ಚಂಪಾ ಯಾವುದೋ ಪಟಕ್ಕೆ ಹೂಹಾಕಲಿಲ್ಲ. ಜಾತ್ಯತೀತರಿಗೆ ಓಟು ಹಾಕಿ ಅಂದ್ರು. ಸರ್ವಸಂಗ ಪರಿತ್ಯಾಗಿಗಳಾಗಿರುವ ಸನ್ಯಾಸಿಗಳೇ ನಿರ್ದಿಷ್ಟ ರಾಜಕೀಯ ಪಕ್ಷಗಳಿಗೆ ಓಟು ಹಾಕಿ ಅನ್ನುತ್ತಾರೆ. ಪ್ರಧಾನಿ ನಿರ್ದಿಷ್ಟ ಧರ್ಮದ ಸಂಕೇತಗಳನ್ನು ಧರಿಸಲು ನಿರಾಕರಿಸುತ್ತಾರೆ. ಪೆಜಾವರ ಮಠಾಧೀಶರೂ ಪ್ರಧಾನಿ ಮೋದಿಯವರೂ ತಮಗೆ ಬೇಕಾದಂತೆ ಹೇಗೆ ಇದ್ದಾರೋ ಹಾಗೆ ಚಂಪಾ ಕೂಡಾ ಇದ್ದಾರೆ. ಇದರಲ್ಲಿ ಚರ್ಚೆ ಮಾಡೋದೇನಿದೆ?
-ಎನ್ ಎ ಎಂ ಇಸ್ಮಾಯಿಲ್

ಬಹಳಷ್ಟು ಜನಕ್ಕೆ ಸಾಹಿತ್ಯ ಮತ್ತು ಅದರ ಚರ್ಚೆ ಎಂದರೆ ಅದು ಚಂದ್ರ, ಹೂವು, ಚಿಟ್ಟೆ, ಹಕ್ಕಿಯ ಸುತ್ತಷ್ಟೇ ನಡೆಯಬೇಕೆಂಬ ಅಭಿಪ್ರಾಯವಿದ್ದ ಹಾಗೆ ಕಾಣುತ್ತದೆ.
ಸಾಹಿತಿಗಳು, ಕಲಾ ಕ್ಷೇತ್ರದವರು ಒಂದು ದೇಶದ ಮತ್ತು ನಾಡಿನ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಚರ್ಚೆ ನಡೆಸುವುದು ತುಂಬಾನೇ ಮುಖ್ಯವೆಂದು ನಾನು ನಂಬಿದ್ದೇನೆ.
ಅದು ಯಾವುದೋ ಒಂದು ಪ್ರತ್ಯೇಕ ಪಕ್ಷದ ಚುನಾವಣಾ ಪ್ರಚಾರದ ಹಾಗೆ ಕಂಡರೆ ಅದನ್ನು ವಿರೋಧಿಸುವ ಎಲ್ಲಾ ಹಕ್ಕು ನಮಗಿದೆ. ಆದರೆ, “ರೀ.. ಸಿನಿಮಾದೋರು, ಕಲಾವಿದರು, ಸಾಹಿತಿಗಳು, ಸಂಗೀತ ಕ್ಷೇತ್ರದವರು ಸುಮ್ನೆ ಇರೋದನ್ನ ಕಲಿಬೇಕು. ರಾಜಕೀಯ ಎಲ್ಲಾ ಮಾತಾಡಬಾರದು, ಚರ್ಚೆಗಳಲ್ಲಿ ಭಾಗಿಯಾಗಬಾರದು, ಆಗಿದ್ದೆ ಆದರೆ , ಅವರು ಗಳಿಸಿರುವ ಗೌರವ ಕಳೆದುಕೊಳ್ಳುತ್ತಾರೆ ಎಂದೆಲ್ಲಾ ಹೇಳಲಾರಂಭಿಸಿರುವ ಹೊಸ ಟ್ರೆಂಡ್ ನಿಜಕ್ಕೂ ಅಪಾಯಕಾರಿ.
ಅಂದು ರಾಜ್ಕುಮಾರ್ ರವರು ಸಿನಿಮಾ ಮಾತ್ರ ಮಾತಾಡ್ಬೇಕು, ಸಾಮಾಜಿಕವಾದ ಹೋರಾಟಕ್ಕೆ ನಿಲ್ಲಬಾರದು ಎಂದು ಹೇಳಿಬಿಟ್ಟಿದ್ದಾರೆ, ಗೋಕಾಕ್ ಚಳುವಳಿಯ ಉದಾಹರಣೆಯನ್ನ ವಾರಕ್ಕೊಮ್ಮೆ ನಾವು ಹೇಳುತ್ತಲೇ ಇರಲಿಲ್ಲ. ಅಲ್ವಾ?
-ಬಿ ಎ ಪುನೀತ್







ದಳಿತರಿಗೆ ಮೀಸಲಾತಿಯ ವಿರೋಧಿಯಾಗಿ ನಾನು ಮಾತಾಡುತ್ತಿಲ್ಲ.ಆದರೆ ಒಂದು ಅಥವಾ ಎರಡು ತಲೆಮಾರುಗಳು ಮೀಸಲಾತಿಯ ಪ್ರಯೋಜನವನ್ನು ಪಡೆದು ವಿದ್ಯಾವಂತರಾಗಿ ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆದವರು ತಮ್ಮ ಮಕ್ಕಳಿಗೆ ಆ ಮೀಸಲಾತಿಯ ಅವಕಾಶವನ್ನುಬಳಸಿಕೊಳ್ಳದೆ ತಮ್ಮದೇ ಸಮುದಾಯದ ತೀರ ಹಿಂದುಳಿದವರಿಗೆ ಬಿಟ್ಟುಕೊಟ್ಟರೆ ಎಷ್ಟು ಚೆನ್ನ!ಸ್ವಾತಂತ್ರ್ಯ ದೊರೆತು ಇಷ್ಟು ವರ್ಷಗಳಾದರೂ ಕೆಲವೊಂದು ದಲಿತ ಪಂಗಡದವರು ಇನ್ನೂ ಅತ್ಯಂತ ದಯನೀಯ ಸ್ಥಿತಿಯಲ್ಲಿಯೇ ಇದ್ದಾರೆ.ಸರಕಾರ ನೀಡುವ ಸೌಲಭ್ಯಗಳು ಸರಿಯಾಗಿ ಅವರನ್ನು ತಲಪುವುದಿಲ್ಲ.ಕೆಲವೊಮ್ಮೆ ಅದರ ಅರಿವೇ ಅವರಿಗಿರುವುದಿಲ್ಲ.ವಿದ್ಯಾಭ್ಯಾಸಕ್ಕೆ ಆವರಿಗಾಗಿ ವಿದ್ಯಾರ್ಥಿವೇತನವನ್ನು ನೀಡಿ ಕೈತೊಳೆದುಕೊಂಡರೆ ಸಾಲದು . ಅವರ ಮನೆಯ ಪರಿಸ್ಥಿತಿ ಪ್ರತಿಕೂಲವಾಗಿದ್ದರೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುತ್ತಾರೆ.ಪ್ರಥಮ ಬಿಎವರೆಗೆ ತಲಪಿದ ಕೊರಗ ಸಮುದಾಯದ ನನ್ನ ವಿದ್ಯಾರ್ಥಿಯೊಬ್ಬ ಸತತವಾಗಿ ಗೈರುಹಾಜರಾಗುತ್ತಿದ್ದುದನ್ನು ನೋಡಿ ಅವನ ಮನೆಗೆ ಹೋಗಿ ವಿಚಾರಿಸಿದಾಗ ತಿಳಿಯಿತು. ಅಪ್ಪ ಅಮ್ಮನನ್ನು ಕಳಕೊಂಡ ಆತನಿಗೆ ಅಂಗವೈಕಲ್ಯವಿರುವ ಸೋದರಮಾವನನ್ನುಹಾಗೂ ತನ್ನ ಅಕ್ಕನನ್ನು ನೋಡಿಕೊಳ್ಳುವ ಜವಾಬ್ದಾರಿಯಿತ್ತು.ಆ ಕುಟುಂಬವನ್ನು ಪೋಷಿಸುವ ತನ್ನ ಕರ್ತವ್ಯಕ್ಕಾಗಿ ವಿದ್ಯಾಭ್ಯಾಸವನ್ನು ಅಲ್ಲಿಗೆ ನಿಲ್ಲಿಸಿ ಕೂಲಿಕೆಲಸಕ್ಕೆಸೇರಿಕೊಂಡ.. ನಾನು ಟ್ರೈಬಲ್ development ಇಲಾಖೆಗೆ ಹೋಗಿ ಆತನ ವಿದ್ಯಾಭ್ಯಾಸ ಮೊಟಕುಗೊಳ್ಳದಂತೆ ಮಾಡಲು ಸಾಧ್ಯವಿಲ್ಲವೇ ಎಂದು ಮತ್ತೆ ಮತ್ತೆ ವಿಚಾರಿಸಿದರೂ ಏನೂ ಪ್ರಯೋಜನವಾಗಲಿಲ್ಲ..ಇಂತಹ ಅನೇಕ ಉದಾಹರಣೆಗಳು ಇರಬಹುದು. ಪರಿಶಿಷ್ಟವರ್ಗಕ್ಕೆ ಸೇರಿದ ಈ ಸಮುದಾಯದ ಪರಿಸ್ಥಿತಿ ಇನ್ನೂ ಶೋಚನೀಯವಾಗಿಯೇ ಇದೆ.ಸರಕಾರಿ ಉದ್ಯೋಗದಲ್ಲಿ ಈ ಸಮುದಾಯದ ಬೆರಳೆಣಿಕೆಯ ವ್ಯಕ್ತಿಗಳೂ ಇಲ್ಲ . ಮೀಸಲಾತಿಯ ಪ್ರಯೋಜನವನ್ನು ಪಡೆಯುವುದು ಅವರಿಗೆ ಸಾಧ್ಯವಾಗಿಲ್ಲ.