
-ನಾ ದಿವಾಕರ
ಆಧುನಿಕ ಜಗತ್ತಿನಲ್ಲಿ ಕ್ರಿಕೆಟ್ ಒಂದು ಮನರಂಜನೆಯ ಕ್ರೀಡೆಯಾಗಿದೆ. ಒಂದು ಕಾಲದಲ್ಲಿ ಜಂಟಲ್ಮೆನ್ಸ್ ಗೇಮ್ ಅಥರ್ಾತ್ ಗಣ್ಯರ ಕ್ರೀಡೆ ಎಂದು ಕರೆಯಲ್ಪಡುತ್ತಿದ್ದ ಕ್ರಿಕೆಟ್ ಈಗ ಪಡ್ಡೆ ಹುಡುಗರ ಮನತಣಿಸುವ, ಬುಕ್ಕಿಂಗ್ ಮಾಫಿಯಾದ ಜೇಬು ತುಂಬಿಸುವ, ಆಟಗಾರರನ್ನು ಶ್ರೀಮಂತಿಕೆಯಲ್ಲಿ ಮೆರೆಸುವ ಚಿನ್ನದ ಗಣಿಯಂತಾಗಿದೆ. ಆದರೂ ಇಂದಿನ ಕ್ರಿಕೆಟ್ನಲ್ಲಿ ಅತ್ಯುತ್ತಮ ಆಟಗಾರರೂ ಇದ್ದಾರೆ. ಸಚಿನ್, ದ್ರಾವಿಡ್, ಲಕ್ಷ್ಮಣ್, ಪಾಂಟಿಂಗ್ ಇತ್ಯಾದಿಗಳು. ಈ ಕ್ರಿಕೆಟ್ ದಿಗ್ಗಜರು ಪ್ರಸಿದ್ಧಿ ಪಡೆದಿರುವುದು ಅವರು ಗಳಿಸಿರುವ ಅಪಾರ ರನ್ಗಳ ಪ್ರಮಾಣದ ಫಲ. ನೂರು ಶತಕಗಳ ಹೊಸ್ತಿಲಲ್ಲಿರುವ ಸಚಿನ್ಗೆ ಭಾರತರತ್ನ ನೀಡಬೇಕೆಂಬ ಆಗ್ರಹವನ್ನು ನೋಡಿದರೆ ಕ್ರಿಕೆಟ್ ಯಾವ ಮಟ್ಟಕ್ಕೆ ಜನಪ್ರಿಯವಾಗಿದೆ ಎಂದು ಗ್ರಹಿಸಬಹುದು. ಜಾಹೀರಾತು, ಹಣದ ಥೈಲಿಗಳು, ಅಪಾರ ಸಂಪತ್ತಿನ ಭಂಡಾರವಾಗಿರುವ ಕ್ರಿಕೆಟ್ ಜಗತ್ತಿನಲ್ಲಿ ಎಷ್ಟೇ ಧೃವತಾರೆಗಳು ಮಿಂಚುತ್ತಿದ್ದರೂ ಗತಕಾಲದ ಕೆಲವೇ ಕೆಲವು ಬೆರಳೆಣಿಕೆಯ ಆಟಗಾರರ ಹಿರಿಮೆಯ ಮುಂದೆ ಎಲ್ಲರೂ ಗೌಣವಾಗಿಯೇ ಕಾಣುತ್ತಾರೆ. ಭಾರತದ ಸಂದರ್ಭದಲ್ಲೇ ಹೇಳುವುದಾದರೆ ಜಯಸಿಂಹ, ಜಿ.ಆರ್. ವಿಶ್ವನಾಥ್, ಗವಾಸ್ಕರ್, ಪ್ರಸನ್ನ, ಚಂದ್ರ, ವೆಂಕಟ್, ಬೇಡಿ ಅವರುಗಳನ್ನು ಪ್ರಸ್ತಾಪಿಸಬಹುದು. ಈ ಎಲ್ಲಾ ದಿಗ್ಗಜಗಳಿಗೆ ಆದರ್ಶಪ್ರಾಯರಾಗಿದ್ದ ಟೈಗರ್ ಪಟೌಡಿ ಇನ್ನಿಲ್ಲ. ಪಟೌಡಿಯನ್ನು ಒಬ್ಬ ವ್ಯಕ್ತಿ ಅಥವಾ ಕ್ರೀಡಾಪಟು ಎಂದು ನೋಡಲಾಗುವುದಿಲ್ಲ. ತಮ್ಮೊಳಗೇ ಒಂದು ಸಂಸ್ಥೆಯಾಗಿ ರೂಪುಗೊಂಡ ಈ ಮಹಾನ್ ಕಲಾವಿದನಿಗೆ ಕ್ರಿಕೆಟ್ ಎನ್ನುವುದು ಬ್ಯಾಟು ಬಾಲುಗಳ ನಡುವಿನ ಸಂಘರ್ಷ ಮಾತ್ರವಾಗಿರಲಿಲ್ಲ. ಅದು ಜೀವನದ ಒಂದು ಮಿಷನ್ ಆಗಿತ್ತು. ಮೇಲೆ ಹೇಳಿದ ಕ್ರಿಕೆಟ್ ಕಲಿಗಳೇ ಅಲ್ಲದೆ ಇನ್ನೂ ನೂರಾರು ಯುವ ಕ್ರಿಕೆಟಿಗರಿಗೆ ಆದರ್ಶಪ್ರಾಯವಾಗಿದ್ದ ನವಾಬ್ ಮನ್ಸೂರ್ ಅಲಿ ಖಾನ್ ಪಟೌಡಿ ರಾಜ ವೈಭವದಲ್ಲಿ ಜನಿಸಿದರೂ ಅವರ ಧ್ಯೇಯ ಇದ್ದುದು ಕ್ರಿಕೆಟ್ ಜಗತ್ತಿನಲ್ಲಿ ರಾಜನಾಗಿ ಮೆರೆಯುವುದು. ತಂದೆ ಇಫ್ತೀಕರ್ ಪಟೌಡಿ ಸ್ವತಃ ಕ್ರಿಕೆಟ್ ಪಟುವಾಗಿದ್ದು ಸ್ವಾತಂತ್ರ್ಯಪೂರ್ವದಲ್ಲಿ ಇಂಗ್ಲೆಂಡ್ ತಂಡದ ಪರವಾಗಿ ನಂತರ ಭಾರತದ ಪರವಾಗಿ ಆಡಿದ ಮಹಾನ್ ಆಟಗಾರರಾಗಿದ್ದರು. ತನ್ನ ಹನ್ನೊಂದನೆಯ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಪಟೌಡಿಗೆ ಕ್ರಿಕೆಟ್ ಜನ್ಮತಃ ಅಂಟಿದ ಗೀಳು.

ಒಂದು ಯಶೋಗಾಥೆಯ ಸುತ್ತ
1961ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ನವಾಬ್ ಪಟೌಡಿಗೆ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ನಾಯಕ ನಾರಿ ಕಂಟ್ರಾಕ್ಟರ್ ಗಾಯಗೊಂಡು ನಿರ್ಗಮಿಸಿದಾಗ ಹಠಾತ್ತನೆ ನಾಯಕ ಪಟ್ಟ ನೀಡಲಾಗಿತ್ತು. ಆಗ ಪಟೌಡಿಗೆ ಕೇವಲ 21 ವರ್ಷ. ತಂಡದಲ್ಲಿದ್ದ ಎಲ್ಲ ಆಟಗಾರರೂ ತಮಗಿಂತಲೂ ಹಿರಿಯರೇ ಆಗಿದ್ದರೂ ಪಟೌಡಿ ನಾಯಕತ್ವವನ್ನು ನಿರ್ವಹಿಸಿದ ರೀತಿ ಅದ್ಭುತ. ಬಹುಶಃ ನಾಯಕತ್ವದ ಗುಣ ಅವರಲ್ಲಿ ಜನ್ಮತಃ ಬಂದಿತ್ತೆಂದು ಕಾಣುತ್ತದೆ. ತಾವು ಆಡಿದ 46 ಟೆಸ್ಟ್ ಪಂದ್ಯಗಳಲ್ಲಿ 40ರಲ್ಲಿ ತಂಡದ ನಾಯಕತ್ವ ವಹಿಸಿದ ಪಟೌಡಿ ಕೇವಲ ಒಬ್ಬ ಯಶಸ್ವಿ ನಾಯಕ ಮಾತ್ರವಾಗದೆ ಸೌಜನ್ಯಯುತ ಸಹವತರ್ಿಯಾಗಿಯೂ ಮೆರೆದಿದ್ದರು. ಒಂಬತ್ತು ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದರೂ ವಿಶ್ವದ ಅಗ್ರಮಾನ್ಯ ನಾಯಕರಲ್ಲಿ ಒಬ್ಬರೆನಿಸಿದ್ದರು. ಪಟೌಡಿ ಗಳಿಸಿದ ರನ್ನುಗಳು 36ರ ಸರಾಸರಿಯಲ್ಲಿ 2673. ಒಂದು ದ್ವಿಶತಕವನ್ನೂ ಸೇರಿದಂತೆ ಆರು ಶತಕ, 12 ಅರ್ಧ ಶತಕ ಗಳಿಸಿದ್ದರು. ಈಗಿನ ಆಟಗಾರರ ಸಾಧನೆಗೆ ಹೋಲಿಸಿದರೆ ಇದು ಅತ್ಯಲ್ಪ ರನ್ ಮೊತ್ತವೆಂದೇ ಹೇಳಬಹುದು. ಆಗಿನ ಕಾಲಕ್ಕೂ ಇದಕ್ಕಿಂತಲೂ ಹೆಚ್ಚಿನ ಸರಾಸರಿ ಗಳಿಸಿದ ಆಟಗಾರರೂ ಇದ್ದರು. ಆದರೆ ಪಟೌಡಿಯ ವೈಶಿಷ್ಟ್ಯವೆಂದರೆ ಅವರು ಈ ರನ್ನುಗಳನ್ನು ಗಳಿಸಿದ್ದು ಒಂದು ಕಣ್ಣಿನ ಸಹಾಯದಿಂದ. 1964ರಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ ತಮ್ಮ ಬಲಗಣ್ಣನ್ನು ಕಳೆದುಕೊಂಡ ಪಟೌಡಿ ತಮ್ಮ ನ್ಯೂನತೆಯಿಂದ ಎದೆಗುಂದಲಿಲ್ಲ. ಒಂದು ಕಣ್ಣಿನಿಂದಲೇ ಬೌಲರ್ ಎಸೆಯುವ ಬಾಲನ್ನು ಅಳೆದು ಆಡುವ ಬ್ಯಾಟಿಂಗ್ ಶೈಲಿಯನ್ನು ಅನುಸರಿಸಿದ್ದರು. ಗವಾಸ್ಕರ್ ಮತ್ತು ವಿಶ್ವನಾಥ್ ಹೇಳುವಂತೆ, ಪಟೌಡಿ ಒಂದು ಕಣ್ಣಿನ ಸಹಾಯದಿಂದ ಗಳಿಸಿದ ಈ ರನ್ನುಗಳು ಅಲ್ಪ ಎನಿಸಿದರೂ ವಾಸ್ತವದಲ್ಲಿ ಅದರ ಮೌಲ್ಯ ಅಪ್ರತಿಮ. ಅಳೆಯಲಾಗದ್ದು. ಆರು ಶತಕಗಳನ್ನು ಗಳಿಸಿದ್ದರೂ ಅವರು 1967ರ ಆಸ್ಡ್ರೇಲಿಯಾ ಪ್ರವಾಸದಲ್ಲಿ ಗಳಿಸಿದ ಎರಡು ಅರ್ಧ ಶತಕಗಳು ಅವರ ಜೀವಮಾನದಲ್ಲೇ ಅತ್ಯುತ್ತಮ ಇನ್ನಿಂಗ್ಸ್ ಎಂದು ಹೇಳಲಾಗುತ್ತದೆ. ಎಪ್ಪತ್ತರ ದಶಕದ ಆರಂಭದಲ್ಲಿ ತಂಡದಲ್ಲಿ ಸ್ಥಾನ ಕಳೆದುಕೊಂಡ ಪಟೌಡಿ 1974-75ರ ವೆಸ್ಟ್ ಇಂಡೀಸ್ ವಿರುದ್ಧ ಸರಣಿಗೆ ನಾಯಕರಾಗಿ ಆಯ್ಕೆಯಾಗಿ, ಮೊದಲೆರಡು ಪಂದ್ಯಗಳಲ್ಲಿ ಸೋತರೂ ಇನ್ನೆರಡು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ತಮ್ಮ ನಾಯಕತ್ವದ ಹಿರಿಮೆಯನ್ನು ಸಾರಿದ್ದರು. ಕೊನೆಯ ಪಂದ್ಯದಲ್ಲಿ ಕ್ಲೈವ್ ಲಾಯ್ಡ್ ಅವರ ಅದ್ಭುತ ಪ್ರದರ್ಶನ ವಿಂಡೀಸ್ ತಂಡಕ್ಕೆ ಸರಣಿ ಗೆದ್ದುಕೊಟ್ಟಿತ್ತು. ಆದರೆ ಪಟೌಡಿಗೆ ಅದೇ ಕೊನೆಯ ಪಂದ್ಯವೂ ಆಗಿತ್ತು.
ಕೆಲವು ವೈಶಿಷ್ಟ್ಯಗಳ ಚೇತನ ಪಟೌಡಿಗೆ ಹಲವು ಹೆಸರುಗಳು. ಪ್ಯಾಟ್, ನವಾಬ್ ಸಾಬ್, ಟೈಗರ್, ಕ್ಯಾಪ್ಟನ್ ಹೀಗೆ ಹಲವಾರು. ಆದರೆ ಯಾವುದೇ ಆಟಗಾರರಿಗೂ ಅವರನ್ನು ಹೇಗೆ ಸಂಬೋಧಿಸಬೇಕೆಂದೇ ತಿಳಿಯುತ್ತಿರಲಿಲ್ಲ ಎಂದು ಗವಾಸ್ಕರ್ ನೆನೆಯುತ್ತಾರೆ. ಪಟೌಡಿಯವರೊಡನೆ 40 ವರ್ಷಗಳ ಸ್ನೇಹ ಹೊಂದಿದ್ದ ಗವಾಸ್ಕರ್ಗೆ ಇಂದಿಗೂ ಕೊನೆಯವರೆಗೂ ಈ ಜಿಜ್ಞಾಸೆ ಉಳಿದಿತ್ತಂತೆ. ಪಟೌಡಿಯವರ ನಡಿಗೆಯನ್ನು, ಬ್ಯಾಟಿಂಗ್ ಶೈಲಿಯನ್ನು ಅನುಕರಿಸದ ಯುವ ಆಟಗಾರನೇ ಇಲ್ಲವೆಂದು ಹೇಳಬಹುದು. ಒಂದೇ ಕಣ್ಣಿನಿಂದ ಆಡುತ್ತಿದ್ದ ಅವರ ನಿಲ್ಲುವ ಭಂಗಿಯನ್ನು ಅನುಕರಿಸಲು ಹೋಗಿ ಅನೇಕ ಯುವ ಆಟಗಾರರು ಬೇಗನೆ ಔಟಾಗಿದ್ದೂ ಉಂಟು. ಫೀಲ್ಡಿಂಗ್ ಮಾಡುವುದರಲ್ಲೂ ಅವರನ್ನು ಅನುಕರಿಸುವುದು ಕಷ್ಟವಾಗುತ್ತಿತ್ತು. ಅವರ ಬ್ಯಾಟಿಂಗ್ನಷ್ಟೇ ಆಕರ್ಷಕ ಅವರ ಫೀಲ್ಡಿಂಗ್ ಆಗಿತ್ತು. ಪಟೌಡಿಯವರ ಶ್ರೇಷ್ಠತೆ ಎಂದರೆ ಒಂದು ಕಣ್ಣಿನಿಂದಲೇ ಚೆಂಡನ್ನು ವೀಕ್ಷಿಸಿ ಆಡುತ್ತಿದ್ದುದು ಮತ್ತು ಕ್ಯಾಚ್ ಹಿಡಿಯುತ್ತಿದ್ದುದು. ಅಪಘಾತದಲ್ಲಿ ಕಣ್ಣು ಕಳೆದುಕೊಂಡ ನಂತರದಲ್ಲಿಯೂ ಅದೇ ಶ್ರೇಷ್ಠ ಪ್ರದರ್ಶನವನ್ನು ಕಾಪಾಡಿಕೊಂಡು ಬಂದಿದ್ದು ಅವರ ಹಿರಿಮೆ. ಮತ್ತೊಂದು ವೈಶಿಷ್ಟ್ಯವೆಂದರೆ ಟೈಗರ್ ಬಳಿ ಅವರದೇ ಆದ ಬ್ಯಾಟ್ ಇರುತ್ತಿರಲಿಲ್ಲ. ಕೈಗೆ ಸಿಕ್ಕ ಬ್ಯಾಟ್ ಹಿಡಿದು ಆಡಲು ಹೊರಡುತ್ತಿದ್ದರು. ಬಹುತೇಕ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಪಟೌಡಿ ತಮ್ಮ ಬ್ಯಾಟ್ ಉಪಯೋಗಿಸಿದ್ದರು ಎಂದು ಹೇಳಿಕೊಳ್ಳುವುದೇ ಇತರ ಆಟಗಾರರಲ್ಲಿ ಹೆಮ್ಮೆಯ ವಿಚಾರವಾಗಿತ್ತು.
60ರ ದಶಕ ಭಾರತದ ಕ್ರಿಕೆಟ್ನ ಸುವರ್ಣಯುಗ. ಜಯಸಿಂಹ, ಇಂಜಿನಿಯರ್, ಕುಂದರನ್, ಅಬ್ಬಾಸ್ ಅಲಿ ಬೇಗ್, ಹನುಮಂತ ಸಿಂಗ್ , ದುರಾನಿ ಎಲ್ಲರೂ ದಿಗ್ಗಜರೇ. ವಿಮಾನ ಪ್ರಯಾಣಕ್ಕೆ ಹೆದರುತ್ತಿದ್ದ ಪಟೌಡಿ ಹೆಚ್ಚಾಗಿ ರೈಲಿನಲ್ಲೇ ಓಡಾಡಲು ಬಯಸುತ್ತಿದ್ದರು. ಸದಾ ಗಂಭೀರವಾಗಿರುತ್ತಿದ್ದ ಪಟೌಡಿ ಮಾತಾಡುತ್ತಿದ್ದುದೇ ಕಡಿಮೆ. ತಮಾಷೆ ಮಾಡಿದರೂ ಸೂಕ್ಷ್ಮವಾಗಿರುತ್ತಿತ್ತು. 1969ರಲ್ಲಿ ಲಿಟ್ಲ್ ಮಾಸ್ಟರ್ ಜಿ.ಆರ್.ವಿಶ್ವನಾಥ್ ಟೆಸ್ಟ್ ಕ್ರಿಕೆಟ್ಟಿಗೆ ಪಾದಾರ್ಪಣೆ ಮಾಡಿದಾಗ ಕಾನ್ಪುರದ ಟೆಸ್ಟ್ನಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ ಶೂನ್ಯಕ್ಕೆ ಔಟಾಗಿ ಅಳುತ್ತಾ ಕುಳಿತಿದ್ದರಂತೆ. ಇನ್ನು ನನಗೆ ತಂಡದಲ್ಲಿ ಸ್ಥಾನ ಉಳಿಯದು ಎಂಬ ಭೀತಿ ಒಂದೆಡೆ, ಶೂನ್ಯ ಗಳಿಸಿದ ನೋವು ಒಂದೆಡೆ. ಆಗ ನಾಯಕರಾಗಿದ್ದ ಪಟೌಡಿ ವಿಶಿಗೆ ಬೆನ್ನು ತಟ್ಟಿ ಹುರಿದುಂಬಿಸಿ, ನಿನಗೆ ತಂಡದಲ್ಲಿ ಶಾಶ್ವತ ಸ್ಥಾನ ಇರುತ್ತದೆ, ಎರಡನೆ ಇನ್ನಿಂಗ್ಸ್ನಲ್ಲಿ ಶತಕ ಬಾರಿಸುತ್ತೀಯೆ ಎಂದು ಪ್ರೋತ್ಸಾಹಿಸಿದ್ದುದನ್ನು ಜಿ.ಆರ್.ವಿ ಹೆಮ್ಮೆಯಿಂದ ನೆನೆಯುತ್ತಾರೆ. 70ರ ದಶಕದಲ್ಲಿ ಚಂದ್ರ-ಪ್ರಸನ್ನ-ವೆಂಕಟ್-ಬೇಡಿಯವರ ಸ್ಪಿನ್ ಮೋಡಿಗೆ ಒಂದು ನಿದರ್ಿಷ್ಟ ಆಯಾಮವನ್ನು ತಂದಿತ್ತ ಕೀತರ್ಿಯೂ ಪಟೌಡಿಗೆ ಸಲ್ಲುತ್ತದೆ. ಬೌಲರುಗಳ ಸಾಮಥ್ರ್ಯಕ್ಕನುಗುಣವಾಗಿ ಅವರನ್ನು ಉಪಯೋಗಿಸುತ್ತಿದ್ದ ಪಟೌಡಿ ಒಂದು ಪಂದ್ಯದಲ್ಲಿ ಚಂದ್ರಶೇಖರ್ಗೆ ಆರಂಭದಲ್ಲೇ ಬೌಲ್ ಮಾಡಲು ಅವಕಾಶ ನೀಡಿ ಅಚ್ಚರಿ ಮೂಡಿಸಿದ್ದರು. ಚಂದ್ರು ಯಶಸ್ವಿಯವಾಗಿ ಭಾರತ ಗೆದ್ದಾಗ ಅದರ ಹಿರಿಮೆ ಪಟೌಡಿಗೇ ಸಂದಿತ್ತು. ನಿವೃತ್ತಿಯ ನಂತರ ಭಾರತದ ಕ್ರಿಕೆಟ್ ಜಗತ್ತು ಪಟೌಡಿಯವರನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸಿಕೊಳ್ಳದಿರುವುದು ದುರಾದೃಷ್ಟಕರ. ಪಟೌಡಿಯಂತಹ ಅಪ್ರತಿಮ ಕ್ರೀಡಾಪಟುವನ್ನು ನಿರ್ಲಕ್ಷಿಸಿದ್ದು ಕ್ರಿಕೆಟ್ ಮಂಡಲಿ ಮಾತ್ರವಲ್ಲ ಇತ್ತೀಚಿನ ಪಂದ್ಯಗಳಲ್ಲಿ ವೀಕ್ಷಕ ವಿವರಣೆ ನೀಡುವವರೂ ನಿರ್ಲಕ್ಷಿಸಿದ್ದರು. ಬ್ಯಾಟಿಂಗ್ ಶೈಲಿ, ಕೌಶಲ್ಯಗಳ ಬಗ್ಗೆ ಮಾತನಾಡುವಾಗ ವಿಶಿ, ಪಟೌಡಿಯವರ ಪ್ರಸ್ತಾಪವನ್ನೇ ಮಾಡದಿರುವುದು ಇಂದಿಗೂ ಕಾಡುವ ಒಂದು ನ್ಯೂನತೆಯೇ ಸರಿ. ಬಹುಶಃ ಆಧುನಿಕ ಕ್ರಿಕೆಟ್ನಲ್ಲೂ ಗ್ಲಾಮರ್ಗೆ ಹೆಚ್ಚು ಮಹತ್ವ ನೀಡುವುದರಿಂದ ಪಟೌಡಿಯವರಂತಹ ಕಲಾತ್ಮಕ ಆಟಗಾರರಿಗೆ ಸೂಕ್ತ ಮನ್ನಣೆ ದೊರೆಯುತ್ತಿಲ್ಲ. ಒಬ್ಬ ಆಟಗಾರನ ಮಹತ್ವವನ್ನು, ಶ್ರೇಷ್ಠತೆಯನ್ನು ಆತ ಗಳಿಸಿದ ರನ್ಗಳ ಸಂಖ್ಯೆ ಅಥವಾ ಪಡೆದ ವಿಕೆಟ್ಗಳ ಸಂಖ್ಯೆಯಿಂದ ಅಳೆಯುವ ಈ ಪರಂಪರೆಯಲ್ಲಿ ಪಟೌಡಿಯವಂತಹ ಕಲಾವಿದರು ಕಣ್ಮರೆಯಾಗುವುದು ಸಹಜ. ಆದರೂ ಪಟೌಡಿಯವರ ನಿಧನಾನಂತರ ಅವರಿಗೆ ಸಂದಿರುವ ಗೌರವ, ಶ್ರದ್ಧಾಂಜಲಿಗಳು ಅವರ ಶ್ರೇಷ್ಠತೆಗೆ ಹಿಡಿದ ಕೈಗನ್ನಡಿ. ವಿಶ್ವದ ಶ್ರೇಷ್ಠ ಬ್ಯಾಟ್ಸ್ಮನ್ಗಳ ಪೈಕಿ ಅಗ್ರ ಪಂಕ್ತಿಯಲ್ಲಿ ನಿಲ್ಲುವ ಪಟೌಡಿಯವರ ಸಾಧನೆ ಅಜರಾಮರ. ಸುನಿಲ್ ಗವಾಸ್ಕರ್ ತಮ್ಮ ಲೇಖನವೊಂದರಲ್ಲಿ ಹೇಳಿರುವಂತೆ.ಮತ್ತೊಬ್ಬ ಪಟೌಡಿ ಹುಟ್ಟಿಬರಲಾರ. ಬರುವುದು ಸಾಧ್ಯವೂ ಇಲ್ಲ. ಭಾರತೀಯ ಕ್ರಿಕೆಟ್ಟಿಗೆ ಒಬ್ಬರೇ ನವಾಬ್, ವಿಶ್ವ ಕ್ರಿಕೆಟ್ಟಿಗೆ ಒಂದೇ ಟೈಗರ್ ಎಂಬುದು ಮಾತ್ರ ಸತ್ಯ. ಕ್ಯಾಪ್ಟನ್ಗೆ ಅಂತಿಮ ಲಾಲ್ ಸಲಾಮ್.







sir,adestu vishayagala bagge istondu nikaravagi,spastavagi bareteeri sir neevu,i am really surprising,vartamanada sangrshagala bagge,nimma lekhana avadhiyalli oduttiruve,but iga iddakkidda hage cricketbagge baredaddu nodi vismayagonde,infact naanu hehhu istapadalare, nanna magana atee cricket vyamohadindagi kelavomme noduttene,onde kannininda cricketnalli ekagrate adi eduralige shock needida ee pataudi nijakku great,gavaskar helida matu appata satya”mattobba pataudi hutti barahalara baruvudu sadyavilla, aa captainge nannadu ondu antima salam. nanage ondu anumana barta ide,lankesh influence kelavu barahagara mele agideeno anta,vartamanda sangarshgalu,sangeeta,rajakeeya,cinema,naataka,kreede,ondu uttama pustaka,konege ispeetu,race bagge heege ellavugala bagge manamuttuvahage lankesh matra barediddaru, eegiga kelavu barahara barahagalannu avara vycharika chintanegalannu,barahada vyaptiyannu nodidaaga ondistu barahagararu avara hadiyalli hejje hakutiddareno endu anisuttide. pataudi bagge nanage enu tilidirallilla ,ee nimma lekhanakku,avadhigu abinandanegalu.
D.RAVI VARMA HOSPET
Ravi varma avare, nimma abhinandanegalige nanna Dhanyavadagalu. Ishtondu abhimanadinda neevu hogalidare hege sahisikollali. maatugale horaduttilla. any way thanks. Ondu maatu lankesh influence nanna mele Kandita illa. Kaleju dinagalalli cricket aadiddene. 25 varsh aadiddene. Local cricket maatra. Haagagi huchu nanagu ide nimma magana hage. manushyanalli, adarallu barahagararalli ella vishayagala baggeyu Asakti iddare baravanigeya Aala vyapti hechaguttade. idu nanna anisike. anyway thanks for your compliments.
Divakar N