ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚೌಕಾಸಿ ಛಾಂಪಿಯನ್ಸ್!

-ಎಸ್.ಜಿ.ಶಿವಶಂಕರ್


ಚೌಕಾಸಿ ಎಂಬ ಪದ ಯಾವಾಗಿನಿಂದ ಪ್ರಾರಂಭವಾಗಿದೆಯೋ ? ಪದ ಪ್ರಯೋಗ ಎಂದಿನಿಂದ ಬಳಕೆಯಲ್ಲಿದೆಯೋ ನನಗಂತೂ ಗೊತ್ತಿಲ್ಲ; ನಿಮಗೂ ಗೊತ್ತಿರಲಾರದು. ಅದರ ಬಗೆಗೆ ಸಂಶೋಧನೆ ಮಾಡುವ ಮನಸ್ಸು ನಮ್ಮಿಬ್ಬರಿಗೂ ಇಲ್ಲ ಎಂದರೆ ನೀವು ಒಪ್ಪುವಿರಿ ಅಲ್ಲವೆ. ಹಾಗಾದರೆ ಈ ಲೇಖನದ ಘನ ಉದ್ದೇಶವೇನಿರಬಹುದು ಎಂಬ ಪ್ರಶ್ನೆ ನಿಮ್ಮನ್ನು ಕಾಡುವ ಮುಂಚೆ ಸ್ಪಷ್ಟಪಡಿಸಿಬಿಡುತ್ತೇನೆ. ಮುಂದೆ ದಂತ ಕತೆಯಾಗಿ ಉಳಿಯಬಹುದಾದ, ನಾನು ಕಂಡ ಚೌಕಾಸಿ ಛಾಂಪಿಯನ್ ಗೆಳೆಯ ವಿಶ್ವನ ಬಗೆಗೆ ತಿಳಿಸುವುದೂ ಮತ್ತು ಚೌಕಾಸಿಯ ಬಗೆಗೆ ಒಂದಿಷ್ಟು ಕೊರೆಯುವುದು ಈ ಲೇಖನದ ಉದ್ದೇಶ ಎಂದರೆ ನೀವು ಪುಸ್ತಕವನ್ನು ಮುದುಡಿ ಎಸೆಯಲಾರಿರಷ್ಟೆ! ಏನು ಚೌಕಾಸಿ ಎಂದರೆ ? ಈ ಪದಕ್ಕೆ ಶಾಸ್ತ್ರಸಮ್ಮತವಾದ ವಿವರಣೆಯನ್ನು ಕೊಡಲು ಸಾಧ್ಯವಾಗದಿದ್ದರೂ, `ಚೌಕಾಸಿ’ ಎಂದರೇನೆಂಬುದು ನೂರಕ್ಕೆ ನೂರು ಪಾಲು ಜನರಿಗೆ ಗೊತ್ತಿರುವ ವಿಷಯ ಎಂಬುದನ್ನು ಸ್ಪಷ್ಟಪಡಿಸಿ ಮುಂದುವರಿಯುತ್ತೇನೆ. ಜನರಿಗೆ ಇದರ ಬಗೆಗೆ ತಿಳಿದಿರುವುದಷ್ಟೇ ಅಲ್ಲದೆ ದಿನ ನಿತ್ಯ ತಮ್ಮ ಬದುಕಿನಲ್ಲಿ ಬಳಸುತ್ತಲೇ ಇದ್ಡಾರೆ! ಒಂದು ವಸ್ತು ಅಥವಾ ಸೇವೆಗೆ ಮಾರುವವ ನಿಗದಿಪಡಿಸಿದ ಬೆಲೆಗಿಂತ ಕಡಿಮೆ ಬೆಲೆಗೆ ಕೇಳಿ, ಚಚರ್ೆ ಮಾಡಿ, ಕೆಲವೊಮ್ಮೆ ಜಗಳವಾಡಿ ಕೊಳ್ಳುವುದೇ ಚೌಕಾಸಿ ಎಂಬ ಪದದ ಅರ್ಥ ಎಂದು ಸಧ್ಯಕ್ಕೆ ನಾನೂ ಮತ್ತು ನೀವೂ ಒಪ್ಪಿಕ್ಕೊಳ್ಳುವುದು ಕ್ಷೇಮ. ಇಲ್ಲವಾದಲ್ಲಿ ಈ ವಿಷಯದ ಬಗೆಗೇ ಒಂದು ದೊಡ್ಡ ಚೌಕಾಸಿ ನಡೆಯಬಹುದೆಂದು ನನ್ನ ಗುಮಾನಿ. ಮಾರುವವರು ಹೆಚ್ಚಿನ ಬೆಲೆಯನ್ನು ಪಡೆಯಲೆತ್ನಿಸುವುದೂ, ಕೊಳ್ಳುವವರು ಕಡಿಮೆ ಬೆಲೆಗೆ ಕೊಳ್ಳಬಯಸುವುದೂ ವಿಶ್ವವ್ಯಾಪಿ ಮಾನವ ಪ್ರವೃತ್ತಿ; ಯಾರೂ ಇದಕ್ಕೆ ಹೊರತಲ್ಲ. ಆದರೆ ಈ ಪ್ರಕ್ರಿಯೆಯಲ್ಲಿ ನಡೆಯುವ ಚೌಕಾಸಿ ಮಾತ್ರ ಎಲ್ಲರ ಪ್ರವೃತ್ತಿಯಲ್ಲ. ಕೆಲವರಲ್ಲಿ ಮಾತ್ರ ಈ ಕಲೆ ಅರಳುತ್ತದೆ. ಇದು ಅತ್ಯಂತ ಸೃಜನಶೀಲ ಕಲೆ ಎಂದು ಬಹುತೇಕರ `ಅಂಬೋಣ’! ಚೌಕಾಸಿ ಮಾಡುವ ಮನಸ್ಸು ಎಲ್ಲರಿಗೂ ಇದ್ದರೂ ಎಲ್ಲರೂ ಚೌಕಾಸಿ ಮಾಡಲು ಸಾಧ್ಯವಿಲ್ಲ! ಹಾಗೆ ಚೌಕಾಸಿ ಮಾಡಿದರೂ ಎಲ್ಲರಿಗೂ ಯಶಸ್ಸು ಸಿಗುವುದಿಲ್ಲ. ಅದ್ದರಿಂದಲೇ ಇದನ್ನು ಪಡೆದವರು ಪುಣ್ಯವಂತರೆನ್ನಬಹುದು! ಈ ಕಲೆಯಲ್ಲಿ ನಿಷ್ಣಾತರನ್ನೇ ನಾನು ಛಾಂಪಿಯನ್ಸ್ ಎಂದು ಕರೆಯುತ್ತಿರುವುದು!

ಕೆಲವರ ಚೌಕಾಸಿ ಕೌಶಲ ನಮ್ಮನ್ನು ಬೆಕ್ಕಸ ಬೆರಗಾಗುವಂತೆ ಮಾಡುತ್ತದೆ. ಇವರು ನೂರು ರೂಪಾಯಿ ಮೌಲ್ಯದ ವಸ್ತುವನ್ನು ಒಂದೇ ರೂಪಾಯಿಗೆ ಪಡೆಯಬಲ್ಲರು! ಲಕ್ಷಗಟ್ಟಲೆ ಮೌಲ್ಯದ ವಸ್ತುಗಳ ಬೆಲೆಯನ್ನು ಸಾವಿರಗಳಿಗೆ ಇಳಿಸಬಲ್ಲರು! ಇಂತವರಿಗೆ ಜನರು ವಿಶೇಷ ಗೌರವವನ್ನು ಕೊಡುತ್ತಾರೆ. ಇಂತವರ ಈ ಚೌಕಾಸಿ ಸೇವೆಗೆ ವಿಶೇಷ ಬೇಡಿಕೆಯೂ ಇರುತ್ತದೆ. ಮದುವೆ, ಮುಂಜಿಗಳಿಗೆ ಜವಳಿ ಖರೀದಿಸುವಾಗ ಇಂತವರನ್ನು ಕರೆದುಕೊಂಡು ಹೋಗುವುದು ಸಾಮಾನ್ಯವಾದ ವಿಷಯ. ನಾನು ತೀರಾ ಹತ್ತಿರದಿಂದ ನೋಡಿರುವ ಚೌಕಾಸಿ ಛಾಂಪಿಯನ್ ಎಂದರೆ ವಿಶ್ವ. ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಕಲೆಯನ್ನು ಮಾನ್ಯ ಮಾಡಿ ಛಾಂಪಿಯನ್ಶಿಪ್ಪನ್ನು ಏರ್ಪಡಿಸಿದರೆ ವಿಶ್ವನಿಗೆ ಛಾಂಪಿಯನ್ಶಿಪ್ಪು ಕಟ್ಟಿಟ್ಟ ಬುತಿ!. ವಲ್ಡರ್್ಕಪ್ಪಿನಲ್ಲಿ ನಮ್ಮ ಕ್ರಿಕೆಟಿಗರು ಕಪ್ಪು ತರುತ್ತಾರೋ ಇಲ್ಲಾ ಚಿಪ್ಪು ತರುತ್ತಾರೋ ಗೊತ್ತಿಲ್ಲ! ಆದರೆ ವಿಶ್ವನ ಬಗೆಗೆ ಮಾತ್ರ ನಾನು ಖಂಡಿತವಾಗಿಯೂ ಹೇಳಬಲ್ಲೆ! ಚೌಕಾಸಿ ಛಾಂಪಿಯನ್ ಕಪ್ಪು ನಮ್ಮದೇ! ಈ ಚೌಕಾಸಿಯಲ್ಲಿ ವಿಶ್ವ ಉಗ್ರಮಾನ್ಯನಾದರೆ ನಾನು ಶುದ್ಧ ಶುಂಟಿ! ಈ ಕಾರಣದಿಂದ ವಿಶ್ವ ಆಗಾಗ್ಯೆ ನನ್ನನ್ನು ಹಂಗಿಸುತ್ತಲೇ ಇರುತ್ತಾನೆ. ವಿಶ್ವ ನನ್ನ ಚಡ್ಡಿ ಸ್ನೇಹಿತ. ಅಂದರೆ ಚಡ್ಡಿ ಹಾಕುವ ದಿನಗಳಿಂದ ನಾವು ಸ್ನೇಹಿತರು. ನನಗೂ ವಿಶ್ವನಿಗೂ ಇರುವ ವ್ಯತ್ಯಾಸವೆಂದರೆ ವಿಶ್ವ ಅಪ್ರತಿಮ ಚೌಕಾಸಿ ವೀರ! ನಾನು ಸವರ್ೆ ಸಾಮಾನ್ಯ! ವಿಶ್ವನಿಗೆ ನಾನು ತುಂಬಾ ಉಪಕೃತನಾಗಿದ್ದೇನೆ. ಕಾರಣ ಅವನ ಚೌಕಾಸಿಯಿಂದ ನನಗೆ ಬಹಳ ಲಾಭವಾಗಿದೆ. ಅವನ ಈ ಅಸಾಧಾರಣ ಪ್ರತಿಭೆಯನ್ನು ನೋಡಬೇಕೆಂದರೆ ಅವನ ಜೊತೆಯಲ್ಲಿ ವ್ಯಾಪಾರಕ್ಕೆ ಹೋಗಬೇಕು. ಇಲ್ಲೊಂದು ಎಚ್ಚರಿಕೆ. ಅವನ ಜೊತೆ ಹೋಗಬೇಕಾದರೆ ಸಾವಕಾಶವಾಗಿ ಹೋಗಬೇಕು! ಚೌಕಾಸಿಗೆ ನಿಂತನೆಂದರೆ ಕೆಲವೊಮ್ಮ ಕಾಲ, ಸ್ಥಳ ಎಲ್ಲವನ್ನೂ ಮರೆತುಬಿಡುತ್ತಾನೆ.

ಅವನ ಪತ್ನಿ ವಿಶಾಲೂ ಮತ್ತು ಅವನ ಮಕ್ಕಳಿಗೆ ಚೌಕಾಸಿಯೆಂದರೆ ಅಲಜರ್ಿ! ವಿಶ್ವನ ಚೌಕಾಸೀ ವರ್ತನೆಯಿಂದ ಬೇಸತ್ತು ಹೋಗಿದ್ದಾರೆ! ಅವರಿಗೆ ಚೌಕಾಸಿ ಎಂದರೆ ಕಂಜೂಸಿತನ ಎಂಬ ಭಾವನೆ! ವಿಶ್ವ ಚೌಕಾಸಿ ಶುರಿ ಮಾಡಿದರೆ, ನಾಚಿ ಭೂಮಿ ಬಾಯಿ ಬಿಡಬಾರದೆ ಎನ್ನಿಸುವುದಂತೆ ಮನೆಯವರಿಗೆ! ಒಮ್ಮೆಯಂತೂ ವಿಶಾಲೂ ಮಾರುಕಟ್ಟೆಯಲ್ಲಿ`ಸೊಪ್ಪಿನ’ ಚೌಕಾಸಿಗೆ ನಿಂತ ವಿಶ್ವನನ್ನು ಬಿಟ್ಟು ಸೀದಾ ಆಟೋ ಹತ್ತಿ ಮನೆಗೆ ಬಂದಿದ್ಡಳಂತೆ! ಇದಾದನಂತರ ವಿಶ್ವ ಕೊಂಚ ಮೆತ್ತಗಾಗಿದ್ದಾನೆ. ಹೆಂಡತಿ ಮಕ್ಕಳು ಇದ್ದಾಗ ಚೌಕಾಸಿ ಮಾಡುವುದಿಲ್ಲ! ಆದರೆ ಕೈಬಾಯಿ ಸುಮ್ಮನಿರಬೇಕಲ್ಲ ? ಅದಕ್ಕಾಗಿ ಚ್ಯೂಯಿಂಗ್ ಗಮ್ಮು ಜಗಿಯುತ್ತಾನೆ ಮತ್ತು ಬೆರಳುಗಳಿಂದ ತಾಳ ಹಾಕುತ್ತಾನೆ.

ಶಾಲಾ ದಿನಗಳಲ್ಲಿ ನಾನು ಹೊಸ ಪೆನ್ನು ತೆಗೆದುಕೊಂಡ ಮರುದಿನವೇ ವಿಶ್ವನೂ ಅದೇ ರೀತಿಯ ಪೆನ್ನನ್ನು ತರುತ್ತಿದ್ದ ಅರ್ಧವಷ್ಟೆ ಬೆಲೆ ಕೊಟ್ಟಿರುತ್ತಿದ್ದ! `ಬೆಳೆಯುವ ಪೈರು ಮೊಳಕೆಯಲ್ಲಿ’ ಎಂಬಂತೆ ಬಾಲ್ಯದಲ್ಲಿಯೇ ಅವನಲ್ಲಿ ಈ ಪ್ರತಿಭೆ ಕಂಡಿತ್ತು! ಮುಂದೆ ಹುಣ್ಣಿಮೆಯ ಚಂದ್ರನಂತೆ ವಧರ್ಿಸುತ್ತಾ ಈ ಕ್ಷೇತ್ರದಲ್ಲಿ ಅವನನ್ನು ಛಾಂಪಿಯನ್ನಾಗಿ ರೂಪಿಸಿತ್ತು! ನಾನು ವಿಶ್ವನನ್ನೇ ಏಕಮೇವಾದ್ವಿತೀಯ ಚೌಕಾಸಿ ಛಾಂಪಿಯನ್ ಎಂದು ಅಡೆ ತಡೆಯಿಲ್ಲದೆ ಕೊರೆಯುತ್ತಾ ಹೋದರೆ ಸ್ತ್ರೀವಾದಿಗಳು ಸುಮ್ಮನೆ ಬಿಟ್ಟಾರೆಯೇ ? ಸ್ತ್ರೀಯರಿಗೆ ಅನ್ಯಾಯವಾಗಿದೆ! ಈ ಕ್ಷೇತ್ರದಲ್ಲಿ ನಮ್ಮ ಸಾಧನೆಯೇನೂ ಇಲ್ಲವೆ? ನಾವೇನು ಕಮ್ಮಿ ಎಂದು ಬೊಬ್ಬಿಟ್ಟಾರು! ಸಹಜವಾಗಿಯೇ ಹೆಂಗಸರು ಚೌಕಾಸಿಯಲ್ಲಿ ಪ್ರವೀಣರೆಂದು ಹೇಳುತ್ತಾರೆ. ಅಲ್ಲಲ್ಲಿ, ಬಲವಾಗಿ ಚೌಕಾಸಿ ಮಾಡುವ ಮಹಿಳೆಯರನ್ನು ಕಂಡಿರುವೆನಾದರೂ ಅವರ ಸಾಮಥ್ರ್ಯದ ಆಳವಾದ ಅನುಭವ ನನಗಾಗಿಲ್ಲ. ಹಾಗೇನಾದರೂ ಅವರಲ್ಲಿಯೂ ವಿಶ್ವನಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚಿನ ಪ್ರತಿಭೆಯಿರುವವರು ಇರಬಹುದು. ಹಾಗೇನಾದರೂ ಇದ್ದರೆ ಸಕರ್ಾರದ ವತಿಯಿಂದ ಮಾನ್ಯ ಮಾಡಿದರೆ, ವರ್ಷಕ್ಕೊಬ್ಬ ಪುರುಷ ಮತ್ತು ಸ್ತ್ರೀಯನ್ನು ಗುರುತಿಸಿ, `ಚೌಕಾಸಿಶ್ರೀ’ ಮತ್ತು `ಚೌಕಾಸಿಸ್ತ್ರೀ’ ಎಂಬ ಪ್ರಶಸ್ತಿಗಳನ್ನು ಕೊಡಬಹುದೆಂಬುದು ನನ್ನ ಅಭಿಪ್ರಾಯ. ಇದರಿಂದ ಸ್ತ್ರೀ ಸಮುದಾಯಕ್ಕೆ ಅನ್ಯಾಯವಾಗದು ಎಂಬ ನಂಬಿಕೆ ನನ್ನದು. ಸಧ್ಯಕ್ಕೆ ನನ್ನ ಚೌಕಾಸಿ ವೀರನೆಂದರೆ ವಿಶ್ವನೊಬ್ಬನೇ! ಅವನ ಮುಂದೆ ನಾನು ಕುಬ್ಜ. ಒಮ್ಮೆ ನಾನು ಮತ್ತು ವಿಶ್ವ ದೆಹಲಿಗೆ ಹೋಗಿದ್ದೆವು-ಸಕರ್ಾರಿ ಕೆಲಸದ ನಿಮಿತ್ತ. ಆರು ದಿನಗಳ ವಾರದ ಪ್ರೋಗ್ರಾಮು. ಮೈಸೂರಿನಿಂದ ಹೊರಡುವ ಮುನ್ನ ಅನುಭವಿಗಳಿಂದ ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದೆವು. ಹೋಟೆಲು, ಊಟ-ತಿಂಡಿ, ನೋಡುವ ಸ್ಥಳಗಳು, ಖರೀದಿಸಬೇಕಾದ ಸಾಮಾನುಗಳು, ದೊರೆಯುವ ಸ್ಥಳ, ಬೆಲೆ -ಹೀಗೆ ವಿಷದವಾಗಿ ವಿಷಯ ಸಂಗ್ರಹಿಸಿದ್ದೆವು. ದೆಹಲಿಯಲ್ಲಿ ಇಳಿದೊಡನೆ ತಂಗಬೇಕಾದ ಹೋಟೆಲಿಗೆ ಹೋದೆವು. ರೂಮಿನ ಬಾಡಿಗೆಯ ಬಗೆಗೆ ಮಾಲೀಕನೊಂದಿಗೆ ವಿಶೇಷ ತನ್ನ ಹರುಕು ಹಿಂದಿಯಲ್ಲಿ ಚೌಕಾಸಿಗಿಳಿದ. ‘ಫಿಕ್ಸೆಡ್ ರೇಟು..ಕಡಿಮೆ ಮಾಡಲಾಗದು’ ಎಂಬುದು ಮಾಲೀಕನ ವಾದವಾಗಿತ್ತು. ವಿಶ್ವ ಹತ್ತಿಪ್ಪತ್ತು ನಿಮಿಷ ಚೌಕಾಸಿ ಮಾಡಿ ಗಿಟ್ಟದೆ ಕೊನೆಗೆ ವರಸೆ ಬದಲಾಯಿಸಿದ. `ರೇಟು ಕಡಿಮೆ ಮಾಡು ಎಂದು ನಾನೆಲ್ಲಿ ಕೇಳಿದೆ ? ಬೇಸಿಗೆಯಲ್ಲಿ ದೆಹಲಿಗೆ ಯಾರು ಬರುತ್ತಾರೆ ? ಡಿಸ್ಕೌಂಟ್ ಕೊಡು’ ಎಂದು ಚೌಕಾಸಿ ಮಾಡಿದ. ವಿಶ್ವನ ಜೊತೆ ಚೌಕಾಸಿಯಲ್ಲಿ ಬೆಂದು ಬಸವಳಿದ ಮಾಲೀಕ, ಹತ್ತು ನಿಮಿಷಗಳ ನಂತರ ಇಪ್ಪತ್ತು ಪಸರ್ೆಂಟ್ ಡಿಸ್ಕೌಂಟಿನಲ್ಲಿ ರೂಮು ಕೊಟ್ಟ! ವಿಶ್ವನ ಚೌಕಾಸಿಯ ಪ್ರೇರಣೆಗಳು ಅವಿಸ್ಮರಣೀಯ!

ನಾಲ್ಕು ದಿನಗಳ ಕಾಲ ಸಕರ್ಾರಿ ಕೆಲಸವೇ ನಮ್ಮನ್ನು ರಾತ್ರಿಯವರೆಗೂ ಹಿಡಿದಿಟ್ಟಿದ್ದರಿಂದ ವಿಶ್ವನ ಚೌಕಾಸಿ ಯಾನೆ ನಮ್ಮ ವ್ಯಾಪಾರಕ್ಕೆ ಅವಕಾಶವಾಗಲಿಲ್ಲ. ಆದರೆ ಕೊನೆಯ ಎರಡು ದಿನಗಳು ಅರ್ಧ ದಿನದ ಮಟ್ಟಿಗೆ ಬಿಡುವು ಸಿಕ್ಕಿದ್ದರಿಂದ ವ್ಯಾಪಾರಕ್ಕೆ ಅವಕಾಶ ಸಿಕ್ಕಿತು. ಖರೀದಿಸಬೇಕಾದ ವಸ್ತುಗಳ ಪಟ್ಟಿ ದೊಡ್ಡದೇ ಇತ್ತು. ಮೊದಲನೆಯ ದಿನ ನಾವು ಪಾಲಿಕಾ ಬಜಾರಿಗೆ ಕಾಲಿಟ್ಟೆವು. ಪಾಲಿಕಾ ಬಜಾರು ನೆಲ ಅಂತಸ್ತಿನಲ್ಲಿನ ವ್ಯಾಪಾರೀ ಸಂಕೀರ್ಣ. ಬಜಾರಿನ ತುಂಬಾ ಹೇರಳವಾದ ವಸ್ತುಗಳು ಕಂಡವು! ವಿಡಿಯೋ ಗೇಮುಗಳು, ಟಿವಿ, ವಿಸಿಡಿ, ಡೆಕ್ಕು ಮುಂತಾದ ನೂರಾರು ತರದ ಇಲೆಕ್ಟ್ರಾನಿಕ್ ವಸ್ತುಗಳು; ಬಟ್ಟೆ-ಬರೆ, ಚರ್ಮದ ವಸ್ತುಗಳು! ಇಂಥಹ ವಸ್ತು ಅಲ್ಲಿಲ್ಲ ಎಂದು ಹೇಳುವಂತಿರಲಿಲ್ಲ! ಮೊದಲು ಎರಡು ರೌಂಡು ಪಾಲಿಕಾ ಬಜಾರಿನಲ್ಲಿ ಖಾಲಿಯಾಗಿ ಪೋಲಿ ತಿರುಗಿದೆವು. ನಂತರ ವಿಶ್ವ ನನ್ನನ್ನು ಕೇಳಿದ್ದ: `ಏನೇನು ತಗೋಬೇಕು ?’. `ನೀನು ತಗೋಬೇಕೂಂತಿರೋದನ್ನ ವ್ಯಾಪಾರ ಶುರು ಮಾಡು, ನನಗೂ ಬೇಕನ್ನಿಸಿದರೆ ತಗೋತೀನಿ’ ಎಂದಿದ್ಡೆ. `ಹಾಗಲ್ಲವೋ ಪೆದ್ದಾ, ಇಬ್ಬರೂ ತಗೊಳ್ಳೋ ಹಾಗಿದ್ದರೆ ಎರಡು ಬೇಕೂಂತ ಹೆಚ್ಚಿಗೆ ಚೌಕಾಸಿ ಮಾಡಬಹುದು’ ಎಂದು ವಿವರಿಸಿದ್ದ. ನಾನು ವ್ಯಾಪಾರಕ್ಕೆ ಹಸಿರು ನಿಶಾನೆ ತೋರಿಸಿದ ನಂತರ ನಮ್ಮ ಚೌಕಾಸಿ ವೀರ ಐ ಮೀನ್ ವಿಶ್ವನ ಚೌಕಾಸಿ ಪ್ರಾರಂಭವಾಗಿತ್ತು. ಮೈಸೂರಿನ ಅನುಭವಿ ಮಿತ್ರರು ಹೇಳಿದ್ದರು. ದೆಹಲಿಯ ವ್ಯಾಪಾರ ಎಲ್ಲಾ ಟೋಪಿ ವ್ಯಾಪಾರ. ಪಾಲಿಕಾದಲ್ಲಿ ಚೌಕಾಸಿ ಇಲ್ಲದೆ ವ್ಯಾಪಾರ ಮಾಡಲೇಬೇಡಿ. ಇಷ್ಟಾದ ಮೇಲೆ ವಿಶ್ವನನ್ನು ತಡೆಯುವವರು ಯಾರು ? ವಿಶ್ವ ತನ್ನ ಪ್ರತಿಭೆಗೆ ಸಾಣೆ ಹಿಡಿಯತೊಡಗಿದ್ದ! ವಿಶ್ವ ಸಿಕ್ಕಸಿಕ್ಕ ಅಂಗಡಿಗಳಲ್ಲಿ ವ್ಯಾಪಾರ ಮಾಡುತ್ತಿರಲಿಲ್ಲ. ಹುಲಿ ಬೇಟೆಯನ್ನು ಆರಿಸಿಕ್ಕೊಳ್ಳುವಂತೆ ವಿಶ್ವ ಅಂಗಡಿಯನ್ನು ಆರಿಸಿಕ್ಕೊಳ್ಳುತ್ತಿದ್ದ. ಅಂಗಡಿಯ ಮಾಲೀಕನ ಮುಖ ನೋಡದೆ ವ್ಯಾಪಾರ ಶುರುಮಾಡುತ್ತಿರಲಿಲ್ಲ. ತಾನು ಒಡ್ಡಿದ ಖೆಡ್ಡಾಕ್ಕೆ ಈ ಆನೆ ಬೀಳುವುದೋ ಇಲ್ಲವೋ ಎಂದು ಅಧ್ಯಯನ ಮಾಡುತ್ತಿದ್ದನೋ ಏನೋ ? ಅಂತಾ ಅತೀಂದ್ರಿಯ ಶಕ್ತಿ ಅವನಲ್ಲಿದೆ ಎಂದು ನನ್ನ ನಂಬಿಕೆ. ಆ ಕಾರಣದಿಂದಲೇ ಅವನ ಚೌಕಾಸಿ ಪ್ರತಿಭೆಯ ಅಧ್ಯಯನವನ್ನು ಬಹು ಕಾಲದಿಂದ ಮಾಡುತ್ತಿರುವೆ. ಕೇವಲ ನಾಲ್ಕು ಐಟಮ್ಮುಗಳನ್ನು ಖರೀದಿಸುವಲ್ಲಿ ರಾತ್ರಿ ಎಂಟೂವರೆ ಗಂಟೆಯಾಗಿತ್ತು! ನಾವು ಪಾಲಿಕಾದಲ್ಲಿ ಕಾಲಿಟ್ಟಾಗ ಐದು ಗಂಟೆ. ಅಂದರೆ ಮೂರೂವರೆ ಗಂಟೆಗಳಲ್ಲಿ ಕೇವಲ ನಾಲ್ಕೇ ಐಟಂಗಳು! ನಾನು ಆಕ್ಷೇಪಿಸಿದ್ದೆ.`ನೋಡೋ ಎಲ್ಲಾ ಐಟಂಗಳೂ ಇಲ್ಲಿ ಚೀಪಾಗಿವೆ ಸಿಗ್ತವೆ ಅಂತೇನಿಲ್ಲ. ಎಲ್ಲಾ ತಗೊಳ್ಳೋಕೆ ಆಗದಿದ್ರೂ ಚಿಂತೆಯಿಲ್ಲ ಬೆಂಗ್ಳೂರಿನ ಬಮರ್ಾ ಬಜಾರಿನಲ್ಲಿ ಕೊಂಡರೆ ಆಯ್ತು’ ವಿಶ್ವ ಮೂಗೆಳೆದಿದ್ದ. `ಅಲ್ವೋ ಒಬ್ಬರಿಗೆ ತಗೊಂಡು ಇನ್ನೊಬ್ಬರಿಗೆ ತಗೊಳ್ಳದಿದ್ದರೆ ಆಗುತ್ತೇನೋ ? ಹೋದಾಗ ಸುಮ್ಮನಿತರ್ಾರೇನೋ ?’`ಮತ್ತೇನು ಮಾಡ್ಬೇಕೂಂತೀಯಾ ?’ ವಿಶ್ವ ಕಣ್ಣು ಕೆಕ್ಕರಿಸಿ ಕೇಳಿದ್ದ.`ಚೌಕಾಸಿ ಕಡಿಮೆ ಮಾಡಿದರೆ ಸಾಕಷ್ಟು ಟೈಮು ಸಿಗುತ್ತೆ’`ಜೀವ ಬೇಕಾದ್ರೂ ಬಿಟ್ಟೇನು ! ಚೌಕಾಸಿ ಮಾತ್ರ ಬಿಡೊಲ್ಲ! ವಿಶ್ವನ್ನ ಏನಂತ ತಿಳಿದಿದ್ದೀಯ ? ಅವರು ಕೇಳಿದಷ್ಟು ಹಣ ಕೊಡೋದಕ್ಕೆ ನಾವೇನು ಗುಗ್ಗುಗಳೇನು ?’ ತನ್ನ ಬಾಯಿ ಜೋರು ಮಾಡಿ ನನ್ನ ಬಾಯಿ ಮುಚ್ಚಿಸಿದ್ದ ವಿಶ್ವ!

ಒಂದು ಕಡೆಯಂತೂ ಕೇವಲ ಐದು ರೂಪಾಯಿಗಳಿಗೆ ವಿಶ್ವ ಹದಿನೈದು ನಿಮಿಷ ವಾಗ್ಯುದ್ಧ ನಡೆಸಿದ್ದ. ನನಗೆ ಕೊನೆಗೆ ರೋಸಿ ಹೋಗಿತ್ತು. ಅವನನ್ನು ಅಲ್ಲೇ ಬಿಟ್ಟು ಹೋಟೆಲಿಗೆ ಹಿಂದಿರುಗಲೆ ಎನಿಸಿತ್ತು. ಆದರೆ ಧೈರ್ಯ ಬರಲಿಲ್ಲ. ಪಾಲಿಕಾ ಬಜಾರು ವಿಚಿತ್ರವಾದ ರಚನೆಯದು. ಎಲ್ಲಿಗೆ ಹೋದರೂ ಮಾಕರ್ೆಟ್ಟಿನ ಮಧ್ಯಕ್ಕೇ ಬರುತ್ತಿದ್ದೆವು. ಮೊದಲೂ ಕಾಣುತ್ತಿರಲಿಲ್ಲ, ಕೊನೆಯೂ ಕಾಣುತ್ತಿರಲಿಲ್ಲ! ಬಹುತೇಕ ಎಲ್ಲ ಹಂತಗಳೂ, ಎಲ್ಲ ವಿಭಾಗಗಳೂ ಒಂದೇ ರೀತಿಯಲ್ಲಿ ಕಾಣುತ್ತಿದ್ದವು.ಆ ದಿನಗಳಲ್ಲಿ ದೆಹಲಿಯಲ್ಲಿ ಭಯೋತ್ಪಾದಕರ ಗಲಾಟೆಗೆ ರಾತ್ರಿ ಒಂಬತ್ತಕ್ಕೆ ಬಜಾರು ಮುಚ್ಚಿತು. ಅನ್ಯಮಾರ್ಗವಿಲ್ಲದೆ ನಾವೂ ಹಿಂತಿರುಗಬೇಕಾಯಿತು. ದಾರಿಯಲ್ಲಿ ವಿಶ್ವನಿಗೆ ಒಂದಿಷ್ಟು ಬಿಸಿ ಮುಟ್ಟಿಸಿದೆ ಎನ್ನಿ. ಐದು ರೂಪಾಯಿಗೂ ಚೌಕಾಸಿ ಮಾಡುವ ಚಿಲ್ಲರೆ ಬುದ್ಧಿಯವ ಎಂದು ಹಂಗಿಸಿ ಸೇಡು ತೀರಿಸಿಕೊಂಡೆ. ಕಲ್ಲಿನಿಂದ ಹೊಡೆಸಿಕೊಂಡ ಬೀದಿ ನಾಯಿಯಂತೆ ಒಂದೆರಡು ಸಲ ಪ್ರತಿಭಟನೆಯ ಪ್ರಯತ್ನ ಮಾಡಿ ಸುಮ್ಮನಾಗಿದ್ದ ವಿಶ್ವ.ಮರುದಿನ ನಮ್ಮ ವ್ಯಾಪಾರ ಕರೋಲ್ಬಾಗಿನಲ್ಲಾಯಿತು. ಅಲ್ಲಿ ಜಕರ್ಿನ್ ಖರೀದಿಗಾಗಿ ನಡೆದ ಚೌಕಾಸಿಯನ್ನು ಗಿನ್ನಿಸ್ ಬುಕ್ ಆಫ್ ವಲ್ಡರ್್ ರೆಕಾಡರ್ಿನಲ್ಲಿ ದಾಖಲಿಸಬಹುದೆಂದು ನನ್ನ ದೃಢ ಅಭಿಪ್ರಾಯ!ಮಾಲೀಕನ ಬೆಲೆ ಒಂದು ಜಕರ್ಿನ್ನಿಗೆ ನಾನ್ನೂರು ರೂಪಾಯಿಗಳು. ವಿಶ್ವ ಕೇಳಿದ್ದು ನೂರಾ ಐವತ್ತಕ್ಕೆ. ಅಂಗಡಿಯಾತನಿಗೆ ರೇಗಿ ಹೋಗಿತ್ತು. `ಚೌಕಾಸಿಗೆ ಒಂದು ಮಿತಿ ಇರಬೇಡವೆ ? ಕಚ್ಛಾ ವಸ್ತುವಿನ ಬೆಲೆಯೇ ನೂರಾ ಎಪ್ಪತ್ತೈದು ಇರುವಾಗ ನೂರಾ ಐವತ್ತಕ್ಕೆ ಕೇಳಲು ನಿಮಗೆ ನಾಚಿಕೆಯಾಗುವುದಿಲ್ಲವೆ ?’ ಎಂದು ದಬಾಯಿಸಿದ. ` ಮಾರಲು ಇಟ್ಟಿರುವ ವಸ್ತುವನ್ನು ನಮ್ಮ ಬೆಲೆಗೆ ಕೇಳಲು ಖಂಡಿತಾ ನಮಗೆ ನಾಚಿಕೆಯಿಲ್ಲ!’ ಎಂದು ವಿಶ್ವ ಹೇಳಿದಾಗ ಮಾಲೀಕ ಸುಸ್ತಾಗಿದ್ಡ! ನಂತರ ವಿಶ್ವ ಮುಂದುವರಿಸಿದ್ದ. `ನಾವು ಇಪ್ಪತ್ತೈದು ಜನರ ಟೂರಿಗೆ ಬಂದಿದ್ದೀವಿ. ನೀನು ನೂರಾ ಐವತ್ತಕ್ಕೆ ಕೊಟಟಟ್ಟರೆ ನಾಳೆಗೆ ನಿನಗೆ ಇಪ್ಪತ್ತೈದು ಜಕರ್ಿನ್ ಖಚರ್ಾಗುತ್ತವೆ..ಯೋಚೆನೆ ಮಾಡು ಸುಮ್ಮನೆ ವ್ಯಾಪಾರ ಕಳ್ಕೋಬೇಡ! ವಿಶ್ವ ಕಿವಿಮಾತಿನಂತೆ ಹೇಳಿದ. `ನೂರಾ ಐವತ್ತಕ್ಕೆ ಸಾಧ್ಯವೇ ಇಲ್ಲ’ ಎಂದ್ ಹೇಳಿ ಅಂಗಡಿಯಾತ ಅದುವರೆಗೂ ನಿಂತು ಚೌಕಾಸಿ ಮಾಡುತ್ತಿದ್ದವ ಇನ್ನು ಮಾತು ಬೇಕಿಲ್ಲ ಎನ್ನುವಂತೆ ಕುಳಿತೇಬಿಟ್ಟ! ಆದರೆ ವಿಶ್ವ ಬಿಡಬೇಕಲ್ಲ ? ಮತ್ತೆ ಮಾತಿಗೆ ಶುರು ಹಚ್ಚಿದ! ಅಂಗಡಿಯಾತನಿಗೇ ಬೇಡದ ಚೌಕಾಸಿ! ಮತ್ತೆ ಹತ್ತು ನಿಮಿಷದ ಭಣಭಣ ಎನ್ನುವ ಒಣ ಚೌಕಾಸಿ! ಮಾಲೀಕ ಸೋತಿದ್ದ; ಹಣ್ಣಾಗಿದ್ದ! ಆದರೆ ವಿಶ್ವ ಸೋತಿರಲಿಲ್ಲ! ಕೊನೆಗೆ ಅವನಿಗೇನೆನ್ನಿಸಿತೋ ? ಯಾವ ಸೂಚನೆಯೂ ಇಲ್ಲದೆ ಹೇಳಿದ `ಇನ್ನೂ ಇಪ್ಪತ್ತೈದು ಜಕರ್ಿನ್ನು ಮಾರಾಟವಾಗದಿದ್ದರೂ ಪರವಾಗಿಲ್ಲ ನೀವು ಮಾತ್ರ ಮತ್ತೆ ಬರಬೇಡಿ’ ಎಂದು ಎರಡು ಜಕರ್ಿನ್ನುಗಳನ್ನು ತಲಾ ನೂರಾ ಐವತ್ತೈದು ರೂಪಾಯಿಗಳಂತೆ ಕೊಟ್ಟುಬಿಟ್ಟ! ಅಂಗಡಿಯಿಂದ ನಾವುಗಳು ಈಚೆ ಬರುವಾಗ ಮಾಲೀಕ ಕೊನೆಯ ಮಾತು ಹೇಳಿದ : `ನಾನು ಆ ರೇಟಿಗೆ ಕೊಟ್ಟ ಕಾರಣ ನನ್ನ ಉಳಿದ ಗಿರಾಕಿಗಳು ಈ ಚೌಕಾಸಿ ನೋಡಬಾರದು ಅನ್ನೋ ಕಾರಣಕ್ಕೆ !’. ಅವನ ಅಸಹಾಯಕ ಮಾತು ಕೇಳಿ ನನಗೆ `ಅಯ್ಯೋ’ ಎನ್ನಿಸಿತು. ವಿಶ್ವ ವಿಚಲಿತನಾಗಿರಲಿಲ್ಲ ಬದಲಿಗೆ ದಿಗ್ವಿಜಯ ಸಾಧಿಸಿದ ರಾಜನಂತಾಗಿದ್ದ!

ಈ ಘಟನೆ `ಚೌಕಾಸಿ’ ದಾಖಲೆಯಲ್ಲಿ ಮಹತ್ಟದ್ದು ಎಂದು ನನ್ನ ಅಭಿಪ್ರಾಯ! ಇಂತಾ ಚೌಕಾಸಿ ವೀರನನ್ನು ನೀವು ನೋಡಿರಲಾರಿರಿ ಎಂದಿಕ್ಕೊಳ್ಳುವೆ. ಅಥವಾ ಅಂತವರು ಯಾರಾದರೂ ಇದ್ದರೆ ಹೇಳಿ ಅದನ್ನೂ ದಾಖಲಿಸುವೆ!ಹಲವಾರು ವರ್ಷಗಳಿಂದ ವಿಶ್ವನಂತ ಕೆಲವು ಚೌಕಾಸಿ ವೀರರನ್ನ್ನು ಅಧ್ಯಯನ ಮಾಡಿರುವ ನಾನು ಚೌಕಾಸಿಗೆ ಅಗತ್ಯವಾದ ಕೆಲವು ಗುಣಗಳನ್ನು ಗುರುತಿಸಿದ್ದೇನೆ. ? ಚೌಕಾಸಿ ಮಾಡುವವರು ದಪ್ಪ ಚರ್ಮದವರಾಗಿರಬೇಕು. ಅಕಸ್ಮಾತ್ ಬೈದರೆ ಬೈಸಿಕೊಳ್ಳಬೇಕು!? ನಾಚಿಕೆ ಖಂಡಿತಾ ಇರಲೇಬಾರದು! ಅದಿದ್ದರೆ ಚೌಕಾಸಿ ಅಸಾಧ್ಯ.? ಹಠಮಾರಿತನ ಇರಬೇಕು. ನಾನು ಕಂಡ ಕತ್ತೆಗೆ ಐದು ಕಾಲು ಎಂದು ವಾದಿಸುವ ಖಂಡಿತವಾದಿಯಾಗಿರಬೇಕು!? ಸಮಯಪ್ರಜ್ಞೆ ಖಂಡಿತಾ ಇರಲೇಬಾರದು! ಚೌಕಾಸಿಗೆ ಹೊತ್ತು ಗೊತ್ತೆಲ್ಲಿಯದು ?? ಹೋರಾಟದ ಮನೋಭಾವ ಇರಬೇಕು!? ತನ್ನ ಚೌಕಾಸಿಯಿಂದ ಉಳಿದವರಿಗೆ ತೊಂದರೆಯಾಗುತ್ತದೆ ಎಂದು ಚಿಂತಿಸಲೇಬಾರದು!? ಚೌಕಾಸಿ ಸಮಯದಲ್ಲಿ ಕೋಪ ಮಾಡಿಕೊಳ್ಳಲೇಬಾರದು!? ಅಂಗಡಿಯಾತನನ್ನು ಸಮಯ ನೋಡಿ ಅಣ್ಣ, ತಮ್ಮ, ಯಜಮಾನ ಎಂಬಿತ್ಯಾದಿ ಆತ್ಮೀಯತೆಯ ಭ್ರಮೆ ಹುಟ್ಟಿಸುವಂತ ಮಾತುಗಳನ್ನಾಡಬೇಕು!ಮೇಲಿನ ಗುಣಗಳು ನಿಮ್ಮಲ್ಲಿವೆಯೆ ? ಹಾಗಿದ್ದಲ್ಲಿ ನೀವೂ ಚೌಕಾಸಿ ಛಾಂಪಿಯನ್ ಆಗಬಹುದು. ಅಂದ ಹಾಗೆ ವಿಶ್ವ ಇತ್ತೀಚೆಗೆ ಚೌಕಾಸಿ ಕಲೆಯನ್ನು ಜನಪ್ರಿಯಗೊಳಿಸಲು `ಚೌಕಾಸಿ ತರಬೇತಿ’ ಕಾರ್ಯಕ್ರಮವೊಂದನ್ನು ಹಮ್ಮಿಕ್ಕೊಳ್ಳುವ ಯೋಜನೆ ತಯಾರಿಸುತ್ತಿದ್ದಾನೆ. ಆಸಕ್ತಿಯಿದ್ದರೆ ಸಂಪಕರ್ಿಸಿ. ಕಲಿಕಾ ಶುಲ್ಕದ ಬಗೆಗೆ ಖಂಡಿತಾ ಚೌಕಾಸಿ ಇಲ್ಲ!

 

‍ಲೇಖಕರು avadhi

14 November, 2011

5 Comments

  1. Rankusa

    “ಕಲ್ಲಿನಿಂದ ಹೊಡೆಸಿಕೊಂಡ ಬೀದಿ ನಾಯಿಯಂತೆ ಒಂದೆರಡು ಸಲ ಪ್ರತಿಭಟನೆಯ ಪ್ರಯತ್ನ ಮಾಡಿ…”
    well, in my 30 years of experience on planet earth, i’ve not witnessed even a single instance wherein a stray dog that has retaliated, or at least has tried to retaliate while being hit by a scudding missile (aka stone) thrown at it 😉 i’ve heard nothing but “ಕು೦ಯ್ ಕು೦ಯ್ ರಾಗವ ಹಾಡುವಿರಿ..” as told by our ಪುರಂದರದಾಸರು 🙂 i think that simile is really an insult to our stray dog community of the most humble and noble sorts!

    but a good wordplay with ‘ಚೌಕಾಸಿಶ್ರೀ’ & ‘ಚೌಕಾಸಿಸ್ತ್ರೀ’ !

    nice fun for others, at the cost of your friend’s reputation (if he actually happens to exist in the real world, other than just belonging to the fictional one!:D)

    regs,
    -r

  2. veda

    Ha ha ha sogasadha lekhana,Yako kelavu odhugaru lekhanada hasyavannu saviyade Simili yannu Metaphor madtaro gottilla??
    E- choukasiya bagge heluvudadre navella dodda angadigalalli choukasi madadhe bari sannya vyaparigala hattira choukasi maduva deeraru.

  3. Rankusa

    dearest Veda,

    i’ve got just two highly valuable suggestions for you.

    1) it is not “simili,” but “similE.” and can you give me the name of any other figure of speech (other than simile and metaphor) without looking into Wren and Martin? don’t mind. i know you can’t. anyway, my second suggestion to you, which by far, is of ultimate importance and requires your immediate attention is,

    2) grow up.

    till then, try not to screw around brandishing your halfwit personality.

    good luck,
    -R

  4. veda

    ನನ್ನ ಒಂದೆರಡು ಸಾಲಿನ ಪ್ರತಿಕ್ರಿಯೆಯನ್ನು ಓದಿದ ತಕ್ಷಣವೇ ನನ್ನ ಬುದ್ದಿ ಮತ್ತೆಯನ್ನು ,ವ್ಯಕ್ತಿತ್ವವನ್ನು ಅಳೆಯುವ
    ಬೇರೆಯವರ ಸಣ್ಣ ಸಣ್ಣ ತಪ್ಪುಗಳನ್ನು ಚುಚ್ಚಿ ತೋರಿಸುವ (ಅದೇ ಬೇರೆಯವರು ತಮ್ಮ ತಪ್ಪನ್ನು ತಿಳಿಸಿದರೆ ಕೆರಳುವ )
    ನಾಯಿಯ ಚಿತ್ರವನ್ನು ನೋಡಿಯೇ ಅದು ಗಂಡೋ ಹೆಣ್ಣೋ ಎಂದು ನಿಖರವಾಗಿ ಊಹಿಸುವ
    ಲೇಖನವನ್ನು ಲೇಖನವನ್ನಾಗಿ ಓದದೆ ಪೂರ್ವಾಗ್ರಹಪೀಡಿತರ ಹಾಗೆ ತಮ್ಮ ಅನಿಸಿಕೆಗಳನ್ನು ಬರೆಯುವ
    ರಕ್ಕಸ ಪ್ರತಿಭೆಯ Rawನ್ ಕೂಸ ರೆ ತಮ್ಮ ಈ ಅದ್ಬುತ ಪ್ರತಿಭೆಯನ್ನು ನಮ್ಮಂತಹ ಹುಲುಮಾನವರ
    ಗುಣಾವಲೋಕನ ಮಾಡಲು ಬಳಸದೆ ಸದ್ವಿನಿಯೋಗಿಸಿಕೊಳ್ಳುವುದು ಉತ್ತಮ. ನೀವು ಯಾರೋ ನನಗೆ
    ತಿಳಿಯದು, ನಾನಾರೆಂಬುದು ಸಹ ತಮಗೆ ತಿಳಿಯದು , ಇಂತಹುದರಲ್ಲಿ ತಮ್ಮ ಉಪದೇಶ ಗೌಣ
    ಹಾ! ನಾನಂತೂ ನಿಮ್ಮ ಮಟ್ಟಕ್ಕೆ ಬೆಳೆದಿಲ್ಲ , ಬೆಳೆಯುವುದೂ ಇಲ್ಲ .
    “ನಾನೆನ್ನ ದೇವರೆತ್ತರ “

  5. Rankusa

    Veda (still dearest!),

    never in my wildest dreams i imagined that people so dedicatedly (& affectionately!) follow the crap i type here. makes me feel so proud of myself! (as if i’ve also become an (in)famous writer! seriously)

    anyway, had you been rigorously following my comments, then you must have also read my comments on the article titled “ಸಾವು ಹಠಾತ್ ತಬ್ಬುವ ಮುನ್ನ” by ಸಂತೋಷ್ ಅನಂತಪುರ (http://avadhimag.online/?p=41750); wherein i’ve given a lengthy-to-the-extent-of-boring explanation on why do i have this (if it has to be phrased in your mellowing tongue)– “ಬೇರೆಯವರ ಸಣ್ಣ ಸಣ್ಣ ತಪ್ಪುಗಳನ್ನು ಚುಚ್ಚಿ ತೋರಿಸುವ…” habit. looks like you missed it. well, its never too late. you can always visit that page and try to get what’s been written in there. if you can’t, i shall be glad to help you out.

    “ನಾಯಿಯ ಚಿತ್ರವನ್ನು ನೋಡಿಯೇ ಅದು ಗಂಡೋ ಹೆಣ್ಣೋ ಎಂದು ನಿಖರವಾಗಿ ಊಹಿಸುವ…” well, that was between me, the dog, and the doggy’s owner. why are you even bothered?? now, think with a calm, cool head and figure out who is poking his/her nose in others’ affairs? or is that asking the dog’s name hurt your sentiments in any way? if it did (for you may be owning that dog), then i beg you pardon. never knew that asking someone’s pet’s name can also hurt some totally-unknown person! now read this–> it was my way of highlighting the cuteness of the dog. somehow i wanted it to be dragged into the discussion. i’m not blessed with the ability to look at another dog and sniff out its gender. for e.g. take your own id. it is ‘veda.’ it can either be ‘vedamurthy,’ or simply ‘veda.’ now, i’m helpless but to assume you’re either a female, or a male, or something that categorizes itself between the two genders. isn’t it?

    “ಲೇಖನವನ್ನು ಲೇಖನವನ್ನಾಗಿ ಓದದೆ ಪೂರ್ವಾಗ್ರಹಪೀಡಿತರ ಹಾಗೆ ತಮ್ಮ ಅನಿಸಿಕೆಗಳನ್ನು ಬರೆಯುವ…” show me anyone in here (including yourself) who dissects and bisects anything that he/she has read, the way i do (this reply alone makes one such example). and i always address my comments to the authors but never to other people, until and unless provoked. now tell me which one of the two sentences has been written with prejudice aka ಪೂರ್ವಾಗ್ರಹಪೀಡಿತ— “i think that simile is really an insult to our stray dog community of the most humble and noble sorts!,” OR “Yako kelavu odhugaru lekhanada hasyavannu saviyade Simili yannu Metaphor madtaro gottilla??” 🙂 but seriously, if you compile my comments and publish them, they will sell far better than some of the writings to be found here. if one is not proud, not confident of what he/she writes (including comments), then whats the use of being here? just to applaud at everything they come across, or to extol like “ನೀನೇ ಅಂದ, ನೀನು ಬರ್ದಿದ್ದೆಲ್ಲ ಚಂದ” ಅಂತ?? you know what it is known as? — “HYPOCRISY.” there is a lot of difference between a ‘critique’ and a ‘hypocrite.’ if i was born in the 10th century AD, then you’d probably never got to hear the line “ಕೃತಿರತ್ನಮುಮಂ ಪೇಳ್ ಪರೀಕ್ಷಿಪಂಗೆಂಟೆರ್ದೆಯೇ” !! 😉

    “ನೀವು ಯಾರೋ ನನಗೆ ತಿಳಿಯದು, ನಾನಾರೆಂಬುದು ಸಹ ತಮಗೆ ತಿಳಿಯದು , ಇಂತಹುದರಲ್ಲಿ ತಮ್ಮ ಉಪದೇಶ ಗೌಣ…” great to hear that! but honestly, i do appreciate the way you’ve fought back! and therefore, ತಮ್ಮ ಉಪದೇಶ — it really matters to me! 🙂 coz “ಸರ್ವರೊಳಗೊಂದು ನುಡಿಕಲಿ”ಯೋದ್ರಲ್ಲಿ ಏನೂ ತಪ್ಪಿಲ್ಲ ಅಂತ ಎಲ್ಲೋ ಓದಿದ ನೆನಪು 🙂

    “ನಾನಂತೂ ನಿಮ್ಮ ಮಟ್ಟಕ್ಕೆ ಬೆಳೆದಿಲ್ಲ , ಬೆಳೆಯುವುದೂ ಇಲ್ಲ ….” ಬೆಳೆಯುವುದೂ ಬೇಕಾಗಿಲ್ಲ, ಯಾಕೆಂದ್ರೆ ಬೆಳೆಯೋದಕ್ಕೆ ಸಾಧ್ಯವಿಲ್ಲ! (i’m 5’8″ ;))

    to end it— we’ve talked before, somewhere, sometime. for i can say the gender of the dog just by looking at its face! 😉

    hit me with your best shot!

    cheers!
    -R

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading