ಚಿತ್ರೋತ್ಸವದಲ್ಲಿ ಆಸಕ್ತಿಯಿಂದ ಭಾಗಿಯಾಗಿದ್ದ ’ಡುಂಡಿ’ ಲೇಖಕ ಯೋಗೇಶ್ ಮಾಸ್ಟರ್ ಅವರನ್ನು ’ಅವಧಿ’ಯ ಪ್ರತಿನಿಧಿ ಸೀಮಾ ಭೇಟಿಯಾದಾಗ,
ಚಿತ್ರೋತ್ಸವದ ಬಗ್ಗೆ ಅವರು ಹೇಳಿದ್ದು ಹೀಗೆ :

ಡುಂಡಿ ಯೋಗೀಶ್ ಮಾಸ್ಟರ್, ” ಚಿತ್ರೋತ್ಸವ ತುಂಬಾ ಅರ್ಥಪೂರ್ಣವಾಗಿದೆ. ಅದರಲ್ಲೂ ಸಿನಿಮಾ ಕ್ಷೇತ್ರಕ್ಕೆ ಹೊಸದಾಗಿ ಹೆಜ್ಜೆ ಇಡುವವರಿಗೆ ಇದು ತುಂಬಾ ಒಳ್ಳೆಯ ಅನುಭವ. ಬೇರೆ ಬೇರೆ ದೇಶದ ಕಥೆ, ಅಲ್ಲಿನ ಜೀವನ ಕ್ರಮ, ಕಲಾವಿದರ ನಟನಾ ವಿಧಾನ, ತಂತ್ರಜ್ಞಾನ ಎಲ್ಲಾ ಅಭ್ಯಾಸ ಮಾಡಬಹುದು.
ಅಷ್ಟೇ ಅಲ್ಲ, ಬೇರೆ ದೇಶದ ರಾಜಕೀಯ, ಸಾಂಸ್ಕೃತಿಕ, ಭೌಗೋಳಿಕ ಪ್ರಭೇಧಗಳು ಹಾಗು ವ್ಯತ್ಯಾಸಗಳನ್ನು ಈ ಅಂತರ್ರಾಷ್ಟ್ರೀಯ ಚಿತ್ರೋತ್ಸವಗಳು ನಮ್ಮ ಅಂಗಳದಲ್ಲೇ ತಂದು ನಿಲ್ಲಿಸುತ್ತವೆ.
ಹಾಗಾಗಿ ಇದರಲ್ಲಿ ತಪ್ಪದೆ ಭಾಗಿಯಾಗುತ್ತೇನೆ. “


0 Comments