ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗುರುತು ಮೂಡಬೇಕು..

ಶಕೀಲ್ ಉಸ್ತಾದ್

**

ಹಾಗೆಯೇ

ಕೆಳಗೆ ಬೀಳ ಬೇಕು

ಮಳೆ ಹನಿಗಳಾಗಿ

ಧರೆಯ ಧಗೆಯನು ತಣಿಸಲು

ಹಾಗೆಯೇ

ಗುರುತು ಮೂಡ ಬೇಕು

ಕೆಸರು ಮೆತ್ತಿ ಕಾಲಿಗೆ

ಹೆಜ್ಜೆಯನ್ನಿಟ್ಟಲೆಲ್ಲಾ

ಹಾಗೆಯೇ

ಒರಟು ಬೀಜ ಸೀಳಿ

ಮೊಳಕೆಯೊಡೆಯ ಬೇಕು

ತನ್ನ ಅಸ್ತಿತ್ವ ಉಳಿಸಲು

ಹಾಗೆಯೇ

ಹಿಂದೆ-ಮುಂದೆ ಕವಲೊಡೆದು 

ಹೆಮ್ಮರವಾಗಿ  ಹರಡ ಬೇಕು

ಮೊಗ್ಗು-ಹೂ-ಕಾಯಿ ಬಿಡಲು

ಹಾಗೆಯೇ

ಧರೆಗುರಳ ಬೇಕು

ಬೇರು ಸಡಿಲಾಗಿ ಧನ್ಯತೆಯಿಂದ ?!

‍ಲೇಖಕರು Admin MM

11 May, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading