ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ- 2011

ಪ್ರಾದೇಶಿಕ ಭಾಷಾ ಪತ್ರಿಕೆಗಳಲ್ಲಿ ಅಭಿವೃದ್ಧಿ ಪತ್ರಿಕೋದ್ಯಮವನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯದಲ್ಲಿ ತೊಡಗಿರುವ ಬೆಂಗಳೂರು ಮೂಲದ ‘ಕಮ್ಯುನಿಕೇಶನ್ ಫಾರ್ ಡೆವಲಪ್ಮೆಂಟ್ ಅಂಡ್ ಲರ್ನಿಂಗ್’ (ಸಿಡಿಎಲ್) ಸ್ವಯಂ ಸೇವಾ ಸಂಸ್ಥೆಯು ವಿವಿಧ ವಿಷಯಗಳಿಗೆ ಸಂಬಂಧಿಸಿದ ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ -2011 ಕ್ಕಾಗಿ ಲೇಖನಗಳನ್ನು ಆಹ್ವಾನಿಸುತ್ತಿದೆ. ಕನ್ನಡದಲ್ಲಿ ಅಭಿವೃದ್ಧಿಪರ ಲೇಖಕರ ಪರಿಶ್ರಮವನ್ನು ಗೌರವಿಸುವುದು ಮತ್ತು ಪತ್ರಿಕೆಗಳಲ್ಲಿ ಅಭಿವೃದ್ಧಿ ವಿಚಾರಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವಂತೆ ಮಾಡುವುದು ಈ ಪ್ರಶಸ್ತಿಯ ಉದ್ದೇಶ.

ಕನ್ನಡ ದಿನಪತ್ರಿಕೆಗಳು ಮತ್ತು ದಿನಪತ್ರಿಕೆಗಳ ಪುರವಣಿಗಳಲ್ಲಿ ಪ್ರಕಟವಾದ ಲೇಖನ/ನುಡಿಚಿತ್ರ ಗಳನ್ನು ಬರಹಗಾರರು/ ಪತ್ರಕರ್ತರು ಪ್ರಶಸ್ತಿಗಾಗಿ ಕಳುಹಿಸಬಹುದು. ವಾರಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟವಾದ ಲೇಖನ/ನುಡಿ ಚಿತ್ರಗಳನ್ನು ಪರಿಗಣಿಸುವುದಿಲ್ಲ. ಜನವರಿ 1, 2010 ಮತ್ತು ಡಿಸೆಂಬರ್ 31, 2010ರ ಅವಧಿಯಲ್ಲಿ ಪ್ರಕಟಗೊಂಡ ಲೇಖನ/ನುಡಿಚಿತ್ರಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಲಾಗುವುದು.

 

ವಿಷಯಗಳು:

ಮಹಿಳೆ, ನೈರ್ಮಲ್ಯ. ಮಕ್ಕಳ ಹಕ್ಕುಗಳು, ಅಂಗವೈಕಲ್ಯ, ನೀರು, ಪರಿಸರ ಮತ್ತು ಈ ವಿಶೇಷ ವಿಷಯಗಳನ್ನು ಹೊರತು ಪಡಿಸಿದ ಯಾವುದೇ ಸಾಮಾನ್ಯ ವಿಷಯ

ಈ ಏಳು ವಿಷಯಗಳಿಗೆ ಸಂಬಂಧಿಸಿದಂತೆ ಆಳವಾದ ಚಿಂತನೆ, ಜನಪರ ಕಾಳಜಿಯನ್ನೊಳಗೊಂಡ ರಚನಾತ್ಮಕ ಲೇಖನ/ನುಡಿಚಿತ್ರಗಳಿಗೆ ಪ್ರಶಸ್ತಿಗಳನ್ನು ನೀಡಲಾಗುವುದು. ಹಿರಿಯ ಮತು ವಿಷಯ ತಜ್ಞರನ್ನು ಒಳಗೊಂಡ ನಿರ್ಣಾಯಕ  ಸಮಿತಿಯು ಪ್ರಶಸ್ತಿಗಳನ್ನು ನಿರ್ಧರಿಸುತ್ತದೆ.

ಪ್ರವೇಶ ಪತ್ರದ ಜೊತೆ ಲೇಖನ/ನುಡಿಚಿತ್ರಗಳನ್ನು ಕಳುಹಿಸಲು ಕೊನೆಯ ದಿನಾಂಕ 31 ನೇ ಮಾರ್ಚ್ 2011.

ಹೆಚ್ಚಿನ ಮಾಹಿತಿ ಮತ್ತು ಪ್ರವೇಶ ಪತ್ರಗಳಿಗಾಗಿ (080)41478470, 9632399819,

9964717847 oroject11@gmail.com

 

ಹೆಚ್ಚಿನ ಮಾಹಿತಿಗೆ ಮತ್ತು ಪ್ರವೇಶ ಪತ್ರಗಳಿಗಾಗಿ ಸಂಪರ್ಕಿಸಿ

ಕಮ್ಯುನಿಕೇಶನ್ ಫಾರ್  ಡೆವಲಪ್ಮೆಂಟ್ ಅಂಡ್ ಲರ್ನಿಂಗ್

11/ಎ, 7ನೇ ಅಡ್ಡರಸ್ತೆ, 17ನೇ ಮುಖ್ಯ ರಸ್ತೆ, ಕೋರಮಂಗಲ 6ನೇ ಹಂತ

ದೂರವಾಣಿ (080)41478470

e-mail: hp@cdlblr.org; cdlproject11@gmail.com

 

 

‍ಲೇಖಕರು G

21 March, 2011

1 Comment

  1. Sharanabasva

    this is Good Programm. namma comminityge setuve agiruv ptrikodymdinda message muttuvdu nija.I am happy last year 2008 nanu Artlcelge tital selet agittu. I will Try Next year

    Thanks
    Sharanabasava
    Suddimool journalist
    Koppal

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading