ಗೋಟಗೋಡಿಯಲ್ಲಿ ಕುಂಚಕ್ಕೆ ಬಣ್ಣ ತುಂಬಿದ ಕಲಾವಿದರು

ಸತೀಶ್ ಕುಲಕರ್ಣಿ

ಹಾವೇರಿ ಜಿಲ್ಲೆಯ ಗೋಟಗೋಡಿ ಉತ್ಸವ್ ರಾಕ್ ಗಾರ್ಡನ ಶಿಲ್ಪವನ ಖ್ಯಾತ ಕಲಾವಿದ ಟಿ.ಬಿ. ಸೊಲಬಕ್ಕನವರ ಅವರ ಕನಸಿನ ಕೂಸು. ಇಲ್ಲಿ ಅದ್ಧೂರಿ ಚಿತ್ರಕಲಾ ಸ್ಪರ್ಧೆ ನಡೆಯಿತು.

ನಾಡಿನ ನೂರು ಯುವ ಕಲಾವಿದರು ( ೪೫ ರ ಕೆಳಗಿನವರು ) ಭಾಗವಹಿಸಿದ್ದರು.

ಸ್ಪರ್ಧೆಯ ಹೆಸರು ‘ಮಳೆ ಮತ್ತು ಬದುಕು’. ತತ್ತರಗೊಂಡ ಉತ್ತರ ಕರ್ನಾಟಕದ ಹಾಳಾದ ಮಳೆ ಬದುಕಿಗೆ ಹಿಡಿದ ಕನ್ನಡಿ ವಸ್ತು ವಿಷಯವಾಗಿತ್ತು.

ಚಿತ್ರಕಲಾ ಸ್ಪರ್ಧೆಯ ಅಂದ ಹೆಚ್ಚಿಸಲು ಸೀರೆ ಸೆರಗಿನೋಪಾದಿಯ ಪುಟ್ಟ ಕವಿಗೋಷ್ಠಿ ಕೂಡ ಗೂಡು ಕಟ್ಟಿತ್ತು. ಬಸೂ ಬೇವಿನಗಿಡದ, ವಿಜಯಕಾಂತ ಪಾಟೀಲ, ಚನ್ನಪ್ಪ ಅಂಗಡಿ, ಮಹಾಂತಪ್ಪ ನಂದೂರ, ನಿರ್ಮಲಾ ಶೆಟ್ಟರ, ಚಂ.ಸು. ಪಾಟೀಲ, ಲಿಂಗರಾಜ ಸೊಟ್ಟಪ್ಪನವರ, ವೇದಾರಾಣಿ ಸೊಲಬಕ್ಕನವರ, ಮೇಘನಾ ನಾಡಿಗೇರ ಶಬ್ಧ ಚಿತ್ರಗಳ ವಾಚಿಸಿದರು.

ಕವಿ ಚಿತ್ರ ಬರೆಯಲಾರ, ಚಿತ್ರಗಾರ ಕವಿತೆ ಬರೆಯಲಾರ. ಆದರೆ ಉತ್ಸವ ಗಾರ್ಡನ್ನಿನ ಈ ಚಿತ್ರ ಕಲಾ ಕ್ಯಾಂಪಿನಲ್ಲಿ ಕವಿಗಳು ಕುಂಚಕ್ಕೆ ಕನಸು ತುಂಬಿದರೆ, ಕಲಮ್‍ಗೆ ಕುಂಚ ಕಲಾವಿದರು ಬಣ್ಣ ತುಂಬಿದರು.

ರಾಯಚೂರಿನ ಭೀಮರಾವ್, ಕೊಪ್ಪಳ ತಾವರಗೇರಿಯ ಸಂತೋಷ ಪತ್ತಾರ ಹಾಗೂ ಗದುಗಿನ ರಮೇಶ ಧಾರವಾಡ ಅನುಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದು, ತಲಾ ೨೦, ೧೫ ಹಾಗೂ ೧೦ ಸಾವಿರ ರೂಪಾಯಿಯ ಪ್ರೋತ್ಸಾಹ ಧನ ಪಡೆದರು. ನಿರ್ಣಾಯಕರಾಗಿ ಕೆ.ಕೆ. ಮಕಾಳೆ, ಕರಿಯಪ್ಪ ಹಂಚಿನಮನಿ ಹಾಗೂ ಆರ್. ಎಸ್. ಗುಂಜಾಳ ಇದ್ದರು.  ಪ್ರಕಾಶ ದಾಸನೂರ, ವೇದಾರಾಣಿ ಸೊಲಬಕ್ಕನವರ, ಪ್ರವೀಣ ಗಾಯಕರ ಹಾಗೂ ತಂಡದವರ ಸಾಹಸ ಇವ್ಹೆಂಟಿನ ಚಿತ್ರಗಳು ಇಲ್ಲಿವೆ.

‍ಲೇಖಕರು avadhi

October 16, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: