ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೊತ್ತಿಲ್ಲ.. ನನಗಿನ್ನೂ ಮದುವೆಯಾಗಿಲ್ಲ..!

suchith kotianಸುಚಿತ್ ಕೋಟ್ಯಾನ್ ಕುರ್ಕಾಲು

ಮತ್ತೆ ಮತ್ತೆ ಮುಟ್ಟಬೇಕೆನಿಸುವ ಸುಕೋಮಲ ಕೈಗಳು, ಸದಾ ಮುಗುಳ್ನಗೆಯ ಸ್ವಾಗತ ಬೀರುವ ಮುಖ, ತುಂಟತನವೇ ಇವಳ ಈಗಿನ ಪರ್ಮನೆಂಟ್ ವೃತ್ತಿ! ಇವಳು ಜೊತೆಗಿದ್ದರೆ ಸುಖ, ಸಂತೋಷ, ಸಮಾಧಾನಗಳೆಲ್ಲವೂ ಜೊತೆಗಿದ್ದಂತೆ. ಇವಳ್ಯಾರು ಬಲ್ಲಿರಾ?

ಇವಳ ಹೆಸರು ಸ್ಪರ್ಶ. ಇದು ನಾನೀಕೆಗೆ ಬಹಳ ಪ್ರೀತಿಯಿಂದ ಇಟ್ಟ ಹೆಸರು. ಇವಳಮ್ಮ ಪ್ರೀತಿಯಿಂದ ಸುಸ್ವಿತಾ ಎನ್ನುತ್ತಾಳೆ. ಇದು ಅವಳ ಎರಡನೇ ಹೆಸರು. ನಂಗಂತೂ ಸ್ಪರ್ಶ ಎಂದು ಕರೆದರೇನೇ ತೃಪ್ತಿ.

ನನ್ನ ಮುದ್ದಿನ ಮಗಳಿವಳು. ಈಗ ಇವಳಿಗೆ ತೊದಲು ಮಾತಾಡುವ ಪ್ರಾಯ. ಎಲ್ಲವನ್ನೂ ಅದ್ಯಾಕೆ ಇದ್ಯಾಕೆ ಇದೇನು ಅದೇನು ಎಂದು ಪ್ರಶ್ನಿಸುವ ವಯಸ್ಸು. ಅವಳಮ್ಮನಿಗೆ ಇವಳ ಮುಗಿಯದ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಒಮ್ಮೊಮ್ಮೆ tundu hykluರೋಸಿಹೋದದ್ದೂ ಉಂಟು. ‘ಅಪ್ಪ… ಅಪ್ಪ… ಅಮ್ಮ ನಂಗೆ ಬಯ್ಯುದು’ ಎಂದು ಒಮ್ಮೊಮ್ಮೆ ನಂಗೆ ದೂರು ಬಂದದ್ದು ಉಂಟು. ಆಗ ನಾನೊಮ್ಮೆ ಅವಳನ್ನೆತ್ತಿ ಮುದ್ದಿಟ್ಟರೆ ಅಷ್ಟರಲ್ಲೇ ಸಮಾಧಾನ ಆಕೆಗೆ.

ಮಗಳಿಗೆ ನಾನು ಬಯ್ಯೋದಿಲ್ಲ. ಅಮ್ಮ ಆಗಾಗ ಗದರಿಸ್ತಾರೆ. ಆದ್ರೂ ನನ್ ಮಗಳಿಗೆ ಅಮ್ಮನನ್ನು ಬಿಟ್ಟು ಇರೋಕಾಗಲ್ಲ. ಅಡಿಗೆ ಮಾಡುವಾಗ, ಮನೆ ಕ್ಲೀನ್ ಮಾಡೋವಾಗ, ಬಟ್ಟೆ ಒಣಗಿಸೋವಾಗ ಅಮ್ಮನ ಬಾಲ ಆಗಿ ಇರ್ಲೇಬೇಕು. ಅದೆಷ್ಟೇ ಬೈದ್ರೂ ತನ್ನ ಮಗಳು ಒಂದರೆಕ್ಷಣ ಕಣ್ಮುಂದೆ ಇರದೆ ಹೋದರೆ ಅಮ್ಮನಿಗೂ ಸಮಾಧಾನ ಇಲ್ಲ. ಒಟ್ಟಾರೆ ನಮ್ಮ ಮನೆಯಲ್ಲಿ ಯಾರನ್ನು ಬಿಟ್ಟು ಯಾರೂ ಇಲ್ಲ.

ಬೆಳಿಗ್ಗೆ ಕೆಲಸಕ್ಕೆ ಹೋಗೊದು ಇನ್ನೂ ಯಾತನಾಮಾಯ ಅನ್ನಿಸೋದು ಮಗಳು ಈ ಭುವಿಗೆ ಬಂದ ಮೇಲೆ. ನಾನು ಹೊರಟ ಕೂಡಲೇ ಆ ಮುದ್ದು ಮುಖ ಸಪ್ಪಗಾಗಿ ಬಿಡುತ್ತೆ. ‘ಸ್ಪರ್ಶ ಪುಟ್ಟಾ… ಬರುವಾಗ ದೊಡ್ಡ ಚೋಕಿ ತರ್ತೇನೆ’ ಅಂತ ಪೂಸಿ ಹೊಡೆದು ಅವಳಿಗೊಂದು, ನನ್ನವಳಿಗೊಂದು ಸಿಹಿಮುತ್ತನ್ನಿತ್ತು ಆಫೀಸಿಗೆ ಹೊರಡುತ್ತೇನೆ. ನಡುವಲ್ಲೇನಾದ್ರೂ ಮನೆಗೆ ಫೋನ್ ಮಾಡಿದ್ರೆ  ‘ನಾ ಮಾತಾಡ್ತೆ.. ನಾನು.. ನಾನು’ ಅಂತ ಅಮ್ಮನತ್ರ ಅಂಗಲಾಚುವ ಮಗಳ ಸ್ವರ ಕೇಳಿ ಪುಳಕವಾಗುತ್ತೆ. ಇಲ್ಲಿಯವರೆಗೆ ಒಂದರೆ ಕ್ಷಣವಾದರೂ ಅವಳ ಜೊತೆ ಮಾತಾಡದೆ ಪೋನ್ ಕೆಳಗಿಟ್ಟಿಲ್ಲ ನಾನು.

ಮುದ್ದು ಮಾಡೋ ಹೆಂಡತಿ, ನಮ್ಮನೆ ಬೆಳಗೋ ಮಗಳು ಜೊತೆಗಿರುವಾಗ ಸ್ವರ್ಗ ಅಂದರೆ ಬಹುಶಃ ಹೀಗೆನೇ ಇರಬಹುದೆಂದು ಎಂಬ ಆಲೋಚನೆ ಬರುತ್ತೆ.

ಗೊತ್ತಿಲ್ಲ…

ನನಗಿನ್ನೂ ಮದುವೆಯಾಗಿಲ್ಲ…!

baby sandals

 

‍ಲೇಖಕರು admin

23 August, 2016

4 Comments

  1. shama nandibetta

    ಸ್ವರ್ಗ ಅಂದರೆ ಬಹುಶಃ ಹೀಗೆನೇ maathra alla !!! Innoo bahalashtide. Helidare swarasyavilla. Maduve ada mele bareeri !!

    • ಸುಚಿತ್ ಕೋಟ್ಯಾನ್ ಕುರ್ಕಾಲು

      ಇನ್ನೂ ಬಹಳಷ್ಟಿದೆ ಅಲ್ವಾ… ಆಯ್ತು… ಮದ್ವೆ ಆದ್ಮೇಲೆ ಇನ್ನೊಮ್ಮೆ ಬರೀತೀನಿ..:) ಥ್ಯಾಂಕ್ಯೂ ಮೇಡಂ..

  2. Dr. Prabhakar M. Nimbargi

    ಓ’ ಹೆನ್ರಿ ಸ್ಠೈಲು ನಿಮಗೆ ಒಗ್ಗಿದೆ. ಶಮಾ ನಂದಿಬೆಟ್ಟ ‘ಮದುವೆ ಆದ್ಮೇಲೆ ಬರೀರಿ’ ಹೇಳಿದ್ದಾರೆ. ಬಹುಶಃ ನಿಮಗೆ ಆಗ ಬರೆಯೋಕಾಗಲ್ಲ ಅಂತ ಈಗ ಬರ್ದಿದೀರಾ! ನಂದೂ ಕೊಂಚ ಹೀಗೇ. ಮದುವೆ ಆಗೋ ಮುಂಚೆ ಬರೀಲಿಲ್ಲಾ, ಮಕ್ಕಳು-ಮೊಮ್ಮಕ್ಕಳ ಮದುವೆ ಮಾಡುವ ವೇಳೆಯಲ್ಲಿ ಬರೀತಾ ಇದೀನಿ. ಹೇಗಿದೆ ಕಾಂಟ್ರಾಡಿಕ್ಶನ್ನು!

    • ಸುಚಿತ್ ಕೋಟ್ಯಾನ್ ಕುರ್ಕಾಲು

      ಸರ್.. ಓ ಹೆನ್ರಿ ಶೈಲಿ ಜೊತೆ ಹೋಲಿಕೆನಾ… ದೊಡ್ಡ ಮಾತು ಸರ್…
      ನೀವು ಈಗ ಬರಿತಿರೋದು ನಿಮ್ಮ ಅನುಭವಗಳ ಮೂಟೆಯಿಂದ ಸರ್.. ನಮ್ದೇನಿದ್ರೂ ಬರೀ ಕಲ್ಪನೆ ಅಷ್ಟೇ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading