ಚಲಂ
ಚಲನ ಚಿತ್ರಗಳು ನಮ್ಮ ಈಗಿನ ಮನರಂಜನೆಯ ಬಹುಮುಖ್ಯ ಭಾಗ ಎಂದು ಹೇಳಲು ಸಾಧ್ಯ ವಿದೆಯೇ? ಉತ್ತಮ ಅಭಿರುಚಿಯನ್ನು ಬಯಸುವ ಯಾರೂ ಚಲನಚಿತ್ರಗಳನ್ನು ತಮ್ಮ ಮನರಂಜನೆಯ ಮುಖ್ಯ ಮಾಧ್ಯಮವಾಗಿ ಪರಿಗಣಿಸುವುದು ಸಾಧ್ಯವಿಲ್ಲ. ಚಲನಚಿತ್ರಗಳು ಸದಭಿರುಚಿಯ ಮನಸ್ಸನ್ನು ದೂರ ಮಾಡಿವೆ. ಹಲವು ದಶಕಗಳ ಹಿಂದೆ ಚಲನಚಿತ್ರ ನೋಡುವುದು ಒಂದು ರೀತಿ ಅಪರಾಧ ಎಂದೇ ಭಾವಿಸುವಂತಹ ಮಡಿವಂತಿಕೆ ಯಿತ್ತು. ಈಗ ಮಡಿವಂತಿಕೆ ಹಾಳು ಬಿದ್ದು ಹೋಗಲಿ ತಮ್ಮ ನೆಮ್ಮದಿಯ ಕಾರಣಕ್ಕಾಗಿ ಚಲನಚಿತ್ರಗಳನ್ನು ನೋಡುವುದು ಅಪರಾಧ ಎನ್ನುವಲ್ಲಿಗೆ ಬಂದು ನಿಂತಿದೆ.

ಮೊನ್ನೆ ನ್ಯಾಯಾಂಗವು ಕನ್ನಡದಲ್ಲಿ ಡಾ ರಾಜ್ಕುಮಾರ್ ಬಿಟ್ಟರೆ ಬೇರೆ ಉತ್ತಮ ನಟನಿಲ್ಲ ಎಂದು ಅಭಿಪ್ರಾಯ ಪಟ್ಟಿದೆ. ಅದರ ಜತೆಗೆ `ಮುಂಗಾರು ಮಳೆ’ ಚಿತ್ರ ಯಾವ ಸಂದೇಶವನ್ನು ನೀಡಿದೆ. ಅದು ಮನರಂಜನೆಗೆ ಮಾತ್ರ ಸೀಮಿತ ವಾಗಿದೆ. ಅದರ ಮುಖಾಂತರ ಯೋಗ್ಯತೆ ಇಲ್ಲದ ವರು ನಾಯಕರಾಗುವುದು ಸಾಧ್ಯವಾಗಿದೆ ಎಂದು ಹೇಳಿದೆ. ಹಿಂದಿ ಚಿತ್ರರಂಗದಲ್ಲೂ ಸದಭಿರುಚಿ ಇಲ್ಲವಾಗಿದೆ. ಮುನ್ನಾಬಾಯಿ ಎಂ ಬಿ ಬಿ ಎಸ್ ಎಂಬ ಚಿತ್ರದಲ್ಲಿ ವಿದ್ಯಾರ್ಥಿಗಳು ಹೇಗೆ ಕಾಪಿ ಹೊಡೆಯ ಬೇಕೆಂಬುದನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಕೆಲವು ಕಪ್ಪು ಚುಕ್ಕೆಗಳ ನಡುವೆಯೂ ನ್ಯಾಯಾಂಗವು ತನ್ನ ಮಹತ್ವವನ್ನು ಉಳಿಸಿಕೊಂಡಿದೆ. ದುರಾದೃಷ್ಟವೆಂದರೆ ನ್ಯಾಯಾಂಗವು ಚಲನಚಿತ್ರ ವಿಷಯವನ್ನು ವಿಶ್ಲೇಷಿಸುವುದಲ್ಲಿ ಸಂಪೂರ್ಣ ಭರವಸೆ ಮೂಡಿಸದೇ ಹೋಗಿದೆ. ಅಲ್ಲಿಗೆ ನಮಗೆ ಸ್ಪಷ್ಟವಾಗಿ ಬಿಡುತ್ತದೆ. ನಾವು ಯಾವ ವಿಚಾರದ ಬಗ್ಗೆಯೂ ಸ್ಪಷ್ಟವಾದ ನಿರ್ಧಾರಕ್ಕೆ ಬರುವುದು ಸಾಧ್ಯವಿಲ್ಲ ಎಂಬುದು.
ಡಾ ರಾಜ್ಕುಮಾರ್ ವಿಚಾರದಲ್ಲಿ ಕೋರ್ಟ ಹೇಳಿರುವುದು ಸರಿಯಾಗಿಯೇ ಇದೆ. ಕನ್ನಡ ಚಿತ್ರರಂಗಕ್ಕೆ ಸದಭಿರುಚಿಯ ಮನಸುಗಳನ್ನು ಎಳೆದು ತರುವಲ್ಲಿ ರಾಜರವರದ್ದು ಮಹತ್ವದ ಪಾತ್ರ . ಅದೇ ಕಾರಣಕ್ಕೆ ಕನ್ನಡ ಚಿತ್ರರಂಗಕ್ಕಷ್ಟೇ ಅಲ್ಲದೇ ಕನ್ನಡಕ್ಕೆ ಒಬ್ಬ ಸಾಂಸ್ಕೃತಿಕ ರಾಯಭಾರಿ ಅಂತಿದ್ದರೆ ಅದು ರಾಜ್ ಕುಮಾರ್. ತಮಿಳು ಚಿತ್ರರಂಗದಲ್ಲಿ ಹೋರಾಟದ ನೆಲೆಯ ಒಂದು ಮುಖದಂತೆ ನಿಂತು ಎಂ.ಜಿ. ಆರ್. ರೂಪುಗೊಂಡಂತೆ ರಾಜ್ಕುಮಾರ್ ರೂಪುಗೊಂಡವರಲ್ಲ . ಆದರೆ ರಾಜ್ ಹೋರಾಟಕ್ಕೆ ಮನಸ್ಸುಗಳನ್ನು ನೆಲೆಗೊಳಿಸಿದ ರೀತಿ ಅದ್ಭುತ ವಾದದು. ರಾಜ್ಕುಮಾರ್ ಹೇಗೆ ರೂಪುಗೊಂಡರು ಎಂಬುದನ್ನು ನೋಡದಿದ್ದರೆ ನಿಜವಾಗಿ ರಾಜ್ ರವರನ್ನು ಗ್ರಹಿಸಲು ಸಾಧ್ಯವಾಗುವುದಿಲ್ಲ. ರಾಜ್ಕುಮಾರ್ ಉತ್ತಮ ಸಂಸ್ಕಾರಗಳಿಂದ ರೂಪು ಗೊಂಡ ತಂತ್ರಜ್ಞರುಗಳಿಂದ ಉದಯಿಸಿದವರು. ಹಾಗೆಯೇ ರಾಜ್ಕುಮಾರ್ರವರ ಹತ್ತಿರಕ್ಕೆ ಯಾರೂ ಜೋಗಿ, ಕರಿಯ ತರಹದ ಕತೆಗಳನ್ನು ತೆಗೆದುಕೊಂಡು ಹೋಗುವುದು ಸಾಧ್ಯವಿರಲಿಲ್ಲ. ರಾಜ್ಕುಮಾರ್ ಮೊಟ್ಟಮೊದಲು ಕತೆಯ ಕಡೆ ಗಮನ ವಹಿಸುತ್ತಿದ್ದರು. ಅವರು ಪತ್ನಿ ಹಾಗೂ ತಮ್ಮನನ್ನು ಜತೆಗೆ ಗಟ್ಟಿಯಾಗಿ ನಿಲ್ಲಿಸಿಕೊಂಡರು.
ಒಬ್ಬ ಜನಪ್ರಿಯ ನಾಯಕನಿಗೆ ಕತೆಗಳನ್ನು ಆಯ್ಕೆ ಮಾಡುವ ಅಭಿರುಚಿಯನ್ನು ರೂಪಿಸುವ ಶಕ್ತಿ ಇದೆ ಎಂದು ತೋರಿಸಿದವರು ರಾಜ್ ಕುಮಾರ್.ಅದು ರಾಜ್ಕುಮಾರ್ ಮಾತ್ರವಲ್ಲ ಯಾವುದೇ ಜನಪ್ರಿಯ ನಟನಿಗೂ ಇರುವಂತ ಶಕ್ತಿ ಎಂಬುದನ್ನು ಮರೆಯುವಂತಿಲ್ಲ. ಅದಕ್ಕೆ ಉತ್ತಮವಾದ ಉದಾಹರಣೆಯೆಂದರೆ ಉಪೇಂದ್ರ. ದಿನೇಶ್ ಬಾಬು, ನಾಗತಿಹಳ್ಳಿ ಚಂದ್ರಶೇಖರ್ರಂತಹ ಉತ್ತಮ ಅಭಿರುಚಿ ನಿರ್ದೇಶಕರನ್ನು`ಗೋಲಿಬಾರ್ ‘ ರಾಜಕೀಯದ ಶಿವಮಣಿಯಂತಹ ನಿರ್ದೇಶಕರ ಜತೆಗೆ ತಂದು ನಿಲ್ಲಿಸಿ ಬಿಡುತ್ತಾರೆ. ಉಪೇಂದ್ರ ಅಂದರೆ ಉಪೇಂದ್ರ ನಂತಹ ಒಬ್ಬ ಯಶಸ್ವಿ ನಟನಿಗೆ ನಿರ್ದೇಶಕರುಗಳಿಂದ ಹಿಡಿದು ಕತೆಯ ತನಕ ಎಲ್ಲವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವುದು ಸಾಧ್ಯವಿದೆ.
ಇದೇ ಸಾಧ್ಯತೆಯನ್ನು ಡಾ ರಾಜ್ಕುಮಾರ್ ಬಳಸಿಕೊಂಡದ್ದು ಮಾತ್ರ ಕನ್ನಡ ಚಿತ್ರರಂಗ ಮರೆಯಬಾರದು. ದುರಾದೃಷ್ಟ, ಕನ್ನಡ ಚಿತ್ರರಂಗ ಮರೆತು ಬಿಟ್ಟದೆ.
ಮುಂಗಾರು ಮಳೆಯ ನಂತರ ಕನ್ನಡ ಚಿತ್ರರಂಗ ಮತ್ತೊಂದು ಮಜಲಿಗೆ ತೆರೆದುಕೊಳ್ಳುತ್ತದೆ. ಯೋಗರಾಜ್ ಭಟ್ ಎಂಬ ಪ್ರತಿಭಾವಂತ ಮೊದಲು ನಿರ್ದೇಶಿಸಿದ್ದು `ಮಣಿ’ಎಂಬ ಚಿತ್ರ. ಯಾವ ರೀತಿಯಿಂದಲೂ ಅದೊಂದು ಅದ್ಭುತ ಚಿತ್ರ. ಗ್ರಹಚಾರಕ್ಕೆ `ಮಣಿ’ಯಂತಹ ಸದಭಿರುಚಿಯನ್ನು ಉತ್ತಮ ಕಥಾಹಂದರವನ್ನು ಇಷ್ಟಪಡುವ ಮನಸುಗಳನ್ನು ಆಗಲೇ ಚಿತ್ರರಂಗ ಮನೆಗೆ ಕಳುಹಿಸಿ ಬಿಟ್ಟಿತ್ತು.
ಅದೇ ಯೋಗರಾಜ್ಭಟ್ಗೆ ರಂಗ ಎಸ್ ಎಸ್ ಎಲ್ ಸಿ ಎಂಬಂತಹ ಕೆಟ್ಟ ಅಭಿರುಚಿಯ ಸಿನಿಮಾ ತೆಗೆದು ಚಿತ್ರರಂಗದಲ್ಲಿ ಬೆಳೆಯಲು ಕಾರಣ ವಾಗುತ್ತದೆ. ನಂತರದ್ದೇ ಮುಂಗಾರು ಮಳೆ ನಂತರ ಭಟ್ಟರಿಗೆ ಕನ್ನಡ ಚಿತ್ರರಂಗದಲ್ಲಿ ಅತಿ ದೊಡ್ಡ ಸ್ಥಾನ ಪ್ರಾಪ್ತಿ ಯಾಯಿತು. ಅವರ ಶಿಷ್ಯ ಪಡೆಯೂ ಚುರು ಕಾಗಿತ್ತು. ಇಂದು ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ಸದಭಿರುಚಿ ಚಿತ್ರ ಬರುತ್ತಿವೆ ಎಂದರೆ ಅದು ಭಟ್ಟರ ಶಿಷ್ಯರಿಂದಲೇ.
ಅದ್ಯಾಕೋ ಯೋಗರಾಜ್ ಭಟ್ ` ಯಾರೋ ಬರೆದಂತಿದೆ ಸಾಲನು…. ಮುಂಗಾರು ಮಳೆಯೆ ಏನು ನಿನ್ನ ಹನಿಗಳ ಲೀಲೆ…’ ಮದುವನ ಕರೆದರೆ… ಮುಂತಾದ ಉತ್ತಮ ಅಭಿರುಚಿಗಿಂತ ಹೆಚ್ಚಾಗಿ “ಹಳೆ ಬಾಟ್ಲು, ಹಳೆ ಕಬ್ಬಿಣ”`ಮಾದ್ಲಿಂಗ ಮೊನ್ನೆ ಸತ್ತೋದ..’ ಮುಂತಾದ ಠಪೋರಿ ಸಾಲುಗಳಲ್ಲೇ ಕಳೆದು ಹೋಗುತ್ತಿದ್ದಾರೆ. ಒಬ್ಬ ಪುಟ್ಟಣ್ಣ ಕಣಗಾಲ್ ಸುಮ್ಮನೆ ಆಗುವುದಿಲ್ಲ ಎಂಬುದು ಇಷ್ಟು ಬೇಗ ಯೋಗರಾಜ್ಭಟ್ಟರಿಗೆ ಅರ್ಥವಾಗಿ ಬಿಟ್ಟಿತಾ..? ಅಥವಾ ಸುನಿಲ್ ಕುಮಾರ್ ದೇಸಾಯಿಯಂತಹ ಸಮರ್ಥನನ್ನು ನುಂಗಿ ನೊಣೆದ ಚಿತ್ರರಂಗ ಹೆದರಿಸಿ ಬಿಟ್ಟಿತಾ…
ಒಬ್ಬ ಗೋಲ್ಡನ್ ಸ್ಟಾರ್ನನ್ನ ಹುಟ್ಟು ಹಾಕುವ ನಿರ್ದೇಶಕನಿಂದ ಬಹಳಷ್ಟು ನಿರೀಕ್ಷೆಗಳಿದ್ದವು. ಆದರೆ ಅದೆಷ್ಟು ಸದಭಿರುಚಿ ಬಹಳಷ್ಟು ನಿರೀಕ್ಷೆಗಳಿದ್ದವು. ಆದರೆ ಅದೆಷ್ಟು ಸದಭಿರುಚಿ ಮನಸ್ಸನ್ನು ಮುಟ್ಟಿ ದ್ದರೋ ಅಷ್ಟೇ ಕೆಟ್ಟ ಸಂಸ್ಕೃತಿಯಾದ ಲಾಂಗು- ಮಚ್ಚು ಗಳ ತಮ್ಮ ಶಿಷ್ಯಂದಿರ ಚಿತ್ರಗಳ ಜತೆ ಗುರುತಿಸಿಕೊಳ್ಳುತ್ತಾ ಶುರುವಾಗಬೇಕಾದ್ದ ಅದ್ಭುತ ಮಜಲನ್ನು ಪ್ರಾರಂಭದಲ್ಲೇ ತುಳಿದು ಬಿಟ್ಟರು.
ನ್ಯಾಯಾಲಯ ಈ ವಿಚಾರದಲ್ಲಿ ಸರಿಯಾ ಗಿಯೇ ಇದೆ ಎಂದು ಯೋಚಿಸುವಷ್ಟರಲ್ಲಿ ರಾಜ್ಕುಮಾರ್ ಹಿರಾನಿಯ ಮುನ್ನಾಬಾಯಿ ಸರಣಿಯ ಚಿತ್ರಗಳನ್ನು ದೂಷಿಸುವಾಗ ತನ್ನ ನಡುವಿನಲ್ಲಿ ದ್ವಂದ್ವತೆಯನ್ನು ತೋರಿಸುತ್ತದೆ.
ಹಿಂದಿ ಚಿತ್ರರಂಗ ಯದ್ವಾತದ್ವಾ ಹಳ್ಳದ ದಾರಿ ಹಿಡಿಯುವ ಸಮಯದಲ್ಲಿ ಒಂದಷ್ಟು ಸದಭಿ ರುಚಿಯನ್ನು ಮೂಡಿಸಿದ್ದು ಮುನ್ನಾಬಾಯಿಯ ಗಾಂಧಿ ಗಿರಿಯೇ, ಅಮೀರ್ ಖಾನ್ನ ಅದ್ಭುತ
ಪ್ರಯೋಗಗಳೇ. ತ್ರಿ ಇಡಿಯಟ್ಸ್ `ತಾರೆ ಜಮೀನ್ ಪರ್ ‘ ಭಂಡಾರಿಯ ಮಹಿಳಾ ಸಂವೇದನೆಯ ವಸ್ತುಗಳುಳ್ಳ ಕಾರ್ಪೊರೇಟ್, ಪ್ಯಾಷನ್ , ಪೇಜ್ ತ್ರಿ ಮುಂತಾದವು ಹಿಂದಿ ಚಿತ್ರರಂಗದ ಮಾನವನ್ನು ಕಾಪಾಡಿದವು.
ಮುನ್ನಾಬಾಯಿಯಲ್ಲಿ ಕಾಪಿ ಹೊಡೆ ಯುವದನ್ನು ಹೇಳಿಕೊಡುತ್ತಿದೆ ಎಂದು ನ್ಯಾಯಾ ಲಯ ಹೇಳುವ ಹೊತ್ತಿಗೆ ರಾಮ ಗೋಪಾಲ ವರ್ಮ, ಕೊಲೆ ಹೀಗೆ ಮಾಡುವುದು ಎನ್ನುವು ದನ್ನು ಅಚ್ಚು ಕಟ್ಟಾಗಿ ಹೇಳಿ ಕೊಟ್ಟಿದ್ದ. ಮುನ್ನಾಬಾಯಿಯಲ್ಲಿ, ತ್ರಿ ಇಡಿಯಟ್ಸ್ನಲ್ಲಿ ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಪ್ರಶ್ನಿ ಸುವ ಪರಿಯನ್ನು ಮೆಚ್ಚ ಬೇಕಾದ್ದ ನ್ಯಾ ಯಾಲಯ ಗುರುತಿಸಿದ್ದು ಕಾಪಿ ಹೊಡೆಯುವು ದನ್ನು . ಏನೇ ಇರಲಿ ನ್ಯಾಯಾಲಯಕ್ಕೆ ಆದೇಶಿ ಸುವ ಹಕ್ಕಿದೆ. ಆದೀಗ ಕೇವಲ ಅಭಿಪ್ರಾಯ ಪಟ್ಟಿದೆ. ಅಭಿರುಚಿ ಮೂಡಿಸುವಲ್ಲಿ ಚಿತ್ರರಂಗಕ್ಕೆ ಸಾಹಿತಿ ಗಳು ಬೇಕೆ ಬೇಕು ಎಂಬುದನ್ನು ಹೇಳುತ್ತಾ ಡಾ ರಾಜ್ರನ್ನು ನೆನಪಿಸಿಕೊಳ್ಳುವುದಕ್ಕೆ ಅನುವಾದ ನ್ಯಾಯಾಲಯಕ್ಕೆ ನಮಸ್ಕಾರ.





Films are art, and not “moral science courses”…and who decides what is “sadabhiruchi”? To take your example, most of Madhur Bhandarkar films create stereotypes of homosexuals, career women etc. which reinforces the prejudices people already carry, and stops people from having an open mind. If you STRICTLY go by “morality”, then most of the mythological stories should not be told!
illi yaru kooda sadabhiruchi anta decide madallari adu hrudayada valagina matu nivu nimma maneyavarajote filumge hogi nodi aga nimge mujugara agde idre mate idetara coment madi allivargu nangu bareyoke barute anta sumsumne yeneno bari bardu chalm navara prayatna uttamavagide e reeti matadorige mythologi bagge matadoke yavude naitikate illa iam sorry to say this dear friend lekhanavannu sariyagi oodi artayisi kondu coment madodu valleyadu
Asalige cinema ondara mukhya uddesha ranjisuvudallava? Dr raj cinema chendakkiruttittu .. aadare adannu nodi parivarthane aaguttidra yaaradroo? Dr raj koodaa kallana pathra maadiddaralla … haagantha jana kallaragalu prerepitharaguttaraa???
No doubt cinema creates and reinforces stereotype images.
ಚಿತ್ರರಂಗದ ಸರಿ ತಪ್ಪುಗಳನ್ನು ಹೇಳಲು ಬಹಳಷ್ಟಿದೆ.ನಾನಿಲ್ಲಿ ಪ್ರಯತ್ನಿಸಿದ್ದು ಅಭಿರುಚಿ ರೂಪಿಸುವ ಹಾದಿಗಳ ಬಗ್ಗೆ.ಭಂಡಾರ್ಕರ್ ಹೇಳಲು ಹೊರಟದ್ದನ್ನು ,ಮುನ್ನಾಭಾಯಿ ಮುಖಾಂತರ ಹಿರಾನಿ ಹೇಳಿದ್ದನ್ನು,ಅಮೀರ್ನ ಕಳಕಳಿಯನ್ನು ಕೆಲ ದೋಷದ ನಡುವೆ ಗುರುತಿಸುವುದನ್ನು ಮರೆಯಬಾರದು.ರಾಜ್ ಕಳ್ಳನ ಪಾತ್ರ ಮಾಡಿದ್ದಾರೆ.ಹೌದು ಆದರೆ ಇದನ್ನು ದುರ್ಬೀನು ಹಾಕಿ ಹುಡುಕುವುದು ನನ್ನ ಅರ್ಥದಲ್ಲಿ ಕೋರ್ಟು ಮುನ್ನಾಬಾಯಿಯಲ್ಲಿ ಕಾಪಿ ಹೊಡೆಯುವುದನ್ನು ಹುಡುಕಿದಂತೆ ಬಟ್ಟರೆ ಬೇರೆ ಪ್ರಯೋಜನವಿಲ್ಲ.ಕಾಮೆಂಟಿಸಿದವರಿಗೆ ಧನ್ಯವಾದಗಳು.