ಚಿತ್ರೋತ್ಸವಕ್ಕೆ ಜುಬ್ಬಾ ಐರನ್ ಮಾಡಿಕೊಂಡು ಬಂದವರ ಒಂದು ಸ್ವಗತ

ವಿವೇಕ್ 

ಇವತ್ತು International Film Festival ದಿನ…
ನಾನಂತು ಇವತ್ತು ಜುಬ್ಬ iron ಮಾಡ್ಕೊಂಡು ಬಂದಿದ್ದೇನೆ.

ನನ್ನ ಪಕ್ಕ, ಹಿಂದೆ, ಮುಂದೆ
ಬುದ್ಧಿಜೀವಿ ಇದಾರೋ ಅಥವಾ ಯಾರಿದ್ದಾರೋ ಗೊತ್ತಿಲ್ಲ…
ಆದರೂ ಸಿನಿಮಾ ನೋಡುತ್ತೇನೆ…

ಯಾವುದೇ foreign ಭಾಷೆ ನನಗೆ ಬರೋದಿಲ್ಲ
ಹಾಗಾಗಿ ನಾನು subtitles ಓದದೇ ವಿಧಿಯಿಲ್ಲ…

ನಗು ಎಲ್ಲ ಕಡೆಯೂ ನಗುವೇ…
ದುಃಖದ ನಗು ಸಾಂತ್ವನದ ನಗು…
ನಗುವಿಗೆ ಒಂದೊಂದು ದೇಶದಲ್ಲಿ ಒಂದೊಂದು ಅರ್ಥವಿಲ್ಲ,
ಅದು ಎಲ್ಲ ಕಡೆಯೂ ನಗುವೇ…
ನಗುವನ್ನೂ ಅರ್ಥಮಾಡಿಕೊಳ್ಳಲು
subtitle ಬೇಕು ಎನ್ನುವವರು ಕಾಣದಿರುವ ದಿನ…
ಇವತ್ತು International Film Festival ದಿನ

ಎಂಟು ದಿನದಲ್ಲಿ ನೋಡುವುದು 30 ಸಿನಿಮಾ…
ನಮ್ಮ ಆರಂಭ South End Circle Metro
ಮಧ್ಯಂತರ ಒರಾಯನ್ ಮಾಲ್
ಅಂತ್ಯ ಮತ್ತೆ South End Circle Metro…

ಪರದೇಶಿ ಭಾಷೆಯೋ
ಇಂಗ್ಲೀಷ್ ಭಾಷೆಯೋ
ಇರಾನೋ ಇರಾಕೋ ಗೊತ್ತಿಲ್ಲ…
ಆದರೆ ಒಳ್ಳೆಯ ಸಿನಿಮಾ ನೋಡಲು ಹೋಗುತ್ತೇನೆ…
ಇವತ್ತು International Film Festival ದಿನ

ನೀವು ಅಲ್ಲೆಲ್ಲೋ ಗಲ್ಲಿಯಲ್ಲಿ
ಸಿಗರೇಟು ಸೇದುವ ಬಿಡುವಿನಲ್ಲಿ
ನೋಡದ ಕನ್ನಡ ಸಿನಿಮಾದ ಬಗೆಗೆ
ಯಾವುದೋ ರೇಂಜಿಗೆ
ಅಣಕವಾಡುವ ಹೊತ್ತಿಗಾಗಲೇ
ನಾನು ಎರಡು ಸಿನಿಮಾ ನೋಡಿ ಮುಗಿದಿರುತ್ತದೆ…
ಇವತ್ತು International Film Festival ದಿನ

ವಿ.ಸೂ: ಈ ಪೋಸ್ಟ್ ಎಲ್ಲರಿಗೂ ಅನ್ವಯಿಸುವುದಿಲ್ಲ. ಜುಬ್ಬ iron ಆಗಿದೆ ಎಂಬುದಕ್ಕೆ ಸಾಕ್ಷಿ ಪಟದಲ್ಲಿದೆ. ನೋಡಿ.

‍ಲೇಖಕರು avadhi

February 28, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: