ನಾಳೆಯಿಂದ ಒಂದು ವಾರ ಪ್ರತಿದಿನ ಬೆಳಿಗ್ಗೆ 6.30ರಿಂದ 15 ನಿಮಿಷ ನನ್ನದೊಂದು ಪರಿಸರ ಪ್ರವಚನವನ್ನು ‘ಡಿಡಿ ಚಂದನ’ದಲ್ಲಿ ಕೇಳಬಹುದು/ನೋಡಬಹುದು.
ನೀರು, ಮಣ್ಣು, ಗಾಳಿ, ಜೀವಿವೈವಿಧ್ಯ, ಹವಾಗುಣ ಏನುಪೇರು ಇತ್ಯಾದಿ ವಿಷಯಗಳ ಪ್ರಸ್ತಾಪವಿರುತ್ತದೆ. ನಾನೇನೂ ಪ್ರಚಂಡ ಉಪನ್ಯಾಸಕಾರ ಅಲ್ಲ. ವಾಚಾಳಿಯಲ್ಲ, ಟಿವಿ ನನ್ನ ಮಾಧ್ಯಮವೂ ಅಲ್ಲ. ಆದರೂ ಚಾನೆಲ್/ ರೇಡಿಯೊ ಕೇಂದ್ರದವರುು ನನಗಿಷ್ಟವಿಲ್ಲದಿದ್ದರೂ ಕರೆಯುತ್ತವೆ, ಏಕೆಂದರೆ ಇಂಥ ವಿಷಯಗಳಲ್ಲಿ ಭಾವರಂಜಕವಾಗಿ, ಆತ್ಮವಿಶ್ವಾಸದಿಂದ ಕ್ಯಾಮರಾ ಮುಂದೆ ಮಾತಾಡಬಲ್ಲ ಪರಿಣತರ ತೀವ್ರ ಕೊರತೆ ಇದೆ (ಅಂಥ ಪ್ರತಿಭಾವಂತರೆಲ್ಲ ರಾಜಕಾರಣ, ಸಿನೆಮಾ, ಕ್ರೀಡೆ ಅಥವಾ ವಾಸ್ತು- ಜ್ಯೋತಿಷಗಳಂಥ ಮೂಢನಂಬಿಕೆಗಳ ರಂಜನೀಯ ಕ್ಷೇತ್ರಗಳಲ್ಲಿ ಸಿದ್ಧಹಸ್ತರಾಗಿದ್ದಾರೆ).
ನಮ್ಮೆಲ್ಲರ ಬದುಕನ್ನು ಪ್ರಭಾವಿಸುವ ವಿಜ್ಞಾನ- ತಂತ್ರಜ್ಞಾನ, ವೈದ್ಯರಂಗ ಮತ್ತು ಕಾರ್ಪೊರೇಟ್ ಕಬಂಧ ಬಾಹುಗಳ ಬಗ್ಗೆ ಚೆನ್ನಾಗಿ ಮಾತನಾಡಬಲ್ಲ ಸಂವಹನಕಾರರ ತೀವ್ರ ಅಭಾವವಿದೆ. ಕಾಲೇಜಿಗಳ ಮಾಧ್ಯಮ ವಿಭಾಗದವರೂ ಅಂಥ ಪ್ರತಿಭೆಗಳನ್ನು ಪೋಷಿಸುತ್ತಿಲ್ಲ; ಚಾನೆಲ್ ಗಳು ಶೋಧಿಸುತ್ತಿಲ್ಲ. ಇಂದಿನ ನಾಳಿನ ಕನ್ನಡ ಮಾಧ್ಯಮಗಳ ಈ ಕೊರತೆಯನ್ನು ತುಂಬಬಲ್ಲ ಯಾರಾದರೂ ಇದ್ದರೆ, ಅವರಿಗೆ ಬೇಕಿದ್ದ ಮಾಹಿತಿಮೂಲಗಳನ್ನು ಸೂಚಿಸಲು ನಾನು ಸಿದ್ಧನಿದ್ದೇನೆ.
-ನಾಗೇಶ್ ಹೆಗಡೆ
'ಚಂದನ'ದಲ್ಲಿ ನಾಗೇಶ್ ಹೆಗಡೆ
ನಿಮಗೆ ಇವೂ ಇಷ್ಟವಾಗಬಹುದು…


ಅರಿವಿನ ದಾರಿ ಮರೆತಾಗ ದಾರಿ ತೋರಿಸಲು ಮಹಾನ್ ಪುರುಷರು ಆವತರಿಸುತ್ತಾರೆ ಅಂಥ ಕೇಳಿದ್ದೆ.ಈಗ ನೀವು ಮಾಹಿತಿ ಹಂಚಲು ಸಿದ್ಧ ಎಂದು ಹೇಳುವ ಮಾತು ಸಮಾಜದ ಬಗ್ಗೆ ನಿಮಗಿರುವ ಕಳಕಳಿ ತೋರಿಸುತ್ತೆ ಸರ್,ನೀವು ಕೂಡಾ ಅದೇ ಸಾಲಿಗೆ ಸೇರುತ್ತೀರಿ, ಮಾಹಿತಿ ತುಂಬಲು ನೀವು ಸಿದ್ಧ ಅಂದ್ರೆ ಕೊರತೆ ನೀಗಿಸಲು ನಾನು ಸಿದ್ಧ ಸರ್
(ಮಂಜುಳ, ಕೇಂದ್ರೀಯ ವಿಶ್ವ ವಿದ್ಯಾಲಯ,ಗುಲ್ಬರ್ಗಾ, ,manjulah422@gmail.com)