ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಾತಿ, ಒಳಜಾತಿಗಳ ಹೆಸರಿನಲ್ಲಿ ಸಂಘಗಳನ್ನು ಕಟ್ಟಿ…

ಒಳಜಾತಿ ಪ್ರೇಮ

ಎಚ್ ಕೆ ಶರತ್

ಇದು ನನ್ನ ಸ್ನೇಹಿತನ ಜೀವನದಲ್ಲಿ ಜರುಗುತ್ತಿರುವ ನೈಜ ವಿದ್ಯಮಾನ. ಅವನು ನಾಲ್ಕು ವರ್ಷದಿಂದ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಅವಳೂ ಅವನನ್ನು ಪ್ರೀತಿಸುತ್ತಿದ್ದಳು. ಇಬ್ಬರೂ ಮನೆಯವರಿಗೆ ತಿಳಿಯದಂತೆ ಕದ್ದು ಮುಚ್ಚಿ ಪ್ರೀತಿ ಮಾಡುತ್ತಿದ್ದರು. ಈಗ ವಿಷಯ ಅವರಿಬ್ಬರ ಮನೆಯವರಿಗೆ ತಿಳಿದಿದೆ.
ಸ್ನೇಹಿತನ ಮನೆಯವರು ಅವರಿಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಾಗೆ ಅವರು ವಿರೋಧಿಸಲು ನೀಡುತ್ತಿರುವ ಏಕೈಕ ಕಾರಣ ಜಾತಿ. ವಿಶೇಷವೆಂದರೆ ಹುಡುಗ ಹಾಗು ಹುಡುಗಿ ಇಬ್ಬರೂ ಒಕ್ಕಲಿಗರೇ. ಆದರೆ ಇಲ್ಲಿ ಅಡ್ಡ ಬಂದಿರುವುದು ಒಕ್ಕಲಿಗ ಜಾತಿಯೊಳಗಿರುವ ಒಳ ಜಾತಿಗಳಾದ ‘ಡಿ’ ಮತ್ತು ‘ಎಂ’. ಒಬ್ಬರು ‘ಡಿ’ ಮತ್ತೊಬ್ಬರು ‘ಎಂ’ ಆದ ಕಾರಣ ಹುಡುಗನ ಮನೆಯವರು ಅವರ ಪ್ರೀತಿಯನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಆ ಹುಡುಗಿ ಬಿಟ್ಟು ನೀನು ನಮ್ಮದೇ ಒಳಜಾತಿಯ ಯಾರನ್ನೇ ಮದುವೆಯಾಗುವುದಾದರೂ ನಮ್ಮದೇನೂ ಅಭ್ಯಂತರವಿಲ್ಲವೆಂದು ವಾದಿಸುತ್ತಿದ್ದಾರೆ.

ಮೊದಲು ಹುಡುಗಾಟಕ್ಕೆ ಆ ಹುಡುಗಿಗೆ ಪ್ರಪೋಸ್ ಮಾಡಿದ ಸ್ನೇಹಿತ ಆಮೇಲೆ ಬರಬರುತ್ತಾ ಅವಳನ್ನು ಗಾಢವಾಗಿ ಪ್ರೀತಿಸಲಾರಂಭಿಸಿದ್ದಾನೆ. ಅವಳೂ ಅಷ್ಟೇ. ಅವನನ್ನು ತುಂಬಾ ಅಚ್ಚಿಕೊಂಡಿದ್ದಾಳೆ. ನೀನಲ್ಲದೆ ಮತ್ಯಾರನ್ನೂ ನಾನು ಮದುವೆಯಾಗುವುದಿಲ್ಲ ಅಂತ ಹಠ ಹಿಡಿದಿದ್ದಾಳೆ. ಹುಡುಗಿಯ ಮನೆಯವರು ಹುಡುಗನನ್ನು ಒಪ್ಪಿಕೊಂಡಿದ್ದಾರೆ. ಆದರೆ ಹುಡುಗನ ಮನೆಯವರು ಒಳಜಾತಿ ಬೇರೆ ಬೇರೆ ಎಂಬ ಕಾರಣಕ್ಕೆ ವಿರೋಧಿಸುತ್ತಿದ್ದಾರೆ.
ಇಷ್ಟು ದಿನ ಹಾಯಾಗಿ ಸುತ್ತಾಡಿಕೊಂಡಿದ್ದ ಈ ಪ್ರೇಮಿಗಳಿಗೆ ಈಗ ಪೀಕಲಾಟ ಶುರುವಾಗಿದೆ. ಇತ್ತ ಮನೆಯವರನ್ನೂ ಬಿಡಲಾಗದ ಅತ್ತ ಪ್ರೀತಿಸಿದವಳನ್ನೂ ದೂರ ಮಾಡಲಾಗದ ಸಂದಿಗ್ಧ ಪರಿಸ್ಥಿತಿಯಲ್ಲಿ ನನ್ನ ಸ್ನೇಹಿತನಿದ್ದಾನೆ.
ಇದು ಕೇವಲ ಒಂದು ನಿದರ್ಶನವಷ್ಟೇ. ಜಾತಿಯ ಕಾರಣಕ್ಕಾಗಿ ಕುಸಿಯುತ್ತಿರುವ ಪ್ರೇಮಸೌಧಗಳಿಗೆ ಲೆಕ್ಕವೇ ಇಲ್ಲ. ತಮ್ಮ ಬೇಳೆ ಬೇಯಿಸಿಕೊಳ್ಳಲು ಒಳಜಾತಿಯ ವಿಷ ಬೀಜ ಬಿತ್ತುವ ರಾಜಕಾರಣಿಗಳಿಗೆ ಇದೆಲ್ಲ ಎಲ್ಲಿ ಅರ್ಥವಾಗುತ್ತೆ ಹೇಳಿ? ಅರ್ಥವಾದರೂ ತಮ್ಮ ಸ್ವಾರ್ಥ ಸಾಧನೆಗೆ ಪೂರಕವಾಗುವ ಒಳಜಾತಿ ರಾಜಕೀಯ ಬದಿಗಿರಿಸುವರೇ? ಜಾತಿ, ಒಳಜಾತಿಗಳ ಹೆಸರಿನಲ್ಲಿ ಸಂಘಗಳನ್ನು ಕಟ್ಟಿ ಬೆಳೆಸುವ ಘನಂದಾರಿ ಕೆಲಸಕ್ಕೆ ಚಾಲನೆ ನೀಡುತ್ತಿರುವ ಮಹಾನುಭಾವರಿಗೆ ಏನು ಹೇಳೋದು?

‍ಲೇಖಕರು G

22 May, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading