ಚಿತ್ರೋತ್ಸವಕ್ಕೆ ತೆರೆ ಬಿದ್ದಿದೆ, ಮುಂದಿನ ಚಿತ್ರೋತ್ಸವ ಮತ್ಯಾವಾಗ ಎಂದು ಈಗಲೇ ಅನ್ನಿಸುತ್ತಿದೆ. ಈ ಸಲದ ಚಿತ್ರೋತ್ಸವ ಹೆಚ್ಚು ಯಶಸ್ಸು ಕಂಡಿದ್ದರೆ ಅದಕ್ಕೆ ಕಾರಣ ಅದನ್ನು ಪ್ರೀತಿಯಿಂದ ಬಂದು ನೋಡಿದ ಚಿತ್ರ ಪ್ರೇಮಿಗಳು. ಚಿರ್ತ್ರೋತ್ಸವ ಅಂದ್ರೆ, ಸಿನಿಮಾ ಅಂದ್ರೆ ಹೀರೋ, ಹೀರೋಯಿನ್, ನಿರ್ದೇಶಕ, ನಟವರ್ಗ ಮಾತ್ರ ಅಲ್ಲ, ಪ್ರೇಕ್ಷಕ ಸಹ ಅನ್ನುವುದು ಈ ಚಿತ್ರೋತ್ಸವದಲ್ಲಿ ಕಂಡು ಬಂತು. ಜನ ಸಾಲು ಸಾಲಾಗಿ ಬಂದು ಚಿತ್ರ ವೀಕ್ಷಿಸಿದ್ದಾರೆ.
’ಆಮ್ ಆದ್ಮಿ’, ’ಖಾಸ್ ಆದ್ಮಿ’ ಆದ ಈ ದಿನಮಾನದಲ್ಲಿ ಚಿತ್ರೋತ್ಸವ ಅಂದ್ರೆ ಏನು ಅಂತ ’ಆಮ್’ ಜನರನ್ನು ಪ್ರಶ್ನೆ ಕೇಳಬೇಕು ಅಂದುಕೊಂಡೆವು. ಆದರೆ ಅವರೆಲ್ಲರೂ ಖಾಸ್ ಆದ ಉತ್ತರಗಳನ್ನೇ ಕೊಟ್ಟಿದ್ದಾರೆ. ಅವರ ಮಾತುಗಳೊಂದಿಗೆ ಚಿತ್ರೋತ್ಸವಕ್ಕೆ ಬೈ ಹೇಳೋಣವೇ?



Thank you Avadhi for covering film festival in style and good detail.
– Ramakrishna
– ಚಿತ್ರೋತ್ಸವವೊಂದೆ ಅಲ್ಲ ಯಾವುದೆ ಸಭೆ ಸಮಾರಂಭಗಳು ಸಾಹಿತ್ಯ ಚಟುವಟಿಕೆಗಳು ಕ್ರೀಡೆಗಳು ಕಳೆಗಟ್ಟುವುದು ಜನ ಸಾಮಾನ್ಯರ ಸಹ ಭಾಗಿತ್ವದಿಂದೆ. ಪ್ರೇಕ್ಷಕರು ಬರಿ ಫಾರ್ಮುಲಾ ಚಿತ್ರಗಳನ್ನು ನೋಡುತ್ತಾರೆ ಎಂದು ತಮ್ಮ ಅಣಿ ಮುತ್ತುಗಳನ್ನು ಉದುರಿಸುವ ಈಗಿನ ನಿರ್ಮಾಪಕ ನಿರ್ದೇಶಕರು ದೇವಲೋಕದಿಂದ ಇಳಿದು ಬಂದವರಂತಾಡುವ ನಾಯಕ ನಾಯಕಿಯರು ಇದನ್ನು ಮನಗಾಣಬೇಕು.
Avadhi really did a very good job about covering the FF.