ಜಡೆಗೂ ಒಂದು ಬ್ಲಾಗ್? ಆಶ್ಚರ್ಯ ಆದರೂ ನಿಜ. ಮಾಲಾ ರಾವ್ ಅವರಿಗೆ ಬರಹ ಸಲೀಸು. ಅದಕ್ಕೆ ಒಂದಿಷ್ಟು ಹಾಸ್ಯಪ್ರಜ್ಞೆಯ ಒಗ್ಗರಣೆ ಹಾಕುತ್ತಾರೆ ಹಾಗಾಗಿ ಇವರ ಬ್ಲಾಗ್ ಓದಲು ಇಂಟರೆಸ್ಟಿಂಗ್.
ಹೇಳಿಕೇಳಿ ಕವಿಗಳು ನೀಲವೇಣಿ ಪ್ರಿಯರು. ಮುಂಗುರುಳ ಮಾಲೆ ಪ್ರಿಯರು. ತಲೆಗೂದಲಲ್ಲೇ ಅಮಾವಾಸ್ಯೆ ಕಂಡವರು- ಕವಿಗಳು ಕಂಡ ಕೂದಲು ಈ ಬ್ಲಾಗ್ನಲ್ಲಿದೆ. ಅಷ್ಟೆ ಅಲ್ಲ ತಲೆಗೂದಲಲ್ಲಿ ವಾಕಿಂಗ್ ನಡೆಸುವ ಹೇನುಗಳ ಬಗ್ಗೆ ಅಣಕವಾಡುಗಳಿವೆ. ‘ಅಂದ ಕಾಲತ್ತಿಲ್’ ಕೂದಲಿಗೆ ಮಾಡುತ್ತಿದ್ದ ಅಜ್ಜಿ ಮದ್ದು ಇದೆ. ಫಾರಿನರ್ಸ್ ಕೂದಲು ಹೇಗೆ ನೋಡಿಕೊಳ್ಳುತ್ತಾರೆ ಎಂಬ ಬಗ್ಗೆಯೂ ಇದೆ. ಮಾಲಾ ರಾವ್ ತಮ್ಮ ವಿಶಿಷ್ಟ ನೋಟದಿಂದಾಗಿ ಜಡೆಯ ಬಗೆಗಿನ ಬ್ಲಾಗನ್ನೂ ತಮ್ಮ ಕೂದಲಿನಂತೆಯೇ ಅಚ್ಚುಕಟ್ಟಾಗಿ ರೂಪಿಸಿದ್ದಾರೆ. ಇನ್ನೇಕೆ ತಡ ವಿಸಿಟ್ ದಿ ಒನ್ ಅಂಡ್ ಓನ್ಲಿ – ಮೊಗ್ಗಿನ ಜಡೆ.

ಅಂದ ಹಾಗೆ ಈ ಜಡೆ ಪ್ರೇಮ ಏಕೆ ಅಂದಿರಾ? ಮಾಲಾರಾವ್ ಅವರೇ ಇದು ಏಕೆ ಎಂದು ಬಣ್ಣಿಸಿರುವ ಬರಹ ಇಲ್ಲಿದೆ-
ಮೊಗ್ಗಿನ ಜಡೆ
ಅವಸರವರವಾಗಿ ನನ್ನೆಡೇಗೆ ಬರುತ್ತಾ ನಿಲ್ಲೆಂದು ಕೈತೋರಿಸಿದಳು ನಾನೇನು ತಪ್ಪು ಮಾಡಿದೆನಪ್ಪಾ ಅಂತ ಗಾಭರಿಯಿಂದ
ನಿಂತೆ.ಆ ದಢೂತಿ ನನ್ನೆಡೆಗೆ ಬಂದು ಇಂಡಿಯನ್..?ಅಂತ ಕೇಳಿದಳು ಹೌದೆಂದು ಗೋಣು ಅಲ್ಲಾಡಿಸಿದೆ ಇವಳು ಮೆಕ್ಸಿಕನ್ನಾ ಅಥ್ವಾ ಇಂಡಿಯನ್ನೇ ಇರಬಹುದಾ..?ಮನದಲ್ಲೇ ಯೋಚಿಸುತ್ತಾ.
ಹಿಂದಿ ಬೋಲ್ತೇಹೋ..?ಕೇಳಿದಳು
‘ತೋಡಾ ಸಾ..’ ಅಂದೆ
ತುಮಾರಾ ಬಾಲ್ ಬಹುತ್ ಅಛ್ಛಾ ಹೇ..ಅಸ್ಲೀ ಹೇ..?
ನಾನು ಉಸ್ಸೆಂದು ಉಸಿರು ಬಿಟ್ಟೆ!
ತಲೆ ಮೇಲೆ ಕೆಳಗೆ ಆಡಿಸಿದೆ
ಇಸೆ ಕಾಟ್ ನಾ ಮತ್…’ಅಂತ ಹೇಳುತ್ತಾ ಸ್ನೇಹದ ನಗೆಬೀರಿ ಅವಳು ಅಲ್ಲಿಂದ ನಿರ್ಗಮಿಸಿದಳು
+++
ಅವನ್ನೆಲ್ಲ ನಿಮ್ಮೊಂದಿಗೆ ಯಾಕೆ ಹಂಚಿಕೊಳ್ಳಬಾರದು ಅನ್ನಿಸಿತು
ಹೀಗೆ ಹುಟ್ಟಿದ್ದೇ ಈ






0 Comments