ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಎನ್ ಅಶೋಕವರ್ಧನ 'ಮೆಲುಕಿದ್ದು'

ನೀವು ಕಳೆದ ವರ್ಷ ಓದಿದ ಹತ್ತು ಬೆಸ್ಟ್ ಪುಸ್ತಕಗಳು ಯಾವುದು? ಎನ್ನುವ ಪ್ರಶ್ನೆಯನ್ನು ಅವಧಿ ಹಲವರ ಮುಂದಿಟ್ಟಿತು.
ಗಮನಿಸಿ: ಇದು ಕಳೆದ ವರ್ಷ ಪ್ರಕಟವಾದ ಪುಸ್ತಕಗಳ ಟಾಪ್ ೧೦ ಪಟ್ಟಿಯಲ್ಲ. ಬದಲಿಗೆ ನಮ್ಮ ಸಾಹಿತಿಗಳು, ಚಿಂತಕರು, ಓದುಗರು ಕಳೆದ ವರ್ಷ ಓದಿರುವ ಪುಸ್ತಕಗಳಲ್ಲಿನ ಟಾಪ್ ೧೦ ಅಷ್ಟೇ. ಆ ಪುಸ್ತಕಗಳು ಯಾವ ವರ್ಷ ಬೇಕಾದರೂ ಪ್ರಕಟವಾಗಿರಬಹುದು.
ಹಾಗೆ ನಮ್ಮ ಪ್ರಶ್ನೆಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಟ್ಟಿ ನೀಡಿದ ಎಲ್ಲರೂ ಓದಿದ ಪುಸ್ತಕಗಳನ್ನು ನೋಡಿ ನಾವೂ ಬೆರಗಾಗಿದ್ದೇವೆ. ‘ಕುಮಾರವ್ಯಾಸ ಭಾರತ’ದಿಂದ ಆರಂಭಿಸಿ ದೇವನೂರರ ‘ಎದೆಗೆ ಬಿದ್ದ ಅಕ್ಷರ’ದವರೆಗೆ ಎಷ್ಟೋ ಕೃತಿಗಳು ಹರಡಿಕೊಂಡಿವೆ
ಈಗಾಗಲೇ ಓದಿದ್ದ ಕೃತಿಯನ್ನೇ ಮತ್ತೆ ಮತ್ತೆ ಓದುವಂತೆ ಮಾಡುವ ಶಕ್ತಿ ಯಾವುದು? ಅತ್ಯಂತ ಹಳೆಯ ಕೃತಿಗಳು ಇನ್ನೂ ನಮ್ಮನ್ನು ಕಾಡುತ್ತಿರುವುದೇಕೆ? ಎನ್ನುವ ಪ್ರಶ್ನೆಯನ್ನೂ ಈ ಪಟ್ಟಿ ಹುಟ್ಟು ಹಾಕುತ್ತದೆ. ನಮ್ಮ ಸಾಹಿತಿಗಳ ಓದಿನ ರೀತಿಯ ಬಗ್ಗೆಯೂ ಈ ಪಟ್ಟಿ ಒಂದು ಕಣ್ಣೋಟ ನೀಡುತ್ತದೆ.
ಕನ್ನಡ ಕೃತಿಗಳನ್ನು ಓದುತ್ತಿದ್ದವರು ಇದ್ದಕ್ಕಿದ್ದಂತೆ ವ್ರತ ಹಿಡಿದವರಂತೆ ಒಂದು ವರ್ಷ ಬರೀ ಇಂಗ್ಲಿಷ್ ಕೃತಿಗಳಿಗೆ ಹೊರಳಿಕೊಂಡುಬಿಡುತ್ತಾರೆ?. ಯಾಕೆ ಎಂದು ಕೇಳಿದರೆ ನಂಗೂ ಗೊತ್ತಿಲ್ಲ ಎನ್ನುವ ಉತ್ತರ. ಈಗ ಪುಸ್ತಕಗಳಂತೂ ಪುಂಖಾನುಪುಂಖವಾಗಿ ಹೊರಬರುತ್ತಿದೆ. ಹಾಗಿರುವಾಗ ಆ ರಾಶಿಯಲ್ಲಿ ಓದುಗರು ಹೆಕ್ಕಿಕೊಳ್ಳುವ ಕೃತಿಗಳು ಯಾವುದು ಎನ್ನುವುದೂ ಸಹಾ ಕುತೂಹಲಕರ ಸಂಗತಿ. ಅದಿರಲಿ ಇಂತಹ ಪುಸ್ತಕ ಮಾರುಕಟ್ಟೆಗೆ ಬಂದಿದೆ ಎಂದು ಗೊತ್ತಾಗುವ ಬಗೆ ಯಾವುದು?
ಓದಿದ ಎಷ್ಟೋ ಪುಸ್ತಕಗಳಲ್ಲಿ ಒಂದಿಷ್ಟು ಪುಸ್ತಕವೇ ಏಕೆ ಕಾಡುತ್ತದೆ ಎನ್ನುವ ಪ್ರಶ್ನೆಗಳನ್ನೂ ಈ ಪಟ್ಟಿ ಎತ್ತುತ್ತದೆ. ನೀವು ಓದಿದ ಟಾಪ್ ಟೆನ್ ಕೃತಿಯ ಪಟ್ಟಿ ಕೊಡಿ ಎಂದು ಕೇಳುವಾಗ ನಮ್ಮ ಗಮನವಿದ್ದದ್ದು ಓದಿನ ಹಸಿವಿರುವ ಅನೇಕಾನೇಕ ಮಂದಿಗೆ ಯಾವ ಪುಸ್ತಕ ಓದಬೇಕು ಎನ್ನುವ ಸೂಚನೆಯನ್ನು ಈ ಪಟ್ಟಿ ನೀಡಲಿ ಎಂದು. ಜೊತೆಗೆ ತಮ್ಮ ನೆಚ್ಚಿನ ಲೇಖಕರು ಏನು ಓದುತ್ತಿದ್ದಾರೆ ಎಂದು ತಿಳಿಯುವ ಕುತೂಹಲವನ್ನೂ ಇದು ತಣಿಸುತ್ತದೆ ಎಂದು.

ಇಲ್ಲಿದೆ ಜಿ ಎನ್ ಅಶೋಕ ವರ್ಧನ ಟಾಪ್ ‘ಮೆಲುಕಿದ್ದು’


ಅತ್ರಿ ಮುಚ್ಚಿದ ಮೇಲೆ ನನಗಿನ್ನೂ ‘ಮೆಲುಕಾಡಿಸಿಯೇ’ ಮುಗಿದಿಲ್ಲ. ಹಾಗಾಗಿ ತಿಂದದ್ದು ಕಡಿಮೆ ಎಂದು ಹೇಳಲು ನಾಚಿಕೆಯಾಗುತ್ತದೆ.
ಆದರೂ ಎಂದೋ ಅರೆಬರೆ ಓದಿದ – ಮಂದ್ರವನ್ನು ಪೂರ್ಣ ಓದಿದೆ.
ಹಾಗೇ
ಪೈಗಳ ಸ್ವಪ್ನ ಸಾರಸ್ವತ,

ರೇವತಿಯ ಆತ್ಮಕಥನ (ಹೆಸರು ಮರೆತೆ),
ಪ್ರಜ್ಞಾ ಚೌಟರ ಗಜಸಂಹಿತೆ,
ಗುರುರಾಜ ಸನಿಲರ ದೇವರ ಹಾವು

Birds of Southern Coastal Karnataka – ನೆನಪಿಗೆ ಬರುವ ಪೂರ್ಣ ಓದು.
ನಾಗವೇಣಿಯವರ ‘ಗಾಂಧೀ ಬಂದ’ದಲ್ಲಿ ಕುಂಟುತ್ತಿದ್ದೇನೆ.

ನನ್ನ ತಂದೆಯವರ ಪುಸ್ತಕಗಳನ್ನು ಜಾಲಕ್ಕೇರಿಸುವ ಸಿದ್ಧತೆಯಲ್ಲಿ ಭವಿಷ್ಯ ವಿಜ್ಞಾನವನ್ನು, ಅವರ ಆತ್ಮ ಕಥೆ – ಮುಗಿಯದ ಪಯಣವನ್ನು ಅವರು ಅಪೊಲೋ ೧೩ ಚಂದ್ರನಲ್ಲಿಳಿದಗ ಬರೆದ ಕಥನವನ್ನೂ ಅಕ್ಷರಷ ವಿವರಗಳಲ್ಲಿ ಓದಿದ್ದೇನೆ ತಂದ್ಯವರ ಶ್ರುತಗಾನ ಇನ್ನೇನು ಲೋಕಾರ್ಪಣಗೊಳ್ಳಲಿದೆ (ವಸಂತ ಪ್ರಕಾಶನ) – ಅದನ್ನೂ ಓದಿದ್ದಕ್ಕೆ ಪುಸ್ತಕದ ಶುದ್ಧ ಪ್ರತಿಯೇ ಸಾಕ್ಷಿ ಹೇಳುತ್ತದೆ:-)
ಇಂತು ವಿಶ್ವಾಸಿ
ಅಶೋಕವರ್ಧನ
 
 

‍ಲೇಖಕರು G

25 January, 2013

1 Comment

  1. ಎಚ್. ಸುಂದರ ರಾವ್

    ಓಹೋ ನೀವೂ ಕುಂಟುತ್ತಿದ್ದೀರೋ? ನಾನೂ ಕುಂಟಿ, ಕಾಲೆಳೆದು, ಏನೆಲ್ಲ ಮಾಡಿ ಕಡೆಗೂ ಅರ್ಧ ದಾರಿಗೆ ಪಯಣ ನಿಲ್ಲಿಸಿಬಿಟ್ಟೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading