ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಚೆ’ ನೆನಪಲ್ಲಿ ನನ್ನೊಳಗಿನ ಹಾಡು ಕ್ಯೂಬಾ

book_cover_page_1.jpgbook_back_cover_page_2.jpg

ನಾನು ಜಿ ಎನ್ ಮೋಹನ್ ಅವರ ನನ್ನೊಳಗಿನ ಹಾಡು ಕ್ಯೂಬಾ ಓದಿದಾಗ ಒಳಗಿನ ಹೂರಣದಷ್ಟೇ ಕಾಡಿದ್ದು ಅದರ ಮುಖಪುಟ. ಇಂದಿಗೂ ನನ್ನ ಅಚ್ಚುಮೆಚ್ಚಿನ ಪುಸ್ತಕ ಯಾವುದೆಂದು ಕೇಳಿದರೆ ಅದು ‘ನಹಾಕ್ಯೂ’ ನೆ. ಕ್ಯುಬಾದಂತಹ ಪುಟ್ಟ ರಾಷ್ಟ್ರ ಕಿರಾತಕ ಅಮೆರಿಕಾಗೆ ಸೆಡ್ಡ ಹೊಡೆದು ನಿಂತದ್ದಿದೆಯಲ್ಲ ನಿಜಕ್ಕೂ ಅದು ಗ್ರೇಟ್. ಇನ್ನು ನನ್ನ ‘ಚೆ’. ಆತ ನಿಜಕ್ಕೂ ನನ್ನ ಹೀರೋ. ಆತನ ಸಿಗಾರಿನ ಹುಚ್ಚು, ಆಸ್ತಮಾದ ನಂಟು, ಬಂದೂಕಿನ ನಡುವೆಯೇ ಹುಟ್ಟಿದ ಹೋರಾಟ ‘ಚೆ’ ನನ್ನು ನನ್ನಂಥವರ ಮನಸ್ಸಿಗೆ ತಂದು ನಿಲ್ಲಿಸಿದೆ. ಆತ ಕ್ಯೂಬಾದ ಕನಸು ಹೇಗೋ ಹಾಗೆ ಜಗತ್ತಿನ ಎಲ್ಲಾ ಹೋರಾಟಗಾರರ ಕಸುವೂ ಹೌದು. ಅಂತಹ ಹೋರಾಟದ ಕಸುವನ್ನ, ತ್ಯಾಗವನ್ನ ನಮ್ಮ ಮಡಿಲಿಗೂ ತಂದು ಹಾಕಿದ ಮೋಹನ್ ಅವರಿಗೆ ನಾನು ಎಂದಿಗೂ ಋಣಿ. ಅಚ್ಟೇ ಚಂದಾಗಿ ನನ್ನ ಹೀರೋನನ್ನ ಬಿಡಿದಿ ಸುದೇಶ್ ಗು.
ಎರಡು ವರುಷದ ಹಿಂದೆ ‘ಚೆ’ ಯನ್ನ ಹಾಕ್ಕೊಂಡು ಒಂದು ಹೊಸ ವರುಷದ ಶುಭಾಶಯ ಪತ್ರ ಮಾಡಿದ್ದೆ. ಗೆಳೆಯರೆಲ್ಲ ಮೆಚ್ಚಿಕೊಂಡಿದ್ದರು. ‘ಚೆ’ ಯಾರೆಂದೇ ಗೊತ್ತಿಲ್ಲದವರು ಈತ ಯಾರು ಅಂತ ಕೇಳಿ ಒಂದು ಕುತೂಹಲಗೊಂಡಿದ್ದರು. ನನ್ನ ಪ್ರಕಾರ ‘ಚೆ’ ಪರಮ ಕುತೂಹಲವೇ! ಎಂದಾದರೂ ಸಿಕ್ಕಿದರೆ ಅದನ್ನು ಅವಧಿಯ ಮಡಿಲಿಗೆ ಹಾಕಿಯೇನು. ಮತ್ತೆ ಎಲ್ಲಾ ನೆನಪಿಸಿದ್ದಕ್ಕೆ ಥ್ಯಾಂಕ್ಸ್.

ravi1.jpgರವಿ ಅಜ್ಜೀಪುರ

** **
ಬಹಳ ದಿನಗಳಿಂದ ಓದಬೇಕು ಅಂತ ಅಂದುಕೊಂಡಿದ್ದ ‘ ನನ್ನೊಳಗಿನ ಹಾಡು ಕ್ಯೂಬಾ’ ವನ್ನ ನೆನ್ನೆ ಓದಿದೆ. ಖಂಡಿತ ಓದುವ ಮುನ್ನ ಇದು ಇಷ್ಟು ಖುಶಿ ಕೊಡುವ ಪುಸ್ತಕ ಇರಬಹುದು ಅನಿಸಿರಲಿಲ್ಲ. ಅದು ‘ಪ್ರವಾಸ ಕಥನ’ ಅನ್ನುವ ಹಣೆಪಟ್ಟಿ ಹೊತ್ತಿತ್ತಲ್ಲ, ಅದಕ್ಕೆ.
ಪ್ರವಾಸ ಕಥನದ ಜೊತೆಜೊತೆಗೆ ಇತಿಹಾಸ ಕಟ್ಟಿಕೊಡುವುದು, ನನಗೆ ತುಂಬ ಇಷ್ಟವಾಗುವ ಮಾದರಿ. ಮೊದಲು ಕ್ಯೂಬಾ ಬಗ್ಗೆ ಕ್ಯಾಸ್ಟ್ರೋ ಮೇಲಿನ ಕುತೂಹಲದಿಂದಷ್ಟೆ ಓದಿಕೊಂಡಿದ್ದ ನಾನು ಈಗ ಶಿಸ್ತಾಗಿ ಅದರ ಹಿಂದೆ ಬಿದ್ದಿದ್ದೇನೆ. ಓದಿನ ಹುಚ್ಚಿಗೆ ‘…ಕ್ಯೂಬಾ’ ದಂಥ ಪುಸ್ತಕಗಳು ಹೊಸ ಮೇವು ಒದಗಿಸುತ್ತವೆ, ಈಗ ಒದಗಿಸಿದೆ ಕೂಡ.
chetana21.jpgಚೇತನಾ ತೀರ್ಥಹಳ್ಳಿ

**   **

ಚೈತನ್ಯವನ್ನು ಬಡಿದೆಬ್ಬಿಸುವ ಕೃತಿ.
ಬೆಳಗಲಿ ಎಂದೆಂದಿಗೂ ಇದೇ ರೀತಿ.

ಚಂದಿನ | seeshekar@gmail.com | koogu.blogspot.com |

ನನ್ನೊಳಗಿನ ಹಾಡು ಕ್ಯೂಬಾ ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಬನ್ನಿ. ಇಲ್ಲವೆ ಲೋಹಿಯಾ ಪ್ರಕಾಶನ, ಕ್ಷಿತಿಜ, ಕಪ್ಪಗಲ್ಲು ರಸ್ತೆ, ಬಳ್ಳಾರಿ-೫೮೩೧೦೩ ದೂರವಾಣಿ- ೦೮೩೯೨-೨೫೭೪೧೨ ಸಂಪರ್ಕಿಸಿ.

‍ಲೇಖಕರು avadhi

14 February, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading