ಜಯಶ್ರೀ ಕಾಸರವಳ್ಳಿ ಟಾಪ್ 8+

ನೀವು ಕಳೆದ ವರ್ಷ ಓದಿದ ಹತ್ತು ಬೆಸ್ಟ್ ಪುಸ್ತಕಗಳು ಯಾವುದು? ಎನ್ನುವ ಪ್ರಶ್ನೆಯನ್ನು ಅವಧಿ ಹಲವರ ಮುಂದಿಟ್ಟಿತು.
ಗಮನಿಸಿ: ಇದು ಕಳೆದ ವರ್ಷ ಪ್ರಕಟವಾದ ಪುಸ್ತಕಗಳ ಟಾಪ್ ೧೦ ಪಟ್ಟಿಯಲ್ಲ. ಬದಲಿಗೆ ನಮ್ಮ ಸಾಹಿತಿಗಳು, ಚಿಂತಕರು, ಓದುಗರು ಕಳೆದ ವರ್ಷ ಓದಿರುವ ಪುಸ್ತಕಗಳಲ್ಲಿನ ಟಾಪ್ ೧೦ ಅಷ್ಟೇ. ಆ ಪುಸ್ತಕಗಳು ಯಾವ ವರ್ಷ ಬೇಕಾದರೂ ಪ್ರಕಟವಾಗಿರಬಹುದು.
ಹಾಗೆ ನಮ್ಮ ಪ್ರಶ್ನೆಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಟ್ಟಿ ನೀಡಿದ ಎಲ್ಲರೂ ಓದಿದ ಪುಸ್ತಕಗಳನ್ನು ನೋಡಿ ನಾವೂ ಬೆರಗಾಗಿದ್ದೇವೆ. ‘ಕುಮಾರವ್ಯಾಸ ಭಾರತ’ದಿಂದ ಆರಂಭಿಸಿ ದೇವನೂರರ ‘ಎದೆಗೆ ಬಿದ್ದ ಅಕ್ಷರ’ದವರೆಗೆ ಎಷ್ಟೋ ಕೃತಿಗಳು ಹರಡಿಕೊಂಡಿವೆ
ಈಗಾಗಲೇ ಓದಿದ್ದ ಕೃತಿಯನ್ನೇ ಮತ್ತೆ ಮತ್ತೆ ಓದುವಂತೆ ಮಾಡುವ ಶಕ್ತಿ ಯಾವುದು? ಅತ್ಯಂತ ಹಳೆಯ ಕೃತಿಗಳು ಇನ್ನೂ ನಮ್ಮನ್ನು ಕಾಡುತ್ತಿರುವುದೇಕೆ? ಎನ್ನುವ ಪ್ರಶ್ನೆಯನ್ನೂ ಈ ಪಟ್ಟಿ ಹುಟ್ಟು ಹಾಕುತ್ತದೆ. ನಮ್ಮ ಸಾಹಿತಿಗಳ ಓದಿನ ರೀತಿಯ ಬಗ್ಗೆಯೂ ಈ ಪಟ್ಟಿ ಒಂದು ಕಣ್ಣೋಟ ನೀಡುತ್ತದೆ.
ಕನ್ನಡ ಕೃತಿಗಳನ್ನು ಓದುತ್ತಿದ್ದವರು ಇದ್ದಕ್ಕಿದ್ದಂತೆ ವ್ರತ ಹಿಡಿದವರಂತೆ ಒಂದು ವರ್ಷ ಬರೀ ಇಂಗ್ಲಿಷ್ ಕೃತಿಗಳಿಗೆ ಹೊರಳಿಕೊಂಡುಬಿಡುತ್ತಾರೆ?. ಯಾಕೆ ಎಂದು ಕೇಳಿದರೆ ನಂಗೂ ಗೊತ್ತಿಲ್ಲ ಎನ್ನುವ ಉತ್ತರ. ಈಗ ಪುಸ್ತಕಗಳಂತೂ ಪುಂಖಾನುಪುಂಖವಾಗಿ ಹೊರಬರುತ್ತಿದೆ. ಹಾಗಿರುವಾಗ ಆ ರಾಶಿಯಲ್ಲಿ ಓದುಗರು ಹೆಕ್ಕಿಕೊಳ್ಳುವ ಕೃತಿಗಳು ಯಾವುದು ಎನ್ನುವುದೂ ಸಹಾ ಕುತೂಹಲಕರ ಸಂಗತಿ. ಅದಿರಲಿ ಇಂತಹ ಪುಸ್ತಕ ಮಾರುಕಟ್ಟೆಗೆ ಬಂದಿದೆ ಎಂದು ಗೊತ್ತಾಗುವ ಬಗೆ ಯಾವುದು?
ಓದಿದ ಎಷ್ಟೋ ಪುಸ್ತಕಗಳಲ್ಲಿ ಒಂದಿಷ್ಟು ಪುಸ್ತಕವೇ ಏಕೆ ಕಾಡುತ್ತದೆ ಎನ್ನುವ ಪ್ರಶ್ನೆಗಳನ್ನೂ ಈ ಪಟ್ಟಿ ಎತ್ತುತ್ತದೆ. ನೀವು ಓದಿದ ಟಾಪ್ ಟೆನ್ ಕೃತಿಯ ಪಟ್ಟಿ ಕೊಡಿ ಎಂದು ಕೇಳುವಾಗ ನಮ್ಮ ಗಮನವಿದ್ದದ್ದು ಓದಿನ ಹಸಿವಿರುವ ಅನೇಕಾನೇಕ ಮಂದಿಗೆ ಯಾವ ಪುಸ್ತಕ ಓದಬೇಕು ಎನ್ನುವ ಸೂಚನೆಯನ್ನು ಈ ಪಟ್ಟಿ ನೀಡಲಿ ಎಂದು. ಜೊತೆಗೆ ತಮ್ಮ ನೆಚ್ಚಿನ ಲೇಖಕರು ಏನು ಓದುತ್ತಿದ್ದಾರೆ ಎಂದು ತಿಳಿಯುವ ಕುತೂಹಲವನ್ನೂ ಇದು ತಣಿಸುತ್ತದೆ ಎಂದು.
ಅದರ ಜೊತೆಗೆ ಇದೂ.. ಎನ್ನುವಂತೆ ಈ ಪಟ್ಟಿ ಇನ್ನಷ್ಟು ಸಂಗತಿಗಳನ್ನು ಹೊರಗೆಡಹಿದೆ.
ಇಲ್ಲಿದೆ ಜಯಶ್ರೀ ಕಾಸರವಳ್ಳಿ ಟಾಪ್ ೧೦ ಅಲ್ಲ ಟಾಪ್ 8+

 

ಒಂದೇ ವರುಷದಲ್ಲಿ ಹತ್ತು ಪುಸ್ತಕ ಓದುವ ಹಾಗಿದ್ದರೆ…..

ಓದುವ ಹವ್ಯಾಸವಿರುವವರಿಗೆ ಇಂತಹ ಅಂಕಣಗಳು ನಿಜಕ್ಕೂ ಉಪಯುಕ್ತ.
ಮನೆಯಲ್ಲಿರುವ ಮಹಿಳೆಯರು ಸಮಯ ಸಿಕ್ಕಾಗೆಲ್ಲಾ ಒಳ್ಳೇ ಅಭಿರುಚಿಯ ಓದನ್ನ ಯಾಕೆ ಬೆಳೆಸಿಕೊಳ್ಳಬಾರದು ಎಂದು ಆಗಾಗ ಯೋಚಿಸುತ್ತಿರುತ್ತೇನೆ. ನನ್ನ ಹುಟ್ಟೂರು ಶಿವಮೊಗ್ಗದ ನನ್ನ ಕಾಲೇಜ್ ದಿನಗಳಲ್ಲಿ ನನ್ನ ಜೊತೆಗಿನ ಸ್ನೇಹಿತರಲ್ಲಿ ಓದುವ ಹವ್ಯಾಸ ಎಲ್ಲರಿಗೂ ಇತ್ತು. ನಮ್ಮನಮ್ಮಲ್ಲೇ ಓದಿದ್ದನ್ನು ಚರ್ಚಿಸುತ್ತಿದ್ದೆವು. ಮದುವೆಯ ನಂತರ ಇಷ್ಟು ವರುಷದ ಜೀವನ ಓಡಾಟದಲ್ಲಿ ಇಂತಹ ಅದೆಷ್ಟೋ ಗೆಳೆಯರ ಬಳಗವನ್ನು ಒಬ್ಬೊಬ್ಬರನ್ನಾಗಿ ಕಳೆದುಕೊಳ್ಳುತ್ತಾ ಬಂದೆ.
‘ಅವಧಿ‘ಯಲ್ಲಿ ಒಬ್ಬರೊಬ್ಬರ ಓದಿನ ಅರಿವು, ವಿಸ್ತಾರ, ಆಳ, ವಿವರಗಳ ವಿನಿಮಯಗಳ ಅವಕಾಶಕ್ಕೆ ಆಹ್ವಾನಿಸಿದ್ದು ಕಂಡು ಬಹಳ ಸಂತೋಷವಾಯಿತು. ಏಕೆಂದರೆ ಕನ್ನಡದಲ್ಲೀಗ ಅದೆಷ್ಟೋ ಪುಸ್ತಕಗಳು ಪ್ರಕಟಗೊಳ್ಳುತ್ತಿದ್ದರೂ ಮನೆಯಲ್ಲಿರುವ ನನ್ನಂತವರಿಗೆ ಕೆಲವೊಮ್ಮೆ ಅದರ ಪರಿಚಯವೇ ಇರುವುದಿಲ್ಲ. ಹಾಗೂ ಒಂದು ವರುಷದಲ್ಲಿ ಖಂಡಿತಾ ಹತ್ತು ಪುಸ್ತಕಗಳು ಕೂಡ ನಾನು ಓದಿರುವುದಿಲ್ಲವೆಂದುಕೊಂಡು ಪಟ್ಟಿ ಮಾಡುತ್ತಿರುವಾಗ ಇಪ್ಪತ್ತಕ್ಕೂ ಹೆಚ್ಚು ಪುಸ್ತಕಗಳು ಗೋಚರಿಸಿದ್ದು ಕಂಡು ನನಗೇ ಆಶ್ವರ್ಯ.
ಅದರಲ್ಲಿ ನನ್ನ ಮಟ್ಟಿಗೆ ಪ್ರಮುಖ ಅನ್ನಿಸಿದನ್ನಷ್ಟೇ ಇಲ್ಲಿ ಒಟ್ಟುಮಾಡಿದ್ದೇನೆ.

1) News of kidnapping  – by Gabriel Garcia Marquez.
(A novel about mafia, underworld, drug-trafficking… an everyday soap opera  of Latin America. Definitely has Marquez’s  magical touch and is worth reading.)
 
2)Slowness  – by Milan Kundera.
(Highly intellectual and object-oriented novel, favourites of many, but not my cup of tea.)
 
3)The fifth child – by Doris Lessing.
( A novel about the consequences that the mother faces because of her evil-minded child.)
 
4)The museum of innocence – by Orhan Pamuk.
(ಇದರ ಬಗ್ಗೆ ಅವಧಿಯಲ್ಲಿ ಒಂದು ಲೇಖನ ಬಹಳ ಹಿಂದೆ ಬರೆದಿದ್ದೆ.)

5)The bell jar –  by Sylvia Plath.
(Sylvia plath  ಕವಿಯಿತ್ರಿಯೆಂದು ಎಲ್ಲರಿಗೂ ಗೊತ್ತು. ಅವಳು ಬರೆದ ಒಂದೇ ಒಂದು ಕಾದಂಬರಿಯಾದ ಇದು ಅವಳ ಅತ್ಮಹತ್ಯೆಯ ನಂತರ ಪ್ರಖ್ಯಾತವಾಯಿತು.)
 
6)The appointment  – by Herta Muller.
(A novel, set in communist  Romania, depicts  the story of  ‘Her ‘, who was summoned by the court  for no fault of hers and how her sentiments  suffer in such a society.)
7) Chronicle of a death foretold – by Gabriel Garcia Marquez( second reading).
( No question- it is my all-time favourite. Those who have not read this please read.)
 
8)Memories of my melancholy whores  – by Gabriel Garcia Marquez.
(A typical Marquez-style story)

ಇದಲ್ಲದೆ ಕನ್ನಡದಲ್ಲಿ ಮೆಷ್ಟರ ‘ಪ್ರೀತಿ ಮೃತ್ಯು ಭಯ’, ಗೋಪಾಲಕೃಷ್ಣ ಪೈ ಅವರ ‘ಸ್ವಪ್ನ ಸಾರಸ್ವತ’ ದಂತೆ ಅನೇಕ ಓದುಗರನ್ನು ಹುಟ್ಟು ಹಾಕಿ ಚರ್ಚೆಗೆ  ಒಳಪಟ್ಟ ಬೊಳುವಾರು ಮಹಮ್ಮದ್ ಕುನ್ಞಿ ಅವರ ‘ಸ್ವಾತಂತ್ರ್ಯದ ಓಟ’, ಮಲೆನಾಡಿನ ದಟ್ಟ ಚಿತ್ರಣ ಕೊಡುವ ಶರತ್ ಕಲ್ಕೋಡ್ ಅವರ ‘ಕಾಡೇ.. ಗೂಡೇ..,’, ಜಯಂತ ಕಾಯ್ಕಿಣಿ ಅವರ ‘ಚಾರ್ ಮಿನಾರ್’, ವಿ.ರ್. ಕಾರ್ಪೆಂಟರ್ ಅವರ ‘ನೀಲಿಗ್ರಾಮ’ ನಾನು ಓದಿದ ಈ ವರುಷದ ಕೆಲವು ಕನ್ನಡದ ಅತ್ಯುತ್ತಮ ಪುಸ್ತಕಗಳು.

‍ಲೇಖಕರು G

January 15, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. sumathi

    Delightful list! Want to read more of Doris Lessing, will try to get this one. Presently, I’m reading this book of Pamuk!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: