ಜಪಾನಿನ ಹಕ್ಕಿ ಮಾತನಾಡಿತು…

-ಉದಯಶಂಕರ್ ಪುರಾಣಿಕ್

ಒಮ್ಮೆ ಕೆಲಸ ನಿಮಿತ್ತ ಜಪಾನ್ ದೇಶಕ್ಕೆ ಹೋಗಿದ್ದಾಗ, ಟೋಕಿಯೋ ಮಹಾನಗರದ ಪ್ರತಿಷ್ಠಿತ ಹೋಟಲ್ ವೊಂದರಲ್ಲಿ ನನ್ನ ವಾಸ್ತವ್ಯಕ್ಕೆ ವ್ಯವಸ್ಥೆಯಾಗಿತ್ತು. 3679 ಕೋಣೆಗಳು,ಅನೇಕ ರೀತಿಯ ಉಪಹಾರ ಗೃಹಗಳು,ಹಲವಾರು ಕ್ರೀಡೆ ಮತ್ತು ಮನೋರಂಜನೆ ಸೌಲಭ್ಯಗಳನ್ನು ಹೊಂದಿರುವ ಷಿನಗಾವಾ ಪ್ರಿನ್ಸ್ ಹೋಟಲ್ ಒಂದು ಪುಟ್ಟ ಮಾಯಾ ನಗರಿಯಂತಿತ್ತು. ಈ ಹೋಟಲ್ ಆವರಣದಲ್ಲಿದ್ದ ಬೃಹತ್ ಮರವೊಂದರಲ್ಲಿ ವಾಸವಾಗಿತ್ತು ಈ ಗುಬ್ಬಿಯ ಗಾತ್ರದ ಪುಟ್ಟ ಹಕ್ಕಿ.

ನನಗೆ ನೀಡಿದ್ದ ಕೋಣೆಗೆ ಬಂದಾಗ,ಅಭ್ಯಾಸದಂತೆ ಮೊದಲು ಕಿಟಕಿಗಳನ್ನು ತೆರದೆ.ಆಗಲೇ ನನ್ನ-ಬಿಷೌಜೋ ಮುಖಾಮುಖಿಯಾಗಿದ್ದು.

“ಬಿಷೌಜೋ ” ಎಂದು ಕರೆದಾಗ,ಅದಕ್ಕೆ ಈ ಹೆಸರು ಒಪ್ಪಿಗೆಯಾಗಿರ ಬಹುದು.(ಸುಂದರ ತರುಣಿಯನ್ನು ಬಿಷೌಜೋ ಎಂದು ಜಪಾನಿ ಭಾಷೆಯಲ್ಲಿ ಕರೆಯುತ್ತಾರೆ.)

ಜಪಾನಿನ ಸಂಸ್ಕೃತಿಯಂತೆ ಬಿಷೌಜೋ ತನ್ನ ದೇಹವನ್ನು ಮುಂಭಾಗಿಸಿ ಸ್ವಾಗತ ಕೋರಿತ್ತು.ಅದೇ ಶೈಲಿಯಲ್ಲಿ ನಾನು ಪ್ರತಿವಂದಿಸಿದೆ.

ಆದರೆ,ನಿನಗೆ ಅಭ್ಯಾಸ ಸಾಲದು ಎಂಬಂತೆ ಬಿಷೌಜೋ ಜೋರಾಗಿ ನಕ್ಕಿತ್ತು.

“ನೀನು ನಕ್ಕಾಗ, ಹೆಚ್ಚು ಸುಂದರವಾಗಿ ಕಾಣುವೆ ಬಿಷೌಜೋ” ಎಂದಾಗ,”ನೀವು ಮನುಷ್ಯರೂ, ನಗು ನಗುತ್ತಿದ್ದರೆ ನೋಡಲು ಚಂದ ” ಎಂದು ಉತ್ತರಿಸಿತ್ತು.

ಬಿಷೌಜೋ ಕೇಳುವ ಪ್ರಶ್ನೆಗಳಿಗೆ ಅತ್ಯಂತ ಕಡಿಮೆ ಸಮಯದಲ್ಲಿ ಚಿಕ್ಕ-ಚೊಕ್ಕ ಉತ್ತರ ನೀಡುವುದು ಅಗತ್ಯವೆಂದು ನಾನು ಬಹು ಬೇಗ ಅರಿತೆ.

ಬೆಳಿಗ್ಗೆ ಆರು ಗಂಟೆಗೆ ಮತ್ತು ಸಂಜೆ ಆರು ಗಂಟೆಗೆ ಸರಿಯಾಗಿ ಕೋಣೆಯ ಕಿಟಕಿಯ ಬಳಿ ಬರುವ ಬಿಷೌಜೋ ಜೊತೆಗಿನ ಮಾತುಕತೆ,ನನ್ನ ದಿನಚರಿಯ ಭಾಗವಾಯಿತು.

ಮಹಾನಗರಗಳು ಬೆಳೆದಂತೆ, ಜಪಾನಿನ ಗ್ರಾಮೀಣ ಬದುಕು ಸೊರಗುತ್ತಿರುವುದು. ಜಪಾನಿನಲ್ಲಿ ಹೆಚ್ಚುತ್ತಿರುವ ಮಾದಕ ವಸ್ತು ಸೇವನೆ, ಕುಡಿತ ಮತ್ತು ಅಪರಾಧಗಳು , ಮದುವೆಯಾಗದೆ ಉಳಿಯುವ ಯುವತಿಯರ ಸಂಖ್ಯೆ,…ಹೀಗೆ ಹಲವಾರು ವಿಷಯಗಳನ್ನು ಕುರಿತು ನಾವು ಮಾತನಾಡುತ್ತಿದ್ದೆವು.

ನಮ್ಮ ಸಂಭಾಷಣೆಯ ಕೆಲವು ತುಣುಕುಗಳು ಇಲ್ಲಿವೆ ;

ಬಿಷೌಜೋ : ಸಾಮಾನ್ಯವಾಗಿ ಬಿಳಿಯ ತೊಗಲಿನ ಮನುಷ್ಯರು ಈ ಹೋಟಲ್ ನ ಗ್ರಾಹಕರು.ನೀನು ಕಂದು ಬಣ್ಣದ ವ್ಯಕಿ ಎಲ್ಲಿಂದ ಬಂದೆ?

ನಾನು : ನಾನು ಭಾರತೀಯ, ಭಾರತ ದೇಶವಿರುವುದು ..

ಬಿಷೌಜೋ : ನಿನ್ನ ದೇಶದಲ್ಲಿ ಕೂಡಾ ನನ್ನಂತಹ ಹಕ್ಕಿಗಳಿವೆಯೇ ?

ನಾನು : ಹೌದು

ಬಿಷೌಜೋ : ನಿನ್ನ ಮನೆಯಲ್ಲಿ ಹಕ್ಕಿ ಇರುವುದೇ ?

ನಾನು : ಇಲ್ಲ

ಬಿಷೌಜೋ : ಒಳ್ಳೆಯದಾಯಿತು. ನಾವು ಇಂದಿನಿಂದ ಸ್ನೇಹಿತರು.. 🙂

ನಾನು : ಬಿಷೌಜೋ, ನೀನು ತುಂಬಾ ಚೆನ್ನಾಗಿ ಹಾಡುತ್ತೀಯ.

ಬಿಷೌಜೋ : ನನ್ನ ಹಾಡು ಕೇಳಿದ ಮೊದಲ ವ್ಯಕ್ತಿ ನೀನು. : ಇಲ್ಲಿ ಅಬ್ಬರದ ಸಂಗೀತದಲ್ಲಿ, ನನ್ನ ಹಾಡು ಕೇಳುವರಿಲ್ಲ.

ಬಿಷೌಜೋ : ಪ್ರತಿದಿನ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದರೆ, ಮಲಗುವುದು ಮತ್ತೆ ರಾತ್ರಿ ಹತ್ತು ಗಂಟೆಗೆ.

ನಾನು : ಹೌದು

ಬಿಷೌಜೋ: ಇಲ್ಲಿನವರಂತೆ ಹಗಲು ದುಡಿತ, ರಾತ್ರಿ ಕುಡಿತ ಎಂದು ಸುಖವಾಗಿ ಬಾಳಲು ನಿನಗೇನು ? : ಬೇಡ ನೀನು ಇಲ್ಲಿನವರಂತಾಗ ಬೇಡ. : ಪ್ರತಿ ರಾತ್ರಿ ಅಪ್ಪನ ಕುಡಿತ, ಅಮ್ಮನಿಗೆ ಬಡಿತ, ಮಕ್ಕಳ ಜೀವನ ಹಾಳು ಅಷ್ಟೇ..

ಬಿಷೌಜೋ : ಪ್ರತಿದಿನ ಹಾಲು, ಹಣ್ಣ್ಬು, ಬ್ರೆಡ್ಡು ನಿನ್ನ ಆಹಾರ.

ನಾನು : ಹೌದು. ನಾನು ಸಸ್ಯಾಹಾರಿ.

ಬಿಷೌಜೋ : ಮೀನು ಕೂಡಾ ಇಲ್ಲಿ ಸಸ್ಯಾಹಾರ.

ನಾನು : ನನ್ನ ಪ್ರಕಾರ ಮೀನು ಮಾಂಸಾಹಾರ

ಬಿಷೌಜೋ :ಮೀನಿನ ಮೊಟ್ಟೆಗಳ ವಿಶೇಷ ಖಾದ್ಯಗಳು ಖಂಡಿತವಾಗಿಯೂ ಸಸ್ಯಾಹಾರ.

ಬಿಷೌಜೋ : ಇಷ್ಟು ದಿನದಿಂದ ಕೋಣೆಯಲ್ಲಿ ಒಬ್ಬನೇ ಇರುವೆಯಲ್ಲ …

ನಾನು : ಹೌದು

ಬಿಷೌಜೋ : ಒಬ್ಬ ಗೀಷಾ ಸುಂದರಿಯೂ ಇಲ್ಲಿಗೆ ಬಂದಿಲ್ಲ…

ನಾನು : ನನಗೆ ಅಂತಹ ಅಭ್ಯಾಸಗಳಿಲ್ಲ

ಬಿಷೌಜೋ : ಟೋಕಿಯೋಗೆ ಬಂದು,ಹಾಗೆಯೇ ಹಿಂತಿರುಗುವೆಯಾ? : ನಿನ್ನ ಶಿಸ್ತು,ಸಂಯಮ ನನಗೆ ಇಷ್ಟವಾಯಿತು

ಪ್ರತಿದಿನ ಸುಂದರವಾಗಿ ಕಾಣುವ, ಹಾಡುವ ಬಿಷೌಜೋ ಜಪಾನ್ ಯುವಕರಿಗೆ ಮತ್ತೊಂದು ಹಕ್ಕಿಯಷ್ಟೇ. ರಷ್ಯಾ, ಐರೋಪ್ಯ ದೇಶಗಳು,ಅಮೇರಿಕಾದಂತಹ ದೇಶಗಳಿಂದ ಬರುತ್ತಿರುವ ವಲಸೆ ಹಕ್ಕಿಗಳ ಬೇಡಿಕೆ ಹೆಚ್ಚಾದಂತೆ,ಎಷ್ಟೋ ಬಿಷೌಜೋಗಳು ಕಣ್ಬೀರುಡುತ್ತಿವೆ, ಸೊರಗಿ ಕಣ್ಮರೆಯಾಗುತ್ತಿವೆ

‍ಲೇಖಕರು avadhi

July 29, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. kirankumari

    sir,

    ಜಪಾನಿನ ಹಕ್ಕಿ ಮಾತಾಡಿತು…ಚೆ೦ದ ಇದೆ ನಿಮ್ಮ ಜಪಾನ್ ಪಯಣದ ಅನುಭವ. ಬಿಷೌಜೋ..ಮಾತ್ರ ಕಾಡ್ತಾನೆ ಇರುವ೦ಥ ರೂಪಕ. ಆಧುನಿಕ ಜಪಾನ್ ಪ್ರಸ್ತುತ ಎದುರಿಸುತ್ತಿರುವ ಅನೇಕ ಸಮಸ್ಯೆಗಳು..ಸಾಮಾನ್ಯ ಗ್ರಾಮೀಣ ಬದುಕು..ನಗರೀಕರಣದ ಸೆಲೆಯಲ್ಲಿ.. ವಿವರಿಸಿಕೊ೦ಡ ರೀತಿ ಮನಸಿಗೆ ಇಷ್ಟವಾಯಿತು. ಆಹಾರಕ್ರಮ..ಬದುಕಿನ ಶಿಸ್ತು..ಪರೋಕ್ಶವಾಗಿ..ಮುಕ್ತ ಆರ್ಥಿಕ ನೀತಿಗೆ ಮುಖಾಮುಖಿಯಾದ ಅನುಭವ..!

    ಎಸ್. ಕಿರಣ್ ಕುಮಾರಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: