
ಮಾದಪ್ಪ ಮಹದೇವಪ್ಪ
ಕಳೆದ ಭಾನುವಾರ The Hindu ನಲ್ಲಿ ಜಿ. ಹೆಚ್. ನಾಯಕರ ಆತ್ಮಕಥೆಯ ಬಗೆಗೆ ಲೇಖನ ಪ್ರಕಟವಾಗಿದೆ. ನಾಯಕರ ಬಗೆಗೆ ನಾನು ಮೊದಲು ಓದಿದ್ದು 2000ನೇ ಇಸವಿಯಲ್ಲಿ ನಂಜನಗೂಡಿನಲ್ಲಿ ಬಿ. ಎ.ದಲ್ಲಿ ಕನ್ನಡ ಸಾಹಿತ್ಯದ ವಿದ್ಯಾರ್ಥಿಯಾಗಿದ್ದಾಗ.
ಗುರುಗಳಾದ ಪ್ರೊ. ಸರಸ್ವತಿ ಯವರು ಜಿ. ಹೆಚ್.ನಾಯಕರ ವಿಮರ್ಶೆಯ ಬಗೆಗೆ ಹೇಳುತ್ತಾ, ಅವರ ಅಧ್ಯಯನ ಶಿಸ್ತಿನ ಬಗೆಗೆ ವಿವರಿಸಿದ್ದರು.
ಬೆಳಿಗ್ಗೆ 10 ಗಂಟೆಗೆ ಓದಲು ಆರಂಭಿಸಿ, ರಾತ್ರಿ 2 ರವರೆಗೂ ಸದಾ ಓದುತ್ತಲೇ ಇರುವುದು, ಅವರ ಮನೆಗೆ ಬಂದು ಅವರ ಮಗ ಪೃಥ್ವಿದತ್ತ ಚಂದ್ರಶೋಭಿಯವರ ಜತೆ ಸಾಹಿತ್ಯದ ಬಗೆಗೆ ಚರ್ಚೆ ನಡೆಸುತ್ತಿದ್ದುದು.. ಹೀಗೆ ಅವರ ವಿವರಗಳಿಂದ ಆಕರ್ಷಿತನಾಗಿ ಜಿ. ಹೆಚ್. ನಾಯಕರ ವಿಮರ್ಶೆ ಕೃತಿಗಳನ್ನು ಸಾಧ್ಯಂತವಾಗಿ ಓದಿದ್ದೆ.
ಎರಡನೇ ವರ್ಷದ ಬಿ.ಎ. ನಲ್ಲಿ ಗುರುಗಳಾದ ಮಲೆಯೂರು ಗುರುಸ್ವಾಮಿಯವರು ಜಿ.ಹೆಚ್. ನಾಯಕರನ್ನೇ ಕರೆತಂದು ನಮಗೆ ವಿಶೇಷ ಉಪನ್ಯಾಸ ಮಾಡಿಸಿದರು. ಅವರ ಜತೆ ಕೆಲಕಾಲ ಆತ್ಮೀಯವಾಗಿ ಮಾತನಾಡುವ ಅವಕಾಶ ದೊರೆತದ್ದು ನನ್ನ ವಿದ್ಯಾರ್ಥಿ ಜೀವನದ ಸಾರ್ಥಕ ಗಳಿಗೆಗಳಲ್ಲಿ ಒಂದು.
ಮಾನಸಗಂಗೋತ್ರಿಯಲ್ಲಿ ನಾನು ಕನ್ನಡ ಸಾಹಿತ್ಯದಿಂದ ಇಂಗ್ಲಿಷ್ ಸಾಹಿತ್ಯಕ್ಕೆ ಹೊರಳಿ ದಿನವೊಂದಕ್ಕೆ 10 ಗಂಟೆಗಳ ಕಾಲ ಮೂರು ವರ್ಷಗಳವರೆಗೆ ಓದಲು ತೊಡಗಲು ನಾಯಕರ ಓದಿನ ಬಗೆಗೆ ನನಗಿದ್ದ ಗೌರವವೇ ಕಾರಣ ಎಂದು ಬೇರೆ ಹೇಳಬೇಕಾಗಿಲ್ಲ.
ಇದೀಗ ಅವರ ಆತ್ಮಕಥೆಯನ್ನು ನನ್ನ ಗ್ರಂಥಾಲಯಕ್ಕೆ ಸೇರಿಸಿದ್ದೇನೆ. ಆದಷ್ಟು ಬೇಗ ಓದಲು ಮನಸ್ಸು ಹಾತೊರೆಯುತ್ತಿದೆ.
ಜಿ ಎಚ್ ನಾಯಕ್ ಚಿತ್ರ : ಆಯಾಮ




ನನ್ನ ಗುರುಗಳು. (ಗಂಗೋತ್ರಿ ಯಲ್ಲಿ ನಾನು ಅವರ ಶಿಷ್ಯೆ) ಅವರ ಬಗ್ಗೆ ಎಷ್ಟು ಹೇಳಿದರು ಕಡಿಮೆ. ಆಗುರುಗಳಿಗೆ ಈ ಮೂಲಕ ನನ್ನ ಗೌರವ ಪೂರ್ವಕ ನಮನಗಳು. ಅವರ ಪುಸ್ತಕ ಓದಲು ನಾನು ಕಾತುರವಾಗಿದ್ದೇನೆ.