ಜಗಕ್ಕೆಲ್ಲ ಕ್ರಾಂತಿ ಹುಚ್ಚು ಹಚ್ಚಿಸಿದ ಜಂಗಮ..

ಕೆ ಮಹಾಂತೇಶ್

**

 ಅವನೊಬ್ಬ ಹುಚ್ಚು ಮನಸ್ಸಿನ

ಕನಸುಗಾರ

ಸದಾ ಕವಿತೆಯೇ ಅವರ ಜತೆಗಾರ

ಮಾತ್ರವಲ್ಲ ಅವನು

ಕ್ರಾಂತಿಯ ಗೆದ್ದ ನನಸುಗಾರ

ನೋಡಲು ಬಡಕಲು ದೇಹದ

ಹುಡುಗ ಆದರೆ ಅವನ ಹೊಳೆವ

ಕಣ್ಗಳ ತುಂಬೆಲ್ಲ ಸದಾ

ಕನಸುಗಳದ್ದೆ ರಾಜ್ಯಭಾರ

ಹುಟ್ಟುವಾಗಲೇ “ಅಸ್ತಮಾ” ವ

ಬೆನ್ನಿಗಂಟಿಸಿಕೊಂಡ ರೋಗಿ

ಆದರೆ ಬಡವರನ್ನು

ಗುಣಪಡಿಸಲೇಬೇಕೆಂದು

ಪಣತೊಟ್ಟ ಯೋಗಿ

ಹುಟ್ಟಿದ್ದು ಅರ್ಜೆಂಟೀನಾ

ಜಯಸಿದ್ದು ಕ್ಯೂಬಾದ ನೆಲವನ್ನು

ಜಗಕ್ಕೆಲ್ಲ ಕ್ರಾಂತಿ ಹುಚ್ಚು ಹಚ್ಚಿಸಿದ

ಜಂಗಮ ಅವನು

ಆದರೆ ವಿರಮಿಸಿದ್ದು ಮಾತ್ರ

ಬೋಲಿವಿಯಾದ ಬಡವರ ಹೃದಯದಲಿ

ಅವನೊಬ್ಬ ಸದಾ ಕಷ್ಟಜೀವಿ

ಮೆಕ್ಸಿಕನ್ ಮಾರುಕಟ್ಟೆಯಲ್ಲಿ ಹಮಾಲಿ

ಕ್ಯೂಬಾದ ಕಬ್ಬಿನ ಗದ್ದೆಯಲಿ ಕೂಲಿಯಾಳು

ಚಿಲಿಯ ಗಣಿಗಳಲ್ಲಿ ಇಳಿದು ಮಣ್ಣೆತ್ತಿದ

ಶ್ರಮಜೀವಿ

ಪುಟ್ಬಾಲ್ ಅಂಗಳದಿ ಕಾಲ್ಚೆಂಡು

ತಿರುಗಿಸುವುದರಲಿ ಎಷ್ಟು‌‌‌ ಸಿದ್ದಿಯೋ

ಬೊಲಿವಿಯನ್ ಕಾಡುಗಳಲ್ಲಿ ಶತ್ರು

ಪಾಳಯಕೆ ನುಗ್ಗುವುದರಲಿ ಕೂಡ ಅಷ್ಟೇ

ನಿಸ್ಸೀಮ

ಬಡವರ ನೆಮ್ಮದಿಗಾಗಿ ಹಂಬಲಿಸಿದ

ಹೃದಯವಂತ ಸಂಗಾತಿ

ಶ್ರೀಮಂತರ ಸೊಕ್ಕಿನ ವಿರುದ್ದ

ಸೆಣಸಿದ ರಣಧೀರ

ಶತ್ರುಗಳ ವಿರುದ್ದ ಸೆಣಸಲು ಬಂದೂಕು

ಕೈಗೆತ್ತಿಕೊಂಡಿದ್ದ‌‌ ಕ್ರಾಂತಿಕಾರಿ

ಜತೆ ಜತೆಯಲೇ ನೆರೂಡನ ಕವಿತೆಯನ್ನು

ಸದಾ ಪ್ರೀತಿಸುತ್ತಿದ್ದ ಕಾವ್ಯಪ್ರೇಮಿ;

ಅವನಿಗೋ ಜಗದಗಲ ಅಭಿಮಾನಿ ಬಳಗ

ಪ್ರಾಣಬಿಡುವಷ್ಟು ಪ್ರೀತಿ ತೋರಿಸೋ

ಜನರು

ಜಗದಲಿ ಅವನಿರದ ಸ್ಥಳವೇ ಅಪರೂಪ

ಹೀಗೆ ಜಗದ ಎಲ್ಲೆಂದರಲ್ಲಿ..

ಸಮಾನತೆ ಬಯಸುವ ಎಲ್ಲರ ಹೃದಯದಲಿ

ಕ್ರಾಂತಿಗೆ ಹಂಬಲಿಸುವವರ ಎಲ್ಲರ

ಕನಸಿನಲಿ ಮನಸಿನಲ್ಲಿ ಸದಾ ಕಾಣುವ

“ಸಂಚಾರದ ಮಿಂಚು”

ಅರ್ನೆಸ್ಟೋ ಗೆವಾರ

ಅವನೇ ನಮ್ಮೆಲ್ಲರ “ಚೇ ಗೆವಾರ”

**

ಚಿತ್ರ 1. ಮಗಳು ಅಲೆಡಾ ಚೆ ಮತ್ತು ಕ್ಯಾಸ್ಟ್ರೊ ಜೊತೆಗೆ ಇರುವ ಚೆ.

ಚಿತ್ರ 2. 2023 ರಲ್ಲಿ ಬೆಂಗಳೂರಿನಲ್ಲಿ ಜರುಗಿದ ಅಖಿಲ ಭಾರತ CITU ಸಮ್ಮೇಳನದಲ್ಲಿ ಭಾಗವಹಿಸಿದ್ದ ಚೆ ಅವರ ಮಗಳು ಅಲೆಡಾ ಚೆ ಅವರನ್ನು ಕೆ ಮಹಾಂತೇಶ್ ಅವರು ಸ್ವಾಗತಿಸಿದ್ದ ಸಂದರ್ಭ.

‍ಲೇಖಕರು Admin MM

June 17, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: