ಚಳಿಗಾಲದ ಎರಡು ಜೀವರಸಗಳು
–ದೇವೂ ಮಾಕೊಂಡ
ನಮ್ಮಿಬ್ಬರ ಸಂಗಮಕ್ಕೆ ಈ ಚಳಿಗಾಲ
ಎಷ್ಟೊಂದು ನಿಶಬ್ದವಾಗಿ ಕರೆಯುತ್ತಿದೆ?
ಒಂದು ಕಡೆ ಕಾಫಿಯ ಸ್ವಾಗತ
ಮತ್ತೊಂದು ಕಡೆ ಮುತ್ತಿನ ಸೆಳೆತ
ಯಾವುದು ಆರಿಸಿಕೊಳ್ಳಲಿ?
ಈ ನಿಶಬ್ಧ ಚಳಿಯಲಿ
ಕಾಫಿಯ ಇಚ್ಚೆಯನ್ನೊ
ಮುತ್ತಿನ ಬೆಚ್ಚನೆಯನ್ನೊ?
ಇಷ್ಟೊಂದು ಚಡಪಡಿಕೆಯಿರಬಾರದು!
ಇಚ್ಚೆಯ ಸಂಚಯನಗಳಲ್ಲಿ
ನಮ್ಗಳ ಆರಂಭದ ಭೇಟಿಗೆ ಒಂದರ ನೆನಪಿಗೆ ಇನ್ನೊಂದು ಸುಂಕವಾಗಲಿ
‘ಬೈ ವನ್ ಗೆಟ್ ವನ್ ಫ್ರಿ’ ಚಳಿಗಾಲದ ಜಾಹಿರಾತು ಆಫರ್
ಕೊನೆಗೊಂದು ದಿನ ಕುರುಹುಗಳಂತೆ ನೆನಪಿಸಿಕೊಳ್ಳೊಣ
ಇದು ಆರಂಭವೊ ಅಥವ ಅಂತ್ಯವಾಗುವುದೊ!
ಯಾರಿಗೆ ಗೊತ್ತು;
ಈ ಕಾಫಿ
ಈ ಮುತ್ತು
ಯುದ್ದ ಉನ್ಮಾದದ ಸಂಕೇತಗಳಾ
ಅಥವ
ಕೊನೆಯ ಯುದ್ದದ
ಕರಾರುಗಳಾ
ನೆನಪಿಗೆ ಒಂದೊಂದು ಸೆಲ್ಪಿ ಇರಲಿ
ಜೊತೆಗೊಂದಿಷ್ಟು ಭಿನ್ನ ನಗುವಿರಲಿ






0 Comments