ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗುಲಾಬಿ ಟಾಕೀಸ್- ಬಾಗೇಶ್ರೀ ಕಣ್ಣಲ್ಲಿ

ಗುಲಾಬಿ ಟಾಕೀಸು ಮತ್ತು ದೊಡ್ಡ ಅಲೆಗಳು

ಗುಲಾಬಿ ಟಾಕೀಸ್ ಸಿನೆಮಾ ನೋಡುವುದಕ್ಕೆ ಮೊದಲು ಒಂದು statutory warning: ಇದೇ ಹೆಸರಿನ ವೈದೇಹಿಯ ಮೂಲ ಕತೆಯನ್ನು ಸಿನೆಮಾ ನೋಡುವುದಕ್ಕೆ ಮುಂಚೆ ಓದಿಕೊಂಡು ಹೋಗಬೇಡಿ. ಈಗಾಗಲೆ ಓದಿಬಿಟ್ಟಿದ್ದರೆ ಅದಕ್ಕೂ ಸಿನೆಮಾಕ್ಕೂ ಏನಾದರೂ ಸಂಬಂಧ ಇರಬಹುದು ಎಂಬ ನಿರೀಕ್ಷೆಯನ್ನು ಇಟ್ಟುಕೊಂಡಂತೂ ಹೋಗಬೇಡಿ. ಕತೆ ಮತ್ತು ಸಿನೆಮಾಗಿರುವ ವ್ಯತ್ಯಾಸ ಸಣ್ಣ ಅಲೆ ಮತ್ತು ಸೈಕ್ಲೋನಿನ ನಡುವಿನ ವ್ಯತ್ಯಾಸದಂತಹದು.
ರೋಲಾಂಡ್ ಬಾರ್ಥ್‌ನ ಹಾಗೆ “death of the author” ಬಗ್ಗೆ ಪೂರ್ತಿ ನಂಬಿಕೆ ಇಟ್ಟು, ಒಂದು ಪಠ್ಯದ ಓದು ಯಾವ್ಯಾವ ದಿಕ್ಕಿನಲ್ಲಿ ಬೇಕಾದರೂ ಹರಿಯಬಹುದು ಎಂದು ಮನದಟ್ಟು ಮಾಡಿಕೊಂಡು, ವೈದೇಹಿ ಕತೆಯ ಹಳೆಯ ಓದಿನ ಭಾರವನ್ನು ಬದಿಗಿಟ್ಟ ನಂತರವೇ ಈ ಸಿನೆಮಾ ನೋಡಲಿಕ್ಕೆ ಸಾಧ್ಯ. ಆದ್ದರಿಂದ ಋಷಿ, ನದಿ, ಸಿನೆಮಾ ಎಲ್ಲದರ ಮೂಲಗಳನ್ನೂ ಬಿಟ್ಟು ಮುಂದಿನ ಮಾತು.
ಕೋಮುವಾದಿ ವಿಷ ನಮ್ಮ ಹೃದಯಕ್ಕೆ, ಮೆದುಳಿಗೆ ತಲುಪಿಯಾಯಿತು ಎಂದು ಅನ್ನಿಸುವಂತಹ ನಮ್ಮ ಸಂದರ್ಭದಕ್ಕೆ ಈ ಚಿತ್ರ ಅತ್ಯಂತ ಪ್ರಸ್ತುತವಾದದ್ದು. ನನ್ನ ದೃಷ್ಟಿಯಲ್ಲಿ, ಕಾಸರವಳ್ಳಿಯವರ ನಾನು ನೋಡಿದ ಎಲ್ಲಾ ಸಿನೆಮಾಗಳಲ್ಲಿ ತನ್ನ ಕಾಲದ ನಾಡಿಯನ್ನು ಅತ್ಯಂತ ಕರಾರುವಾಕ್ಕಾಗಿ ಹಿಡಿಯುವ, ಸಂದರ್ಭದ ಆಯಾಮಗಳನ್ನು ಎಲ್ಲೂ ಸರಳೀಕರಿಸದೆ ಕಟ್ಟಿರುವ ಅತ್ಯಂತ ಗಟ್ಟಿಮುಟ್ಟಾದ ಚಿತ್ರ ಗುಲಾಬಿ ಟಾಕೀಸ್……..
ಇನ್ನು ಮುಂದಿನದ್ದನ್ನು ‘ಬಾಗೇಶ್ರೀ’ಯಲ್ಲಿ ಓದಿ-

‍ಲೇಖಕರು avadhi

15 October, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading