ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಿನುವಾ ಕಂಡ ಚಿನ್ನದ ನೋಟು

ಚಿನುವಾ ಪೈಲೂರು

ಧಾರವಾಡದಲ್ಲಿ 24.12.2011ರಂದು ಬೆಳಿಗ್ಗೆ ನಾನು ನಾಟಕ ನೋಡಲು ಹೋದಾಗ ಒಂದು ಬ್ಯಾನರ್ ನೋಡಿದೆ. ಅದರಲ್ಲಿ ಹಳೆ ನಾಣ್ಯ ಹಾಗೂ ನೋಟುಗಳ ಪ್ರದರ್ಶನ ಎಂದು ಬರೆದಿತ್ತು. ನಾನು ಹೋಗಿ ನೋಡಿದೆ. ಸ್ಥಳ: ವಿದ್ಯಾವರ್ಧಕ ಸಂಘದಲ್ಲಿ. ಆಮೇಲೆ ಕುತೂಹಲವಾಯಿತು. ನನಗೆ ನಾಟಕ ನೋಡಬೇಕಿತ್ತು. ಆದ್ದರಿಂದ ಬಹಳ ಸಮಯ ಇರಲು ಸಾಧ್ಯವಾಗಲಿಲ್ಲ.

ಮರುದಿನ ಮಧ್ಯಾಹ್ನ ಎರಡೂ ಹದಿನೈದಕ್ಕೆ ಬಂದೆ. ಆಗ ನನ್ನ ಗೆಳತಿ ಭೂಮಿಕಾ ಇದ್ದಳು. ಅಲ್ಲಿ ಒಂದು ಸಾವಿರ ನಾಣ್ಯಗಳು ಇದ್ದವು. ಒಂಭೈನೂರು ನೋಟುಗಳು ಇದ್ದವು. ಅಲ್ಲಿ 175 ದೇಶಗಳ ನಾಣ್ಯಗಳು ಹಾಗೂ ನೋಟುಗಳು ಇದ್ದವು. ಐದು ಚಿನ್ನದ ನೋಟುಗಳು, ಎರಡು ಚಿನ್ನದ ನಾಣ್ಯಗಳು ಇದ್ದವು. ಬ್ರಿಟಿಶ್ ಕಾಲದ ನಾಣ್ಯಗಳು, ಪೋಚರ್ುಗೀಸರ ನಾಣ್ಯಗಳು, ವಿಜಯನಗರ, ಮೈಸೂರು ಅರಸರ ನಾಣ್ಯಗಳು ಇದ್ದವು. ಆನೆ, ಸಿಂಹ, ಘೇಂಡಾಮೃಗದಂತಹ ನಾಣ್ಯಗಳೂ ಇದ್ದವು. ಆಹಾ ಎಂತಹ ನಾಣ್ಯಗಳು! ಗಿಟಾರ್ ನಾಣ್ಯಗಳು. ಅದು ಸೋಮಾಲಿಯಾ ದೇಶದ್ದು. ಒಂದು ಬೇರೆ ತರಹದ ನಾಣ್ಯವಿತ್ತು. ಅದು ವೈ ಶೇಪ್ನಲ್ಲಿ ಇತ್ತು. ಅದು ಬಿಜಾಪುರದ ಆದಿಲ್ಶಾಹಿ ರಾಜನ ಲಾರಿನ್ ನಾಣ್ಯವಂತೆ. ಅದು ಬೆಳ್ಳಿಯದ್ದು.

ಮತ್ತೆ ಬೇರೆ ಬೇರೆ ಆಕಾರದ ನಾಣ್ಯಗಳೂ ಇದ್ದವು. ಭಾರತದ ನೂರು ರೂಪಾಯಿ ನಾಣ್ಯವೂ ಇತ್ತು. ಅದನ್ನು ಸಂಗ್ರಹಿಸಲು 8,000 ರೂಪಾಯಿ ಖಚರ್ಾಗುತ್ತದಂತೆ. ಅದು ಬಿಡುಗಡೆ ಆಗುವಾಗಲೇ ತಗೊಂಡರೆ 4,500 ರೂಪಾಯಿ. ಮತ್ತೊಂದು ಸ್ವೀಡನ್ ದೇಶದ ಅತಿ ದೊಡ್ಡ ನೋಟು. ಅದು ಬಹಳ ಚೆನ್ನಾಗಿತ್ತು. ಹಿಂದಿನ ಕಾಲದ ನಾಣ್ಯಗಳು ಐನೂರಕ್ಕೂ ಹೆಚ್ಚು ಇದ್ದವು. ಅವರು ಒಂದರಿಂದ ಸಾವಿರದ ವರೆಗಿನ ನೋಟುಗಳನ್ನು ಸಂಗ್ರಹಿಸಿದ್ದರು. ಒಂದರಿಂದ ನೂರು ರೂಪಾಯಿ ನಾಣ್ಯಗಳು. ವಿವಿಧ ದೇಶಗಳ ಪ್ಲಾಸ್ಟಿಕ್ ನೋಟುಗಳೂ ಇದ್ದವು. ಹೊಂಡೂರಾಸ್ನ ಇಪ್ಪತ್ತು ರೂಪಾಯಿ ನೋಟು, ಆಸ್ಟ್ರೇಲಿಯಾದ ಐದು ಡಾಲರ್, ಪಾಪುವಾ ನ್ಯೂ ಗಿನಿಯಾದ ಎರಡು ರೂಪಾಯಿ. ಇವೆಲ್ಲ ಪ್ಲಾಸ್ಟಿಕ್ ನೋಟುಗಳು.

ನನಗೆ ಬಹಳ ಅಚ್ಚರಿಯಾದದ್ದು ಚೀನಾದ ಬಿದಿರು ನಾಣ್ಯ. ಅದು ಬಿದಿರಿನಿಂದ ತಯಾರಿಸಲಾಗಿತ್ತು. ಇದು ಬಹಳ ಅಚ್ಚರಿಯಾದದ್ದು ನೋಡಿ. ಅದು ಈಗ ಉಪಯೋಗಿಸುವುದಿಲ್ಲವಂತೆ. ಎಣ್ಣೆ ಬಿದ್ದು, ಬೆಂಕಿ ಹಚ್ಚಿ, ಅಕಾಸ್ಮಾತ್ತಾಗಿ ಹಾಳಾದದ್ದು ಎಲ್ಲ ಸೇರಿಸಿ ಆರ್.ಬಿ.ಐ.(ರಿಸವರ್್ ಬ್ಯಾಂಕ್ ಆಫ್ ಇಂಡಿಯಾ)ಯವರು ಪುಡಿ ಮಾಡಿ ನೋಟಿನ ಕೇಕ್ ಮಾಡುತ್ತಾರೆ. ಅದೂ ಅಲ್ಲಿ ಇತ್ತು.

ಥೈಲಾಂಡ್ನ ರಾಜರ ನೆನಪಿನಲ್ಲಿ ನೋಟುಗಳನ್ನು ತಯಾರಿಸಿ ಅದರ ಹಿಂದೆ ಅವರ ಚರಿತ್ರೆ ಬರೆಯುತ್ತಾರೆ. ನಮ್ಮ ದೇಶದ ಒಂದು ವಿಶೇಷವಾದ ಒಂದು ಸಾವಿರ ರೂಪಾಯಿ ನೋಟು ಸಂಗ್ರಹಿಸಲು ಹದಿನೆಂಟು ಸಾವಿರ ರೂಪಾಯಿ ಖಚರ್ಾಗುತ್ತದಂತೆ. ಇದು ಬಹಳ ದುಡ್ಡಿನ ಕೆಲಸ.

ಬೇರೆ ಬೇರೆಯವರು ಆರ್.ಬಿ.ಐ. ಗವರ್ನರ್ ಆಗಿದ್ದಾಗ ಬಿಡುಗಡೆ ಮಾಡಿದ ಒಂದು, ಎರಡು ರೂಪಾಯಿ ನೋಟುಗಳನ್ನೂ ಸಂಗ್ರಹ ಮಾಡಿದ್ದರು. ಮಜ ಮಜ ಸಂಖ್ಯೆಗಳಿದ್ದ ಹತ್ತು ರೂಪಾಯಿ ಇತ್ತು.

ಇದನ್ನು ಒಂಭತ್ತು ಜನ ಸೇರಿ ಸಂಗ್ರಹಿಸಿದ್ದಾರೆ. ಅವರೆಲ್ಲ ಸೇರಿ ಆರು ವರ್ಷದ ಮೊದಲು ಫಿಲಾ ಐಲೆಂಡ್ ಸ್ಥಾಪಿಸಿದ್ದರು. ನನಗೆ ಎರಡು ದಿನ ಇಬ್ಬರು ಮಾತನಾಡಲಿಕ್ಕೆ ಸಿಕ್ಕಿದರು. ಮೊದಲ ದಿನ ಸಿಕ್ಕಿದವರು ಭರತ್ ಕುಮಾರ್ ಸರ್. ಅವರು 38 ವರ್ಷಗಳಿಂದ ಸಂಗ್ರಹ ಮಾಡುತ್ತಿದ್ದಾರೆ. ಅವರು ಚೆನ್ನಾಗಿ ವಿವರಿಸಿದರು. ಅವರು ಫಿಲಾ ಐಲೆಂಡ್ ಅಂದರೆ ಸ್ಟಾಂಪಿಗೆ ಸಂಬಂಧಿಸಿದ ವಿಷಯಗಳು ಎಂದರು. ಎರಡನೇ ದಿನ ಸಿಕ್ಕಿದವರ ಹೆಸರು ಕೇಳಲು ಮರೆತು ಹೋಯಿತು.

ಸಂಗ್ರಹ ಮಾಡಿದವರ ಹೆಸರುಗಳು:

ಭರತ್ ಕುಮಾರ್, ಯೂನೂಸ್ ಸವಣೂರ್, ವಿಕಾಸ್ ಚವ್ಹಾಣ್, ರಾಘವೇಂದ್ರ ಪೈ, ಆಕಾಶ್ ಹುಬ್ಬಳ್ಳಿ, ವಿಜಯಕುಮಾರ್ ವಾಳ್ವೆ, ವೆಂಕಟೇಶ್ ನಂದಗಾವಿ, ಪ್ರಮೋದ್ ದೇಶಪಾಂಡೆ ಹಾಗೂ ಪ್ರಮಿತ್ತ ಮುರಗೇಂದ್ರ ಪಾಟೀಲ

ಇವರೆಲ್ಲರೂ ಹುಬ್ಬಳ್ಳಿ, ಧಾರವಾಡದವರು. ಇವರಿಗೆ ಇಷ್ಟು ನೋಟುಗಳು ಎಲ್ಲಿಂದ ಸಿಕ್ಕಿತಂದರೆ ಅಪ್ಪನ ಜೋಬಿನಿಂದ ಹಾಗೂ ಆಪ್ತರು ಬೇರೆ ದೇಶಕ್ಕೆ ಹೋಗಿರುತ್ತಾರೆ. ಅವರು ಪಾಪಾಸ್ ಬರುವಾಗ ಅವರ ಹತ್ತಿರ ಕೇಳಿ ಪಡೆಯುವುದು. ಇದರಿಂದಾಗಿ ಇವರಿಗೆ ಇಷ್ಟು ನೋಟು ಹಾಗೂ ನಾಣ್ಯಗಳು ಸಿಗುತ್ತಿವೆ.

ನಾವು ಮಕ್ಕಳು ಈಗಲೇ ಈ ಕೆಲಸವನ್ನು ಮಾಡಬೇಕು. ಇದರಿಂದ ಕಲಿಕೆಯೂ ಆಗುತ್ತದೆ. ವಿಜ್ಞಾನಿ, ಸಾಹಿತ್ಯ, ಪರಿಸರದ ಬಗ್ಗೆ ವಿಷಯವೂ ಸಿಗುತ್ತದೆ. ಹೇಗೆಂದರೆ ಅವರ ಬಗ್ಗೆ ನೋಟುಗಳು ಇರುತ್ತದೆ. ಅದರಲ್ಲಿ ಅವರ ಹೆಸರುಗಳು, ವಿವರಗಳು ಇರುತ್ತವೆ. ಅದರಿಂದ ಗೊತ್ತಾಗುತ್ತದೆ. ಹೀಗೇ ಸ್ಟಾಂಪ್ ಕೂಡ ಸಂಗ್ರಹ ಮಾಡಬಹುದು.

ಧಾರವಾಡ ಉತ್ಸವದಿಂದ ನನಗೆ ಇದೆಲ್ಲ ನೋಡಲು ಸಿಕ್ಕಿತು.

‍ಲೇಖಕರು G

27 December, 2011

2 Comments

  1. ರಾಮಚಂದ್ರ ದೇವ

    Congrats ಚಿನುವಾ. ನನಗೆ ನಾಣ್ಯ ಸಂಗ್ರಹಕ್ಕಿಂತ ಹೆಚ್ಚು ಖುಷಿಯಾದದ್ದು ನಿನ್ನ ಕನ್ನಡ, ನಿನ್ನ ಬರೆಯುವ ಉತ್ಸಾಹ, ಮತ್ತು ಭವಿಷ್ಯದ ಬಗೆಗಿನ ನಿನ್ನ ಯೋಜನೆ ನೋಡಿ.I wish you all the best.

  2. malathi S

    ಚಿನುವಾ ಪುಟ್ಟು
    “ನಾವು ಮಕ್ಕಳು ಈಗಲೇ ಈ ಕೆಲಸವನ್ನು ಮಾಡಬೇಕು. ಇದರಿಂದ ಕಲಿಕೆಯೂ ಆಗುತ್ತದೆ. ವಿಜ್ಞಾನಿ, ಸಾಹಿತ್ಯ, ಪರಿಸರದ ಬಗ್ಗೆ ವಿಷಯವೂ ಸಿಗುತ್ತದೆ. ಹೇಗೆಂದರೆ ಅವರ ಬಗ್ಗೆ ನೋಟುಗಳು ಇರುತ್ತದೆ. ಅದರಲ್ಲಿ ಅವರ ಹೆಸರುಗಳು, ವಿವರಗಳು ಇರುತ್ತವೆ. ಅದರಿಂದ ಗೊತ್ತಾಗುತ್ತದೆ. ಹೀಗೇ ಸ್ಟಾಂಪ್ ಕೂಡ ಸಂಗ್ರಹ ಮಾಡಬಹುದು.”

    ಎಷ್ಟು ಸರಿಯಾಗಿದೆ ನಿನ್ನ ವಿಚಾರ.ತುಂಬಾ ಚೆನ್ನಾಗಿದೆ ಬರಹ. ನಿನಗೆ all the best. Love you
    🙂
    ಮಾಲತಿ ಆಂಟಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading