ಪ್ರಣವ ಭಟ್ ಪುತ್ತೂರು
ಗೋಕರ್ಣದಲ್ಲಿ ದೇವಾಸ್ಥಾನದ ಎದುರು ಹೂ ಮಾರುತ್ತಿದ್ದ ಅಜ್ಜಿ ಜನ ಹೂವಿಗಾಗಿ ಬಾರದ ಸಮಯದಲ್ಲಿ ಒಂದು ಸಣ್ಣ ಮುಗುಳ್ನಗೆಯೊಂದಿಗೆ ಕ್ಯಾಮೆರಾವನ್ನು ದಿಟ್ಟಿಸಿ ನೋಡುತ್ತಾ ನಿಂತುಬಿಟ್ಟರು ಹೀಗೆ ಅನೇಕರು ಅಲ್ಲಿ ಹೋಗಿ ಬರುವವರ ಬಳಿ ಹೂ ಬೇಕಾ ಹೂವು ಎಂದು ಕೇಳುತ್ತಾ ನಿಂತಿರುತ್ತಾರೆ ಸೂರ್ಯ ದೇವನು ಮಾತ್ರ ಪಾಪ ಎಂದು ಕರುಣೆ ತೋರದೆ ಒಂದೇ ಸಮನೆ ನೆತ್ತಿಯ ಮೇಲೆ ತನ್ನ ಕಿರಣಗಳನ್ನು ಪ್ರಬಲವಾಗಿ ಹರಿಸುತ್ತಿರುತ್ತಾನೆ.
ಆ ಬೇಗೆಯ ಮಧ್ಯೆ ಇಡೀ ದಿನ ಕುಳಿತುಕೊಳ್ಳದೆ ನಿಂತಿದ್ದರೆ ಕೊನೆಗೆ ಏನೋ ಅಲ್ಪ ದುಡಿಮೆ ಆ ದಿನಕ್ಕೆ ಸಾಕೆಂದು ಬಂದದ್ದರಲ್ಲಿ ಖುಷಿಪಟ್ಟು ನಾಳೆ ಮುಂಜಾನೆ ಮತ್ತೆ ಹೊಸ ಭರವಸೆ ಆತ್ಮವಿಶ್ವಾಸದೊಂದಿಗೆ ತಾವೇ ಹೂವನ್ನು ಸಣ್ಣ ಸಣ್ಣ ಮಾಲೆ ಮಾಡಿ ತಂದು ಹೂ ಮಾರಲು ಪ್ರಾರಂಭ…







0 Comments