ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಿಮಮಾಂಡ ಎನ್ ಗೋಜಿ ಅಡಿಚಿ

ಸುಧಾ ಚಿದಾನಂದಗೌಡ 

ಚಿಮಮಾಂಡ ಎನ್ ಗೋಜಿ ಅಡಿಚಿ-
ಜಾಗತಿಕ ಸಾಹಿತ್ಯಲೋಕದಲ್ಲಿ ಇತ್ತೀಚೆಗೆ ಮುಂಚೂಣಿಯಲ್ಲಿರುವ ಹೆಸರು.

ನೈಜೀರಿಯಾ ಮೂಲದ ಅಡಿಚಿ ಅಮೆರಿಕಾದಲ್ಲಿ ನೆಲೆಸಿರುವ ಆಫ್ರಿಕನ್ ಮಣ್ಞಿನ ಆಲೋಚನಾಧಾಟಿಯ ಕತೆಗಾರ್ತಿ. ಈಕೆಯ purple hibiscus ತುಂಬ ಹೆಸರು ಮಾಡಿದ ಅವಾರ್ಡುಗಳನ್ನು ಬಾಚಿಕೊಂಡ ಕಾದಂಬರಿ. ಅಡಿಚಿ ಸ್ತ್ರೀವಾದ ಕುರಿತು ಆಡುವ ಮಾತುಗಳು ಮುಖ್ಯವಾಗಿ ಅಡುಗೆ ಮನೆಯಿಂದ ಆಚೆಗಿನ ವಿಶಾಲ ಪ್ರಪಂಚದಲ್ಲಿ ಮಹಿಳೆಯ ಅಸ್ತಿತ್ವ, ಸಾಧನೆ ಕುರಿತಂತೆ ಇರುವಂಥವು. ಮತ್ತೆ ಮತ್ತೆ ಓದಿದ ಚಿಕ್ಕ ಪುಸ್ತಕ We should all be feminist ಎಂಬ ಭಾಷಣದ ಸಂಗ್ರಹ.

ಅಡಿಚಿಯ ಸುಪ್ರಸಿದ್ಧ ಕತೆಗಳಲ್ಲಿ ಒಂದಾದ Arrangers of marriage ನ್ನು ಕುವೆಂಪು ಭಾಷಾಭಾರತಿ ಪ್ರಾಧಿಕಾರ ದ ಆಫ್ರಿಕನ್ ಸಾಹಿತ್ಯ ವಾಚಿಕೆಗಾಗಿ ಅನುವಾದಿಸುವ ಅವಕಾಶ ಕಳೆದ ವರ್ಷ ನನಗೊದಗಿತ್ತು. ಸರಳ ಮನಸಿನ ನೈಜೀರಿಯನ್ ಯುವತಿಯೊಬ್ಬಳು ಮದುವೆಯ ನಂತರ ಅಮೆರಿಕಾಗೆ ವಲಸೆ ಬರಬೇಕಾದ ಸಂದರ್ಭದಲ್ಲಿ ಅನುಭವಿಸುವ ಸೂಕ್ಷ್ಮ ಸಂಕಟಗಳು, ವಿವಾಹ ವ್ಯವಸ್ಥೆಯ ಅನಿವಾರ್ಯ ಹೊಂದಾಣಿಕೆಗಳ ಈ ಕಥೆಯನ್ನು “ಮದುವೆ ದಲ್ಲಾಳಿಗಳು” ಹೆಸರಿನಲ್ಲಿ ಅನುವಾದಿಸುವಾಗ ಮನಸು ಆ ಯುವತಿಗಾಗಿ ಆರ್ದ್ರಗೊಂಡಿತ್ತು. ಇದೀಗ ಈ ಕತೆಯನ್ನೊಳಗೊಂಡ ಆಫ್ರಿಕನ್ ಸಾಹಿತ್ಯ ವಾಚಿಕೆ ಕುವೆಂಪು ಭಾಷಾ ಭಾರತಿಯಿಂದ  ಪ್ರಕಟಗೊಂಡಿದೆ.

ಓದುಗರಿಗೆ ತಿಳಿದಂತೆ ಅಕಾಡೆಮಿಗಳ ಪುಸ್ತಕಗಳು ಎಲ್ಲ ಕಡೆ ಲಭ್ಯವಿರುವುದಿಲ್ಲ. ಆಯಾ ಮಳಿಗೆಗಳಲ್ಲಿಯೇ ಹುಡುಕಿ ಹೋಗಿ ಕೊಳ್ಳಬೇಕು…ಮತ್ತು ನಾನ್ಯಾವತ್ತೂ ಈ ಮಳಿಗೆಗೆ ಹೋಗುವುದನ್ನು ತಪ್ಪಿಸುವುದಿಲ್ಲ.

Because, These books are worth searching…especially, Chimamanda Ngozi Adichie…

‍ಲೇಖಕರು avadhi

10 April, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading