ಚಿಂತಾಮಣಿ ಕೊಡ್ಲೆಕೆರೆ ಕವಿತೆ- ಚುಕ್ಕಿಗಳೇ ಬನ್ನಿ…

ಚಿಂತಾಮಣಿ ಕೊಡ್ಲೆಕೆರೆ

1. ಚುಕ್ಕಿಗಳೇ ಬನ್ನಿ

ಭೂಮಿಯ ತಬ್ಬಿದೆ ಬಾನಿನ ನೀಲಿ
ಮೋಡಗಳಿಲ್ಲದ ಆಗಸ ಖಾಲಿ
ತುಸು ಹೊತ್ತಿನಲೇ ಚಂದ್ರನ ಪಾಳಿ
ಚುಕ್ಕಿಗಳೇ ಬನ್ನಿ

ಬಿಸಿಲಿಗೆ ಕಾದಿದೆ ಚಾವಣಿ ನೆಲವು
ಹಂಬಲಿಸಿದೆ ಬೆಳದಿಂಗಳಿನೊಲವು
ಚಂದ್ರನ ಜೊತೆ ನೀವಿದ್ದರೇ ಚೆಲುವು
ಚುಕ್ಕಿಗಳೇ ಬನ್ನಿ

ದುಡಿದ ಜೋಡಿಗಳು ಬಂದವು ಮನೆಗೆ
ದಣಿವೆ ದಿನದ ಪ್ರತಿಫಲವೇ ಕೊನೆಗೆ?
ಚೆಲುವ ಸುರಿಸಿ ಬೆಳಕಾಗುವವರೆಗೆ
ಚುಕ್ಕಿಗಳೇ ಬನ್ನಿ

ಭೂಮಿಗೆ ಬಾನಿಗೆ ಅಂದದ ಬಂಧ
ದೈವದ ಸೀಮೆಗೆ ಹೊಸ ಅನುಬಂಧ
ಇಹದೀ ಬಾಳಿಗೆ ಇರಲಾನಂದ
ಚುಕ್ಕಿಗಳೇ ಬನ್ನಿ

2. ಅರ್ಥಶಾಸ್ತ್ರ 

ನಿಲ್ಲು ನಿಲ್ಲು ಹಣವೆ ನೀನು
ಎಲ್ಲಿ ಹೋಗುತಿರುವೆ!
ಇಲ್ಲೆ ಇರು. ಅಲ್ಲಿ ಹೋಗಿ
ಏಕೆ ಬಳಲುತಿರುವೆ?

ಬಳಲಲಿಲ್ಲ ನನ್ನ ಕಂದ
ಇಲ್ಲೆ ಇರಲು ನಾನು
ಖಾಲಿ ಹೊಟ್ಟೆಯಲ್ಲಿ ನೀನು
ದಿನವ ಕಳೆವೆಯೇನು?

ದುಡಿ, ಪಡೆ, ವಿನಿಯೋಗಿಸು
ಮತ್ತೆ ದುಡಿ, ಪಡೆ
ಧನಲಕ್ಷ್ಮಿಯು ಹೋಗಬೇಕು
ದುಡಿವ ಎಲ್ಲ ಕಡೆ!

ಕೂಡಿಟ್ಟು ಕೊಳೆಸಬೇಡ
ಬಳಸಿ ಬೆಳೆಸು ಮಗುವೆ
ರಕ್ತದಂತೆ, ಉಸಿರಿನಂತೆ
ಸದಾ ಹರಿಯುತಿರುವೆ

‍ಲೇಖಕರು Admin

July 16, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: