ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗುಳೇ ಹೋಗುವದನ್ನು ಮತ್ತು ಗುಳೇ ಬರುವವರನ್ನು ತಡೆಯಬೇಕಿದೆ…

ಕಾರ್ಮಿಕರು ಇಲ್ಲಿ ಸಿಗುತ್ತಿಲ್ಲಾ,ಆದರೆ ಗುಳೇ ತಪ್ಪಿಲ್ಲಾ…

ಶರಣಪ್ಪ ಬಾಚಲಾಪೂರ


ಘಟನೆ 1:
ರತ್ನಗಿರಿಯಲ್ಲಿ ನಾಲ್ಕು ಜನ ಕೂಲಿಕಾರರು ಸಮುದ್ರದಲ್ಲಿ ಮೀನು ಹಿಡಿಯಲು ಹೋಗಿ ಚಂಡಮಾರುತಕ್ಕೆ ಸಿಕ್ಕು ನಾಲ್ಕು ಜನ ಕಣ್ಮರೆ. ಕಣ್ಮರೆಯಾದ ನಾಲ್ಕು ಜನರು ಕೊಪ್ಪಳ ಜಿಲ್ಲೆಯವರು. ಇವರು ರತ್ನಗಿರಿಯಲ್ಲಿ ದುಡಿದು ತಂಗಿ ಮದುವೆಗೆ ಮಾಡಿರುವ ಸಾಲವನ್ನು ತೀರಿಸುತ್ತೇನೆ ಎಂದು ಹೋಗಿದ್ದವರು, ತಾವೇ ತೀರಿ ಹೋಗಿ ಮನೆಯಲ್ಲಿ ಮತ್ತೆ ದುಡಿಯಬೇಕು ಇಲ್ಲವೇ ಇಡೀ ಕುಟುಂಬ ಬೀದಿ ಪಾಲಾಗಬೇಕು.. ಇದರಿಂದಾಗಿ ವಯಸ್ಸಾದ ತಂದೆ ತಾಯಿ.. ಮದುವೆ ಮಾಡಿಕೊಂಡು ತಂಗಿ ಜೀವಮಾನವಿಡಿ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.
ಘಟನೆ2:
ಕೊಪ್ಪಳದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಕಟ್ಟಡ ಕಾರ್ಮಿಕ ಕಟ್ಟಡದ ಮೇಲೆಯಂದ ಬಿದ್ದು ಸ್ಥಳದಲ್ಲಿಯೇ ಸಾವು. ದೂರದ ಪ್ರದೇಶದ ಈ ಕಾರ್ಮಿಕನ ಶವವನ್ನು ಅತನ ಸ್ವಂತ ರಾಜ್ಯಕ್ಕೆ ಕಳುಹಿಸಲು ಕಟ್ಟಡ ಮಾಲಿಕ ಪರಿದಾಟ. ಹೊಟ್ಟೆ ತುಂಬಿಸಿಕೊಳ್ಳಲು ಬಂದ ಕಾರ್ಮಿಕ ಹೊಟ್ಟೆ ಇನ್ನು ಖಾಲಿಯಾಗಿರುವಾಗಲೆ ಸಾವಿನ ಮನೆಗೆ–ಸುದ್ದಿ.
ಘಟನೆ3:
ಎಲೆಕ್ಟಾನಿಕ್ಸನಲ್ಲಿ ಡಿಪ್ಲೋಮಾ ಓದಿರುವ ನಮ್ಮ ಮಗ ಈಗ ಬೆಂಗಳೂರಿನಲ್ಲಿ ಸಣ್ಣ ಕಂಪನಿಯಲ್ಲಿ ಕೆಲಸ, ಬೆಂಗಳೂರು ಜೀವನಶೈಲಿಗೆ ಆತನಿಗೆ ಸಿಗುವ 7-8 ಸಾವಿರ ರೂಪಾಯಿ ಸಾಲುತ್ತಿಲ್ಲಾ, ಮದುವೆ ವಯಸ್ಸಿಗೆ ಬಂದಿದ್ದರು ತನ್ನದೆ ಕುಟುಂಭವನ್ನು ಮಾಡಿಕೊಳ್ಳಲು ತನಗೆ ಸಿಗುತ್ತಿರುವ ಸಂಬಳ ಸಾಲುವುದಿಲ್ಲಾ ಎಂದುಕೊಂಡು 30 ವಯಸ್ಸಾಗುತ್ತಾ ಬಂದರೂ ಮದುವೆ, ಮಕ್ಕಳು, ಸಂಸಾರದ ಜಂಜಡದಿಂದ ದೂರವಿರುವ ಅನಿರ್ವಾಯತೆ. ಹೇಳಿಕೊಳ್ಳುವದಕ್ಕೆ ಮಗ ಬೆಂಗಳೂರಿನಲ್ಲಿ ಇಂಜಿನೀಯರ್ ಆದರೆ ತನ್ನದೆ ಸಂಸಾರ ಮಾಡಿಕೊಳ್ಳಲು ಹೆಣಗಾಟ.
ಘಟನೆ4:
ಬಳ್ಳಾರಿ ಜಿಲ್ಲೆಯಲ್ಲಿ ಉತ್ಕೃಷ್ಟ ಮಟ್ಟದ ಅದಿರು, ಕಾರ್ಖಾನೆ ಪಕ್ಕದಲ್ಲಿ ಜಲಾಶಯದ ನೀರು, ಕಾರ್ಖಾನೆ ಅನತಿ ದೂರದಿಂದ ಹಾಯ್ದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳು, ಬರಪೀಡಿತ ಪ್ರದೇಶ ಇದರಿಂದಾಗಿ ಲಕ್ಷ ಎಂದರೆ ಎಷ್ಟು ಸೊನ್ನೆಗಳು ಇರುತ್ತವೆ ಎಂಬ ಲೆಕ್ಕ ಗೊತ್ತಿಲ್ಲದ ಜನಕ್ಕೆ ಪ್ರತಿ ಎಕರೆಗೆ ನಾಲ್ಕೈದು ಲಕ್ಷ ರೂಪಾಯಿ ಪರಿಹಾರ. ಮನೆಗೊಬ್ಬರಂತೆ ಕಾರ್ಖಾನೆಯಲ್ಲಿ ಕೆಲಸ ನೀಡುವ ಭರವಸೆ, ಇದನ್ನು ನಂಬಿಕೊಂಡು ತಲೆಮಾರಿಗಳಿಂದಲೂ ಕೃಷಿ ಮಾಡುತ್ತದ್ದ ಹೋಲವನ್ನು ಮಾರಿ ನಂತರ ಕಾರ್ಖಾನೆಯ ಮುಂದೆ ಹೋದರೆ ನಿಮ್ಮ ಮಗ ಮಾಡುವಂತಹ ಕೆಲಸವಿಲ್ಲ ಇಲ್ಲಾ. ಇಲ್ಲಿ ಬೇಕಿದ್ದರೆ ಇಲ್ಲಿ ಫ್ಯೂನ್ ಇಲ್ಲವೇ ಕಾರ್ಮಿಕನಾಗಿ ದುಡಿಯಲಿ ಎಂದು ಹೇಳುವ ಕಾರ್ಖಾನೆಗಳು..ಕಾರ್ಖಾನೆ ತುಂಬ ಹೊರರಾಜ್ಯದಿಂದ ಅಧಿಕಾರಿಗಳು, ಜ್ಯೂನಿಯರಿ ಇಂಜಿನೀಯರ್ ಗಳು. ಇದನ್ನು ನೋಡಿದ ಸಂಘಟನೆಗಳು ಸರೋಜಿನಿ ಮಹಿಷಿ ವರದಿ ಜಾರಿಗೆ ಬರಲಿ ಎಂಬ ನಿರಂತರ ಒತ್ತಾಯ.
ಘಟನೆ5:
ಅಸ್ಸಾಂ ಜನತೆಯ ಮೇಲೆ ದಾಳಿಯ ಭೀತಿ ಇದರಿಂದಾಗಿ ಒಂದೇ ದಿನ 10ಸಾವಿರಕ್ಕೂ ಆಸ್ಸಾಮ್ ಜನತೆ ತಮ್ಮ ಬಂಧುಗಳನ್ನು ಸೇರಲು ರೈಲಿನಲ್ಲಿ ಪ್ರಯಾಣ, ಇರುವ ರೈಲಿನಲ್ಲಿ ಹೋಗಲು ಸಾದ್ಯವಾಗದೆ ಪ್ರತೇಕ ರೈಲು ಬಿಡಲಾಗದೆ. ನಮ್ಮ ರಾಜ್ಯದಲ್ಲಿ ಯಾವದೇ ಭಯೋತ್ಹಾದನೆ ಚಟುವಟಕೆ ನಡೆಯುತ್ತಿಲ್ಲಾ ರಾಜ್ಯ ಬಿಟ್ಟು ಹೋಗಿ ಬ್ಯಾಡಿ ಎಂದು ರಾಜ್ಯದ ಗೃಹ ಸಚಿವರ ಮನವಿ. ಅವರಿಗೆ ಸರ್ಕಾರದಿಂದ ಆಭಯ ಹಸ್ತ ನೀಡಿದ್ದರಿಂದ ಮತ್ತೆ ವಾಪಸ್ಸು.
ಘಟನೆ 6;
ನಮ್ಮ ಹಿರಿಯರ ಕಾಲದಿಂದಲೂ ಜಮೀನ್ದಾರರಾಗಿರುವ ನಮ್ಮ ಊರಿನ ಗೌಡರ ಮನೆಯಲ್ಲಿ ಈಗ ಜಮೀನಿನಲ್ಲಿ ಕೆಲಸ  ಮಾಡುವವರು ಇಲ್ಲಾ. ಇರುವ ಭೂಮಿಯಲ್ಲಿ ದುಡಿಯಲು ಕೂಲಿಕಾರರು ಸಿಗದೆ ಇರುವದರಿಂದ ಅರ್ಧಕ್ಕಿಂತ ಹೆಚ್ಚು ಭೂಮಿ ಉಳಮೆ ಮಾಡದೆ ಬೀಳು ಬಿದ್ದಿವೆ. ಮನೆಯಲ್ಲಿ ಒಬ್ಬರು ಮಾತ್ರ ಒಕ್ಕಲತನ ಮಾಡುತ್ತಿದ್ದು ಇವರಿಗೆ ಸಂಪೂರ್ಣ ಭೂಮಿಯನ್ನು ನೀಗಿಸಿಕೊಂಡು ಹೋಗಲು ಆಗದೆ ಬಂದಷ್ಟು ಬರಲಿ ಎಂದು ದೊಡ್ಡ ಹಿಡುವಳಿದಾರರಾಗಿದ್ದವರು, ಕಮತವಿಲ್ಲದೆ ಸಣ್ಣ ಹಿಡುವಳಿದಾರರಂತಾಗಿದ್ದಾರೆ.
ಹೀಗೆ ಮೇಲಿನ ಅನೇಕ ಘಟನೆಗಳನ್ನು ನೋಡುತ್ತಾ ಹೋದರೆ ಇಂದಿನ ಕರ್ನಾಟಕದಲ್ಲಿ ಕೂಲಿಕಾರರು, ರೈತರು ಹಾಗೂ ಗುಳೇ ಹೋಗುವ ಘಟನೆಗಳ ಮಧ್ಯೆದ ವೈರುಧ್ಯಗಳನ್ನು ಕಾಣುತ್ತವೆ. ಇಲ್ಲಿ ದುಡಿಯಲು ಜನವಿಲ್ಲ, ಜನವಿದ್ದರು ಸ್ಥಳೀಯರಿಗೆ ಇಲ್ಲಿ ಕೆಲಸ ಸಿಗುತ್ತಿಲ್ಲಾ. ಇಲ್ಲಿ ಮಾಡುತ್ತಿರುವ ಕೆಲಸವನ್ನು ದೂರದ ಪ್ರದೇಶಕ್ಕೆ ಹೋಗಿ ಆಲ್ಲಿಯೂ ಮಾಡುವದು ಅದೇ ಕೆಲಸ, ಅಷ್ಟೆ ಕೂಲಿ, ಯಾಕೆ ಹಿಂಗೆ ಎಂದುಕೊಂಡರು ಎಲ್ಲವೂ ಗೊಂದಲ..ಗೊಂದಲ.

ಒಕ್ಕುಲತನವನ್ನೆ ನಂಬಿಕೊಂಡು ನಾಲ್ಕೈದು ಎಕರೆ ಭೂಮಿ ಹೊಂದಿರುವ ರೈತ ಒಣಬೇಸಾಯದಲ್ಲಿ ಮಳೆಯನ್ನು ನಂಬಿಕೊಂಡು ವರ್ಷವಿಡಿ ದುಡಿದರೂ ಆತನ ಕುಟುಂಭ ನಿರ್ವಹಣೆ ಮಾಡಲು ಅಗದೆ ಅನಿವಾರ್ಯವಾಗಿ ದೂರದ ಪ್ರದೇಶಕ್ಕೆ ಕೂಲಿ ಹೋಗಲೇಬೇಕಾದ ಪರಿಸ್ಥಿತಿ. ಆತನು ಸ್ಥಳೀಯವಾಗಿ ಹೊಲ ಮನೆಯಲ್ಲಿ ಕೆಲಸಕ್ಕೆ ಹೋದರೆ ಕೂಲಿ ಸಾಲುವುದಿಲ್ಲಾ ಎನ್ನುತ್ತಾನೆ. ಅದಕ್ಕಾಗಿ ದೂರಕ್ಕೆ ಹೋಗಿ ಕಟ್ಟಡ ಕೆಲಸ, ಮೀನು ಹಿಡಿಯುವದು, ಗೊಬ್ಬರ ತುಂಬುವ ಕೆಲಸಕ್ಕೆ ಹೋಗಿ ಮೂರು ನಾಲ್ಕು ತಿಂಗಳು ದುಡಿದುಕೊಂಡು ಬರಲೇಬೇಕಾದ ಅನಿವಾರ್ಯ.
ಬದಲಾದ ಕಾಲದಲ್ಲಿ ಇಂದಿನ ಜಾಗತೀಕರಣಾ, ಖಾಸಗಿಕರಣ, ದುಬಾರಿಯಾದ ಕಾಲದಲ್ಲಿ ಮೇಲಿನ ಘಟನೆಗಳು ಸ್ವಾಭಾವಿಕವಾಗಿ ಕಾಣುವ ದೃಶ್ಯಗಳು. ಹಿಂದೆ ಸುಮಾರು 20 ವರ್ಷಗಳ ಹಿಂದೆ ನಮ್ಮ ಗ್ರಾಮೀಣ ಪ್ರದೇಶದಲ್ಲಿ ಸಣ್ಣ ಹಿಡುವಳಿ ಹೊಂದಿರುವವರು ತಮ್ಮ ಹೊಲ ಮನೆ ಕೆಲಸ ಮುಗಿದ ನಂತರ 2-3 ತಿಂಗಳು ಗುಳೇ ಹೋಗುತ್ತಿದ್ದರು. ಇನ್ನು ಕೆಲವು ರೈತನ ಕುಟುಂಭದಲ್ಲಿ ಮದುವೆಯನೊ, ಇನ್ನಿತರ ಕಾರ್ಯವನ್ನು ಮಾಡಿದ್ದರೆ. ಇಲ್ಲವೆ ರೈತ ಒಂದಿಷ್ಟು ಭೂಮಿಯನ್ನು ಕೊಂಡುಕೊಂಡಿದ್ದರೆ ಆಗ ಮಾಡಿರುವ ಸಾಲವನ್ನು ತೀರಿಸಲು ಗುಳೇ ಹೋಗುವದನ್ನು ಕಾಣುತ್ತಿದ್ದೇವು, ಆದರೆ ಇಂದು ಒಕ್ಕುಲತನವನ್ನೆ ನಂಬಿಕೊಂಡ ಮದ್ಯಮ ಹಿಡುವಳಿ ಹೊಂದಿರುವ ರೈತನೂ ಗುಳೇ ಹೋಗುತ್ತಿದ್ದಾನೆ. ಗುಳೆ ಹೋಗುವವರ ಸಮಸ್ಯೆ, ಇಂದಿನ ಸಾಮಾನ್ಯ ರೈತನ ಗೋಳು ಗೊತ್ತಿಲ್ಲದೇ ಐಷರಾಮಿಯಾಗಿ ಬದುಕುತ್ತಿರುವ ರಾಜ್ಯದ ಮಂತ್ರಿಗಳು ಗುಳೇ ಹೋಗುವದು ಈ ಜನಕ್ಕೆ ಚಟ ಎಂದು ಹೇಳುತ್ತಿದ್ದಾರೆ.ಇದರಿಂದಾಗಿ ಜನತೆ ನಮ್ಮ ಹಣೆ ಬರಹ ಇಷ್ಟೆ ಅಂದುಕೊಂಡು ಬದುಕು ದೂಡಬೇಕಾಗಿದೆ.
ಉತ್ತರ ಕರ್ನಾಟಕದ ಬಹುತೇಕ ನಗರ ಮತ್ತು ಪಟ್ಟಣದಲ್ಲಿ ಪ್ರತಿ ಮುಂಜಾನೆ ಕೂಲಿ ಹೂಡಿಕೊಂಡು ಸಾವಿರಾರು ಜನ ರಸ್ತೆಯಲ್ಲಿ ನಿಂತು ನಾವು ಕೆಲಸಕ್ಕೆ ಬರುತ್ತವೆ ನಮ್ಮನ್ನು ಕರೆಯಿರಿ ಎಂದು ಕಾಯಿಯುತ್ತಾರೆ. ಕೂಲಿಕಾರರ ಅವಶ್ಯವಿರುವವರು ಕೂಲಿಕಾರರನ್ನು ಅವರ ಮಾಡುವ ಕೆಲಸವನ್ನು ಲೆಕ್ಕ ಹಾಕಿ ಕೆಲಸ ಮತ್ತು ಕೆಲಸಕಾರರನ್ನು ಹರಾಜಿನಲ್ಲಿ ಕೂಗಿ ಕೆಲಸಕ್ಕೆ ಹೋಗುವಂತಹ ಪರಿಸ್ಥಿತಿ. ಈ ರೀತಿ ಕೆಲಸವನ್ನು ಗುತ್ತಿಗೆಯಲ್ಲಿ ಕೆಲಸಕ್ಕೆ ಬಂದವರೆ ನಿಗಿದಿ ಮಾಡಿದ ಕೆಲಸವನ್ನು ನಿಗಿದಿ ಮಾಡಿದ ಮೊತ್ತಕ್ಕೆ ಮುಗಿಸುತ್ತಾರೆ. ಅದೇ ಕೆಲಸಗಾರರು ದಿನದ ಕೂಲಿಗಾಗಿ ಬಂದರೆ ಸಾವಕಾಶವಾಗಿ ಮಾಡುತ್ತಾರೆ ಎಂಬ ಆರೋಪ ಕೆಲಸ ನೀಡುವವರದು. ಅದಕ್ಕೆ ನಮ್ಮಲ್ಲಿ ಬಿಹಾರ, ಉತ್ತರಪ್ರದೇಶ, ಅಸ್ಸಾಂ, ತಮೀಳುನಾಡು ಸೇರಿದಂತೆ ವಿವಿದಡೆ ಕೆಲಸಗಾರನನ್ನು ಕರೆದುಕೊಂಡು ಬಂದು ಕೆಲಸ ಮಾಡಿಕೊಳ್ಳುತ್ತಿದ್ದಾರೆ.
ಇಂದು ಯುವಕರು ದುಷ್ಚಟಗಳಿಂದ ಹಾಳಾಗುತ್ತಿದ್ದಾರೆ ಎಂಬ ಸಾಮಾನ್ಯ ಅಭಿಪ್ರಾಯವಿದ್ದರು ಯುವಕರು ತಮ್ಮ ಜವಾಬ್ದಾರಿ ಅರಿತು ತಾವು ಕಲಿತ ವಿದ್ಯೆಗೆ ತಕ್ಕಂತೆ ಕೆಲಸ ಮಾಡುವ ಉಮೇದು ಇದ್ದರು ಅವರಿಗೆ ತಮ್ಮ ಗ್ರಾಮದಲ್ಲಿ ಇಲ್ಲವೇ ಹತ್ತಿರದ ನಗರ, ಇಲ್ಲವೆ ಪಟ್ಟಣದಲ್ಲಿ ಕೆಲಸ ಸಿಗುತ್ತಿಲ್ಲಾ ಅದಕ್ಕಾಗಿ ಅವರು ಏಳೆಂಟು ಸಾವಿರ ರೂಪಾಯಿಗೆ ಕೆಲಸಕ್ಕೆ ಹೊಗಬೇಕಾಗಿದೆ. ಇನ್ನು ಪಕ್ಕದಲ್ಲಿ ಕಾರ್ಖಾನೆ ಇದ್ದರು ಇಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಗುತಿಲ್ಲಾ. ರಾಜ್ಯದಲ್ಲಿ ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ ಆದರೆ ಡಿ ಗ್ರೂಪ್ ಸೇರಿದಂತೆ ಎಲ್ಲ ನೌಕರಿಗಳು ಬೇರೆ ರಾಜ್ಯದವರಿಗೆ. ಇಲ್ಲಿ ಕೆಲಸವಿಲ್ಲದೆ ಪರಿದಾಡುವ ಸ್ಥಳೀಯರು ಒಂದು ಕಡೆಯಾದರೆ ಕಡಿಮೆ ಕೂಲಿಗೆ ಹೊರರಾಜ್ಯದವರು ಬಂದು ದುಡಿಯುತ್ತಾರೆ. ಅದಕ್ಕೆ ಕಾರಣ ಕೇಳಿದ್ದರೆ ಸ್ಥಳೀಯರು ಇಲ್ಲಿ ಇದ್ದರೆ ಸಂಘಟಿತರಾಗಿ ವೇತನವೋ ಇಲ್ಲವೇ ಇನ್ನಿತರ ಕಾರಣಕ್ಕೆ ಹೋರಾಟ ಮಾಡಿತ್ತಾರೆ ಎಂಬ ಕಾರಣಕ್ಕೆ ಸ್ಥಳೀಯರಿಗೆ ನೋ ವೆಕೆನ್ಸಿ ಎಂಬ ಬೋರ್ಡುಗಳನ್ನು ನೋಡಬೇಕಾಗದೆ ಎನ್ನಲಾಗಿದೆ.
ಒಂದುಕಡೆ ಪ್ರತಿಭೆಗೆ ಪುರಸ್ಕಾರ ಸಿಗುತ್ತಿಲ್ಲಾ. ಪ್ರತಿಭೆಗಳು ಕೆಲಸಕ್ಕಾಗಿ ಅಲ್ಲಲ್ಲಿ ಪರಿದಾಡುತ್ತಿದ್ದಾರೆ. ಇನ್ನು ಸ್ಥಳೀಯದಲ್ಲಿ ಕೆಲಸಗಳನ್ನು ಸ್ಥಳೀಯರಿಗೆ ನೀಡಲು ಹಿಂಜರಿಯುತ್ತಿದ್ದಾರೆ. ಅಲ್ಲಿ ಇಲ್ಲಿ ಎರಡು ಕಡೆ ಕೆಲಸಗಾರರು ಹೊಟ್ಟೆ ತುಂಬಿಸಿಕೊಳ್ಳುವ ಮಹಾದಾಸೆ ಹೊಂದಿದ್ದಾರೆ. ಆದರೆ ಇತ್ತೀಚಿಗೆ ಸ್ಥಳೀಯರು, ಹೊರಗಿನವರು ಎಂಬ ಚರ್ಚೆ ಪ್ರಾರಂಭವಾಗಿದೆ. ಅದರಲ್ಲಿಯೂ ಮಹಾನಗರ ಪಾಲಿಕೆಯತ್ತ ಜನ ವಲಸೆ ಹೋಗುತ್ತಿದ್ದಾರೆ. ಇದನ್ನು ವಿರೋಧಿಸಿ ಮುಂಬೈ ಮತ್ತು ಇತ್ತೀಚಿಗೆ ಮಂಡ್ಯ ಜಿಲ್ಲೆಯಲ್ಲಿ ದುಡಿಯಲು ಬಂದವರ ಮೇಲೆ ಮೂಲಭೂತವಾದಿಗಳು ದಾಳಿ ನಡೆಸಿ ಅವರನ್ನು ರಾಜ್ಯಕ್ಕೆ ಬರುವದಕ್ಕೆ ಭಯ ಪಡುವಂತೆ ಮಾಡಲಾಗುತ್ತದೆ.
ಇದಕ್ಕೇಲ್ಲಾ ಮುಕ್ತಾಯ ಹಾಕಬೇಕು ಎಂದರೆ..ದೇಶದ ಬೆನ್ನುಲುಬಾಗಿರುವ ಕೃಷಿಯನ್ನು ಉತ್ತೇಜಿಸಬೇಕು. ಕೃಷಿಯಾಧರಿತ ಕೈಗಾರಿಕೆಗಳು ಬರಬೇಕು. ಸ್ಥಳೀಯರಿಗೆ ಉದ್ಯೋಗ ಸಿಗುವಂತೆ ಸರ್ಕಾರದ ನಿಯಮಗಳನ್ನು ಬಿಗಿಗೊಳಿಸಬೇಕು. ಸ್ಥಳಿಯ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಕುಶಲತೆಯ ಬಗ್ಗೆ ತರಬೇತಿ ನೀಡಿ ಅವರಿದೆ ಕೆಲಸ ನೀಡಬೇಕು. ಸರ್ಕಾರದ ಘೋಷಣೆಗಳು ಕಟ್ಟುನಿಟ್ಟಿನಿಂದ ಜಾರಿಯಾಗಬೇಕು.ಸ್ಥಳೀಯರಲ್ಲಿ ಜಾಡ್ಯತೆಯ ಗುಣವನ್ನು ದೂರ ಮಾಡಿ ಗುಳೇ ಹೋಗುವದನ್ನು ಮತ್ತು ಗುಳೇ ಬರುವವರನ್ನು ತಡೆಯಬೇಕಿದೆ.
 

‍ಲೇಖಕರು avadhi

3 August, 2013

5 Comments

  1. G Venkatesha

    Idakkella namma sarakaarada ichchaashaktiya korateye kaaranavallave?????

  2. Sunil HH

    ಗುಳೇ ಹೋಗುವದನ್ನು ಮತ್ತು ಗುಳೇ ಬರುವವರನ್ನು ತಡೆಯಬೇಕಿದೆ….. ಒಂದನು ತಡೆದರೆ ಸಾಕು,ಆಗುವುದೇ??

  3. Gangadhar

    ಬೆಂಗಳೂರಿನ ಪ್ರತಿಯೊಂದು ಕಟ್ಟಡದ ಕೆಲಸದಲ್ಲಿ ಕೊಪ್ಪಳ ಜಿಲ್ಲೆಯ ಕಾಮಿಱಕರು ಇರುವವರೆಂದು ಜಿಲ್ಲಾಧಿಕಾರಿಯೇ ಸ್ಪಷ್ಟಪಡಿಸಿದ್ದಾರೆ ಅಲ್ವಾ ಸರ್

  4. Anonymous

    ಮೊದಲನೆಯದಾಗಿ ಬದಲಾವಣೆಯನ್ನು ರಾಜಕಾರಣಿಗಳು ಮಾಡುವುದೇ ಇಲ್ಲ, ಯುವಶಕ್ತಿ, ಸಂಘಟನೆಗಳು ಇವರು ಕೂಡಾ ಮಾಡುವುದಿಲ್ಲ, ಮುಖ್ಯವಾಗಿ ನೀವು ಪತ್ರಿಕೆಯವರು/ಮಾದ್ಯಮದವರು ಮಾಡಬೇಕು, ಅದು ಪರಿಸ್ಥಿತಿಗನುಗುಣವಾಗಿ ಮಾತ್ರ ಅದಕ್ಕೆ ಗಮನಕೊಡುತ್ತೀರಿ ಹೊರತು ಮತ್ತೇನು ಇಲ್ಲ.

  5. chidananda.hosamani

    hi sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading