ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚೌಕಟ್ಟು ಮೀರಿದ ಚಿತ್ರಗಳು

ಕವಯತ್ರಿ ರೂಪಾ ಹಾಸನ ಅವರು ತಮ್ಮನ್ನು ಕಾಡಿದ ಕೆಲವು ಬಿಂಬಗಳನ್ನು ಕಳುಹಿಸಿಕೊಟ್ಟಿದ್ದರು. ಅದನ್ನು ಅವಧಿಯಲ್ಲಿ ಪ್ರಕಟಿಸಲಾಗಿತ್ತು.
ಇದಕ್ಕೆ ಸಾಟಿಯಾಗುವ ಚಿತ್ರಬಿಂಬಗಳನ್ನು ಕಳಿಸಿಕೊಡಿ ಎಂದು ಓದುಗರಿಗೆ ಆಹ್ವಾನ ನೀಡಿದ್ದೆವು
ಇದಕ್ಕೆ ಪ್ರತಿಕ್ರಿಯೆಯಾಗಿ ಬಂದ ಇನ್ನೊಂದು ಬಿಂಬ ಸರಣಿ ಇಲ್ಲಿದೆ
ಹಾಗೆಯೇ ನಿಮ್ಮನ್ನು ಅತ್ಯಂತ ಕಾಡಿದ ಬಿಂಬ ಯಾವುದು? ಬರೆದು ಅಥವಾ ಚಿತ್ರಿಸಿ ಕಳಿಸಿ.

 

ಚೌಕಟ್ಟು ಮೀರಿದ ಚಿತ್ರಗಳು

ಎಚ್.ಕೆ.ಶರತ್

ಜೀವಂತಿಕೆ
ನಿನ್ನ ಗುರಿ ಏನೆಂದು ಕೇಳಿದರು. ಏನೂ ಇಲ್ಲವೆಂದೆ. ಗೊಂದಲದಲ್ಲಿದ್ದೀಯ ಅಂದರು. ಜೀವಂತವಾಗಿದ್ದೇನೆ ಅಂದೆ.
 
ಅತಾರ್ಕಿಕ
ಹಣದ ಮೇಲೆ ಮೋಹವಿಲ್ಲ. ಮೋಹವಿರುವುದನ್ನು ದಕ್ಕಿಸಿಕೊಳ್ಳಲು ಬೇಕಿರುವುದು ಹಣವೊಂದೇ ಅಲ್ಲ.
 
ಮುನಿಸು
ಚಿಂತನೆಗಳು ನನ್ನೊಂದಿಗೆ ಮಾತು ಬಿಟ್ಟಿವೆ. ನನ್ನ ಪ್ರೇಯಸಿ ಸಂಜೆಯೊಂದಿಗೆ ಮಾತಿಗೆ ಕೂತಿವೆ.

ಹತಾಶೆ
ಚರಂಡಿಯಲ್ಲಿ ಕಟ್ಟಿಕೊಂಡಿದ್ದ ಹೊಲಸು ಬಾಚುತ್ತಿದ್ದವನ ಮುಖದಲ್ಲಿ ಬಿಳುಚಿಕೊಂಡ ಕನಸು ನಸುನಗುತ್ತಿತ್ತು.
 
ಅಗೋಚರ
ದಾರಿಗಳು ನೂರಾರಿದ್ದವು… ಪಯಣ ಪ್ರಾರಂಭಿಸುವ ಮುನ್ನ. ಈಗ ದಾರಿ ಮಧ್ಯದಲ್ಲಿದ್ದೇನೆ. ತಿರುವಿನ ಮುಂದಿರುವುದು ಏನೋ ತಿಳಿಯದು.
 
ಪ್ರೀತಿ
ಬೇಡವೆಂದರೂ ಅವಳ ಮುಡಿಗೇರಿದ ಗುಲಾಬಿ ಹೂವು ಅವಳ ಎದೆ ತುಂಬಾ ಮಾಗದ ಗಾಯ ಮಾಡಿದೆ.
 
ಸೋಮಾರಿ
ಮಾಡಲು ಬೇಜಾನು ಕೇಮೆಗಳಿವೆ. ನಾಳೆಗಳೂ ಕಣ್ಣೆದುರಿಗಿವೆ. ಇಂದು ಸುಮ್ಮನೆ ಬಿದ್ದುಕೊಂಡಿದ್ದೇನೆ… ಕನಸುಗಳನ್ನು ಗುಡ್ಡೆ ಹಾಕುತ್ತಾ…

‍ಲೇಖಕರು G

25 June, 2013

5 Comments

  1. Raghunandan K

    Superb…

  2. chalam

    ಚಿಂತನೆಗಚ್ಚುವ ಸಾಲುಗಳು…ಶರತ್..ಧನ್ಯವಾದಗಳು

  3. G Venkatesha

    Odalu nooraru putagalive. Nannannu ididhittive E choukattillada chitragalu. Deha illide. Yochane ananthadallide.

  4. ರೂಪ ಹಾಸನ

    ಆಪ್ತವಾಗಿವೆ ಶರತ್.ನಿಮ್ಮ ಹಾಯ್ಕುಗಳ ತುಣುಕುಗಳಂತಿವೆ!

  5. ನಾಗರಾಜ್ ಹೆತ್ತೂರ್

    ಕಾಡುವ ಸಾಲುಗಳು….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading