ಪತ್ರಿಕೋದ್ಯಮ ರಂಗದ ಹಳೆ ಕೊಂಡಿಯೊಂದು ಕಳಚಿದೆ .ಹಿರಿಯ ಪತ್ರಕರ್ತ ಸಂತೋಷ್ ಕುಮಾರ್ ಗುಲ್ವಾಡಿ ಇನ್ನಿಲ್ಲ .“ತರಂಗ” ವಾರಪತ್ರಿಕೆಯ ಸಂಪಾದಕರಾಗಿ,ಕಾರ್ಯ ನಿರ್ವಹಿಸಿದ್ದ ಇವರು ಕಲೆಯ ಬಗ್ಗೆ ಅಪಾರವಾದ ಅಭಿಮಾನ , ಪ್ರೀತಿ ಬೆಳೆಸಿಕೊಂಡವರು . ಗುಲ್ವಾಡಿ ಅವರು ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಹೃದಯಾ ಘಾತದಿಂದ ನಿಧನ ಹೊಂದಿದ್ದಾರೆ .]]>
ಗುಲ್ವಾಡಿ ಇನ್ನಿಲ್ಲ…
ನಿಮಗೆ ಇವೂ ಇಷ್ಟವಾಗಬಹುದು…




Namage dukhavaguttade anta illiye uliyalu yarigu sadhyavaguvudillavalla. Adakke kare bandaga horatu biduvaru kaalage ogottu. Gulvadi Sir Atmakke Shaanthiyannu kori prarthisuve…Avaru Akshara lokakke needida kodugeya moolaka avaru illi idde iruttare…
1995rinda halavaru nanna lekhanagalu TARANGA dalli prakatavagive .santoshkumar gulvadi prostaha needi patra barediddaru
ಕನ್ನಡ ದ ಮನೆಮಾತಿನ,ಪ್ರಖ್ಯಾತ ವಾರ ಪತ್ರಿಕೆ ‘ತರಂಗ’ ದ ಸ್ಥಾಪಕ ಸಂಪಾದಕರಾಗಿದ್ದ
ಸಂತೋಷ ಕುಮಾರ ಗುಲ್ವಾಡಿ ,ಕ್ಷಿಪ್ರ ದಲ್ಲಿಯೇ ಆ ಪತ್ರಿಕೆಯನ್ನು ಕನ್ನಡ ದ ನಂ.೧ ಸ್ತಾನಕ್ಕೆ ಕೊಂಡೊಯ್ದ ಕೀರ್ತಿಗೆ ಪಾತ್ರರಾದರು. ಅವರ “ಅಂತರಂಗ-ಬಹಿರಂಗ” ಎಂಬ ಅಂಕಣ ಬರಹ
ಓದುಗರ ನ್ನು ಬಹುವಾಗಿ ಆಕರ್ಷಿಸಿತ್ತು. ಈ ‘ಅಂತರಂಗ-ಬಹಿರಂಗ’ ಪುಸ್ತಕ ರೂಪವಾಗಿ ಪ್ರಕಟ ಗೊಂಡು ಕನ್ನಡಿಗರ ಮನೆ – ಮನ ಸೇರಿದೆ. ಸರಳ ಮತ್ತು ನೇರ ಬರವಣಿಗೆಯ ಮೂಲಕ ಕನ್ನಡ
ಓದುಗರ ಮನ ಗೆದ್ದಿದ್ದ ಗುಲ್ವಾಡಿಯವರು ,ಕನ್ನಡಿಗರು ಕಂಡ ಸೃಜನ ಶೀಲ ಪತ್ರಿಕೋದ್ಯಮಿ .
ಅವರ ಸಾವು ಕನ್ನಡ ಪತ್ರಿಕೋದ್ಯಮಕ್ಕೆ ಬಹು ದೊಡ್ಡ ನಷ್ಟ .
ಅವರ ಆತ್ಮಕ್ಕೆ ಶಾಂತಿ ದೊರಕಲಿ.
ಬೇಲೂರು.ದ.ಶಂ.ಪ್ರಕಾಶ್
ಆಗ ನಾನು ಉದಯೋನ್ಮುಖ ಲೇಖಕ. ನನ್ನ ಕೆಲವು ಕಥೆಗಳು, ಬರಹಗಳನ್ನು ತರಂಗದಲಿ ಪ್ರಕಟಿಸಿ ಪ್ರೋತ್ಸಾಹಿಸಿದ ಸಹೃದಯ ಸಂಪಾದಕರು. ಅವರು, ನಲ್ವತ್ತು ವರ್ಷಗಳ ಹಿಂದೆಯೆ ತೆರೆದ ಹೃದಯ ಚಿಕಿತ್ಸೆ ಮಾಡಿಸಿಕೊಂಡು, ಸಾವಿನ ಅನುಭೂತಿ ಪಡೆದವರು. ಆನಂತರ, ದಿಟ್ಟತನದಿಂದ ಸತತ ಪರಿಶ್ರಮದಿಂದ ತಮ್ಮ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿ, ಪತ್ರಿಕೋದ್ಯಮಕ್ಕೆ ಹೊಸ ಭಾಷ್ಯೇಯನ್ನೇ ಬರೆದರು. ನಾನೂ ಒಂದು ರೀತಿ ಟೈಫೈಡ್ ಕಾಯಿಲೆ ಯಿಂದ ಸತ್ತು ಬದುಕಿದವನೇ. ಆದರೆ, ಅದೇನೂ ಅಲ್ಲ ಬಿಡಿ. ಅವರ ದಿಟ್ಟತನದ ಬದುಕು ಮತ್ತು ಬರಹ ಎಲ್ಲರಿಗೂ ಆದರ್ಶ ಪ್ರಾಯ. ಅಂಥ ಪತ್ರಕರ್ತರು ತೀರ ವಿರಳ.
ಅವರ ಆತ್ಮಕ್ಕೆ ಶಾಂತಿ ದೊರಕಲಿ.
let him rest in peace