ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚರಕ್ಕನೆ ಗೀರಿ ಬೆಂಕಿ ಹೊತ್ತಿಸುತ್ತಾರೆ

ಬೆಂಕಿ ಕಡ್ಡಿಗಳು

-ಡಿ.ಎಸ್.ರಾಮಸ್ವಾಮಿ
7d55d3f0-7cb4-4173-99dc-29f8a302b1521
ಬೆಂಕಿ ಕಡ್ಡಿಗಳು,
ನಾನು, ನೀನು, ಅವನು, ಅವಳು
ಹೌದು, ನಾವೆಲ್ಲರೂ ಬೆಂಕಿಯ ತುಂಡುಗಳು:

 

ನಮ್ಮ ತಲೆಯ ಮೇಲಷ್ಟು ಮದ್ದು ಮೆತ್ತಿ,
ಒಬ್ಬರ ಮೇಲೊಬ್ಬರನ್ನು ತುರುಕಿ,
ಪುಟ್ಟ ಪೆಟ್ಟಿಗೆಯೊಳಗಿಟ್ಟು ಭದ್ರ ಮಾಡಿದ್ದಾರೆ:

ಬೇಕಿನಿಸಿದಾಗೆಲ್ಲ ನಮ್ಮಲ್ಲೊಬ್ಬರನ್ನೆಳೆದು
ಚರಕ್ಕನೆ ಗೀರಿ ಬೆಂಕಿ ಹೊತ್ತಿಸುತ್ತಾರೆ,
ಚಳಿಯ ಮೈಯನ್ನು ಕಾಯಿಸಿ ಕೊಳ್ಳುತ್ತಾರೆ.

ಬೆಂಕಿ ಹೊತ್ತಿಸಿದ ಸಂಭ್ರಮದಲ್ಲಿ
ಸುಟ್ಟು ಭಸ್ಮವಾಗುವ ನಮಗೇ
ನಮ್ಮ ಶಕ್ತಿ ಗೊತ್ತಿಲ್ಲ; ಹಾಗಾಗಿ

ಜೊತೆಜೊತೆಯಾಗಿದ್ದರೂ ಅತಂತ್ರ ಸ್ಥಿತಿ ಹೋಗಲ್ಲ
ಈ ಪುಟ್ಟ ಪೆಟ್ಟಿಗೆಯ ವಾಸವೂ ತಪ್ಪೋಲ್ಲ!

‍ಲೇಖಕರು avadhi

27 January, 2009

4 Comments

  1. ಶ್ರೀಕಾಂತ ಹೆಗಡೆ

    ಈ ಅಸಹಾಯಕ ಪರಿತಾಪ ಎನಗಿಲ್ಲ,
    ಈ ಬ್ರಹ್ಮಾಂಡದ ಅಗ್ಗಿಷ್ಟಿಕೆಯಲ್ಲಿ ನಮ್ಮನ್ನಿಟ್ಟವ ಆ ಪರಮಾತ್ಮ
    ಅವ ಸುಮ್ಮ ಸುಮ್ಮನೆ ಗೀರುವುದಿಲ್ಲ. ಬೇಯಿಸಲು ಪಕ್ವವಾಗಿಸಲು
    ಭೂಮಿಗೆ ಭಾರಾದವರ ಸುಡಲು,ಬೆಳಕಾಗಿಸಲು ಆರಿಸಿ ಗೀರುತ್ತಾನೆ.

  2. dundiraj

    82 ralli prakatavada namma godeya haadu emba sankalanadalliruva kaddigalu emba nanna kavanada kelavu salugalu illi alpa badalavaneyondige kanisikondive.adu udayavaniyallu bandittu.

  3. shreenidhids

    is it a kruthichaurya then?

  4. ಡಿ.ಎಸ್.ರಾಮಸ್ವಾಮಿ

    ದುಂಡಿರಾಜರಲ್ಲಿ, ನಮಸ್ಕಾರ.
    ನಿಮ್ಮ ಪ್ರತಿಕ್ರಿಯೆ ಘಾಸಿಗೊಳಿಸಿದೆ.ನನ್ನ ಈ ಪದ್ಯ ೨೦೦೨ರಲ್ಲಿ ಪ್ರಕಟವಾಗಿ ಶಿವಮೊಗ್ಗ ಕರ್ನಾಟಕ ಸಂಘದ ಜಿ.ಎಸ್.ಎಸ್ ಪ್ರಶಸ್ತಿ ಪಡೆದ ನನ್ನ ಮೊದಲ ಸಂಕಲನ ’ಮರೆತ ಮಾತು’ ಕೃತಿಯಲ್ಲಿರುವ ಪದ್ಯ. ೨೦೦೧ ರಲ್ಲಿ’ಸುಧಾ’ದಲ್ಲೂ ಪ್ರಕಟವಾಗಿತ್ತು.ನಿಮ್ಮ ಪ್ರತಿಕ್ರಿಯೆ ಪದ್ಯದ ಮೇಲೆ ಕೃತಿಚೌರ್ಯದ ಗಂಭೀರ ಆಪಾದನೆ ಹೊರಿಸುವಂತಿದೆ. ಈಗಾಗಲೇ ೨ ಸಂಕಲನ ಪ್ರಕಟಿಸಿರುವ ಮತ್ತು ೨೦೦೬ರ ಕಾಂತಾವರ ಕನ್ನಡ ಸಂಘದ ಮುದ್ದಣ ಕಾವ್ಯ ಪ್ರಶಸ್ತಿಯನ್ನೂ ಪಡೆದಿರುವ ನನಗೆ ಕೃತಿಚೌರ್ಯದ ಅಗತ್ಯತೆಯಾದರೂ ಏನಿದೆ. ನಿಮ್ಮ ಪದ್ಯದ ಬಗ್ಗೆ ಕುತೂಹಲ ಹುಟ್ಟಿದೆ.ದಯೆಯಿಟ್ಟು ಮಿಂಚಂಚೆ ಕಳಿಸಿ.ನನ್ನ ವಿಳಾಸ ds.ramaswamy@gmail.com ಧನ್ಯವಾದ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading