ಸಂಯಮಗಳಿಗೆ ಹೆಸರಾಗಿದ್ದ ಗುಂಜಾಳ ಕರಿಬಸವಯ್ಯ ಮಾಸ್ತರರನ್ನು ಆ ತಾಲೂಕಿನಲ್ಲಿ ಎಲ್ಲರೂ ಜೀಕೆ ಮಾಸ್ತರರೆಂದೇ ಕರೆಯುತ್ತಿದ್ದರು. ಕಾಲೇಜು ಹುಡುಗರು ತಂತಮ್ಮಲ್ಲಿ ಮಾತಾಡಿಕೊಳ್ಳುವಾಗ ಅವರನ್ನು ‘ಕಟ್ಟುನಿಟ್ಟೆಂದೇ’ ಕರೆಯುತ್ತಿದ್ದರು. ಅವರಿದ್ದ ಊರಿನಲ್ಲಿ ಅವರಷ್ಟು ಗೌರವಾರ್ಹ ವ್ಯಕ್ತಿ ಸಿಕ್ಕುವುದು ಕಷ್ಟ.
ಜೀಕೆ ಮಾಸ್ತರ ಮತ್ತು ಅವರ ಶ್ರೀಮತಿ ಗಿರಿಜಮ್ಮ ಇಬ್ಬರೂ ಶಿವಭಕ್ತರು. ಜೀಕೆ ವ್ರತಾಚರಣೆ ಹೇಗೆಂದರೆ ದೇವರೂ ಕೂಡ ಹೆದರಿ ಉಸಿರು ಬಿಗಿ ಹಿಡಿದು ವ್ರತ ಮುಗಿಯುವ ತನಕ ಹೇಳಿದಲ್ಲಿ ಬಿದ್ದಿರಬೇಕಿತ್ತು. ವ್ರತಾಚರಣೆ ನಿಷ್ಟೆಯಿಂದ ಹೊಟ್ಟೆ ನೋವಿನಿಂದ ಒದ್ದಾಡುತ್ತಿದ್ದ ಮಗನನ್ನು ಮೈಲಿಗೆಯಾಗುತ್ತದೆ ಎಂದು ಮುಟ್ಟದೆ ಬೇಗನೆ ಆಸ್ಪತ್ರೆಗೆ ಸೇರಿಸದೆ ಕಳೆದುಕೊಂಡವರು.
ವೃತ್ತಿಯ ಅಂಚಿಗೆ ಬಂದಿದ್ದ ಜೀಕೆಯವರಿಗೆ ಅವರ ವಿದ್ಯಾರ್ಥಿನಿ ರೋಜಾಳ ಕಪಟ ಪ್ರೇಮ ಹುಚ್ಚು ಹಿಡಿಸುತ್ತದೆ. ಸುಪ್ತ ಬಯಕೆಯೊಂದು ದೆವ್ವದಂತೆ ಬೆಳೆದು ಅವರ ಅರಿವಿಗೆ ಬಾರದಂತೆ ಅವರನ್ನು ಆಕ್ರಮಿಸುತ್ತದೆ. ರೋಜಾ ‘ಸರ್ ಐ ಲವ್ ಯೂ’ ಎಂದು ಪಿಸುಗುಟ್ಟಿದಾಗ ತನ್ನ ಹೃದಯದ ಗುಟ್ಟನ್ನು ಪ್ರಥಮ ಬಾರಿಗೆ ಕಂಡು ಭೀತರಾಗುತ್ತಾರೆ. ಈ ಅಸಹಜ ಪ್ರೇಮದ ಅಮಲು ಮೈಮನಗಳಲ್ಲಿ ತೀವ್ರವಾಗಿ ವ್ಯಾಪಿಸಿ ಅವರ ವ್ಯಕ್ತಿತ್ವವನ್ನು ಕುಬ್ಜಗೊಳಿಸುತ್ತದೆ. ಮನಸ್ಸಿನ ದೌರ್ಬಲ್ಯ ಯಾವ ಮಟ್ಟಕ್ಕೆ ಇಳಿಯಬಹುದೆಂಬುದು ಊಹಾತೀತ. ಈ ಅಮಲಿನಲ್ಲಿ ತನ್ನ ಹೆಂಡತಿಯನ್ನೂ ಕಳೆದುಕೊಳ್ಳುತ್ತಾರೆ. ಅನಂತರ ತಮ್ಮ ಘನ ವ್ಯಕ್ತಿತ್ವಕ್ಕೆ ತಕ್ಕಂತೆ ತಮ್ಮ ತಪ್ಪನ್ನು ಅರಿತುಕೊಂಡು ಪಶ್ಚಾತ್ತಾಪ ಪಡುತ್ತಾರೆ. ಅವರ ಸ್ವಭಾವದ ಮೂಲ ಸೆಲೆಗಳಾಗಿದ್ದ ವಾತ್ಸಲ್ಯ, ಅಂತಃಕರಣ ಉದಾರತೆ ಪುನಃ ವಿಜೃಂಭಿಸುತ್ತವೆ.
ಬೆಳಕು, ರಂಗವಿನ್ಯಾಸ ಮತ್ತು ನಿರ್ದೇಶನ : ಜೀವನ್ಕುಮಾರ್ ಬಿ. ಹೆಗ್ಗೋಡು
ಸಹಾಯ: ಮಹೇಶ್ವರ,
ಸಹ ನಿರ್ದೇಶನ: ರಾಘವೇಂದ್ರ ಬೂದನೂರು, ಮಧು
ಹಿನ್ನೆಲೆ ಸಂಗೀತ: ಜೀವನ್ಕುಮಾರ್ ಬಿ. ಹೆಗ್ಗೋಡು, ಉದಿತ, ಅನನ್ಯ ಭಟ್
ಸಂಗೀತ ನಿರ್ವಹಣೆ: ಕಾರ್ತಿಕ್ ಬೆನಕ
ವಸ್ತ್ರವಿನ್ಯಾಸ: ಶಾಲ್ಮಲಿ
ರಂಗ ನಿರ್ವಹಣೆ: ರಾಘವೇಂದ್ರ ಬೂದನೂರು, ಸಹಾಯ: ಮುರಳಿ ಗುಂಡಣ್ಣ,
ನಿರ್ಮಾಣ ನಿರ್ವಹಣೆ: ಬಿ.ರಾಜೇಶ್
ಬೆಳಕು: ಜೀವನ್ಕುಮಾರ್ ಬಿ. ಹೆಗ್ಗೋಡು, ಸಹಾಯ: ವಿನಯ್
ಪ್ರಸಾಧನ: ನವೀನ್ ನೇತಾಜಿ ಮತ್ತು ರೂಪ
ರಂಗದ ಮೇಲೆ:
ಜಿ.ಕೆ ಮಾಸ್ತರ್: ರಾಘವೇಂದ್ರ ಬೂದನೂರು
ರೋಜ: ರಶ್ಮಿ ನಾರಾಯಣ್
ಗಿರಪ್ಪ: ಮುರಳಿ ಗುಂಡಣ್ಣ
ನಿರೂಪಕ: ಜಗದೀಶ್
ಚೇರ್ಮನ್: ಶಿವಮೂರ್ತಿ/ ಶಮಿತ್
ಅಧ್ಯಕ್ಷೆ: ಪ್ರಿಯಾಂಕ
ವೀರಬದ್ರ: ಅಭಿರಾಮ್
ಒಗ್ಗರಣಿ: ಪ್ರತಾಪ್
ಉಳ್ಳಾಗಡ್ಡಿ: ಸೂರಜ್
ಶಾಸ್ತ್ರಿ: ದೇವನಾಗ್
ಸಿಂಗಪ್ಪ: ಮಂಜು
ವಿದ್ಯಾರ್ಥಿನಿ 1: ಶಾಲಿನಿ/ ರಮ್ಯ
ವಿದ್ಯಾರ್ಥಿನಿ 2: ನಂದಿನಿ
ಟಿಕೆಟ್ ಬುಕ್ ಮಾಡಲು ಸಂಪರ್ಕಿಸಿ: 9916212451/ 8105367710/ 9886711381
ನಾಟಕ ರಿಹರ್ಸಲ್ ನ ಕೆಲವು ದೃಶ್ಯಗಳು :



ಜೀಕೆ ಮಾಸ್ತರರ ಪ್ರಣಯ ಪ್ರಸಂಗ…
ನಿಮಗೆ ಇವೂ ಇಷ್ಟವಾಗಬಹುದು…




0 Comments