ಜಯಶ್ರೀ ಬಿ ಕದ್ರಿ
ನಾನೊಂದು ಮಿಂಚು ಹುಳ
ಮಿಂಚು ಹುಳ ಬೆಳಕಲ್ಲ
ಬೆಳಕಿನಾಸರೆಯು
ಮಿಂಚು ಹುಳಕಿಲ್ಲ
ಕತ್ತಲಲಿ ರೇಖೆಗಳು
ಮಿಂಚಿ ಹೊಳೆಯುವ ಹಾಗೆ
ದೂರ ತೀರದ ಬೆಳಕ
ನಾವೆ ಅರಸುವ ಹಾಗೆ
ಮಿಂಚು ಹುಳಕೂ ಬೇಕು
ಬೆಳಕ ಚೆಲುವು
ಬೆಳಕ ಚೆಲ್ಲುವ ಹಗಲು
ಕೊಡುವ ನಲಿವು
ನಾನೊಂದು ಮಿಂಚು ಹುಳ
ಮಿಂಚು ಹುಳ ಉರಿಯಲ್ಲ
ಚಣ ಕಾಲ ಚೆಲ್ಲುವೆನು
ಬೆಳಕ ಕಿಡಿಯ
0 ಪ್ರತಿಕ್ರಿಯೆಗಳು