–ಚೇತನಾ ತೀರ್ಥಹಳ್ಳಿ

ಜೋಗತಿ ಹಾಗೆ ಅಲೆಯುತ್ತೇನೆ.
ವಿಳಾಸ ಕೇಳುವಿರಾದರೆ,
ಮನೆಮನೆಯ ಹೆಣ್ಣುಗಳ ಕಣ್ಣಲ್ಲಿ ಹಣಕಿ.
ಅವರೆದೆಯ ಗುಟ್ಟು ನಾನಾಗಿದ್ದೇನೆ
ಬಯಕೆ ಕಟ್ಟಿಕೊಂಡ ಬಸವಿ-
ಬೀದಿಗಿಳಿದಿದೇನೆ
ರೆಕ್ಕೆ ತೊಟ್ಟಿದೇನೆ
ಹಾರುಹಾದಿಯಲ್ಲೆಲ್ಲೂ ಹೆಜ್ಜೆ ಮೂಡದಂತೆ
ಎಚ್ಚರವಿಟ್ಟಿದೇನೆ.
ಅವರೆಲ್ಲರ-
ಒಳಬೇನೆಯ ಗರತಿಯರೆಲ್ಲರ
ಬಯಕೆಯ ಬೀಜಗಳನ್ನ ಹೊತ್ತಿಕೊಂಡಿದೇನೆ
ಕಳ್ಳಕಾಡಿನಲ್ಲಿ ಉತ್ತು
ಸುಖದುಸಿರು ಬೆಳೆಯಬೇಕಿದೆ.
ಪೇಟೆಯಲ್ಲಿ ಗುಲ್ಲು!
ನನ್ನ ನಾಚಿಗೆಟ್ಟ ಅಪರಾಧಕ್ಕೆ
ಸಜೆ ಕೊಡುತ್ತಿದ್ದಾರೆ,
ಯಾವತ್ತೂ ಕನಸು ಕಾಣದಂತೆ
ಕಣ್ಣು ಕೀಳುವುದಾಗಿ ಹೇಳುತ್ತಿದ್ದಾರೆ!!
ಕಿತ್ತ ಕಣ್ಣುಗಳ ಕವಡೆಯಾಗಿಸಿ
ಕಣಿ ಹೇಳುತ್ತೇನೆ,
ಎದೆಯ ಕದವಿಕ್ಕಿ ಬಿಕ್ಕಿದ
ಹಾಡುಗಳಿಗೆ
ದನಿಯಾಗಿ ಸುರಿಯುತ್ತೇನೆ…
ಚೇತನಾ ಕವಿತೆ: ಜೋಗತಿ ಹಾಡು
ನಿಮಗೆ ಇವೂ ಇಷ್ಟವಾಗಬಹುದು…





Delightful, very soothing to the heart. Chethana is after all born to give “chethana” to us. There is both poetry in this composition.
ಅಂತ:ಕರಣ ಕಲಕುವ ಭಾವ ಪ್ರೌಡಿಮೆ ತುಂಬಿದ ಕವನ.
-ಸುನಂದಾ ಕಡಮೆ
ತುಂಬಾ ತುಂಬಾ ಭಾವಪೂರ್ಣವಾಗಿದೆ.
ಗರತಿಯರೆಲ್ಲರ ಬಯಕೆಯ ಬೀಜಗಳನ್ನೆಲ್ಲ ಹೊತಿಕೊಂಡಿದ್ದೇನೆ. ತುಂಬಾ ಇಷ್ಟವಾಯಿತು. ಒಳ್ಳೆಯ ಕವಿತೆ.
good one chetana
soothing to note
Good one..:-)
idu khare jogati haadu
ತುಂಬಾ ಚೆನ್ನಾಗಿದೆ ಕವನ, ಪ್ರತಿಯೊಂದು ಸಾಲುಗಳೂ, ಧ್ವನಿಸುವ ಅರ್ಥಗಳೂ ಎಲ್ಲ . . .